ವಿ ಟೆಲಿಕಾಂನಿಂದ ಗ್ರಾಹಕರಿಗೆ 10 ನಿಮಿಷ ಉಚಿತ ವಾಯಿಸ್‌ ಕರೆ ಕೊಡುಗೆ!

|

ವೊಡಾಫೋನ್ ಐಡಿಯಾ (ವಿ) ಟೆಲಿಕಾಂ ಆಕರ್ಷಕ ಯೋಜನೆಗಳನ್ನು ಪರಿಚಯಿಸಿ, ಮಾರುಕಟ್ಟೆಯಲ್ಲಿ ಜಿಯೋ ಹಾಗೂ ಏರ್‌ಟೆಲ್‌ ಟೆಲಿಕಾಂಗಳಿಗೆ ಪೈಪೋಟಿ ನೀಡುತ್ತಾ ಸಾಗಿದೆ. ಸಂಸ್ಥೆಯು ತನ್ನ ಕೆಲವು ಆಯ್ದ ಪ್ರೀಪೇಯ್ಡ್‌ ಯೋಜನೆಗಳಲ್ಲಿ ಡಬಲ್‌ ಡೇಟಾ ಕೊಡುಗೆ ಘೋಷಿಸಿ ಗ್ರಾಹಕರನ್ನು ಸೆಳೆದಿದೆ. ಹಾಗೆಯೇ ಲಾಕ್‌ಡೌನ್‌ ಅವಧಿಯಲ್ಲಿಯೂ ಕೆಲವು ಅನುಕೂಲಕರ ಸೇವೆಗಳನ್ನು ವಿ ಟೆಲಿಕಾಂ ನೀಡಿದೆ. ಅದರ ಬೆನ್ನಲ್ಲೇ ಈಗ ಉಚಿತ ವಾಯಿಸ್‌ ಕರೆಯ ಕೊಡುಗೆಯನ್ನು ಘೋಷಿಸಿ ಚಂದಾದಾರರ ಗಮನ ಸೆಳೆದಿದೆ.

ಐಡಿಯಾ

ಹೌದು, ವೊಡಾಫೋನ್‌ ಐಡಿಯಾ ಟೆಲಿಕಾಂ 10 ನಿಮಿಷಗಳ ಉಚಿತ ವಾಯಿಸ್ ಕರೆಯ ಸೇವೆಯನ್ನು ಘೋಷಿಸಿದೆ. ಆದರೆ ಕೆಲವು ಪ್ರದೇಶಗಳಿಲ್ಲಿ ಕೆಲವು ಬಳಕೆದಾರರಿಗೆ ಉಚಿತ ಕರೆಯ ಮೆಸೆಜ್‌ ಕಳುಹಿಸುತ್ತಿದೆ. ಮಧ್ಯಪ್ರದೇಶ ಮತ್ತು ಛತ್ತೀಸಗಡ್‌ ಟೆಲಿಕಾಂ ವ್ಯಾಪ್ತಿಯ ಬಳಕೆದಾರರಿಗೆ ಮೆಸೆಜ್‌ ಲಭ್ಯವಾಗಿದೆ ಎಂದು ಹೇಳಲಾಗಿದೆ. ಇನ್ನು ಕಂಪನಿಯ ಮೆಸೆಜ್‌ ಪ್ರಕಾರ, ವಿ ಟೆಲಿಕಾಂ ಮುಂದಿನ 10 ದಿನಗಳವರೆಗೆ ಬಳಕೆದಾರರಿಗೆ 10 ನಿಮಿಷಗಳ ಉಚಿತ ವಾಯಿಸ್ ಕರೆ ನೀಡುತ್ತಿದೆ ಎನ್ನಲಾಗಿದೆ.

ಸಂಖ್ಯೆಯಲ್ಲಿ

ಯಾವುದೇ ವಿ ಟೆಲಿಕಾಂ ಸಂಖ್ಯೆಯಲ್ಲಿ ಬಳಕೆದಾರರು 10 ನಿಮಿಷಗಳ ಉಚಿತ ವಾಯಿಸ್‌ ಕರೆ ಪಡೆಯುತ್ತಾರೆ ಎಂದು ಮೆಸೆಜ್‌ನಲ್ಲಿ ವೊಡಾಫೋನ್ ಐಡಿಯಾ ಹೇಳಿದೆ. ಬಳಕೆದಾರರು ಯಾವುದೇ ವಿ ಸಂಖ್ಯೆಯಿಂದ ಇತರೆ ಯಾವುದೇ ಆಪರೇಟರ್‌ನ ಸಂಖ್ಯೆಗೆ ಕರೆ ಮಾಡಬಹುದೇ ಅಥವಾ ಬಳಕೆದಾರರು ವೊಡಾಪೋನ್ ಐಡಿಯಾ ಟು ವೊಡಾಫೋನ್ ಐಡಿಯಾ ಸಂಖ್ಯೆಗೆ ಕರೆ ಮಾಡುವಾಗ ಮಾತ್ರ ಉಚಿತ ಕರೆ ಅನ್ವಯವಾಗುತ್ತದೆಯೇ ಎಂಬ ಬಗ್ಗೆ ಯಾವುದೇ ನಿರ್ದಿಷ್ಟತೆಯಿಲ್ಲ.

