Home
ಸುದ್ದಿಜಾಲ

ಹೊಸ ಟೂಲ್ಸ್ ಪರೀಕ್ಷಿಸುತ್ತಿದೆ ಯೂಟ್ಯೂಬ್; ಕ್ರಿಯೇಟರ್ಸ್‌ಗೆ ಭಾರೀ ಲಾಭ!

ಯೂಟ್ಯೂಬ್ ಇಂದು ಹಲವಾರು ಜನರ ಅತ್ಯಂತ ನೆಚ್ಚಿನ ಪ್ಲಾಟ್‌ಫಾರ್ಮ್ ಆಗಿ ಗುರುತಿಸಿಕೊಂಡಿದೆ. ಇದರ ಜೊತೆಗೆ ಸಾಕಷ್ಟು ಫೀಚರ್ಸ್‌ಗಳು ಬಳಕೆದಾರರಿಗೆ ವಿಭಿನ್ನವಾದ ಅನುಭವ ನೀಡುತ್ತಿದ್ದು, ಹಲವು ಮಂದಿ ಈ ಪ್ಲಾಟ್‌ಫಾರ್ಮ್‌ ಮೂಲಕ ಜೀವನವನ್ನೂ ರೂಪಿಸಿಕೊಂಡಿದ್ದಾರೆ. ಇದೆಲ್ಲದರ ನಡುವೆ ಈಗ ಯುಟ್ಯೂಬ್ ಹೊಸ ಪಾಡ್‌ಕಾಸ್ಟ್‌ಗಾಗಿ ಹೊಸ ಟೂಲ್ಸ್‌ ಬಗ್ಗೆ ಘೋಷಣೆ ಮಾಡಿದೆ.

ಹೊಸ ಟೂಲ್ಸ್ ಪರೀಕ್ಷಿಸುತ್ತಿದೆ ಯೂಟ್ಯೂಬ್; ಕ್ರಿಯೇಟರ್ಸ್‌ಗೆ ಭಾರೀ ಲಾಭ!

ಹೌದು, ಯೂಟ್ಯೂಬ್‌ನಲ್ಲಿನ ಸಾಕಷ್ಟು ಫೀಚರ್ಸ್‌ಗಳು ಬಳಕೆದಾರರಿಗೆ ವಿವಿಧ ಸೌಲಭ್ಯ ಕಲ್ಪಿಸಿಕೊಡುತ್ತಿದ್ದು, ಇನ್ಮುಂದೆ ಬಳಕೆದಾರರು ಪಾಡ್‌ಕಾಸ್ಟ್‌ಗಳನ್ನು ಅತ್ಯಂತ ಸುಲಭವಾಗಿ ಅಪ್‌ಲೋಡ್ ಮಾಡಬಹುದಾಗಿದೆ. ಹಾಗಿದ್ರೆ, ಇದು ಯಾರಿಗೆ ಲಭ್ಯ?, ಇದರ ಬಳಕೆ ಹೇಗೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಪಾಡ್‌ಕಾಸ್ಟ್‌ ಅಪ್‌ಲೋಡ್‌ಗೆ ಅವಕಾಶ

ಯೂಟ್ಯೂಬ್‌ ಇನ್ಮುಂದೆ ಪಾಡ್‌ಕಾಸ್ಟ್‌ಗಳನ್ನು ಅಪ್‌ಲೋಡ್ ಮಾಡುವ ಸಂಬಂಧ ಹೊಸ ಟೂಲ್ಸ್‌ ನಲ್ಲಿ ಯೂಟ್ಯೂಬ್ ಕೆಲಸ ಮಾಡಲು ಮುಂದಾಗಿದೆ. ಈ ಮೂಲಕ ಪಾಡ್‌ಕಾಸ್ಟ್‌ ಅನ್ನು ಯೂಟ್ಯೂಬ್ ಸ್ಟುಡಿಯೋ ಮೂಲಕ ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುತ್ತದೆ. ಹಾಗೆಯೇ ಇದು ಡೆಸ್ಕ್‌ಟಾಪ್‌ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದ್ದು, ಅನಾಲಿಟಿಕ್ಸ್ ಅನ್ನು ತಿಳಿದುಕೊಳ್ಳಬಹುದು. ಇದಿಷ್ಟೇ ಅಲ್ಲದೆ ನೀವು ಅಪ್‌ಲೋಡ್‌ ಮಾಡುವ ಪಾಡ್‌ಕಾಸ್ಟ್ ಕಾರ್ಯಕ್ಷಮತೆ, ಪ್ರೇಕ್ಷಕರ ಸಂಖ್ಯೆ, ಇದರಿಂದ ಬರುವ ಆದಾಯದ ವಿವರಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ಹೊಸ ಟೂಲ್ಸ್‌ ಮೂಲಕ ಪಾಡ್‌ಕಾಸ್ಟ್‌ ಅಪ್‌ಲೋಡ್‌ ಹೇಗೆ?

