ಈ ಒಂದು ಪ್ಲ್ಯಾನ್ ಸಾಕು, ಹೆಚ್ಚು ಕಡಿಮೆ ಮೂರು ತಿಂಗಳು ರೀಚಾರ್ಜ್ ಕಿರಿ ಕಿರಿ ಇರಲ್ಲ!
ಭಾರತೀಯ ಟೆಲಿಕಾಂ ವಲಯದಲ್ಲಿ ತೃತೀಯ ದೊಡ್ಡ ಖಾಸಗಿ ಸಂಸ್ಥೆ ಆಗಿ ಗುರುತಿಸಿಕೊಂಡಿರುವ (ವೊಡಾಫೋನ್ ಐಡಿಯಾ - Vi) ವಿ ಟೆಲಿಕಾಂ ಕೆಲವು ಆಕರ್ಷಕ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಸಂಸ್ಥೆಯು ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್‌ಗಳ ಪೈಕಿ ಅಲ್ಪಾವಧಿಯ ಹಾಗೂ ದೀರ್ಘಾವಧಿಯ ಯೋಜನೆಗಳ ಆಯ್ಕೆ ಇವೆ. ಅಲ್ಲದೇ ಹೆಚ್ಚು ಕಡಿಮೆ ಮೂರು ತಿಂಗಳ ವ್ಯಾಲಿಡಿಟಿ (84 ದಿನಗಳ ವ್ಯಾಲಿಡಿಟಿ) ನೀಡುವ ರೀಚಾರ್ಜ್ ಯೋಜನೆಗಳ ಆಯ್ಕೆ ಸಹ ಪಡೆದಿದೆ.
ಹೌದು, ವಿ ಟೆಲಿಕಾಂ ಸಂಸ್ಥೆಯು ಸಹ ಭಿನ್ನ ಶ್ರೇಣಿಯ ಯೋಜನೆಗಳ ಆಯ್ಕೆ ಒಳಗೊಂಡಿದೆ. ಅವುಗಳಲ್ಲಿ ಹೆಚ್ಚಿನ ಡೇಟಾ ಪ್ರಯೋಜನದ ಯೋಜನೆಗಳು ಸೇರಿವೆ ಹಾಗೆಯೇ, ಬಿಗ್ ವ್ಯಾಲಿಡಿಟಿಯ ಸೌಲಭ್ಯ ಒದಗಿಸುವ ಪ್ಲ್ಯಾನ್ ಕೂಡಾ ಇವೆ. ಇನ್ನು ಸಂಸ್ಥೆಯ ಬಹುತೇಕ ಪ್ಲ್ಯಾನ್‌ಗಳು ದೈನಂದಿನ ಡೇಟಾ, ಎಸ್‌ಎಮ್‌ಎಸ್ ಹಾಗೂ ಆಕರ್ಷಕ ವ್ಯಾಲಿಡಿಟಿ ಪ್ರಯೋಜನ ಪಡೆದುಕೊಂಡಿವೆ. ಹಾಗಾದರೇ ವಿ ಸಂಸ್ಥೆಯ 84 ದಿನಗಳ ವ್ಯಾಲಿಡಿಟಿ ಪ್ಲ್ಯಾನ್‌ಗಳ ಬಗ್ಗೆ ಹಾಗೂ ಕೆಲವು ಬೆಸ್ಟ್ ಯೋಜನೆಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿ 859ರೂ. ಪ್ರೀಪೇಯ್ಡ್ ಯೋಜನೆಯ ಮಾಹಿತಿ
ವಿ ಟೆಲಿಕಾಂನ 859ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 1.5 GB ಡೇಟಾ ಪ್ರಯೋಜನ ಸಿಗಲಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ಲಭ್ಯ. ಅಲ್ಲದೇ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ದೊರೆಯುತ್ತದೆ. ಇನ್ನು ಹೆಚ್ಚುವರಿಯಾಗಿ ಈ ಪ್ಲ್ಯಾನಿನಲ್ಲಿ ವಿಕೇಂಡ್ ಡೇಟಾ ರೋಲ್ ಓವರ್ ಪ್ರಯೋಜನ ಸಹ ಲಭ್ಯ.
ವಿ 979ರೂ. ಪ್ರೀಪೇಯ್ಡ್ ಯೋಜನೆಯ ಮಾಹಿತಿ
ವಿ (Vi) ಟೆಲಿಕಾಂನ 979ರೂ. ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗಲಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ಲಭ್ಯ. ಅಲ್ಲದೇ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ದೊರೆಯುತ್ತದೆ. ಇನ್ನು ಹೆಚ್ಚುವರಿಯಾಗಿ ಈ ಪ್ಲ್ಯಾನಿನಲ್ಲಿ ವಿಕೇಂಡ್ ಡೇಟಾ ರೋಲ್ ಓವರ್ ಹಾಗೂ ಓಟಿಟಿ ಚಂದಾದಾರಿಕೆಯ ಪ್ರಯೋಜನ ಸಹ ಲಭ್ಯ.
ವಿ 998ರೂ. ಪ್ರೀಪೇಯ್ಡ್ ಯೋಜನೆಯ ಮಾಹಿತಿ
ವಿ ಟೆಲಿಕಾಂನ 998ರೂ. ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಸಹ ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಒಳಗೊಂಡಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗಲಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ಲಭ್ಯ. ಅಲ್ಲದೇ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ದೊರೆಯುತ್ತದೆ. ಇನ್ನು ಹೆಚ್ಚುವರಿಯಾಗಿ ವಿಕೇಂಡ್ ಡೇಟಾ ರೋಲ್ ಓವರ್ ಪ್ರಯೋಜನ ಸಹ ಲಭ್ಯ.
ವಿ 994ರೂ. ಪ್ರೀಪೇಯ್ಡ್ ಯೋಜನೆಯ ಮಾಹಿತಿ
ವಿ ಟೆಲಿಕಾಂನ 994ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗಲಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ಲಭ್ಯ. ಅಲ್ಲದೇ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ದೊರೆಯುತ್ತದೆ. ಇನ್ನು ಹೆಚ್ಚುವರಿಯಾಗಿ ಡಿಸ್ನಿ+ ಹಾಟ್‌ಸ್ಟಾರ್, ವಿಕೇಂಡ್ ಡೇಟಾ ರೋಲ್ ಓವರ್ ಪ್ರಯೋಜನ ಸಹ ಲಭ್ಯ.


Click it and Unblock the Notifications








