ಹೋಳಿ ಹಬ್ಬದ ಕೊಡುಗೆ: ಈ ಅಗ್ಗದ ಫೋನ್ ಈಗ ಇನ್ನಷ್ಟು ಕಡಿಮೆ ಬೆಲೆಗೆ ಲಭ್ಯ!
ಮೊಬೈಲ್ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯ ಫೋನ್‌ಗಳು ತನ್ನದೇ ಆದ ಸ್ಥಾನ ಪಡೆದಿದ್ದು, ಬಹುತೇಕರು ಗ್ರಾಹಕರು ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಖರೀದಿಸಲು ಮುಂದಾಗುತ್ತಾರೆ. ಹೀಗೆ ನೀವೇನಾದರೂ ನೂತವಾಗಿ ಒಂದೊಳ್ಳೆ ಎಂಟ್ರಿ ಲೆವೆಲ್ ಫೋನ್ ಖರೀದಿಸುವ ಪ್ಲ್ಯಾನ್ ಹೊಂದಿದ್ದರೆ, ಸದ್ಯ ನಿಮಗೆ ವಿಜಯ್ ಸೇಲ್ಸ್ ಅತ್ಯುತ್ತಮ ಪ್ಲಾಟ್‌ಫಾರ್ಮ್ ಆಗಿದೆ.
ಹೌದು, ಹೋಳಿ ಹಬ್ಬದ ಪ್ರಯುಕ್ತ ವಿಜಯ್ ಸೇಲ್ಸ್ (Vijay Sales) ತಾಣವು ಹೋಳಿ ಸ್ಪೆಷಲ್ ಸೇಲ್ ಅನ್ನು ಆಯೋಜಿಸಿದೆ. ಈ ಸೇಲ್ ನಲ್ಲಿ ಸ್ಮಾರ್ಟ್ ಟಿವಿ, ಸ್ಮಾರ್ಟ್‌ಫೋನ್, ಸ್ಪೀಕರ್‌ಗಳು ಸೇರಿದಂತೆ ಇತರೆ ಕೆಲವು ಆಯ್ದ ಸ್ಮಾರ್ಟ್ ಡಿವೈಸ್‌ಗಳಿಗೆ ಭರ್ಜರಿ ರಿಯಾಯಿತಿ ಘೋಷಿಸಿ ಗ್ರಾಹಕರನ್ನು ಸೆಳೆದಿದೆ.

ಇನ್ನು ಈ ಸೇಲ್‌ನಲ್ಲಿ ಮುಖ್ಯವಾಗಿ ಎಂಟ್ರಿ ಲೆವೆಲ್ ಪ್ರೈಸ್ ಟ್ಯಾಗ್‌ನಲ್ಲಿ ಕಾನಿಸಿಕೊಂಡಿರುವ ರೆಡ್ಮಿ 10A ಸ್ಪೋರ್ಟ್ ಸ್ಮಾರ್ಟ್‌ಫೋನ್‌ಗೆ ಬೊಂಬಾಟ್ ಡಿಸ್ಕೌಂಟ್ ಲಭ್ಯ ಮಾಡಿದ್ದು, 6GB+128GB ವೇರಿಯಂಟ್ ಫೋನ್ 10,499ರೂ. ಗಳಿಗೆ ಖರೀದಿಸಬಹುದಾಗಿದೆ. ಇದರೊಂದಿಗೆ ಕೆಲವು ಬಜೆಟ್, ಮೀಡ್‌ರೇಂಜ್ ದರದ ಸ್ಮಾರ್ಟ್‌ಫೋನ್‌ಗಳಿಗೆ ಆಕರ್ಷಕ ಕೊಡುಗೆ ನೀಡಿದೆ. ಹಾಗಾದರೆ ರೆಡ್ಮಿ 10A ಸ್ಪೋರ್ಟ್ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿ 10A ಸ್ಪೋರ್ಟ್ ಫೋನ್ : ಡಿಸ್‌ಪ್ಲೇ ವಿನ್ಯಾಸ
ರೆಡ್ಮಿ 10A ಸ್ಪೋರ್ಟ್ ಸ್ಮಾರ್ಟ್‌ಫೋನ್ 6.53-ಇಂಚಿನ HD+ IPS ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 720x1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು 20:9 ರಚನೆಯ ಅನುಪಾತ ಮತ್ತು ವಾಟರ್‌ಡ್ರಾಪ್-ಸ್ಟೈಲ್ ನಾಚ್ ಅನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ 1500:1 ಕಾಂಟ್ರಾಸ್ಟ್ ಅನುಪಾತ ಮತ್ತು 400 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದೆ. ಇದು TÜV ರೈನ್‌ಲ್ಯಾಂಡ್ ಪ್ರಮಾಣೀಕರಿಸಿದ ರೀಡಿಂಗ್ ಮೋಡ್ ಅನ್ನು ಬೆಂಬಲಿಸಲಿದೆ.

