ಹೊಸ ಚಂದಾದಾರಿಗೆ 'ವಿ' ಟೆಲಿಕಾಂನಿಂದ 'ಡಿಜಿಟಲ್ ಎಕ್ಸ್‌ಕ್ಲೂಸಿವ್' ಕೊಡುಗೆ!

|

ವೊಡಾಫೋನ್-ಐಡಿಯಾ (ವಿ) ಟೆಲಿಕಾಂ ದೇಶಿಯ ಟೆಲಿಕಾಂ ವಲಯದಲ್ಲಿ ತನ್ನದೇ ಭಿನ್ನ ಯೋಜನೆಗಳ ಮೂಲಕ ಗುರುತಿಸಿಕೊಂಡಿದೆ. ತನ್ನ ಚಂದಾದಾರರಿಗೆ ಹಲವು ಅನುಕೂಲಕರ ಪ್ರೀಪೇಯ್ಡ್‌ ಯೋಜನೆಗಳ ಆಯ್ಕೆಯನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಇದೀಗ ವಿ ಟೆಲಿಕಾಂ ಹೊಸದಾಗಿ ಚಂದಾದಾರರಾಗುವ ಗ್ರಾಹಕರಿಗೆ ಕೊಡುಗೆಯೊಂದನ್ನು ಘೋಷಿಸಿದ್ದು, ಆಕರ್ಷಕ ಪ್ರಯೋಜನಗಳನ್ನು ನೀಡಿದೆ.

ಟೆಲಿಕಾಂನ

ಹೌದು, ವಿ ಟೆಲಿಕಾಂನ ಅಧಿಕೃತ ವೆಬ್‌ಸೈಟ್‌ನಿಂದ ಆನ್‌ಲೈನ್‌ನಲ್ಲಿ ಸಿಮ್ ಕಾರ್ಡ್ ಅನ್ನು ಆರ್ಡರ್ ಮಾಡುವ ಗ್ರಾಹಕರಿಗೆ ವಿ ಈಗ ಹೊಸ 399ರೂ.ಗಳ ‘ಡಿಜಿಟಲ್ ಎಕ್ಸ್‌ಕ್ಲೂಸಿವ್' ಪ್ರಿಪೇಯ್ಡ್ ಯೋಜನೆಯನ್ನು ನೀಡುತ್ತಿದೆ. ಈ 399ರೂ. ರೀಚಾರ್ಜ್ ಬ್ರಾಂಡ್‌ನಿಂದ ಒಂದು ಅನನ್ಯ ಕೊಡುಗೆಯಾಗಿದೆ. ಏಕೆಂದರೆ ಏರ್‌ಟೆಲ್ ಮತ್ತು ವಿ ನೀಡುವ ‘ಫಸ್ಟ್ ರೀಚಾರ್ಜ್ (ಎಫ್‌ಆರ್‌ಸಿ)' ಯೋಜನೆಗಳು ಸ್ವಲ್ಪ ಹೆಚ್ಚು ಬೆಲೆಯಲ್ಲಿರುತ್ತವೆ.

ಫಸ್ಟ್

ವಿ ಟೆಲಿಕಾಂ ನೀಡುವ ಫಸ್ಟ್ ರೀಚಾರ್ಜ್-ಎಫ್‌ಆರ್‌ಸಿ ಯೋಜನೆಗಳು ಕ್ರಮವಾಗಿ 97ರೂ, 197ರೂ, 297ರೂ, 497ರೂ ಮತ್ತು 647ರೂ. ಪ್ರೈಸ್‌ಟ್ಯಾಗ್‌ನಲ್ಲಿವೆ. 399ರೂ ರೀಚಾರ್ಜ್ನಲ್ಲಿ ಗ್ರಾಹಕರಿಗೆ 56 ದಿನಗಳವರೆಗೆ ದಿನಕ್ಕೆ 1.5 ಜಿಬಿ ಡೇಟಾದೊಂದಿಗೆ ಬರುತ್ತದೆ. ಇನ್ನು ಕಂಪನಿಯ ಆಫ್‌ಲೈನ್ ಸ್ಟೋರ್‌ಗೆ ಹೋಗುವ ಮೂಲಕ ಹೊಸ ವಿ ಸಿಮ್ ಕಾರ್ಡ್ ಖರೀದಿಸುವ ಬಳಕೆದಾರರಿಗೆ 399ರೂ ರೀಚಾರ್ಜ್‌ಗೆ ಅರ್ಹತೆ ಇರುವುದಿಲ್ಲ.

ಆಕರ್ಷಕ

ಹೊಸ ಗ್ರಾಹಕರನ್ನು ಸೆಳೆಯಲು ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರನ್ನು ಉಳಿಸಿಕೊಳ್ಳಲು ವಿ ಆಕರ್ಷಕ ಯೋಜನೆ ಪರಿಚಯಿಸುತ್ತಲೇ ಸಾಗಿದೆ. ಹೊಸ MNP / ಸಾಮಾನ್ಯ ಗ್ರಾಹಕರಿಗೆ 399 ರೂ. ರೀಚಾರ್ಜ್ ನೀಡುವುದು ವಿ ಟೆಲಿಕಾಂ ಹೊಸ ಪ್ರಯತ್ನ. Vi ಯಿಂದ 399 ರೂ.ಗಳ ಪ್ರಿಪೇಯ್ಡ್ ರೀಚಾರ್ಜ್ ಈಗಾಗಲೇ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಲಭ್ಯವಿದೆ. ಈ ಯೋಜನೆಯಲ್ಲಿ ದಿನಕ್ಕೆ 1.5GB ಡೇಟಾ, ಅನಿಯಮಿತ ವಾಯಿಸ್‌ ಕರೆ ಸೌಲಭ್ಯ ಮತ್ತು ಒಟ್ಟು 56 ದಿನಗಳವರೆಗೆ ವ್ಯಾಲಿಡಿಟಿ ಸಿಗಲಿದೆ. ಇದರೊಂದಿಗೆ ದಿನಕ್ಕೆ 100 SMS ಗಳನ್ನು ಪ್ರಯೋಜನ ಇದೆ.

ಆಪರೇಟರ್‌ಗಳು

ಏರ್‌ಟೆಲ್ ಮತ್ತು ವಿ ನಂತಹ ಟೆಲಿಕಾಂ ಆಪರೇಟರ್‌ಗಳು ಸಾಮಾನ್ಯವಾಗಿ 97ರೂ, 197ರೂ, 297ರೂ, 497ರೂ ಮತ್ತು 647ರೂ.ನ ಐದು ಎಫ್‌ಆರ್‌ಸಿಗಳ ಆಯ್ಕೆ ಹೊಂದಿವೆ. ಈಗ ವಿ ಕಂಪನಿಯ ವೆಬ್‌ಸೈಟ್‌ನಿಂದ ಹೊಸ Vi ಸಂಪರ್ಕವನ್ನು ಕಾಯ್ದಿರಿಸುವ ಬಳಕೆದಾರರಿಗೆ 399 ರೂ ರೀಚಾರ್ಜ್ ಅನ್ವಯಿಸುತ್ತದೆ. ವಿ ಯೋಜನೆಗಳನ್ನು ‘ಡಿಜಿಟಲ್ ಎಕ್ಸ್‌ಕ್ಲೂಸಿವ್' ಎಂದು ಕರೆಯಲು ಇದು ಕಾರಣವಾಗಿದೆ.

Best Mobiles in India

English summary
Vi is now offering a new Rs 399 ‘Digital Exclusive’ prepaid plan to the customers who order a SIM card online from the company’s website.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X