ವಿ ಟೆಲಿಕಾಂ ಗ್ರಾಹಕರಿಗೆ ಬಿಗ್ ಶಾಕ್!..ರೀಚಾರ್ಜ್ ಮಾಡುವ ಮುನ್ನ ಗಮನಿಸಿ!
ದೇಶದ ಮೂರನೇ ದೊಡ್ಡ ಟೆಲಿಕಾಂ ಸಂಸ್ಥೆ ಆಗಿ ಗುರುತಿಸಿಕೊಂಡಿರುವ ವಿ ಟೆಲಿಕಾಂ ಹಲವು ಆಕರ್ಷಕ ಪ್ಲ್ಯಾನ್‌ಗಳ ಮೂಲಕ ಗ್ರಾಹಕರಿಗೆ ಇಷ್ಟವಾಗಿದೆ. ವಿ ಟೆಲಿಕಾಂ ಸಂಸ್ಥೆಯು ದೀರ್ಘಾವಧಿ ವ್ಯಾಲಿಡಿಟಿಯ ಯೋಜನೆಗಳ ಜೊತೆಗೆ ಅಧಿಕ ಡೇಟಾ ಪ್ರಯೋಜನದ ಪ್ಲ್ಯಾನ್‌ಗಳನ್ನು ಸಹ ನೀಡಿದೆ. ಆದರೆ ವಿ ಟೆಲಿಕಾಂ ಈಗ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ.
ಹೌದು, ವಿ ಟೆಲಿಕಾಂ ಭಿನ್ನ ಪ್ರಯೋಜನಗಳ ಪ್ರೀಪೇಯ್ಡ್ ಪ್ಲ್ಯಾನ್‌ಗಳ ಲಿಸ್ಟ್ ಹೊಂದಿದೆ. ಸಂಸ್ಥೆಯ ಬಹುತೇಕ ಪ್ರೀಪೇಯ್ಡ್ ಯೋಜನೆಗಳು ದೈನಂದಿನ ಡೇಟಾ, ಎಸ್‌ಎಮ್‌ಎಸ್, ವಾಯಿಸ್ ಕರೆಯ ಪ್ರಯೋಜನ ಪಡೆದಿವೆ. ಇದರೊಂದಿಗೆ ಕೆಲವು ಪ್ರೀಪೇಯ್ಡ್ ಯೋಜನೆಗಳು ಹೆಚ್ಚುವರಿಯಾಗಿ ಓಟಿಟಿ ಸೌಲಭ್ಯ ಸಹ ಪಡೆದಿವೆ. ಆದ್ರೆ ಸಂಸ್ಥೆಯು ಚಂದಾದಾರರಿಗೆ ಭಾರೀ ನಿರಾಶೆ ನಿರ್ಧಾರ ಮಾಡಿದೆ.

ವಿ ಟೆಲಿಕಾಂ ಕೆಲವು ಅಗ್ಗದ ಯೋಜನೆಗಳ ಆಯ್ಕೆ ಸಹ ಗ್ರಾಹಕರಿಗೆ ನೀಡಿದೆ. ಅವುಗಳಲ್ಲಿ 99ರೂ. ರೀಚಾರ್ಜ್ ಯೋಜನೆಯು ಗಮನ ಸೆಳೆದಿದೆ. ಈ ಪ್ಲ್ಯಾನ್ ರೀಚಾರ್ಜ್ ಮಾಡಿಸುವ ಚಂದಾದಾರರಿಗೆ ಈಗ ಬೇಸರ ಖಂಡಿತಾ. ಏಕೆಂದರೆ ವಿ ಟೆಲಿಕಾಂ ಹರ್ಯಾಣ ಟೆಲಿಕಾಂ ಸರ್ಕಲ್‌ನಲ್ಲಿ ಮಾತ್ರ ಈ ಯೋಜನೆಯನ್ನು ತೆಗೆದುಹಾಕಲಿದೆ (Removes) ಎಂದು ವರದಿಯಾಗಿದೆ. ಹಾಗಾದರೆ ಈ ಬಗ್ಗೆ ಹಾಗೂ ಇತರೆ ಜನಪ್ರಿಯ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ವಿ 99ರೂ. ಪ್ಲ್ಯಾನ್ ಸೌಲಭ್ಯಗಳು : ವಿ ಟೆಲಿಕಾಂನ 99ರೂ. ರೀಚಾರ್ಜ್ ಪ್ಲ್ಯಾನ್ ಸಿಮ್ ಆಕ್ಟಿವ್ ಇರಿಸಲು ಪೂರಕವಾದ ಬೇಸಿಕ ಯೋಜನೆ ಆಗಿದೆ. ಅಂದಹಾಗೆ ಈ ಯೋಜನೆಯಲ್ಲಿ ಉಚಿತ ಎಸ್‌ಎಮ್‌ಎಸ್ ಪ್ರಯೋಜನ ಲಭ್ಯ ಇರುವುದಿಲ್ಲ. ಅದಾಗ್ಯೂ, ಈ ಯೋಜನೆಯು 200ಎಂಬಿ ಡೇಟಾ ಸೌಲಭ್ಯ ಅನ್ನು ಪಡೆದಿದ್ದು, ಇದರೊಂದಿಗೆ 99ರೂ. ಗಳ ಟಾಕ್‌ಟೈಮ್ ಪ್ರಯೋಜನ ಸಹ ದೊರೆಯುತ್ತದೆ. ಹಾಗೆಯೇ ಧ್ವನಿ ಕರೆಗಳಲ್ಲಿ ಪ್ರತಿ ಸೆಕೆಂಡಿಗೆ 2.5 ಪೈಸಯ ಶುಲ್ಕ ವಿಧಿಸುತ್ತದೆ.