ಟೆಲಿಕಾಂ

ವಿ ಟೆಲಿಕಾಂ 10 ನಿಮಿಷಗಳ ಉಚಿತ ವಾಯಿಸ್‌ ಕರೆ ನೀಡುವುದಾಗಿ ಹೇಳಿದೆ. ಬಹುಶಃ ಈ ಕೊಡುಗೆಯೂ ವಿ ಟೆಲಿಕಾಂ ಸಂಖ್ಯೆಗಳೊಂದಿಗೆ ಸಂಪರ್ಕ ಸಾಧಿಸಲು ಮಾತ್ರ ಇರಬಹುದು ಎಂದು ಊಹಿಸಲಾಗುತ್ತಿದೆ. ಆದಾಗ್ಯೂ, ಕೋವಿಡ್‌ ಸಾಂಕ್ರಾಮಿಕ ಈ ದುರಿತ ಪರಿಸ್ಥಿತಿಯಲ್ಲಿ ವೊಡಾಫೋನ್ ಐಡಿಯಾ (ವಿ ಟೆಲಿಕಾಂ) 10 ನಿಮಿಷಗಳ ಉಚಿತ ವಾಯಿಸ್‌ ಕರೆ ನೀಡುವ ಸಂಗತಿ ಉತ್ತಮ ಹಾಗೂ ಬಳಕೆದಾರರಿಗೆ ಅನುಕೂಲಕರ ಆಗಲಿದೆ. ಇತ್ತೀಚಿಗಷ್ಟೆ

ವಿ ಟೆಲಿಕಾಂ 49ರೂ.ರೀಚಾರ್ಜ್‌ ಪ್ಯಾಕ್‌

ವಿ ಟೆಲಿಕಾಂ 49ರೂ.ರೀಚಾರ್ಜ್‌ ಪ್ಯಾಕ್‌

ಲಾಕ್‌ಡೌನ್‌ನಿಂದಾಗಿ ಹಣಕಾಸಿನ ತೊಂದರೆಗಳನ್ನು ಎದುರಿಸುತ್ತಿರುವ ಗ್ರಾಹಕರಿಗೆ ಈ ಯೋಜನೆ ಅನ್ವಯವಾಗಲಿದೆ. ವಿ ಒಂದು ಬಾರಿ ಕೊಡುಗೆಯಾಗಿ 49ರೂ.ಗಳ ರೀಚಾರ್ಜ್ ಪ್ಯಾಕ್ ಉಚಿತವಾಗಿ ನೀಡಲಿದೆ. ಈ ಪ್ಲ್ಯಾನ್‌ 38ರೂ. ಟಾಕ್‌ಟೈಮ್, 300ಎಂಬಿ ಡೇಟಾ ಸೌಲಭ್ಯವನ್ನು ಪಡೆದಿದ್ದು, ಒಟ್ಟು 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಸ್ಥಳೀಯ / ರಾಷ್ಟ್ರೀಯ ಕರೆಗಳಿಗೆ ಸೆಕೆಂಡಿಗೆ 0.25 ರೂ. ಶುಲ್ಕವನ್ನು ವಿಧಿಸಲಾಗಿದೆ. ಅಲ್ಲದೆ Vi ಒಂದು ಅಪ್ಲಿಕೇಶನ್ / ವೆಬ್ ರೀಚಾರ್ಜ್ ಎಕ್ಸ್‌ಕ್ಲೂಸಿವ್ ಆಫರ್ ಅನ್ನು ಸಹ ಹೊಂದಿದೆ, ಇದು ಈ ಯೋಜನೆಗೆ ಹೆಚ್ಚುವರಿ 200MB ಅನ್ನು ಸೇರಿಸುತ್ತದೆ

ವಿ ಟೆಲಿಕಾಂ 79ರೂ. ರೀಚಾರ್ಜ್ ಪ್ಯಾಕ್‌

ವಿ ಟೆಲಿಕಾಂ 79ರೂ. ರೀಚಾರ್ಜ್ ಪ್ಯಾಕ್‌

ವೋಡಾಫೊನ್‌ ಐಡಿಯಾದ 79ರೂ.ಗಳ ಕಾಂಬೊ ರೀಚಾರ್ಜ್ ಯೋಜನೆಯು 128ರೂ. ಮೌಲ್ಯದ ಟಾಕ್‌ಟೈಮ್ ಮತ್ತು 200MB ಡೇಟಾದೊಂದಿಗೆ ಬರುತ್ತದೆ. ಈ ಯೋಜನೆ 28 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಪಡೆದಿದೆ. ಇದಲ್ಲದೆ ವೋಡಾಫೋನ್‌ ಐಡಿಯಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ರೀಚಾರ್ಜ್‌ ಮಾಡಿದರೆ 200MB ಹೆಚ್ಚುವರಿ ಡೇಟಾ ಲಭ್ಯ.

Most Read Articles
Best Mobiles in India

English summary
Vodafone Idea in the text says that the user gets 10 minutes of free voice calling on any Vi number.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X