Vi: ವಿ ಟೆಲಿಕಾಂನಿಂದ 70 ದಿನಗಳ ಮಾನ್ಯತೆಯ ನೂತನ ಪ್ಲ್ಯಾನ್! ಭರ್ಜರಿ ಪ್ರಯೋಜನಗಳು
ವಿ ಟೆಲಿಕಾಂ (Vi Telecom) ಈಗಾಗಲೇ ಸಾಕಷ್ಟು ಭಿನ್ನ ರೀಚಾರ್ಜ್ ಪ್ಲ್ಯಾನ್‌ಗಳನ್ನು ಘೋಷಣೆ ಮಾಡುವ ಮೂಲಕ ಬಳಕೆದಾರರಿಗೆ ಕಡಿಮೆ ದರದಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಸಿಕೊಡುತ್ತಿದೆ. ಈ ನಡುವೆ ಮಗದೊಂದು ರೀಚಾರ್ಜ್ ಪ್ಲ್ಯಾನ್ (Recharge Plan) ಘೋಷಣೆ ಮಾಡಿದ್ದು, ಇದು ಬರೋಬ್ಬರಿ 70 ದಿನಗಳ ಮಾನ್ಯತೆ ಹೊಂದಿದೆ.
ಹೌದು, ಪ್ರಮುಖ ಟೆಲಿಕಾಂ ಸಂಸ್ಥೆಗಳಾದ ಏರ್‌ಟೆಲ್, ಜಿಯೋ, ಬಿಎಸ್‌ಎನ್‌ಎಲ್ (Airtel, Jio, BSNL) ನೊಂದಿಗೆ ನೇರವಾಗಿ ಸ್ವರ್ಧಿಸುತ್ತಿರುವ ವಿ ಟೆಲಿಕಾಂ ವಿಶೇಷ ರೀಚಾರ್ಜ್ ಪ್ಲ್ಯಾನ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ. ಈಗ ಆರಂಭ ಮಾಡಲಾಗಿರುವ ಪ್ಲ್ಯಾನ್‌ನಲ್ಲಿ ಚಂದಾದಾರರು ಓಟಿಟಿ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಹಾಗಿದ್ರೆ ಯಾವುದು ಈ ಪ್ಲ್ಯಾನ್?. ಈ ಪ್ಲ್ಯಾನ್‌ನಿಂದ ಬಳಕೆದಾರರಿಗೆ ಏನೆಲ್ಲಾ ಪ್ರಯೋಜನ ಸಿಗಲಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

901 ರೂ.ಗಳ ಹೀರೋ ಅನ್‌ಲಿಮಿಟೆಡ್ ಪ್ಲ್ಯಾನ್: 901 ರೂ.ಗಳ ಹೊಸ ಪ್ಲ್ಯಾನ್ ಅನ್ನು ವೊಡಾಫೋನ್ ಐಡಿಯಾ (Vodafone Idea) ಇದೀಗ ಘೋಷಣೆ ಮಾಡಿದ್ದು, ಭಾರತದಲ್ಲಿ ಮೂರನೇ ಅತಿ ದೊಡ್ಡ ಟೆಲಿಕಾಂ ಕಂಪನಿಯಾದ ಇದು ಈ ರೀತಿಯ ವಿಶೇಷ ರೀಚಾರ್ಜ್ ಪ್ಲ್ಯಾನ್‌ಗಳೊಂದಿಗೆ ಮಾರುಕಟ್ಟೆಯನ್ನು ಶೇಕ್ ಮಾಡುವ ಕೆಲಸ ಮಾಡುತ್ತಿದೆ. ಹಾಗೆಯೇ ವಿ ಟೆಲಿಕಾಂ ಬಳಕೆ ಮಾಡುವ 22 ಕೋಟಿ ಬಳಕೆದಾರರಿಗೆ ಈ ವಿಶೇಷ ಪ್ಲ್ಯಾನ್ ಮೂಲಕ ವಿ ಗುಡ್ ನ್ಯೂಸ್ ನೀಡಲಾಗಿದೆ.
ಈ 901 ರೂ.ಗಳ ಹೀರೋ ಅನ್‌ಲಿಮಿಟೆಡ್ ಪ್ಲ್ಯಾನ್ 70 ದಿನಗಳ ಮಾನ್ಯತೆಯೊಂದಿಗೆ ಬರಲಿದ್ದು, ಇಷ್ಟು ದಿನಗಳ ಕಾಲ ತನ್ನೆಲ್ಲಾ ಗ್ರಾಹಕರಿಗೆ ಅನಿಯಮಿತ ಕರೆ ಸೇವೆಯನ್ನು ನೀಡಲಿದೆ. ಪ್ರಮುಖವಾಗಿ ಈ ಪ್ಲ್ಯಾನ್‌ನಲ್ಲಿ ಉದಾರ ಪ್ರಮಾಣದ ಡೇಟಾವನ್ನು ನೀಡಲಾಗುತ್ತದೆ. ಅಂದರೆ ದಿನಕ್ಕೆ ಗ್ರಾಹಕರು 3GB ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ 70 ದಿನಗಳ ಸಂಪೂರ್ಣ ಮಾನ್ಯತೆಯ ಅವಧಿಗೆ 210GB ಡೇಟಾ ಸಿಗಲಿದೆ.

