Home
ಸುದ್ದಿಜಾಲ

ಕರ್ನಾಟಕದ Vi ಟೆಲಿಕಾಂ ಬಳಕೆದಾರರಿಗೆ ಗುಡ್‌ನ್ಯೂಸ್‌; ಇನ್ಮುಂದೆ ಈ ಸೌಲಭ್ಯ ಸಿಗಲಿದೆ!

ದೇಶದ ತೃತೀಯ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ವಿ ಟೆಲಿಕಾಂ (Vi) ಈಗಾಗಲೇ ಕೆಲವು ಅತ್ಯುತ್ತಮ ರೀಚಾರ್ಜ್‌ ಪ್ಲ್ಯಾನ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತ ಸಾಗಿದೆ. ಅಲ್ಲದೇ ಜಿಯೋ ಹಾಗೂ ಏರ್‌ಟೆಲ್‌ ಟೆಲಿಕಾಂಗಳಿಗೆ ನೇರ ಪೈಪೋಟಿ ನೀಡುತ್ತಾ ಮುನ್ನಡೆದಿದೆ. ಅಂದಹಾಗೆ ವಿ ಟೆಲಿಕಾಂ ಇದೀಗ ಬೆಂಗಳೂರು, ಮೈಸೂರು ಹಾಗೂ ತುಮಕೂರು ನಗರಗಳಲ್ಲಿನ ತನ್ನ ಬಳಕೆದಾರರಿಗೆ ತ್ವರಿತಗತಿಯ ಡೇಟಾ ವೇಗ ಒದಗಿಸಲು, ತನ್ನ ನೆಟ್‌ವರ್ಕ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿರುವುದಾಗಿ ಪ್ರಕಟಿಸಿದೆ.

ವಿ ಟೆಲಿಕಾಂ ಕಂಪನಿಯು ತನ್ನ LTE 2100 MHz ಬ್ಯಾಂಡ್‌ನ ಸಾಮರ್ಥ್ಯವನ್ನು 5 MHz ನಿಂದ 10 MHz- ಗೆ ವಿಸ್ತರಿಸುವ ಮೂಲಕ ದ್ವಿಗುಣಗೊಳಿಸಿರುವ ಮಾಹಿತಿ ಬಹಿರಂಗಪಡಿಸಿದೆ. ಇದರಿಂದ ಚಂದಾದಾರರಿಗೆ ತ್ವರಿತಗತಿಯ ಸಂಪರ್ಕಜಾಲ ವೇಗ ಮತ್ತು ಸುಧಾರಿತ ಅಂತರ್ಜಾಲ ಜಾಲಾಡುವ (ಇಂಟರ್‌ನೆಟ್‌ ಬ್ರೌಸಿಂಗ್) ಅನುಭವಗಳನ್ನು ಒದಗಿಸಲಿದೆ.

ಕರ್ನಾಟಕದ Vi ಬಳಕೆದಾರರಿಗೆ ಗುಡ್‌ನ್ಯೂಸ್‌; ಇನ್ಮುಂದೆ ಈ ಸೌಲಭ್ಯ ಸಿಗಲಿದೆ!

ಇತ್ತೀಚೆಗೆ ಖರೀದಿಸಿದ 900 MHz ಬ್ಯಾಂಡ್‌ನ ನಿಯೋಜನೆಯೊಂದಿಗೆ ವಿ (Vi) ತನ್ನ ನೆಟ್‌ವರ್ಕ್ಅನ್ನು ರಾಜ್ಯಾದ್ಯಂತ ಬಲಪಡಿಸಲು ಮತ್ತಷ್ಟು ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ. ಮುಂಬರುವ ದಿನಗಳಲ್ಲಿ ಒಳಾಂಗಣ ಸಂಪರ್ಕಜಾಲ ವ್ಯಾಪ್ತಿ ಹೆಚ್ಚಿಸಲು ಅದರಲ್ಲೂ ವಿಶೇಷವಾಗಿ ಉಪನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಜನನಿಬಿಡ ಪ್ರದೇಶಗಳಲ್ಲಿ L900 ತರಂಗಾಂತರ ಬಳಸಲು ಉದ್ದೇಶಿಸಿದೆ.

ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ತನ್ನ ಬದ್ಧತೆ ಬಲಪಡಿಸುವ ಮೂಲಕ, ರಾಜ್ಯದೊಳಗೆ ತನ್ನ ಸೇವಾ ವಿತರಣೆ ಮತ್ತು ಸೇವೆಯ ವ್ಯಾಪ್ತಿ ವಿಸ್ತರಿಸಲು ದಾವಣಗೆರೆಯಲ್ಲಿ ಹೊಸ ಸೇವಾ ವಲಯದ ಆರಂಭವನ್ನು ವಿ (Vi) ಪ್ರಕಟಿಸಿದೆ. ಈ ಎಲ್ಲಾ ಪ್ರಯತ್ನಗಳು ಕರ್ನಾಟಕದಾದ್ಯಂತ ಉತ್ತಮ ಸಂಪರ್ಕ ಮತ್ತು ಉತ್ತಮ ಗ್ರಾಹಕ ಅನುಭವವನ್ನು ಒದಗಿಸುವ ವಿ ಟೆಲಿಕಾಂನ ಬದ್ಧತೆಯ ಭಾಗವಾಗಿದೆ. ಹೀಗಾಗಿ ತನ್ನ ಬಳಕೆದಾರರು ಉನ್ನತ ಗುಣಮಟ್ಟ ಧ್ವನಿ ಮತ್ತು ಇದುವರೆಗಿನ ಅತ್ಯುತ್ತಮ ಸಂಪರ್ಕಜಾಲವಾದ ವಿ ಗಿಗಾನೆಟ್‌ (Vi GIGAnet) ನಲ್ಲಿ ತ್ವರಿತಗತಿಯ ಡೇಟಾ ವೇಗದಿಂದ ಪ್ರಯೋಜನ ಪಡೆಯುವುದನ್ನು ಖಚಿತಪಡಿಸುತ್ತದೆ.

ವಿ-ಯ ಸಂಪರ್ಕಜಾಲವು ಸದ್ಯಕ್ಕೆ ಕರ್ನಾಟಕದಲ್ಲಿ ಅಂದಾಜು ಶೇ 85ರಷ್ಟು ಜನಸಂಖ್ಯೆಯನ್ನು ಒಳಗೊಂಡಿದೆ. ಕಳೆದ ಎರಡು ವರ್ಷಗಳಲ್ಲಿ, ವಿ (Vi) ಕರ್ನಾಟಕದಲ್ಲಿ ತನ್ನ ಪ್ರಮುಖ ಸಂಪರ್ಕಜಾಲವನ್ನು ಮೇಲ್ದರ್ಜೆಗೆ ಏರಿಸಿದೆ. ಇದು 5G ಸನ್ನದ್ಧತೆಯನ್ನು ಖಾತ್ರಿಪಡಿಸಲಾಗಿದೆ. ಗ್ರಾಹಕರು E-SIM ನ ಪ್ರಯೋಜನಗಳನ್ನು ಬಳಸಿಕೊಳ್ಳಲು ಅನುವು ಮಾಡಿಕೊಡಲಾಗಿದೆ. ಇದು ವೊಲ್ಟೆ ಆರ್ಕಿಟೆಕ್ಚರ್ ಅನ್ನು ವರ್ಧಿಸಿದೆ. ಒಳಾಂಗಣ ಧ್ವನಿ ಸೇವೆಗಳನ್ನು ಸುಧಾರಿಸಲು ವೊ-ವೈಫೈ( Vo-wifi ) ಅನ್ನು ಜಾರಿಗೆ ತಂದಿದೆ.

ವಿ ಸ್ಟೋರ್ಸ್‌, ವಿ ಶಾಪ್ಸ್‌ ಮತ್ತು ವಿ ಮಿನಿ ಸ್ಟೋರ್ಸ್‌ ಸೇರಿದಂತೆ 140ಕ್ಕೂ ಹೆಚ್ಚು ಮಳಿಗೆಗಳ ಮೂಲಕ ಕಂಪನಿಯು ರಾಜ್ಯದಲ್ಲಿ ತನ್ನ ರಿಟೇಲ್‌ ವಹಿವಾಟನ್ನು ವಿಸ್ತರಿಸಿದೆ. ತನ್ನ ಗ್ರಾಹಕರಿಗೆ ಹೆಚ್ಚಿನ ಸೇವೆ ಮತ್ತು ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಸುಮಾರು 360 ವಿತರಕರು ಹಾಗೂ 19,000 ರೀಚಾರ್ಜ್ ಮಳಿಗೆಗಳೊಂದಿಗೆ ರಾಜ್ಯದಲ್ಲಿ ವ್ಯಾಪಕವಾದ ವಿತರಣಾ ಜಾಲ ಹೊಂದಿದೆ.

ವಿ ಟೆಲಿಕಾಂ ಹಲವು ಆಕರ್ಷಕ ಯೋಜನೆಗಳ ಆಯ್ಕೆಯನ್ನು ಹೊಂದಿದ್ದು, ಆ ಪೈಕಿ 979ರೂ. ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದೆ. ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 2 GB ಡೇಟಾ ಪ್ರಯೋಜನ ಸಿಗಲಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಸಹ ದೊರೆಯುತ್ತದೆ. ಅಲ್ಲದೇ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ಲಭ್ಯ.

ಹಾಗೆಯೇ ವಿ ಟೆಲಿಕಾಂನ 859ರೂ. ರೀಚಾರ್ಜ್‌ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದೆ. ಇದರಲ್ಲಿ ಗ್ರಾಹಕರಿಗೆ ಪ್ರತಿದಿನ 1.5 GB ಡೇಟಾ ಪ್ರಯೋಜನ ಸಿಗಲಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಸಹ ದೊರೆಯುತ್ತದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ದೊರೆಯುತ್ತದೆ.

Best Mobiles in India

English summary
Vi telecom ramps up network coverage in Karnataka state. Check out all details in kannada here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+