ವಾರ್ಷಿಕ ವ್ಯಾಲಿಡಿಟಿ ಅಗತ್ಯವೇ?..ಹಾಗಿದ್ರೆ ಸದ್ಯ ಇವೇ ಅತ್ಯುತ್ತಮ ರೀಚಾರ್ಜ್ ಆಯ್ಕೆಗಳು!

|

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜಿಯೋ ಸೇರಿದಂತೆ ವೊಡಾಫೋನ್-ಐಡಿಯಾ (ವಿ ಟೆಲಿಕಾಂ) ಮತ್ತು ಏರ್‌ಟೆಲ್‌ ಟೆಲಿಕಾಂಗಳು ಚಂದಾದಾರರಿಗೆ ಹಲವು ಅತ್ಯುತ್ತಮ ಪ್ಲ್ಯಾನ್‌ಗಳನ್ನು ಲಭ್ಯ ಮಾಡಿವೆ. ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಲು ಈ ಟೆಲಿಕಾಂಗಳು ಭರ್ಜರಿ ಪ್ರಯೋಜನಗಳ ಯೋಜನೆಗಳನ್ನು ಪರಿಚಯಿಸುತ್ತಾ ಸಾಗಿವೆ. ಆ ಪೈಕಿ ಕೆಲವು ಕಡಿಮೆ ಅವಧಿಯ ವ್ಯಾಲಿಡಿಟಿ ಪಡೆದಿದ್ದರೇ, ಮತ್ತೆ ಕೆಲವು ದೀರ್ಘಾವಧಿಯ, ವಾರ್ಷಿಕ ವ್ಯಾಲಿಡಿಟಿಯ ಪ್ರಯೋಜನ ಪಡೆದಿವೆ. ಹಾಗೆಯೇ ಈ ಪ್ಲ್ಯಾನ್‌ಗಳು ಡೇಟಾ, ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯವನ್ನು ಸಹ ಪಡೆದಿವೆ. ಆದರೆ ವಾರ್ಷಿಕ ಅವಧಿಯ ವ್ಯಾಲಿಡಿಟಿ ಸೌಲಭ್ಯದ ಪ್ರೀಪೇಯ್ಡ್‌ ಯೋಜನೆಗಳು ಹೆಚ್ಚು ಉತ್ತಮ.

ಪಡೆದಿದ್ದರೇ

ಹೌದು, ಜಿಯೋ, (ವೊಡಾಫೋನ್-ಐಡಿಯಾ) ವಿ ಟೆಲಿಕಾಂ ಮತ್ತು ಏರ್‌ಟೆಲ್‌ ಟೆಲಿಕಾಂಗಳು ವಾರ್ಷಿಕ ಅವಧಿಯ ಕೆಲವು ಆಕರ್ಷಕ ಪ್ರೀಪೇಯ್ಡ್‌ ಯೋಜನೆಗಳ ಆಯ್ಕೆಯನ್ನು ಹೊಂದಿವೆ. ಆ ಪೈಕಿ ಕೆಲವು ಪ್ರೀಪೇಯ್ಡ್ ಪ್ಲ್ಯಾನ್‌ಗಳು ಡೈಲಿ ಅಧಿಕ ಡೇಟಾ ಪ್ರಯೋಜನ ಪಡೆದಿದ್ದರೇ, ಇನ್ನು ಕೆಲವು ನಿಗದಿತ ಡೇಟಾ ಹೊಂದಿವೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌, ಸೇರಿದಂತೆ ಕೆಲವು ಯೋಜನೆಗಳು ಹೆಚ್ಚುವರಿ ಪ್ರಯೋಜನಗಳನ್ನು ಒಳಗೊಂಡಿವೆ. ಹಾಗಾದರೇ ರಿಲಯನ್ಸ್ ಜಿಯೋ, ವಿ ಟೆಲಿಕಾಂ ಹಾಗೂ ಏರ್‌ಟೆಲ್‌ ಟೆಲಿಕಾಂಗಳ ವಾರ್ಷಿಕ ಪ್ರೀಪೇಯ್ಡ್‌ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಟೆಲಿಕಾಂನ ಚಂದಾದಾರರೇ ಈ ಯೋಜನೆಗಳನ್ನು ನೋಡಿ

