ಬಜೆಟ್ ದರದ ಈ ಪ್ಲ್ಯಾನ ರೀಚಾರ್ಜ್ ಮಾಡಿದ್ರೆ, ಡಿಸ್ನಿ+ ಹಾಟ್‌ಸ್ಟಾರ್ ಫ್ರೀ..ಫ್ರೀ..ಫ್ರೀ...!
ದೇಶದ ಮೂರನೇ ದೊಡ್ಡ ಟೆಲಿಕಾಂ ಆಗಿ ಕಾಣಿಸಿಕೊಂಡಿರುವ ವಿ ಟೆಲಿಕಾಂ ಪ್ರಮುಖ ಟೆಲಿಕಾಂ (Vi) ಕೆಲವು ಅಧಿಕ ಪ್ರಯೋಜನಗಳ ಪ್ರಿಪೇಯ್ಡ್ ಯೋಜನೆಗಳಿಂದ ಗಮನ ಸೆಳೆದಿದೆ. ಹಾಗೆಯೇ ವಿ ಟೆಲಿಕಾಂನ ಕೆಲವೊಂದು ಪ್ರೀಪೇಯ್ಡ್ ಯೋಜನೆಗಳು ಡೇಟಾ ಜೊತೆಗೆ ಓಟಿಟಿ ಚಂದಾದಾರಿಕೆಯ ಪ್ರಯೋಜನ ಸಹ ಪಡೆದಿವೆ. ಆ ಪೈಕಿ ಡಿಸ್ನಿ + ಹಾಟ್‌ಸ್ಟಾರ್ (disney+ hotstar) ಚಂದಾದಾರಿಕೆಯ ಯೋಜನೆಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ.

ಹೌದು, ವಿ ಟೆಲಿಕಾಂ ಭಿನ್ನ ಶ್ರೇಣಿಯ ಪ್ರೀಪೇಯ್ಡ್ ಪ್ಲ್ಯಾನ್‌ಗಳನ್ನು ಪಡೆದಿದ್ದು, ಅವುಗಳ ಪೈಕಿ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ ಸೌಲಭ್ಯ ಪಡೆದ ಬಜೆಟ್ ಬೆಲೆಯ ಯೋಜನೆಗಳು ಕ್ರಿಕೆಟ್ ಪ್ರಿಯರನ್ನು ಆಕರ್ಷಿಸಿವೆ. ಮುಖ್ಯವಾಗಿ ವಿ ಟೆಲಿಕಾಂನ 151ರೂ ಮತ್ತು 399ರೂ. ಪ್ರೀಪೇಯ್ಡ್ ಯೋಜನೆಗಳು ಮುಂಚೂಣಿಯಲ್ಲಿ ಕಾಣಿಸಿಕೊಂಡಿವೆ. ಹಾಗಾದರೆ ವಿ ಟೆಲಿಕಾಂನ 151ರೂ ಮತ್ತು 399ರೂ. ಪ್ಲ್ಯಾನ್‌ಗಳ ಒಟ್ಟಾರೇ ಪ್ರಯೋಜನಗಳ ಹಾಗೂ ಇತರೆ ಡಿಸ್ನಿ + ಹಾಟ್‌ಸ್ಟಾರ್ (disney+ hotstar) ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿ ಟೆಲಿಕಾಂನ 151ರೂ. ಪ್ರಿಪೇಯ್ಡ್ ಪ್ಲಾನ್ ಸೌಲಭ್ಯಗಳು
ವಿ ಟೆಲಿಕಾಂನ ಯೋಜನೆಯು ಡೇಟಾ ಪ್ರಯೋಜನ ಹಾಗೂ ಓಟಿಟಿ ಪ್ರಯೋಜನದ ಪ್ಲ್ಯಾನ್ ಆಗಿದ್ದು, ಇದ್ರಲ್ಲಿ ಯಾವುದೇ ಕರೆಗಳು ಅಥವಾ ಎಸ್‌ಎಮ್‌ಎಸ್ ಪ್ರಯೋಜನ ಲಭ್ಯವಾಗುವುದಿಲ್ಲ. ಈ ಯೋಜನೆಯು ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಮತ್ತು ಡೇಟಾವನ್ನು ಬಯಸುವವರಿಗೆ ಅತ್ಯುತ್ತಮ ಬಜೆಟ್ ಪ್ರಿಪೇಯ್ಡ್ ಯೋಜನೆ ಎನಿಸಿದೆ. ಇದು ಮೂರು ತಿಂಗಳ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ ಪಡೆದಿದೆ. ಜೊತೆಗೆ ಗ್ರಾಹಕರು ಒಟ್ಟು 8GB ಡೇಟಾವನ್ನು ಸಹ ದೊರೆಯಲಿದೆ.

