ವಿ ಟೆಲಿಕಾಂನ ಈ ಪ್ಲ್ಯಾನ್‌ಗಳಲ್ಲಿ ಸಿಗುತ್ತೆ ZEE ಪ್ರೀಮಿಯಂ ಸದಸ್ಯತ್ವ!
ದೇಶದ ಟೆಲಿಕಾಂ ಸಂಸ್ಥೆಗಳು ಇತ್ತೀಚಿಗೆ ಅಧಿಕ ಡೇಟಾ, ಹೆಚ್ಚಿನ ವ್ಯಾಲಿಡಿಟಿ ಸೌಲಭ್ಯ ನೀಡಿ ಗ್ರಾಹಕರನ್ನು ಖುಷಿ ಪಡಿಸಿವೆ. ಇದರೊಂದಿಗೆ ಜೊತೆಗೆ ಆಯ್ದ ಪ್ಲ್ಯಾನ್‌ಗಳಿಗೆ ಹೆಚ್ಚುವರಿಯಾಗಿ OTT ಸೇವಗಳ ಪ್ರಯೋಜನ ಘೋಷಿಸಿವೆ. ಈ ಪೈಕಿ ವಿ ಟೆಲಿಕಾಂ ತನ್ನ 405ರೂ. ಪ್ಲ್ಯಾನ್‌ನೊಂದಿಗೆ ಹೆಚ್ಚುವರಿಯಾಗಿ ZEE ಪ್ರೀಮಿಯಂ ಸದಸ್ಯತ್ವದ ಕೊಡುಗೆ ನೀಡಿದೆ. ಇದರೊಂದಿಗೆ ಇತರೆ ಕೆಲವು ಪ್ಲ್ಯಾನ್‌ಗಳಲ್ಲಿ ಈ ಕೊಡುಗೆ ನೀಡಿದೆ.

ಹೌದು, ವಿ ಟೆಲಿಕಾಂ 405ರೂ. ಪ್ಲ್ಯಾನ್‌ನಲ್ಲಿ ಹೆಚ್ಚುವರಿಯಾಗಿ ZEE ಪ್ರೀಮಿಯಂ ಸದಸ್ಯತ್ವದ ಕೊಡುಗೆ ನೀಡಿದೆ. ಈ ಪ್ಲ್ಯಾನ್ ಜೊತೆಗೆ ವಿ ಟೆಲಿಕಾಂ ಮತ್ತೆ ಕೆಲವು ಯೋಜನೆಗಳಲ್ಲಿಯೂ ಈ ಆಫರ್ ನೀಡಿದೆ. ಅವುಗಳೆಂದರೇ ವಿ 595ರೂ, ವಿ 795ರೂ ಹಾಗೂ ವಿ 2595ರೂ. ಪ್ಲ್ಯಾನ್‌ಗಳು ಆಗಿವೆ. ಹಾಗಾದರೇ ಈ ವಿ ಟೆಲಿಕಾಂನ ಈ ಯೋಜನೆಗಳ ಪ್ರಯೋಜನಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ವಿ ಟೆಲಿಕಾಂನ 405ರೂ. ಪ್ಲ್ಯಾನ್
ವೊಡಾಫೋನ್ ಐಡಿಯಾ ಸಂಸ್ಥೆಯ ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಅವಧಿಯಲ್ಲಿ ಒಟ್ಟು 90GB ಡೇಟಾ ಪ್ರಯೋಜನ ಇದ್ದು, ಇದರೊಂದಿಗೆ ಅನಿಯಮಿತ ಉಚಿತ ವಾಯಿಸ್ ಕರೆಗಳ ಅವಕಾಶ ಹೊಂದಿದೆ. ಪ್ರತಿದಿನ 100ಎಸ್‌ಎಮ್‌ಎಸ್ ಪ್ರಯೋಜನ ಪಡೆದಿದ್ದು, ZEE ಪ್ರೀಮಿಯಂ ಆಕ್ಸಸ್‌ನ ಸೌಲಭ್ಯವನ್ನು ಒಳಗೊಂಡಿದೆ.

ವಿ ಟೆಲಿಕಾಂನ 595ರೂ. ಪ್ಲ್ಯಾನ್
ವೊಡಾಫೋನ್ ಐಡಿಯಾ ಸಂಸ್ಥೆಯ ಈ ಯೋಜನೆಯು ಒಟ್ಟು 56 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಸಹ ಸಿಗಲಿದೆ. ಹಾಗೆಯೇ ಅನಿಯಮಿತ ಉಚಿತ ವಾಯಿಸ್ ಕರೆಗಳ ಅವಕಾಶ ಹೊಂದಿದೆ. ಪ್ರತಿದಿನ 100ಎಸ್‌ಎಮ್‌ಎಸ್ ಪ್ರಯೋಜನ ಪಡೆದಿದ್ದು, ಜೊತೆಗೆ ZEE ಪ್ರೀಮಿಯಂ ಆಕ್ಸಸ್‌ನ ಸೌಲಭ್ಯವನ್ನು ಒಳಗೊಂಡಿದೆ.

ವಿ ಟೆಲಿಕಾಂನ 795ರೂ. ಪ್ಲ್ಯಾನ್
ವೊಡಾಫೋನ್ ಐಡಿಯಾ ಸಂಸ್ಥೆಯ ಈ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಸಹ ಸಿಗಲಿದೆ. ಹಾಗೆಯೇ ಅನಿಯಮಿತ ಉಚಿತ ವಾಯಿಸ್ ಕರೆಗಳ ಅವಕಾಶ ಹೊಂದಿದೆ. ಪ್ರತಿದಿನ 100ಎಸ್‌ಎಮ್‌ಎಸ್ ಪ್ರಯೋಜನ ಪಡೆದಿದ್ದು, ಜೊತೆಗೆ ZEE ಪ್ರೀಮಿಯಂ ಆಕ್ಸಸ್‌ನ ಸೌಲಭ್ಯವನ್ನು ಒಳಗೊಂಡಿದೆ.

ವಿ ಟೆಲಿಕಾಂನ 2595ರೂ. ಪ್ಲ್ಯಾನ್
ವೊಡಾಫೋನ್ ಐಡಿಯಾ ಸಂಸ್ಥೆಯ ಈ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಸಹ ಸಿಗಲಿದೆ. ಹಾಗೆಯೇ ಅನಿಯಮಿತ ಉಚಿತ ವಾಯಿಸ್ ಕರೆಗಳ ಅವಕಾಶ ಹೊಂದಿದೆ. ಪ್ರತಿದಿನ 100ಎಸ್‌ಎಮ್‌ಎಸ್ ಪ್ರಯೋಜನ ಪಡೆದಿದ್ದು, ಜೊತೆಗೆ ZEE ಪ್ರೀಮಿಯಂ ಆಕ್ಸಸ್‌ನ ಸೌಲಭ್ಯವನ್ನು ಒಳಗೊಂಡಿದೆ.


Click it and Unblock the Notifications