ವಿ 499ರೂ. ಪ್ರೀಪೇಯ್ಡ್ ಯೋಜನೆಯ ಪ್ರಯೋಜನಗಳು : ವಿ ಟೆಲಿಕಾಂನ 499ರೂ. ರೀಚಾರ್ಜ್ ಯೋಜನೆಯಲ್ಲಿ ಡೈಲಿ 2GB ಡೇಟಾ ಪ್ರಯೋಜನ ಲಭ್ಯ. ಜೊತೆಗೆ ಈ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿದೆ. ಹಾಗೆಯೇ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಸಹ ಸಿಗುತ್ತದೆ. ಗ್ರಾಹಕರಿಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ.
ವಿ ಟೆಲಿಕಾಂ 601ರೂ. ರೀಚಾರ್ಜ್ ಪ್ಲಾನ್ ಸೌಲಭ್ಯಗಳು : ವಿ ಟೆಲಿಕಾಂನ 601ರೂ. ರೀಚಾರ್ಜ್ ಯೋಜನೆಯು ಒಂದು ವರ್ಷದವರೆಗೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ ಓಟಿಟಿ ಸದಸ್ಯತ್ವ ನೀಡುತ್ತದೆ. ಜೊತೆಗೆ ಅನಿಯಮಿತ ಕರೆ, ಡೈಲಿ 3 GB ಡೇಟಾ ಹಾಗೂ ಡೈಲಿ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಒದಗಿಸುತ್ತದೆ. ಇನ್ನು ಈ ರೀಚಾರ್ಜ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಒಳಗೊಂಡಿದ್ದು, ಗ್ರಾಹಕರಿಗೆ ಒಟ್ಟು ವ್ಯಾಲಿಡಿಟಿಗೆ 84GB ಡೇಟಾ ಸೌಲಭ್ಯ ಸಿಗಲಿದೆ.
ವಿ ಟೆಲಿಕಾಂನ 901ರೂ. ರೀಚಾರ್ಜ್ ಪ್ಲ್ಯಾನ್ ಮಾಹಿತಿ : ಈ ಪ್ಲ್ಯಾನ್ 70 ದಿನಗಳ ವ್ಯಾಲಿಡಿಟಿ ಅನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಗ್ರಾಹಕರಿಗೆ ಡೈಲಿ 3 GB ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಸಹ ದೊರೆಯುತ್ತದೆ. ಇದರೊಂದಿಗೆ ಈ ಪ್ಲ್ಯಾನಿನಲ್ಲಿ ಅನಿಯಮಿತ ಉಚಿತ ಕರೆ ಹಾಗೂ ಉಚಿತ 100 ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯ.


Click it and Unblock the Notifications