ವಿ ಟೆಲಿಕಾಂನ 399ರೂ. ಪ್ರೀಪೇಯ್ಡ್ ಪ್ಲ್ಯಾನ್ ಸೌಲಭ್ಯಗಳು
ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 2.5GB ಡೇಟಾ ಪ್ರಯೋಜನ ಪಡೆದಿದ್ದು, 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಹೆಚ್ಚುವರಿಯಾಗಿ ಮೂರು ತಿಂಗಳ ಡಿಸ್ನಿ+ ಹಾಟ್‌ಸ್ಟಾರ್ (disney+ hotstar) ಮೊಬೈಲ್ ಚಂದಾದಾರಿಕೆ ಹಾಗೂ ವಿ ಆಪ್ಸ್‌ಗಳ ಸೇವೆ ಪಡೆದಿದೆ.

ವಿ ಟೆಲಿಕಾಂನ 499ರೂ. ಪ್ರೀಪೇಯ್ಡ್ ಪ್ಲ್ಯಾನ್ ಸೌಲಭ್ಯಗಳು
ವಿ ಟೆಲಿಕಾಂನ 499ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿದ್ದು, 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಹೆಚ್ಚುವರಿಯಾಗಿ ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ (disney+ hotstar) ಮೊಬೈಲ್ ಚಂದಾದಾರಿಕೆ ಹಾಗೂ ವಿ ಆಪ್ಸ್‌ಗಳ ಸೇವೆ ಪಡೆದಿದೆ.

ವಿ ಟೆಲಿಕಾಂ 601ರೂ. ಪ್ರಿಪೇಯ್ಡ್ ಪ್ಲಾನ್ ಸೌಲಭ್ಯಗಳು
ವಿ ಟೆಲಿಕಾಂನ 601ರೂ. ಪ್ರಿಪೇಯ್ಡ್ ಪ್ಲಾನ್ ಒಂದು ವರ್ಷದವರೆಗೆ ಡಿಸ್ನಿ + ಹಾಟ್‌ಸ್ಟಾರ್ (disney+ hotstar) ಚಂದಾದಾರಿಕೆ ನೀಡಲಿದೆ. ಜೊತೆಗೆ ಅನಿಯಮಿತ ವಾಯಿಸ್ ಕರೆ, ದಿನನಿತ್ಯ 3 GB ಡೇಟಾ ಹಾಗೂ ಡೈಲಿ 100 ಎಸ್‌ಎಮ್‌ಎಸ್ ಪ್ರಯೋಜನ ನೀಡಲಿದೆ. ಇನ್ನು ಈ ಪ್ರಿಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಹೆಚ್ಚುವರಿಯಾಗಿ 16GB ಡೇಟಾ ಸೌಲಭ್ಯ ಪಡೆದಿದೆ. ಜೊತೆಗೆ ವಿ ಆಪ್ಸ್ ಹಾಗೂ ಡೇಟಾ ರೋಲ್ ಓವರ್ ಸೌಲಭ್ಯ ಸಿಗಲಿದೆ.


Click it and Unblock the Notifications