ಇನ್ನು ಈ ಸಂಬಂಧ ಹಲವಾರು ಪ್ರಯೋಗಿಕ ಪರೀಕ್ಷೆಗಳನ್ನು ಮಾಡಲಾಗಿದ್ದು, ಯೂಟ್ಯಬ್ ಪ್ರಕಾರ ಬೀಟಾ ಪರೀಕ್ಷೆಗೆ ದಾಖಲಾದ ಬಳಕೆದಾರರು 'ಕ್ರಿಯೇಟ' ಬಟನ್ ಮೂಲಕ ಪಾಡ್‌ಕಾಸ್ಟ್‌ಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗಲಿದೆ. ಪ್ರಸ್ತುತ, ಕ್ರಿಯೇಟ್‌ ಬಟನ್ ಅನ್ನು ಬಳಕೆದಾರರು ವಿಡಿಯೋವನ್ನು ಅಪ್‌ಲೋಡ್ ಮಾಡಲು, ಟೆಕ್ಸ್ಟ್‌‌ ಪೋಸ್ಟ್ ಅನ್ನು ರಚಿಸಲು ಮತ್ತು ಲೈವ್ ಸ್ಟ್ರೀಮ್ ಅನ್ನು ಪ್ರಾರಂಭಿಸಲು ಅನುಮತಿಸುತ್ತದೆ. ಇದೇ ಬಟನ್‌ ಮೂಲಕ ಇನ್ಮುಂದೆ ಪಾಡ್‌ಕಾಸ್ಟ್‌ ಅಪ್‌ಲೋಡ್‌ ಮಾಡಬಹುದಾಗಿದೆ.

ಹೊಸ ಟೂಲ್ಸ್ ಪರೀಕ್ಷಿಸುತ್ತಿದೆ ಯೂಟ್ಯೂಬ್; ಕ್ರಿಯೇಟರ್ಸ್‌ಗೆ ಭಾರೀ ಲಾಭ!

ಪಾಡ್‌ಕಾಸ್ಟ್ ವಿಭಾಗ ಎಲ್ಲಿರಲಿದೆ?

ಯೂಟ್ಯೂಬ್‌ನಲ್ಲಿ ಈಗಾಗಲೇ ಹಲವಾರು ವಿಭಾಗಗಳಿದ್ದು, ಹೊಸ ವಿಭಾಗವಾದ ಪಾಡ್‌ಕಾಸ್ಟ್‌ ಅನ್ನು ವೀಕ್ಷಣೆ ಮಾಡಬೇಕು ಎಂದರೆ ಬಳಕೆದಾರರು ಕಂಟೆಂಟ್‌ ಮೆನುವಿನಲ್ಲಿ ಪಾಡ್‌ಕಾಸ್ಟ್‌ ಟ್ಯಾಬ್ ಆಯ್ಕೆ ಕಾಣಿಸಿಕೊಳ್ಳಲಿದ್ದು, ಈ ಮೂಲಕ ಪಾಡ್‌ಕಾಸ್ಟ್‌ಗೆ ಎಂಟ್ರಿಯಾಗಬಹುದು. ಅಂತೆಯೇ ಮೂರು ಚುಕ್ಕೆಗಳ ಮೆನುವಿನಲ್ಲಿ ಹೊಸ ಆಯ್ಕೆಯನ್ನು ಬಳಕೆ ಮಾಡಿಕೊಂಡು ಅಸ್ತಿತ್ವದಲ್ಲಿರುವ ಪ್ಲೇ ಪಟ್ಟಿಗಳನ್ನು ಪಾಡ್‌ಕಾಸ್ಟ್‌ಗಳಾಗಿ ಹೊಂದಿಸಲು ಅನುವು ಮಾಡಿಕೊಡಲಾಗುತ್ತದೆ.