ಜಿಯೋ ಟೆಲಿಕಾಂನ ಚಂದಾದಾರರೇ ಈ ಯೋಜನೆಗಳನ್ನು ನೋಡಿ

ರಿಲಯನ್ಸ್ ಜಿಯೋ ಹಲವು ಪ್ರಿಪೇಯ್ಡ್ ಪ್ಯಾಕ್‌ಗಳ ಆಯ್ಕೆ ಹೊಂದಿದೆ. ಅವುಗಳು ಕ್ರಮವಾಗಿ 2599ರೂ, 2399ರೂ ಮತ್ತು 2121ರೂ. ಪ್ರೈಸ್‌ ಅನ್ನು ಹೊಂದಿವೆ. 2599ರೂ. ಯೋಜನೆಯು 365 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಪ್ರತಿದಿನ 2GB ಡೇಟಾ ಸೌಲಭ್ಯ ಒಳಗೊಂಡಿದೆ. ಜೊತೆಗೆ ಹಾಟ್‌ಸ್ಟಾರ್‌ ಆಪ್‌ ಪ್ರಯೋಜನ ಇದೆ. ಅದೇ ರೀತಿ 2399ರೂ. ಯೋಜನೆಯು 365 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಪ್ರತಿದಿನ 2GB ಡೇಟಾ ಸೌಲಭ್ಯ ಪಡೆದಿದೆ. ಇನ್ನು 2121ರೂ. ಪ್ಲ್ಯಾನ್ ಪ್ರತಿದಿನ 1.5GB ಡೇಟಾ ಹೊಂದಿದ್ದು, 336 ದಿನಗಳ ವ್ಯಾಲಿಡಿಟಿ ಪಡೆದಿದೆ.

ವಿ ಟೆಲಿಕಾಂ ಟೆಲಿಕಾಂನ ಬಳಕೆದಾರರೇ ಇಲ್ಲಿವೇ ನೋಡಿ ವಾರ್ಷಿಕ ಯೋಜನೆಗಳು

ವಿ ಟೆಲಿಕಾಂ ಟೆಲಿಕಾಂನ ಬಳಕೆದಾರರೇ ಇಲ್ಲಿವೇ ನೋಡಿ ವಾರ್ಷಿಕ ಯೋಜನೆಗಳು

ವಿ ಟೆಲಿಕಾಂ ಮೂರು ಪ್ರಿಪೇಯ್ಡ್ ಆಕರ್ಷಕ ದೀರ್ಘಾವಧಿಯ ಯೋಜನೆಗಳ ಆಯ್ಕೆಯನ್ನು ಹೊಂದಿದೆ. ಅವುಗಳ ಕ್ರಮವಾಗಿ 2,595ರೂ. 2399ರೂ ಮತ್ತು 1499ರೂ. ಆಗಿದೆ. ಅವುಗಳಲ್ಲಿ 2,595ರೂ.ಯೋಜನೆಯು 1.5GB ದೈನಂದಿನ ಡೇಟಾದ ಜೊತೆ 365 ದಿನಗಳ ಮಾನ್ಯತೆ ಪಡೆದಿದೆ ಜೊತೆಗೆ ಹಾಟ್‌ಸ್ಟಾರ್‌ ಆಪ್ ಸೇವೆ ಲಭ್ಯ. ಹಾಗೆಯೇ 2,399ರೂ. ಯೋಜನೆಯು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಪ್ರತಿದಿನ 1.5GB ಡೇಟಾವನ್ನು ಸೌಲಭ್ಯ ನೀಡುತ್ತದೆ ಇದರೊಂದಿಗೆ ಜೀ5 ಆಪ್‌ ಆಕ್ಸಸ್ ಸಿಗಲಿದೆ. ಇನ್ನು ಈ ಎರಡೂ ಯೋಜನೆಗಳು ‘ವೀಕೆಂಡ್ ಡಾಟಾ ರೋಲ್‌ಓವರ್' ಪ್ರಯೋಜನ ಒಳಗೊಂಡಿದೆ. 1499ರೂ. ಯೋಜನೆಯು 365 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಈ ಅವಧಿಯಲ್ಲಿ ಒಟ್ಟು 24GB ಡೇಟಾ ಪಡೆದಿದೆ.

