ಒಮ್ಮೆ ಈ ಪ್ಲ್ಯಾನ್ ರೀಚಾರ್ಜ್ ಮಾಡಿದ್ರೆ, ವರ್ಷ ಪೂರ್ತಿ ಟೆನ್ಷನ್ ಇರಲ್ಲ!
ವಿ ಟೆಲಿಕಾಂ (ವೊಡಾಫೋನ್ ಐಡಿಯಾ) ಸೇರಿದಂತೆ ಜಿಯೋ, ಏರ್‌ಟೆಲ್ ಸಹ ಇತ್ತೀಚಿಗೆ ತಮ್ಮ ಪ್ರಿಪೇಯ್ಡ್ ಯೋಜನೆಗಳ ಬೆಲೆ ಹೆಚ್ಚಳ ಮಾಡಿವೆ. ವಿ ಟೆಲಿಕಾಂ ಭಿನ್ನ ಶ್ರೇಣಿಯ ಪ್ರೀಪೇಯ್ಡ್ ಯೋಜನೆಗಳ ಆಯ್ಕೆ ಹೊಂದಿದೆ. ಆ ಪೈಕಿ ಅಲ್ಪಾವಧಿಯ ಯೋಜನೆಗಳು ಇದ್ದು, ದೀರ್ಘಾವಧಿಯ ಯೋಜನೆಗಳು ಇವೆ. ಅನಿಯಮಿತ ವಾಯಿಸ್ ಕರೆ ಸೌಲಭ್ಯದ ಜೊತೆಗೆ, ಅಧಿಕ ಡೇಟಾ ಪ್ರಯೋಜನದ ಪ್ಲ್ಯಾನ್‌ಗಳ ಆಯ್ಕೆ ಸಹ ಇದೆ. ಅದಾಗ್ಯೂ ವಿ ಟೆಲಿಕಾಂನ ದೀರ್ಘ ವ್ಯಾಲಿಡಿಟಿ ಅವಧಿಯ ಯೋಜನೆಗಳು ಹೆಚ್ಚು ಗಮನ ಸೆಳೆದಿವೆ.

ಹೌದು, ವಿ ಟೆಲಿಕಾಂ ಅಲ್ಪಾವಧಿಯ ಯೋಜನೆಗಳ ಜೊತೆಗೆ ದೀರ್ಘಾವಧಿ ವ್ಯಾಲಿಡಿಟಿಯ ಆಯ್ಕೆಗಳನ್ನು ಒಳಗೊಂಡಿದೆ. ಕೆಲವು ಬಳಕೆದಾರರು ಅಧಿಕ ಡೇಟಾ ಸೌಲಭ್ಯ ಬಯಸಿದರೇ, ಮತ್ತೆ ಕೆಲವು ಬಳಕೆದಾರರು ವಾರ್ಷಿಕ ಅವಧಿಯ ವ್ಯಾಲಿಡಿಟಿ ಯೋಜನೆಗಳತ್ತ ಹೋಗುತ್ತಾರೆ. ಈ ನಿಟ್ಟಿನಲ್ಲಿ ವಿ ಟೆಲಿಕಾಂ ಆಕರ್ಷಕ ವಾರ್ಷಿಕ ಯೋಜನೆಗಳ ಪಟ್ಟಿ ಹೊಂದಿದ್ದು, ಓಟಿಟಿ ಪ್ರಯೋಜನ ಸಹ ಲಭ್ಯವಾಗಲಿದೆ. ವಿ ಟೆಲಿಕಾಂನ 3099ರೂ. ಯೋಜನೆಯು ಆಕರ್ಷಕ ಎನಿಸಿದೆ. ಹಾಗಾದರೇ ವಿ ಟೆಲಿಕಾಂನ 3099ರೂ. ಯೋಜನೆಯ ಪ್ರಯೋಜನಗಳೆನು?..ಇತರೆ ದೀರ್ಘ ವ್ಯಾಲಿಡಿಟಿ ಅವಧಿಯ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿ ಟೆಲಿಕಾಂ 3099ರೂ. ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು
ವಿ ಟೆಲಿಕಾಂನ 3099ರೂ. ಪ್ರಿಪೇಯ್ಡ್ ಯೋಜನೆಯೊಂದಿಗೆ 1.5 GB ದೈನಂದಿನ ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳನ್ನು ಸೌಲಭ್ಯ ದೊರೆಯಲಿದೆ. ಇನ್ನು ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಪಡೆದಿದೆ. ಇದರೊಂದಿಗೆ ಈ ಯೋಜನೆಯಲ್ಲಿ ವಿಕೇಂಡ್ ಡೇಟಾ ರೋಲ್‌ಓವರ್ ಪ್ರಯೋಜನಗಳನ್ನು ಸಹ ಲಭ್ಯವಾಗಲಿದೆ. ಅಲ್ಲದೇ ಹೆಚ್ಚುವರಿಯಾಗಿ ಒಂದು ವರ್ಷದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಪ್ರಯೋಜನ ಲಭ್ಯ ಆಗಲಿದೆ. ಇದರೊಂದಿಗೆ ವಿ ಆಪ್ಸ್‌ಗಳು ಲಭ್ಯವಾಗಲಿವೆ.

