ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಹೆಚ್ಚುವರಿಯಾಗಿ 48GB ಡೇಟಾ ಸಿಗುತ್ತೆ!
ದೇಶದ ಟೆಲಿಕಾಂ ವಲಯದಲ್ಲಿ ವಿ ಟೆಲಿಕಾಂ ಚಂದಾದಾರರನ್ನು ಸೆಳೆಯಲು ಅಧಿಕ ಡೇಟಾ ಪ್ಲ್ಯಾನ್‌ಗಳ ಆಯ್ಕೆ ಪರಿಚಯಿಸಿದೆ. ಅದೇ ಹಾದಿಯಲ್ಲಿ ಮುನ್ನಡೆದಿರುವ ವಿ ಟೆಲಿಕಾಂ, ಜಿಯೋ, ಏರ್‌ಟೆಲ್ ಟೆಲಿಕಾಂಗೆ ನೇರ ಪೈಪೋಟಿ ನೀಡುವಂತಹ ಪ್ಲ್ಯಾನ್‌ಗಳ ಆಯ್ಕೆ ಹೊಂದಿದೆ. ವಿ ಟೆಲಿಕಾಂ ಕಂಪನಿಯು ಅಲ್ಪಾವಧಿಯ ಯೋಜನೆಗಳ ಜೊತೆಗೆ ಕೆಲವು ಆಕರ್ಷಕ ದೀರ್ಘಾವಧಿಯ ಪ್ರಿಪೇಯ್ಡ್ ಪ್ಲ್ಯಾನ್‌ಗಳನ್ನು ಪಡೆದಿದೆ. ಬಹುತೇಕ ಪ್ಲ್ಯಾನ್‌ಗಳು ಅಧಿಕ ದೈನಂದಿನ ಡೇಟಾ ಪಡೆದಿವೆ. ಆ ಪೈಕಿ ವಿ ಟೆಲಿಕಾಂನ ಎರಡು ಪ್ಲ್ಯಾನ್‌ಗಳು ಭಾರೀ ಗಮನ ಸೆಳೆದಿದೆ.

ದೇಶದ ಮೂರನೇ ದೊಡ್ಡ ಟೆಲಿಕಾಂ ಎನಿಸಿಕೊಂಡಿರುವ ವಿ ಟೆಲಿಕಾಂ ಭಿನ್ನ ಶ್ರೇಣಿಯ ಪ್ರಿಪೇಯ್ಡ್ ಯೋಜನೆಗಳ ಆಯ್ಕೆ ನೀಡಿದೆ. ಅವುಗಳಲ್ಲಿ ವಿ ಟೆಲಿಕಾಂ 901ರೂ. ಅತ್ಯುತ್ತಮ ಡೇಟಾ ಪ್ರಯೋಜನದೊಂದಿಗೆ ಚಂದಾದಾರರನ್ನು ಆಕರ್ಷಿಸಿದೆ. ಇದರೊಂದಿಗೆ ಓಟಿಟಿ ಸೌಲಭ್ಯ ಸಹ ಒಳಗೊಂಡಿದೆ. ಹಾಗೆಯೇ ವಿ ಟೆಲಿಕಾಂ 601ರೂ. ಪ್ರಿಪೇಯ್ಡ್ ಪ್ಲ್ಯಾನ್ ಸಹ ಬೊಂಬಾಟ್ ಎನಿಸಿದ್ದು, ಈ ಯೋಜನೆ ಸಹ ಅಧಿಕ ಡೇಟಾ ಹಾಗೂ ಓಟಿಟಿ ಪ್ರಯೋಜನ ಒಳಗೊಂಡಿದೆ. ಹಾಗಾದರೇ ವಿ ಟೆಲಿಕಾಂ 901ರೂ. ಮತ್ತು ವಿ ಟೆಲಿಕಾಂ 601ರೂ. ಪ್ರಿಪೇಯ್ಡ್ ಯೋಜನೆಗಳ ಪ್ರಯೋಜನಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ವಿ ಟೆಲಿಕಾಂ 901ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ವಿ ಟೆಲಿಕಾಂನ 901ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 70 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3 GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಸದಸ್ಯತ್ವ ಸಹ ಲಭ್ಯವಾಗುತ್ತದೆ. ಅಂದಹಾಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆಯು ಒಂದು ವರ್ಷದ ವಾಯ್ದೆಯನ್ನು ಪಡೆದಿರುತ್ತದೆ. ಇದರೊಂದಿಗೆ ಈ ಪ್ಲ್ಯಾನಿನಲ್ಲಿ ಅನಿಯಮಿತ ಉಚಿತ ಕರೆ ಹಾಗೂ ಉಚಿತ 100 ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯ. ಹಾಗೆಯೇ ಹೆಚ್ಚುವರಿಯಾಗಿ 48 GB ಡೇಟಾ ಲಭ್ಯವಾಗಲಿದೆ. ವಿಕೇಂಡ್ ಡೇಟಾ ರೋಲ್ ಓವರ್, ಡೇಟಾ ಡಿಲೈಟ್ ಪ್ರಯೋಜನ, ವಿ ಆಪ್ಸ್‌ಗಳ ಪ್ರಯೋಜನವು ಪಡೆದಿದೆ.

ವಿ ಟೆಲಿಕಾಂ 601ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ವಿ ಟೆಲಿಕಾಂನ 601ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3 GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಸದಸ್ಯತ್ವ ಸಹ ಲಭ್ಯವಾಗುತ್ತದೆ. ಅಂದಹಾಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆಯು ಒಂದು ವರ್ಷದ ವಾಯ್ದೆಯನ್ನು ಪಡೆದಿರುತ್ತದೆ. ಇದರೊಂದಿಗೆ ಈ ಪ್ಲ್ಯಾನಿನಲ್ಲಿ ಅನಿಯಮಿತ ಉಚಿತ ಕರೆ ಹಾಗೂ ಉಚಿತ 100 ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯ. ಹಾಗೆಯೇ ಹೆಚ್ಚುವರಿಯಾಗಿ 16 GB ಡೇಟಾ ಲಭ್ಯವಾಗಲಿದೆ. ವಿಕೇಂಡ್ ಡೇಟಾ ರೋಲ್ ಓವರ್, ಡೇಟಾ ಡಿಲೈಟ್ ಪ್ರಯೋಜನ, ವಿ ಆಪ್ಸ್‌ಗಳ ಪ್ರಯೋಜನವು ಪಡೆದಿದೆ.
ವಿ ಟೆಲಿಕಾಂನ 719ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ವಿ ಟೆಲಿಕಾಂನ 719ರೂ. ಪ್ರೀಪೇಯ್ಡ್ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ವಿ ಆಪ್ಸ್‌ಗಳ ಸೇವೆಗಳು ಲಭ್ಯ ಆಗಲಿವೆ.


Click it and Unblock the Notifications