ವಿವೋ Y35 ಫೋನ್‌ಗೆ ಸಖತ್ ಡಿಸ್ಕೌಂಟ್!..ಖರೀದಿಗೆ ಈ ಆಫರ್ ಉತ್ತಮವೇ?
ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಗಳು ಗ್ರಾಹಕರ ಶಾಪಿಂಗ್ ವಿಧಾನದಲ್ಲಿ ಬಹುತೇಕ ಬದಲಾವಣೆ ತಂದಿವೆ ಎನ್ನಬಹುದಾಗಿದೆ. ಇ ಕಾಮರ್ಸ್‌ಗಳು ವಿಶೇಷವಾಗಿ ಕೊಡುಗೆ ಹಾಗೂ ಆಫರ್‌ಗಳ ಮೂಳಕ ಹೆಚ್ಚು ಗ್ರಾಹಕರನ್ನು ಆಕರ್ಷಿಸುತ್ತವೆ. ಇದೇ ಹಾದಿಯಲ್ಲಿ ಸದ್ಯ ಹೆಚ್ಚು ಮುನ್ನಲೆಯಲ್ಲಿ ಗುರುತಿಸಿಕೊಂಡಿರುವ ಪ್ರಮುಖ ಇ ಕಾಮರ್ಸ್ ತಾಣಗಳ ಪೈಕಿ ವಿಜಯ ಸೇಲ್ಸ್ (Vijay Sales) ಸಹ ಒಂದಾಗಿದೆ. ಪ್ರಸ್ತುತ ಫೋನ್‌ಗಳಿಗೆ ಬಿಗ್ ಆಫರ್ ಲಭ್ಯ ಮಾಡಿದೆ.

ಹೌದು, ವಿಜಯ ಸೇಲ್ಸ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಗಣರಾಜ್ಯೋತ್ಸವದ ಅಂಗವಾಗಿ ಮೆಗಾ ರಿಪಬ್ಲಿಕ್ ಡೇ ಸೇಲ್ (Mega Republic Day Sale) ಆಯೋಜಿಸಿದೆ. ಈ ಮಾರಾಟ ಮೇಳದಲ್ಲಿ ಸಂಸ್ಥೆಯು ಆಯ್ದ ಕೆಲವು ಸ್ಮಾರ್ಟ್‌ಫೋನ್ ಇತರೆ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಅತ್ಯುತ್ತಮ ರಿಯಾಯಿತಿ ಘೋಷಿಸಿದೆ. ಆ ಪೈಕಿ ವಿವೋ Y35 ಸ್ಮಾರ್ಟ್‌ಫೋನ್ 18,499ರೂ. ಗಳ ಆಫರ್ ಪ್ರೈಸ್‌ನಲ್ಲಿ ಲಭ್ಯವಿದ್ದು, ಬಜೆಟ್ ಗ್ರಾಹಕರನ್ನು ಸೆಳೆದಿದೆ.

