Home
ಸುದ್ದಿಜಾಲ

ಜಿಯೋ ಮತ್ತು ವಿ 179ರೂ. ಪ್ಲ್ಯಾನ್‌: ಇವೆರಡರಲ್ಲಿ ಯಾವುದು ಅತ್ಯುತ್ತಮ?

ಸದ್ಯ ರಿಯಲಾನ್ಸ್‌ ಜಿಯೋ ಮತ್ತು ವಿ ಟೆಲಿಕಾಂ ಸಂಸ್ಥೆಗಳು ತಮ್ಮ ಚಂದಾದಾರಿಗೆ ಅತ್ಯುತ್ತಮ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಾ ಸಾಗಿವೆ. ಕಂಪನಿಗಳು ಪರಿಚಯಿಸಿರುವ ಯೋಜನೆಗಳಲ್ಲಿ ಪ್ರೀಪೇಯ್ಡ್‌ ಯೋಜನೆಗಳು ಹಾಗೂ ಪೋಸ್ಟ್‌ಪೇಯ್ಡ್‌ ಯೋಜನೆಗಳು ಸೇರಿವೆ. ಆದರೆ ಬಜೆಟ್ ಬೆಲೆಯಲ್ಲಿ ಲಭ್ಯ ಇರುವ ಕೆಲವು ಪ್ರೀಪೇಯ್ಡ್‌ ಪ್ಲ್ಯಾನ್‌ಗಳು ಹೆಚ್ಚಿನ ಪ್ರಯೋಜನಗಳೊಂದಿಗೆ ಗಮನ ಸೆಳೆದಿವೆ. ಆ ಪೈಕಿ ಜಿಯೋ 179ರೂ ಮತ್ತು ವಿ ಟೆಲಿಕಾಂ 179ರೂ. ಪ್ರಿಪೇಯ್ಡ್ ಪ್ಲ್ಯಾನ್ ಅಗ್ಗದ ಬೆಲೆಯಲ್ಲಿ ಬಹುತೇಕ ಬಳಕೆದಾರರು ಗಮನ ಸೆಳೆದಿವೆ.

ಜಿಯೋ ಮತ್ತು ವಿ 179ರೂ. ಪ್ಲ್ಯಾನ್‌: ಇವೆರಡರಲ್ಲಿ ಯಾವುದು ಅತ್ಯುತ್ತಮ?

ಹೌದು, ಜಿಯೋ ಮತ್ತು ವಿ ಟೆಲಿಕಾಂ ಸಂಸ್ಥೆಗಳು ಭಿನ್ನ ಪ್ರಯೋಜನಗಳ ಆಯ್ಕೆ ಹೊಂದಿವೆ. ಅವುಗಳಲ್ಲಿ ಜಿಯೋ 179ರೂ ಮತ್ತು ವಿ ಟೆಲಿಕಾಂ 179ರೂ. ಪ್ರಿಪೇಯ್ಡ್ ಪ್ಲ್ಯಾನ್‌ ಗಳು ಅಗ್ಗದ ಬೆಲೆಯ ರೀಚಾರ್ಜ್ ಬಯಸುವ ಗ್ರಾಹಕರಿಗೆ ಆಕರ್ಷಕ ಎನಿಸಿವೆ. ಈ ಎರಡು ಟೆಲಿಕಾಂಗಳ ಈ ಮೊತ್ತದ ರೀಚಾರ್ಜ್‌ ಯೋಜನೆಯಲ್ಲಿ ಬಹುತೇಕ ಸಾಮ್ಯತೆ ಕಂಡು ಬಂದರು, ಪ್ರಯೋಜನಗಳಲ್ಲಿ ಕೆಲವು ಭಿನ್ನತೆಗಳಿವೆ. ಹಾಗಾದರೇ ಜಿಯೋ 179ರೂ ಮತ್ತು ವಿ ಟೆಲಿಕಾಂ 179ರೂ. ಪ್ಲ್ಯಾನ್‌ ಯಾವುದು ಬೆಸ್ಟ್‌? ಪ್ರಯೋಜನಗಳೆನು ಮುಂದೆ ನೋಡೋಣ ಬನ್ನಿರಿ.