ಭಾರ್ತಿ ಏರ್‌ಟೆಲ್ ಚಂದಾದಾರರೇ ಈ ಪ್ಲ್ಯಾನ್‌ ಗಮನಿಸಿ

ಭಾರ್ತಿ ಏರ್‌ಟೆಲ್ ಚಂದಾದಾರರೇ ಈ ಪ್ಲ್ಯಾನ್‌ ಗಮನಿಸಿ

ಏರ್‌ಟೆಲ್‌ ಟೆಲಿಕಾಂನಲ್ಲಿ 2,498ರೂ. 2698ರೂ ಮತ್ತು 1,498ರೂ. ಯೋಜನೆಗಳು ದೀರ್ಘಾವಧಿಯ ಪ್ಲ್ಯಾನ್‌ಗಳಲ್ಲಿ ಹೆಚ್ಚು ಗಮನ ಸೆಳೆದಿವೆ. ಏರ್‌ಟೆಲ್ 2,498ರೂ. ಯೋಜನೆಯು 365 ದಿನಗಳ ಮಾನ್ಯತೆ ಹೊಂದಿದ್ದು, 2GB ದೈನಂದಿನ ಡೇಟಾವನ್ನು ಪಡೆದಿದೆ. ಹಾಗೆಯೇ 1,498ರೂ.ಗಳ ಯೋಜನೆಯು 365 ದಿನಗಳ ಮಾನ್ಯತೆಯೊಂದಿಗೆ ಒಟ್ಟು 24GB ಡೇಟಾವನ್ನು ಹೊಂದಿದೆ. ಈ ಎರಡೂ ಯೋಜನೆಗಳು ಅನಿಯಮಿತ ವಾಯಿಸ್ ಕರೆ ಮತ್ತು 100 ಎಸ್‌ಎಂಎಸ್ / ದಿನ ಲಾಭದೊಂದಿಗೆ ಬರುತ್ತವೆ. ಇನ್ನು 2698ರೂ. ಯೋಜನೆಯು ಸಹ 365 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಪ್ರತಿದಿನ 2GB ಡೇಟಾ ಪ್ರಯೋಜನ ಜೊತೆಗೆ ಡಿಸ್ನಿ ಹಾಟ್‌ಸ್ಟಾರ್‌ ಆಪ್‌ ಸೇವೆ ಲಭ್ಯ.

ಏರ್‌ಟೆಲ್‌ 698ರೂ ಪ್ರೀಪೇಯ್ಡ್ ಯೋಜನೆ ಸೌಲಭ್ಯಗಳು

ಏರ್‌ಟೆಲ್‌ 698ರೂ ಪ್ರೀಪೇಯ್ಡ್ ಯೋಜನೆ ಸೌಲಭ್ಯಗಳು

ಏರ್‌ಟೆಲ್‌ ಟೆಲಿಕಾಂನ 698ರೂ ಪ್ರೀಪೇಡ್‌ ಪ್ಲ್ಯಾನ್‌ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ. ಜೊತೆಗೆ ಈ ಪ್ಲ್ಯಾನ್‌ Wynk ಮ್ಯೂಸಿಕ್, ಏರ್‌ಟೆಲ್‌ ಎಕ್ಸ್‌ಟ್ರಿಮ್ ಪ್ರೀಮಿಯಮ್ ಹಾಗೂ ಜೀ 5 ಸೌಲಭ್ಯಗಳು ಸಿಗುತ್ತವೆ.

Best Mobiles in India

English summary
Vi VS Airtel VS Jio Annual Plan: Data Benefits And Validity.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X