ಅಂದಹಾಗೆ ವಿಜಯ ಸೇಲ್ಸ್ ಮೆಗಾ ರಿಪಬ್ಲಿಕ್ ಡೇ ಸೇಲ್ ನಲ್ಲಿ ಹೆಚ್‌ಡಿಎಫ್‌ಸಿ, ಐಸಿಐಸಿಐ, ಯಸ್ ಬ್ಯಾಂಕ್, ಹೆಚ್‌ಎಸ್‌ಬಿಸಿ, ಐಡಿಎಫ್‌ಸಿ ಸೇರಿದಂತೆ ಇನ್ನು ಕೆಲವು ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ, ಆಕರ್ಷಕ ರಿಯಾಯಿತಿ ದೊರೆಯುತ್ತದೆ. ಇಎಮ್‌ಐ ಆಯ್ಕೆಗಳು ಸಹ ಗ್ರಾಹಕರಿಗೆ ಲಭ್ಯವಾಗಲಿವೆ. ಹಾಗಾದರೆ ವಿವೋ Y35 ಸ್ಮಾರ್ಟ್‌ಫೋನಿನ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಟೈಲಿಶ್ ಮತ್ತು ಟ್ರೆಂಡಿ ವಿನ್ಯಾಸ
ವಿವೋ Y35 ಸ್ಮಾರ್ಟ್‌ಫೋನ್ 6.58 ಇಂಚಿನ ಫುಲ್‌ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಹೊಂದಿದ್ದು, ಬ್ರೈಟ್‌ನೆಸ್ ಮತ್ತು ಎದ್ದು ಕಾಣುವ ಬಣ್ಣವನ್ನು ನೀಡಲಿದೆ. ಇದು 2.5D ಕರ್ವ್ ವಕ್ರತೆಯನ್ನು ಹೊಂದಿರುವ ಫ್ಲಾಟ್ ಫ್ರೇಮ್ ಅನ್ನು ಹೊಂದಿದೆ. ಅಲ್ಲದೆ, ಫ್ರಾಸ್ಟೆಡ್ ಆಂಟಿ-ಗ್ಲೇರ್ (AG) ಮೇಲ್ಮೈ ಸಾಫ್ಟ್ ಅಂದವಾದ ಸ್ಪರ್ಶವನ್ನು ನೀಡುತ್ತದೆ ಮತ್ತು ಗೀರುಗಳು ಮತ್ತು ಫಿಂಗರ್‌ಪ್ರಿಂಟ್‌ಗಳಿಗೆ ರೆಸಿಸ್ಟೆಟ್ ನೀಡಲಿದೆ. ಇದು ತ್ವರಿತ ಮತ್ತು ಪರಿಣಾಮಕಾರಿ ಅನ್‌ಲಾಕಿಂಗ್‌ಗಾಗಿ ಫೇಸ್ ವೇಕ್ ವೈಶಿಷ್ಟ್ಯದ ಜೊತೆಗೆ ಸೈಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿದೆ.

ಪವರ್‌ಫುಲ್ ಕಾರ್ಯಕ್ಷಮತೆ
ವಿವೋ Y35 ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಆಂಡ್ರಾಯ್ಡ್ 12 ಅನ್ನು ಆಧರಿಸಿದ ಇತ್ತೀಚಿನ ಫನ್‌ಟಚ್ OS 12 ನಲ್ಲಿ ರನ್ ಆಗಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ವಿಸ್ತೃತ RAM 3.0 ವೈಶಿಷ್ಟ್ಯದೊಂದಿಗೆ 8GB ಹೆಚ್ಚುವರಿ RAM ಅನ್ನು ನೀಡಲಿದೆ. ಜೊತೆಗೆ ಮೆಮೊರಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುಕೊಳ್ಳುವುದಕ್ಕೆ ಸಾಧ್ಯವಾಗಲಿದೆ.

ಕ್ಯಾಮೆರಾ ಸೆನ್ಸಾರ್
ವಿವೋ Y35 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಬೊಕೆ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ದೀರ್ಘ ಬ್ಯಾಟರಿ ಬಾಳಿಕೆ
ವಿವೋ Y35 ಸ್ಮಾರ್ಟ್‌ಫೋನ್ 44W ಫ್ಲ್ಯಾಷ್ ಚಾರ್ಜಿಂಗ್ ಬೆಂಬಲಿಸುವ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಫೋನ್ ಮಲ್ಟಿ ಟರ್ಬೊ ಮತ್ತು ಅಲ್ಟ್ರಾ ಗೇಮ್ ಮೋಡ್‌ನೊಂದಿಗೆ ಬರುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್ v5, ಜಿಪಿಎಸ್, ಗ್ಲೋನಾಸ್, ಒಟಿಜಿ, ಎಫ್‌ಎಂ ರೇಡಿಯೋ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಸೇರಿವೆ. ಮಂಡಳಿಯಲ್ಲಿನ ಸಂವೇದಕಗಳು ವೇಗವರ್ಧಕ, ಸುತ್ತುವರಿದ ಬೆಳಕಿನ ಸಂವೇದಕ, ಇ-ದಿಕ್ಸೂಚಿ, ಗೈರೊಸ್ಕೋಪ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಒಳಗೊಂಡಿದೆ.


Click it and Unblock the Notifications