ಜಿಯೋ ಮತ್ತು ವಿ 179ರೂ. ಪ್ಲ್ಯಾನ್‌: ಇವೆರಡರಲ್ಲಿ ಯಾವುದು ಅತ್ಯುತ್ತಮ?

ಜಿಯೋದ 179ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು
ಜಿಯೋದ 179ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1 GB ಡೇಟಾ ಸೌಲಭ್ಯ ಸಿಗಲಿದ್ದು, ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 24 GB ಡೇಟಾ ಪ್ರಯೋಜನ ದೊರೆಯಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಹಾಗೂ ಎಸ್‌ಎಮ್‌ಎಸ್‌ ಪ್ರಯೋಜನ ಸಿಗಲಿದೆ. ಹಾಗೆಯೇ ಜಿಯೋ ಆಪ್ಸ್‌ ಸೇವೆ ಲಭ್ಯ.

ವಿ ಟೆಲಿಕಾಂ 179ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು
ವಿ ಟೆಲಿಕಾಂ 179ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಒಟ್ಟು 2 GB ಡೇಟಾ ಸೌಲಭ್ಯ ಸಿಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಸಿಗಲಿದೆ. ಹಾಗೆಯೇ 300 ಎಸ್‌ಎಮ್‌ಎಸ್‌ ಪ್ರಯೋಜನ ಸಹ ಲಭ್ಯವಾಗಲಿದೆ. ಜೊತೆಗೆ ವಿ ಆಪ್ಸ್‌ ಸೇವೆ ಲಭ್ಯ.

ಜಿಯೋ ಮತ್ತು ವಿ 179ರೂ. ಪ್ಲ್ಯಾನ್‌: ಇವೆರಡರಲ್ಲಿ ಯಾವುದು ಅತ್ಯುತ್ತಮ?

ರೀಚಾರ್ಜ್‌ಗೆ ಯಾವುದು ಉತ್ತಮ?
ಜಿಯೋ ಮತ್ತು ವಿ ಟೆಲಿಕಾಂ ಈ ಎರಡು ಕಂಪನಿಗಳು ಆಕರ್ಷಕ ಸೌಲಭ್ಯ ಗಳನ್ನು ನೀಡಿವೆ. ಜಿಯೋ ಮತ್ತು ಏರ್‌ಟೆಲ್‌ ಟೆಲಿಕಾಂ ಒಂದೇ ರೀತಿಯ ವ್ಯಾಲಿಡಿಟಿ ಪ್ರಯೋಜನ ನೀಡಿವೆ. ಹಾಗೆಯೇ ಈ ಎರಡು ಟೆಲಿಕಾಂಗಳು ಎಸ್‌ಎಮ್‌ಎಸ್‌ ಪ್ರಯೋಜನ ಸಹ ಪಡೆದಿವೆ. ಆದರೆ ಡೇಟಾ ಮತ್ತು ವ್ಯಾಲಿಡಿಟಿ ಪ್ರಯೋಜನದಲ್ಲಿ ಭಿನ್ನತೆ ಕಾಣಬಹುದಾಗಿದೆ. ನೀವು ಹೆಚ್ಚಿನ ಡೇಟಾ ವನ್ನು ಬಯಸುತ್ತಿದ್ದರೇ, ನಿಮಗೆ ಜಿಯೋ ಉತ್ತಮ ಅನಿಸಲಿದೆ. ಡೇಟಾ ಬಗ್ಗೆ ಅಷ್ಟೇನು ಗಮನ ನೀಡದಿದ್ದರೇ ಮತ್ತು ವ್ಯಾಲಿಡಿಟಿ ಅಗತ್ಯ ಎನಿಸಿದರೆ ವಿ ಟೆಲಿಕಾಂ ಯೋಜನೆಯು ಉತ್ತಮ ಎನಿಸಿದೆ.

ಜಿಯೋದ 2545ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು
ಜಿಯೋದ ಈ ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 336 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 1.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ವಿ ಟೆಲಿಕಾಂನ 2899ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು
ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ವಿ ಆಪ್ಸ್‌ಗಳ ಸೇವೆಗಳು ಲಭ್ಯ ಆಗಲಿವೆ.

Best Mobiles in India

English summary
Vi Telecom VS Jio Rs 179 Plan: Benefits Comparison, Which One Better?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+