Home
ಸುದ್ದಿಜಾಲ

ವಿ ಟೆಲಿಕಾಂನ ಈ ಎರಡು ಅಗ್ಗದ ಪ್ಲ್ಯಾನ್‌ಗಳಲ್ಲಿ ಸಿಗುತ್ತೆ ಎರಡುಪಟ್ಟು ಡೇಟಾ!

ಭಾರತೀಯ ಟೆಲಿಕಾಂ ವಲಯದಲ್ಲಿ ಈಗಾಗಲೇ ಸಾಕಷ್ಟು ಮಹತ್ತರ ಬದಲಾವಣೆಗಳು ನಡೆಯುತ್ತ ಸಾಗಿದೆ. ಆ ಪೈಕಿ ವಿ ಟೆಲಿಕಾಂ ಈಗಾಗಲೇ ತನ್ನ ಕೆಲವು ಆಯ್ದ ಪ್ರೀಪೇಯ್ಡ್‌ ಯೋಜನೆಗಳಿಗೆ ಡಬಲ್ ಡೇಟಾ ಕೊಡುಗೆ ಘೋಷಿಸಿದೆ. ಹಾಗೆಯೇ ಇನ್ನೆರಡು ಅಗ್ಗದ ಡೇಟಾ ಪ್ಯಾಕ್‌ಗಳಲ್ಲಿಯೂ ಕೂಡಾ ಡಬಲ್ ಡೇಟಾ ಪ್ರಯೋಜನ ನೀಡಿದೆ. ಡೇಟಾ ಜೊತೆಗೆ ಆಕರ್ಷಕ ವ್ಯಾಲಿಡಿಟಿ ಸೌಲಭ್ಯವನ್ನು ಈ ಪ್ಲ್ಯಾನ್‌ಗಳು ಒಳಗೊಂಡಿವೆ.

ಡಬಲ್

ಹೌದು, ವೊಡಾಫೋನ್ ಟೆಲಿಕಾಂ 98ರೂ ಹಾಗೂ 48ರೂ ಬೆಲೆಯ ರೀಚಾರ್ಜ್‌ ಡೇಟಾ ಪ್ಯಾಕ್‌ಗಳಲ್ಲಿ ಡಬಲ್ ಡೇಟಾ ಆಫರ್ ಕೊಡುಗೆ ನೀಡಿದೆ. ಹಾಗೆಯೇ ಈಗಾಗಲೇ ಕೆಲವು ಪ್ರೀಪೇಯ್ಡ್‌ ಯೋಜನೆಗಳಿಗೂ ಸಹ ಡಬಲ್ ಡೇಟಾ ಆಫರ್ ನೀಡಿದೆ. ಹಾಗಾದರೆ ವಿ ಟೆಲಿಕಾಂನ 98ರೂ ಹಾಗೂ 48ರೂ ಯೋಜನೆಗಳ ಪ್ರಯೋಜನಗಳೇನು ಹಾಗೂ ಇತರೆ ಡಬಲ್‌ ಡೇಟಾದ ಪ್ಲ್ಯಾನ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ವಿ ಟೆಲಿಕಾಂ 98ರೂ. ಡೇಟಾ ಪ್ಲ್ಯಾನ್

ವಿ ಟೆಲಿಕಾಂ 98ರೂ. ಡೇಟಾ ಪ್ಲ್ಯಾನ್

ವಿ ಟೆಲಿಕಾಂನ 98ರೂ. ಪ್ಲ್ಯಾನ್ ಡೇಟಾ ಯೋಜನೆ ಆಗಿದೆ. ಈ ಯೋಜನೆಯು 6GB ಡೇಟಾ ಪ್ರಯೋಜನ ಪಡೆದಿದೆ. ಆದ್ರೆ ಡಬಲ್‌ ಡೇಟಾ ಕೊಡುಗೆ ಲಭ್ಯ ಇರುವುದರಿಂದ ಈಗ ಒಟ್ಟು 12GB ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಈ ಪ್ಯಾಕ್ ಹೊಂದಿದೆ.

ವಿ ಟೆಲಿಕಾಂ 48ರೂ. ಡೇಟಾ ಪ್ಲ್ಯಾನ್

ವಿ ಟೆಲಿಕಾಂ 48ರೂ. ಡೇಟಾ ಪ್ಲ್ಯಾನ್

ವಿ ಟೆಲಿಕಾಂನ 48ರೂ. ಪ್ಲ್ಯಾನ್ ಡೇಟಾ ಯೋಜನೆ ಆಗಿದ್ದು, ಈ ಯೋಜನೆಯಲ್ಲಿ ಒಟ್ಟು 3GB ಡೇಟಾ ಪ್ರಯೋಜನ ಪಡೆದಿದೆ. ಇದರೊಂದಿಗೆ ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಈ ಪ್ಯಾಕ್ ಹೊಂದಿದೆ.

ವಿ ಟೆಲಿಕಾಂ 299ರೂ. ಪ್ಲ್ಯಾನ್

ವಿ ಟೆಲಿಕಾಂ 299ರೂ. ಪ್ಲ್ಯಾನ್

ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಮತ್ತು ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸೌಲಭ್ಯ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ವಿ ಟೆಲಿಕಾಂ 499ರೂ. ಪ್ಲ್ಯಾನ್

ವಿ ಟೆಲಿಕಾಂ 499ರೂ. ಪ್ಲ್ಯಾನ್

ವಿ ಟೆಲಿಕಾಂನ 499ರೂ. ಪ್ಲ್ಯಾನ್‌ ಸಹ ಪ್ರತಿದಿನ 2GB ಡೇಟಾ ಮತ್ತು ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸಿಗುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ವಿ ಟೆಲಿಕಾಂ 699ರೂ. ಪ್ಲ್ಯಾನ್

ವಿ ಟೆಲಿಕಾಂ 699ರೂ. ಪ್ಲ್ಯಾನ್

ವಿ ಟೆಲಿಕಾಂನ 699ರೂ. ಪ್ಲ್ಯಾನ್‌ ಸಹ ಪ್ರತಿದಿನ 2GB ಡೇಟಾ ಮತ್ತು ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸಿಗುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಆದರೆ ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

Best Mobiles in India

English summary
Vi Telecom Rs 48 And Rs 98 Data Pack Offer Double Data.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+