Home
ಸುದ್ದಿಜಾಲ

ವಿ ಟೆಲಿಕಾಂ ಈ ಪ್ರೀಪೇಯ್ಡ್‌ ಪ್ಲ್ಯಾನ್‌ಗಳಲ್ಲಿ ಈಗ ಭರ್ಜರಿ ಕ್ಯಾಶ್‌ಬ್ಯಾಕ್‌!

ಪ್ರಿಪೇಯ್ಡ್ ಚಂದಾದಾರರನ್ನು ಉಳಿಸಿಕೊಳ್ಳಲು ಈಗಾಗಲೇ ಹಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸಿರುವ ವೊಡಾಫೋನ್ ಐಡಿಯಾ (ವಿ ಟೆಲಿಕಾಂ) ಈಗ ಮತ್ತೊಂದು ಪ್ರಸ್ತಾಪವನ್ನು ನೀಡಿದೆ. ಡಬಲ್ ಡೇಟಾ, ವೀಕೆಂಡ್‌ ಡೇಟಾ ರೋಲ್‌ಓವರ್ ಮತ್ತು ನೈಟ್ ಅನಿಯಮಿತ ಡೇಟಾ ಕೊಡುಗೆಗಳನ್ನು ಹೊರತಂದ ಗ್ರಾಹಕರನ್ನು ಆಕರ್ಷಿಸಿದೆ. ಅದರ ಬೆನ್ನಲ್ಲೇ ವಿ ಟೆಲಿಕಾಂ ಕೆಲವು ಈಗ 199ರೂ. ಮತ್ತು ಅದಕ್ಕಿಂತ ಹೆಚ್ಚಿನ ದರದ ಎಲ್ಲಾ ಅನಿಯಮಿತ ರೀಚಾರ್ಜ್‌ಗಳಲ್ಲಿ ಕ್ಯಾಶ್‌ಬ್ಯಾಕ್ ಅನ್ನು ಘೋಷಿಸಿದೆ.

ಅನಿಯಮಿತ

ಹೌದು, ವಿ ಟೆಲಿಕಾಂ ತನ್ನ ಆಯ್ದ ಅನಿಯಮಿತ ಯೋಜನೆಗಳಿಗೆ ಈಗ ಕ್ಯಾಶ್‌ಬ್ಯಾಕ್ ಕೊಡುಗೆ ತಿಳಿಸಿದೆ. 400 ರೂ.ಗಿಂತ ಕಡಿಮೆ ಇರುವ ವಿ ಟೆಲಿಕಾಂ ಪ್ರಿಪೇಯ್ಡ್ ರೀಚಾರ್ಜ್‌ಗಳು 20 ರೂ ಕ್ಯಾಶ್‌ಬ್ಯಾಕ್ ಪಡೆದಿದೆ. ಹಾಗೆಯೇ 400 ರಿಂದ 558 ರೂ.ಗಳ ನಡುವಿನ ಯೋಜನೆಗಳು 40ರೂ. ಕ್ಯಾಶ್‌ಬ್ಯಾಕ್ ಹೊಂದಿವೆ. ಇನ್ನು 2,595 ರೂ.ಗಳವರೆಗಿನ ಉಳಿದ ವಿ ಟೆಲಿಕಾಂನ ಎಲ್ಲಾ ಪ್ರಿಪೇಯ್ಡ್ ಯೋಜನೆಗಳು 60ರೂ ಕ್ಯಾಶ್‌ಬ್ಯಾಕ್‌ನಲ್ಲಿ ಕಾಣಿಸಿಕೊಂಡಿವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಹಾಗೂ ಡಬಲ್‌ ಡೇಟಾ ಪ್ಲ್ಯಾನ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ವಿ ಟೆಲಿಕಾಂನ ಕ್ಯಾಶ್‌ಬ್ಯಾಕ್‌ ಪಡೆಯುವುದು ಹೇಗೆ

