Home
ಸುದ್ದಿಜಾಲ

ವಿ ಟೆಲಿಕಾಂನ 299ರೂ. ಪ್ಲ್ಯಾನಿನ ಪ್ರಯೋಜನಗಳೇನು?..ರೀಚಾರ್ಜ್‌ಗೆ ಉತ್ತಮವೇ?

ಭಾರತೀಯ ಟೆಲಿಕಾಂ ವಲಯದಲ್ಲಿ ವೊಡಾಫೋನ್-ಐಡಿಯಾ(ವಿ ಟೆಲಿಕಾಂ) ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ಜಿಯೋ, ಏರ್‌ಟೆಲ್‌ ಟೆಲಿಕಾಂಗಳಿಗೆ ಪೈಪೋಟಿ ನೀಡಿವಂತಹ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಾ ಸಾಗಿದೆ. ಸಂಸ್ಥೆಯು ಈಗಾಗಲೇ ಹಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಅವುಗಳಲ್ಲಿ ಬಹುತೇಕ ಪ್ರೀಪೇಯ್ಡ್‌ ಪ್ಲ್ಯಾನ್‌ಗಳು ಮುಖ್ಯವಾಗಿ ಪ್ರತಿದಿನದ ಡೇಟಾ, ಅನಿಯಮಿತ ವಾಯಿಸ್‌ ಕರೆ, ದೀರ್ಘಾವಧಿಯ ವ್ಯಾಲಿಡಿಟಿ ಸೌಲಭ್ಯಗಳನ್ನು ಪಡೆದಿವೆ. ಹಾಗೆಯೇ ಕೆಲವು ಯೋಜನೆಗಳು ಡಬಲ್ ಡೇಟಾ ಪ್ರಯೋಜನ ಪಡೆದಿವೆ. ಆ ಪೈಕಿ ಅಗ್ಗದ ಪ್ಲ್ಯಾನ್‌ವೊಂದು ಗಮನ ಸೆಳೆದಿದೆ.

ಗ್ರಾಹಕರಿಗೆ

ವಿ ಟೆಲಿಕಾಂನ ಜನಪ್ರಿಯ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ಗಳಲ್ಲಿ 299ರೂ. ಪ್ಲ್ಯಾನ್ ಸಹ ಒಂದಾಗಿದೆ. ಈ ಯೋಜನೆಯು ಪ್ರತಿದಿನ ಡೇಟಾ ಸೌಲಭ್ಯ, ಆಕರ್ಷಕ ವ್ಯಾಲಿಡಿಟಿ, ಎಸ್‌ಎಮ್‌ಎಸ್‌ ಸೇವೆ ಹಾಗೂ ಅನಿಯಮಿತ ಕರೆಗಳ ಪ್ರಯೋಜನಗಳ ಪ್ಯಾಕೇಜ್‌ ಅನ್ನು ಹೊಂದಿದೆ. ಸದ್ಯ ಈ ಯೋಜನೆಯಲ್ಲಿ ಡಬಲ್‌ ಡೇಟಾ ಕೊಡುಗೆಯು ಲಭ್ಯ ಇದ್ದು, ಹೀಗಾಗಿ ಗ್ರಾಹಕರಿಗೆ ಪ್ರತಿದಿನ 4GB ಡೇಟಾ ಬಳಕೆಗೆ ಲಭ್ಯವಾಗಲಿದೆ. ಹಾಗಾದರೇ ವಿ ಟೆಲಿಕಾಂನ 299ರೂ.ಯೋಜನೆಯ ಪ್ರಯೋಜನಗಳೆನು?..ರೀಚಾರ್ಜ್‌ ಮಾಡಿಸಲು ಉತ್ತಮವೇ? ಹಾಗೂ ಇತರೆ ಡಬಲ್‌ಡೇಟಾ ಯೋಜನೆಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ವೊಡಾಫೋನ್-ಐಡಿಯಾ 299ರೂ. ಯೋಜನೆ

ವೊಡಾಫೋನ್-ಐಡಿಯಾ 299ರೂ. ಯೋಜನೆ

ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಮತ್ತು ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸೌಲಭ್ಯ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, ಪ್ರತಿದಿನ ಬೆಳಿಗ್ಗೆ 12 ರಿಂದ ಬೆಳಿಗ್ಗೆ 6 ರವರೆಗೆ ಅನಿಯಮಿತ ಡೇಟಾ ಬಳಕೆಗೆ ಲಭ್ಯ ಹಾಗೂ ವೀಕೇಂಡ್‌ ಡೇಟಾ ರೋಲ್‌ಓವರ್ ಸೌಲಭ್ಯ ಸಹ ಇದೆ. ಇದರೊಂದಿಗೆ ವಿ ಟೆಲಿಕಾಂನ ಆಪ್ಸ್‌ಗಳ ಸೇವೆ ಸಹ ದೊರೆಯುತ್ತದೆ.

ವೊಡಾಫೋನ್-ಐಡಿಯಾ 699ರೂ. ಯೋಜನೆ

ವೊಡಾಫೋನ್-ಐಡಿಯಾ 699ರೂ. ಯೋಜನೆ

ವಿ ಟೆಲಿಕಾಂನ 699ರೂ. ಪ್ಲ್ಯಾನ್‌ ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿದೆ. ಸದ್ಯ ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸಿಗುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ವೊಡಾಫೋನ್-ಐಡಿಯಾ 499ರೂ. ಯೋಜನೆ

ವೊಡಾಫೋನ್-ಐಡಿಯಾ 499ರೂ. ಯೋಜನೆ

ವಿ ಟೆಲಿಕಾಂನ 499ರೂ. ಪ್ಲ್ಯಾನ್‌ ಸಹ ಪ್ರತಿದಿನ 2GB ಡೇಟಾ ಮತ್ತು ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸಿಗುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

Best Mobiles in India

English summary
Vi Telecom Rs 699 Prepaid Plan Offers Double Dat Should You Recharge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+