ವ್ಯಾಲೆಂಟೈನ್ಸ್ ಡೇ ಆಫರ್: ಈ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್!
ವ್ಯಾಲೆಂಟೈನ್ಸ್ ಡೇ ಸಮೀಪಿಸುತ್ತಿರುವಂತೆ, ವಿಜಯ್ ಸೇಲ್ಸ್ ನಿಮ್ಮ ವಿಶೇಷ ವ್ಯಕ್ತಿಗಾಗಿ ಟೆಕ್ ಉಡುಗೊರೆಗಳ ಮೇಲೆ ಎದುರಿಸಲಾಗದ ಡೀಲ್‌ಗಳೊಂದಿಗೆ ಹರ್ಷವನ್ನು ಹರಡುತ್ತಿದೆ. ಚಿಲ್ಲರೆ ವ್ಯಾಪಾರಿಗಳ ವ್ಯಾಲೆಂಟೈನ್ಸ್ ಡೇ ಮಾರಾಟವು ಸ್ಮಾರ್ಟ್‌ಫೋನ್‌ಗಳು, ಗ್ಯಾಜೆಟ್‌ಗಳು, ಆಡಿಯೊ ಉಪಕರಣಗಳು ಮತ್ತು ಹೆಚ್ಚಿನವುಗಳಲ್ಲಿ ಮಾರ್ಕ್‌ಡೌನ್‌ಗಳನ್ನು ಹೊಂದಿದೆ - ನಿಮ್ಮ ಜೀವನದಲ್ಲಿ ಗೀಕಿ ಪಾಲುದಾರರಿಗೆ ಸೂಕ್ತವಾಗಿದೆ.
ಪ್ರಮುಖ ಆನ್‌ಲೈನ್ ಸ್ಟೋರ್‌ಗಳಲ್ಲಿ ಒಂದಾಗಿರುವ ವಿಜಯ್ ಸೇಲ್ಸ್ ವ್ಯಾಲೆಂಟೈನ್ಸ್ ಡೇ ಪ್ರಮುಖ ಇದೀಗ ವಿಶೇಷ ಮಾರಾಟ ಮೇಳವನ್ನು ಘೋಷಿಸಿದೆ. ಈ ಮಾರಾಟದಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಆಡಿಯೊ ಡಿವೈಸ್‌ಗಳು ಸೇರಿದಂತೆ ಇತರೆ ಟೆಕ್ ಉಪಕರಣಗಳ ಮೇಲೆ ಶೇ 70% ವರೆಗೆ ರಿಯಾಯಿತಿಯನ್ನು ತಿಳಿಸಿದೆ. ಹಾಗೆಯೇ ಹೆಚ್ಚುವರಿಯಾಗಿ ಬ್ಯಾಂಕ್ ರಿಯಾಯಿತಿಗಳು ಲಭ್ಯ.

ಈ ಮಾರಾಟದಲ್ಲಿ ಗ್ರಾಹಕರು ಸ್ಯಾಮ್‌ಸಂಗ್ ಗ್ಯಾಲಕ್ಸಿ S24, ಗ್ಯಾಲಕ್ಸಿ S24 ಪ್ಲಸ್ ಹಾಗೂ ಗ್ಯಾಲಕ್ಸಿ S24 ಅಲ್ಟ್ರಾ ಫೋನ್ ಅನ್ನು ವಿಜಯ್ ಸೇಲ್ಸ್ ಸ್ಟೋರ್‌ಗಳಲ್ಲಿ 79,999ರೂ.ಗಳ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯ. ಹಾಗೆಯೇ ಒನ್‌ಪ್ಲಸ್ 12 (OnePlus 12) ಫೋನ್ 64,999ರೂ. ಗಳ ದರದಲ್ಲಿ ಖರೀದಿಗೆ ಲಭ್ಯವಿದೆ.
ಫ್ಲ್ಯಾಗ್‌ಶಿಪ್‌ಗಳು ಮಾದರಿಯ ಫೋನ್‌ಗಳನ್ನು ಒನ್‌ಕಾರ್ಡ್ ಮೂಲಕ ಖರೀದಿಸಿದರೆ, (ಶೇ. 5%) 5000ರೂ. ಗಳ ವರೆಗೆ ಹಾಗೂ HSBC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ, 7500ರೂ. ವರೆಗೆ ಇನ್‌ಸ್ಟಂಟ್ ರಿಯಾಯಿತಿ ಅವಕಾಶ ದೊರೆಯಲಿದೆ.