ಇದರ ಜೊತೆಗೆ ವಿ ಟೆಲಿಕಾಂ ಹೆಚ್ಚುವರಿ 48GB ಡೇಟಾವನ್ನುನೀಡಲಿದೆ. ಇದರಿಂದಾಗಿ ಈ ಪ್ಲ್ಯಾನ್‌ನಲ್ಲಿ ಒಟ್ಟಾರೆ 258 GB ಡೇಟಾ ಪ್ರಯೋಜನ ಸಿಗಲಿದ್ದು, ಯಾರಿಗೆಲ್ಲಾ ಹೆಚ್ಚಿನ ಡೇಟಾ ಅಗತ್ಯ ಇದೆಯೋ ಅವರು ಕಣ್ಣು ಮುಚ್ಚಿಕೊಂಡು ಈ ಪ್ಲ್ಯಾನ್ ಅನ್ನು ಖರೀದಿ ಮಾಡಬಹುದಾಗಿದೆ. ಇದಿಷ್ಟೇ ಅಲ್ಲದೆ ಈ ಪ್ಲ್ಯಾನ್‌ನಲ್ಲಿ ಕೆಲವು ವಿಶೇಷ ಪ್ರಯೋಜನಗಳನ್ನೂ ಸಹ ನೀಡಲಾಗಿದೆ.
ಉಚಿತ ಓಟಿಟಿ ಚಂದಾದಾರಿಕೆ: ನೀವು ಓಟಿಟಿ ಪ್ರಿಯರಾಗಿದ್ರೆ ಈ ಪ್ಲ್ಯಾನ್ ಹಲವು ರೀತಿಯಲ್ಲಿ ಅನುಕೂಲ ಮಾಡಿಕೊಡಲಿದೆ. ಅಂದರೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಗೆ (Disney+Hotstar) ಪೂರಕ 1-ವರ್ಷದ ಚಂದಾದಾರಿಕೆಯನ್ನು ಸಹ ನೀಡುತ್ತದೆ. ಈ ಪರ್ಕ್‌ನೊಂದಿಗೆ ಬಳಕೆದಾರರು ತಮ್ಮ ನೆಚ್ಚಿನ ಶೋಗಳು ಮತ್ತು ಸಿನಿಮಾಗಳನ್ನು ಹೆಚ್ಚುವರಿ ಹಣ ವ್ಯಯ ಮಾಡದೆ ವೀಕ್ಷಣೆ ಮಾಡಬಹುದಾಗಿದೆ. ಇದರ ಜೊತೆಗೆ ವಿ ಬಿಂಗ್ಸ್ ಆಲ್ ನೈಟ್ಸ್ ಕೊಡುಗೆಯನ್ನೂ ಸಹ ನೀಡಲಾಗುತ್ತದೆ. ಇದರಲ್ಲಿ ಮಧ್ಯರಾತ್ರಿಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಅನಿಯಮಿತ ಡೇಟಾ ಬಳಕೆ ಮಾಡಿಕೊಳ್ಳಬಹುದಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಕೊಟ್ಟ ಹಣಕ್ಕೆ ಹೆಚ್ಚಿನ ಸೌಲಭ್ಯಗಳು ಬೇಕು ಎಂದರೆ ಈ ಪ್ಲ್ಯಾನ್ ಅನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಅಂದರೆ ಇದರಲ್ಲಿ ವಿ ತನ್ನ ಗ್ರಾಹಕರಿಗೆ ಮೌಲ್ಯಯುತ ಕೊಡುಗೆಗಳನ್ನು ಒದಗಿಸುತ್ತದೆ. ಹೇರಳವಾದ ಡೇಟಾ, ವಿಸ್ತೃತ ಮಾನ್ಯತೆ ಮತ್ತು ಉಚಿತ ಓಟಿಟಿ ಚಂದಾದಾರಿಕೆ ನೀಡುವುದರಿಂದ ಆಲ್ ಇನ್ ಒನ್ ಪ್ಲ್ಯಾನ್ ಆಗಿ ಇದು ಗುರುತಿಸಿಕೊಳ್ಳಲಿದೆ.

ಮರಳಿ ಬಂದ 49ರೂ.ಗಳ ಪ್ಲ್ಯಾನ್: ಈ ನಡುವೆ ಪರಿಷ್ಕೃತ ಪ್ರಯೋಜನಗಳೊಂದಿಗೆ ಪ್ರಿಪೇಯ್ಡ್ ಗ್ರಾಹಕರಿಗೆ ತನ್ನ 49 ರೂ.ಗಳ ಪ್ಲ್ಯಾನ್ ಅನ್ನು ಮರಳಿ ತರಲಾಗಿದೆ. ಇದು ಡೇಟಾ ವೋಚರ್ ಆಗಿದ್ದು, ಸಕ್ರಿಯ ಬೇಸ್ ಪ್ರಿಪೇಯ್ಡ್ ಯೋಜನೆಯ ಮೇಲೆ ಕಾರ್ಯನಿರ್ವಹಿಸುತ್ತದೆ. ಒಂದು ದಿನದ ಮಾನ್ಯತೆ ಪಡೆದಿದ್ದು, ಬಳಕೆದಾರರು 20GB ಡೇಟಾವನ್ನು ಪಡೆಯುತ್ತಾರೆ.


Click it and Unblock the Notifications