ವಿ ಟೆಲಿಕಾಂನ ಕ್ಯಾಶ್‌ಬ್ಯಾಕ್‌ ಪಡೆಯುವುದು ಹೇಗೆ

ಆಫರ್‌ಗೆ ಅರ್ಹರಾಗಲು, ವೊಡಾಫೋನ್ ಪ್ರಿಪೇಯ್ಡ್ ಚಂದಾದಾರರು ಮಾರ್ಚ್ 31 ರೊಳಗೆ ಅನಿಯಮಿತ ಪ್ಯಾಕ್‌ನ ರೀಚಾರ್ಜ್ ಮಾಡಬೇಕಾಗುತ್ತದೆ. ಕಂಪನಿಯು ಈ ಪ್ರಸ್ತಾಪವನ್ನು 'ಮಾರ್ಚ್ ಫ್ಲ್ಯಾಶ್ ಸೇಲ್' ಎಂದೂ ಕರೆಯುತ್ತಿದೆ. ನೀವು ಅನಿಯಮಿತ ರೀಚಾರ್ಜ್ ಮಾಡಿದರೆ 199ರೂ ರಿಂದ 405ರೂ.ಗಳ ನಡುವಿನ ಕಾಂಬೊ ಯೋಜನೆ (ರೂ 199, 219, ರೂ 249, ರೂ 299, ರೂ 301, ರೂ 398, ರೂ 401, ರೂ 405), ಟೆಲಿಕಾಂ 20ರೂ ಕ್ಯಾಶ್‌ಬ್ಯಾಕ್ ಕೂಪನ್ ನೀಡುತ್ತದೆ. ನಿಮ್ಮ ರೀಚಾರ್ಜ್ ಮೌಲ್ಯ 399ರೂ ರಿಂದ 558 ರೂ. ಇದ್ದರೇ (399ರೂ, 449ರೂ, 499ರೂ, 555ರೂ, 558ರೂ, 595ರೂ ಮತ್ತು 601 ರೂ) 40 ರೂ ಕ್ಯಾಶ್‌ಬ್ಯಾಕ್ ಕೂಪನ್ ನೀಡುತ್ತದೆ. ಇನ್ನು 2,595ರೂ.ಯೋಜನೆಗೆ 60ರೂ. ಕ್ಯಾಶ್‌ಬ್ಯಾಕ್‌ ದೊರೆಯಲಿದೆ.

ವೊಡಾಫೋನ್-ಐಡಿಯಾ 699ರೂ. ಪ್ಲ್ಯಾನ್

ವೊಡಾಫೋನ್-ಐಡಿಯಾ 699ರೂ. ಪ್ಲ್ಯಾನ್

ವಿ ಟೆಲಿಕಾಂನ 699ರೂ. ಪ್ಲ್ಯಾನ್‌ ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿದೆ. ಸದ್ಯ ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸಿಗುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ವೊಡಾಫೋನ್-ಐಡಿಯಾ 499ರೂ. ಪ್ಲ್ಯಾನ್

ವೊಡಾಫೋನ್-ಐಡಿಯಾ 499ರೂ. ಪ್ಲ್ಯಾನ್

ವಿ ಟೆಲಿಕಾಂನ 499ರೂ. ಪ್ಲ್ಯಾನ್‌ ಸಹ ಪ್ರತಿದಿನ 2GB ಡೇಟಾ ಮತ್ತು ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸಿಗುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ವೊಡಾಫೋನ್-ಐಡಿಯಾ 299ರೂ. ಪ್ಲ್ಯಾನ್

ವೊಡಾಫೋನ್-ಐಡಿಯಾ 299ರೂ. ಪ್ಲ್ಯಾನ್

ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಮತ್ತು ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸೌಲಭ್ಯ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

Best Mobiles in India

English summary
Vi Telecom Offering Up to Rs 60 Cashback On Unlimited Prepaid Recharges.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+