ವಿ ಟೆಲಿಕಾಂ 2899ರೂ. ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು
ವಿ ಟೆಲಿಕಾಂನ 2899ರೂ. ಪ್ರಿಪೇಯ್ಡ್ ಯೋಜನೆಯೊಂದಿಗೆ 1.5 GB ದೈನಂದಿನ ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳನ್ನು ಸೌಲಭ್ಯ ದೊರೆಯಲಿದೆ. ಇನ್ನು ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಪಡೆದಿದೆ. ಇದರೊಂದಿಗೆ ಈ ಯೋಜನೆಯಲ್ಲಿ ವಿಕೇಂಡ್ ಡೇಟಾ ರೋಲ್‌ಓವರ್ ಪ್ರಯೋಜನಗಳನ್ನು ಸಹ ಲಭ್ಯವಾಗಲಿದೆ. ಅಲ್ಲದೇ ಹೆಚ್ಚುವರಿಯಾಗಿ ವಿ ಆಪ್ಸ್‌ಗಳು ಲಭ್ಯವಾಗಲಿವೆ.

ವಿ ಟೆಲಿಕಾಂ 1799ರೂ. ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು
ವಿ ಟೆಲಿಕಾಂನ 1799ರೂ. ಪ್ರಿಪೇಯ್ಡ್ ಯೋಜನೆಯಲ್ಲಿ ಪೂರ್ಣ ಅವಧಿಗೆ ಒಟ್ಟು 24 GB ದೈನಂದಿನ ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳನ್ನು ಸೌಲಭ್ಯ ದೊರೆಯಲಿದೆ. ಇನ್ನು ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಪಡೆದಿದೆ. ಇದರೊಂದಿಗೆ ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ವಿ ಆಪ್ಸ್‌ಗಳು ಲಭ್ಯವಾಗಲಿವೆ.

ವಿ ಟೆಲಿಕಾಂ 1449ರೂ. ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು
ವಿ ಟೆಲಿಕಾಂನ 1449ರೂ. ಪ್ರಿಪೇಯ್ಡ್ ಯೋಜನೆಯೊಂದಿಗೆ 1.5 GB ದೈನಂದಿನ ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳನ್ನು ಸೌಲಭ್ಯ ದೊರೆಯಲಿದೆ. ಇನ್ನು ಈ ಯೋಜನೆಯು 180 ದಿನಗಳ ವ್ಯಾಲಿಡಿಟಿ ಪಡೆದಿದೆ. ಇದರೊಂದಿಗೆ ಈ ಯೋಜನೆಯಲ್ಲಿ ವಿಕೇಂಡ್ ಡೇಟಾ ರೋಲ್‌ಓವರ್ ಪ್ರಯೋಜನಗಳನ್ನು ಸಹ ಲಭ್ಯವಾಗಲಿದೆ. ಅಲ್ಲದೇ ಹೆಚ್ಚುವರಿಯಾಗಿ ವಿ ಆಪ್ಸ್‌ಗಳು ಲಭ್ಯವಾಗಲಿವೆ.

ವಿ ಟೆಲಿಕಾಂ 901ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ವಿ ಟೆಲಿಕಾಂ 901 ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್ ಇಲ್ಲದೇ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ 48 GB ಡೇಟಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ, ವಿ ಆಪ್ಸ್, ವಿಕೆಂಡ್ ಡೇಟಾ ರೋಲ್ ಓವರ್ ಸೌಲಭ್ಯ ಲಭ್ಯ.

ಏರ್‌ಟೆಲ್ 699ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ಏರ್‌ಟೆಲ್ ಟೆಲಿಕಾಂನ 699ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್ ಇಲ್ಲದೇ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್ ಚಂದಾದಾರಿಕೆ, ಏರ್‌ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.


Click it and Unblock the Notifications