ರೆಡ್ಮಿ 10A ಸ್ಪೋರ್ಟ್ ಫೋನ್ : ಪ್ರೊಸೆಸರ್ ಯಾವುದು?
ರೆಡ್ಮಿ 10A ಸ್ಪೋರ್ಟ್ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ G25 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್-ಆಧಾರಿತ MIUI 12.5 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬಳಸಿ 512MBವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ನೀಡಲಾಗಿದೆ.
ರೆಡ್ಮಿ 10A ಸ್ಪೋರ್ಟ್ ಫೋನ್ : ಕ್ಯಾಮೆರಾ ರಚನೆ
ರೆಡ್ಮಿ 10A ಸ್ಪೋರ್ಟ್ ಸ್ಮಾರ್ಟ್‌ಫೋನ್ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದು f/2.2 ದ್ಯುತಿರಂಧ್ರ ಮತ್ತು LED ಫ್ಲ್ಯಾಷ್ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ f/2.2 ಲೆನ್ಸ್‌ನೊಂದಿಗೆ 5 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ. ವೀಡಿಯೋ ಕರೆ ಮತ್ತು ಸೆಲ್ಫಿ ಫೊಟೋ ತೆಗೆದುಕೊಳ್ಳುವುದಕ್ಕೆ ಉತ್ತಮ ಅನುಭವವನ್ನು ನೀಡಲಿದೆ.

ರೆಡ್ಮಿ 10A ಸ್ಪೋರ್ಟ್ ಫೋನ್ : ಬ್ಯಾಟರಿ ಬ್ಯಾಕ್‌ಅಪ್
ರೆಡ್ಮಿ 10A ಸ್ಪೋರ್ಟ್ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 10W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi 802.11 b/g/n, ಬ್ಲೂಟೂತ್ v5, ಮತ್ತು GPS/ A-GPS ಅನ್ನು ಬೆಂಬಲಿಸಲಿದೆ.
ರೆಡ್ಮಿ 10A ಸ್ಪೋರ್ಟ್ ಫೋನ್ : ಇತರೆ ಸೌಲಭ್ಯಗಳು
ರೆಡ್ಮಿ 10A ಸ್ಪೋರ್ಟ್ ಸ್ಮಾರ್ಟ್‌ಫೋನ್ ಮೈಕ್ರೋ-ಯುಎಸ್‌ಬಿ ಪೋರ್ಟ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ರಿಯರ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಒಳಗೊಂಡಿದೆ. ರೆಡ್ಮಿ 10A ಸ್ಪೋರ್ಟ್ ಸ್ಮಾರ್ಟ್‌ಫೋನ್ 164.9x77.07x9mm ಅಳತೆಯನ್ನು ಹೊಂದಿದ್ದು, 194g ತೂಕವನ್ನು ಹೊಂದಿದೆ.


Click it and Unblock the Notifications