ಯೂಟ್ಯೂಬ್ ಕ್ರಿಯೇಟರ್ಸ್‌ ತಮ್ಮ ಪಾಡ್‌ಕಾಸ್ಟ್‌ಗಳನ್ನು ಯೂಟ್ಯಬ್‌ನಲ್ಲಿ ಶೇರ್‌ ಮಾಡಲು ಸುಲಭವಾಗುವಂತೆ ಮಾಡಲು ಹಾಗೂ ಪಾಡ್‌ಕಾಸ್ಟ್ ರಚಿಸಲು ಅಥವಾ ಸ್ಟುಡಿಯೋ ಮೂಲಕ ಅಸ್ತಿತ್ವದಲ್ಲಿರುವ ಪ್ಲೇಪಟ್ಟಿಯನ್ನು ಪಾಡ್‌ಕಾಸ್ಟ್ ಆಗಿ ಹೊಂದಿಸಲು ಅನುಮತಿಸುವ ಪ್ರಯೋಗವನ್ನು ನಡೆಸುತ್ತಿದ್ದೇವೆ ಎಂದು ಯೂಟ್ಯೂಬ್‌ ತಿಳಿಸಿದೆ. ಅದರಂತೆ ಈ ಕೆಳಗಿನ ಮಾರ್ಗದರ್ಶಿಯನ್ನೂ ನೀಡಿದೆ.

1) ಪಾಡ್‌ಕಾಸ್ಟ್‌ ಅಪ್‌ಲೋಡ್‌ ಮಾಡಲು ಮೊದಲು ಕ್ರಿಯೇಟ್‌ ಬಟನ್‌ ಕ್ಲಿಕ್ ಮಾಡಿ ನಂತರ ಅಲ್ಲಿ ನ್ಯೂ ಪಾಡ್‌ಕಾಸ್ಟ್‌ ಆಯ್ಕೆ ಕಾಣಿಸಿಕೊಳ್ಳುತ್ತದೆ. ಆ ಮೂಲಕ ಕಂಟೆಂಟ್ ಅಪ್‌ಲೋಡ್‌ ಮಾಡಿ.

2) ನ್ಯೂ ಪಾಡ್‌ಕಾಸ್ಟ್‌ಗಳ ಟ್ಯಾಬ್ ಅಡಿಯಲ್ಲಿ ಕಂಡುಬರುವ ಕಂಟೆಂಟ್‌ ಮೆನುವಿನಲ್ಲಿ ನಿಮ್ಮ ಎಲ್ಲಾ ಪಾಡ್‌ಕಾಸ್ಟ್‌ಗಳನ್ನು ವೀಕ್ಷಿಸಬಹುದು.

3) ಹಾಗೆಯೇ ಇದರಲ್ಲಿ ಕಂಡುಬರುವ ಮೂರು ಡಾಟ್ ಮೆನು ಆಯ್ಕೆ ಮಾಡುವ ಮೂಲಕ ಅಸ್ತಿತ್ವದಲ್ಲಿರುವ ಪ್ಲೇಪಟ್ಟಿಗಳನ್ನು ಪಾಡ್‌ಕಾಸ್ಟ್‌ಗಳಾಗಿ ಪಟ್ಟಿಗೆ ಸೇರಿಸಬಹುದು.

ಹೊಸ ಟೂಲ್ಸ್ ಪರೀಕ್ಷಿಸುತ್ತಿದೆ ಯೂಟ್ಯೂಬ್; ಕ್ರಿಯೇಟರ್ಸ್‌ಗೆ ಭಾರೀ ಲಾಭ!

ಇದಲ್ಲದೆ ನಿಮ್ಮ ಪಾಡ್‌ಕಾಸ್ಟ್‌ಗಳನ್ನು ವಿಶ್ಲೇಷಣೆ ಸಹ ಮಾಡಬಹುದು. ಇದರಲ್ಲಿ ಪ್ರತಿ ಪಾಡ್‌ಕಾಸ್ಟ್ನ ಕಾರ್ಯಕ್ಷಮತೆ, ಪ್ರೇಕ್ಷಕರು ಮತ್ತು ಆದಾಯದ ವಿವರವನ್ನು ಈ ಮೂಲಕ ತಿಳಿದುಕೊಳ್ಳಬಹುದು. ಇನ್ನು 2021 ರಲ್ಲಿ ಪಾಡ್‌ಕಾಸ್ಟ್‌ನ ಬಗ್ಗೆ ಯೂಟ್ಯೂಬ್‌ ಮೊದಲು ಸುಳಿವು ನೀಡಿತ್ತು. ನಂತರ 2022 ರಲ್ಲಿ ಯೂಟ್ಯೂಬ್‌ ನಲ್ಲಿ ಪಾಡ್‌ಕಾಸ್ಟಿಂಗ್‌ಗಾಗಿ ಮೀಸಲಾದ ಪೇಜ್‌ ಅನ್ನು ಆಡ್‌ ಮಾಡಿದೆ.

Best Mobiles in India

English summary
Youtube Creators will get access to podcasts from the 'content menu' through the tab named Podcasts tab.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+