ಹಾಗೆಯೇ ವಿಜಯ್ ಸೇಲ್ಸ್ ವ್ಯಾಲೆಂಟೈನ್ಸ್ ಡೇ ಸೇಲ್‌ನಲ್ಲಿ ಆಸುಸ್ ROG ಫೋನ್ 6 ಕೂಡಾ ರಿಯಾಯಿತಿ ಪಡೆದಿದ್ದು, 47,999ರೂ. ಗಳ ಆಫರ್ ಬೆಲೆಯಲ್ಲಿ ಲಭ್ಯವಿದೆ. ಅಂದಹಾಗೆ ಈ ಫೋನ್ ಸ್ನಾಪ್‌ಡ್ರಾಗನ್ 8+ ಜೆನ್ 1 ಚಿಪ್‌ಸೆಟ್ ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಒಂದು ಗೇಮಿಂಗ್ ಸ್ಮಾರ್ಟ್‌ಫೋನ್ ಆಗಿದೆ. ಇದು ಗೇಮಿಂಗ್‌ಗೆ ಪೂರಕ ಎನಿಸುವ ಏರ್ ಟ್ರಿಗ್ಗರ್‌ಗಳು, RGB ಲೈಟಿಂಗ್ ಆಯ್ಕೆಗಳನ್ನು ಒಳಗೊಂಡಿದೆ.
ಅದೇ ರೀತಿ ರೆಡ್ಮಿ 13C 5G ಫೋನಿ 4GB + 128GB ವೇರಿಯಂಟ್ 8,999 ರೂ.ಗಳ ಆಫರ್ ದರದಲ್ಲಿ ಖರೀದಿಸಬಹುದು. ಇನ್ನು ರೆಡ್ಮಿ ನೋಟ್ 13 5G ಫೋನ್ ಅನ್ನು ಖರೀದಿದಾರರು 17,999ರೂ. ಗಳ ಬೆಲೆಯಲ್ಲಿ ಖರೀದಿಸಲು ಚಾನ್ಸ್ ಇದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಒನ್‌ಕಾರ್ಡ್ ನ ಕ್ರೆಡಿಟ್ ಕಾರ್ಡ್‌ನಲ್ಲಿ ಹೆಚ್ಚುವರಿ 5% ಇನ್‌ಸ್ಟಂಟ್ ಡಿಸ್ಕೌಂಟ್ ಮತ್ತು ಪ್ರಮುಖ ಬ್ಯಾಂಕ್‌ಗಳಲ್ಲಿ ಯಾವುದೇ ನೋ ಕಾಸ್ಟ್ ಇಎಮ್‌ಐ ಆಯ್ಕೆಗಳು ಲಭ್ಯ.
ವಿಜಯ್ ಸೇಲ್ಸ್ ವ್ಯಾಲೆಂಟೈನ್ಸ್ ಡೇ ಸೇಲ್‌ನಲ್ಲಿ ರಿಯಲ್‌ಮಿ 12 ಪ್ರೊ 5G ಫೋನ್ 26,999 ರೂ.ಗಳ ಪ್ರೈಸ್ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ರಿಯಲ್‌ಮಿ 12 ಪ್ರೊ+ 5G ಮೊಬೈಲ್ 29,999 ರೂ.ಗಳ ಆಫರ್ ಬೆಲೆಯಲ್ಲಿ ಕಾಣಿಸಿಕೊಂಇಡದೆ. ಈ ಎರಡೂ ರಿಯಲ್‌ಮಿ ಫೋನ್‌ಗಳು ಒನ್‌ಕಾರ್ಡ್ ಮತ್ತು HSBC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ ಹೆಚ್ಚುವರಿ 5% ಇನ್‌ಸ್ಟಂಟ್ ರಿಯಾಯಿತಿ ದರದಲ್ಲಿ ಸಿಗಲಿವೆ.
ಹಾಗೆಯೇ ಈ ಸ್ಪೆಷಲ್ ಮಾರಾಟದಲ್ಲಿ ಗ್ರಾಹಕರು ಐಪ್ಯಾಡ್ 9th ಜೆನ್ 64GB ಮಾಡೆಲ್ ಅನ್ನು ಜಸ್ಟ್ 29,990 ರೂ.ಗಳ ದರದಲ್ಲಿ ಖರೀದಿ ಮಾಡಬಹುದು. ಇನ್ನು HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ 2,000 ರೂ.ಗಳ ಹೆಚ್ಚುವರಿ ರಿಯಾಯಿತಿ ಸಹ ಸಿಗಲಿದೆ. ಹೆಚ್‌ಡಿಎಫ್‌ಸಿ ರಿಯಾಯಿತಿ ಪಡೆದುಕೊಂಡರೆ, ಈ ಡಿವೈಸ್ 27,990ರೂ. ಗಳಿಗೆ ಖರೀದಿ ಮಾಡಲು ಅವಕಾಶ ಇದೆ.


Click it and Unblock the Notifications








