ಜಿಯೋ ಹೊಸ ಆಫರ್‌ಗೆ ಟೆಲಿಕಾಂ ಅಲ್ಲೋಲ ಕಲ್ಲೋಲ!..ಇತರೆ ಕಂಪೆನಿಗಳ ಶವಪೆಟ್ಟಿಗೆಗೆ ಇದು ಕೊನೆ ಮೊಳೆ!!

|

ಕೇವಲ ಎರಡು ವರ್ಷಗಳಲ್ಲಿ ಭಾರತದ ಟೆಲಿಕಾಂ ಪ್ರಪಂಚವನ್ನೇ ಬದಲಾಯಿಸಿದ ರಿಲಾಯನ್ಸ್ ಜಿಯೋ ಇದೀಗ ಮತ್ತೆ ಟೆಲಿಕಾಂ ಲೋಕಕ್ಕೆ ಶಾಕ್ ನೀಡಿದೆ. ಏರ್‌ಟೆಲ್, ವೊಡಾಫೋನ್, ಹಾಗೂ ಐಡಿಯಾದಂತಹ ದೊಡ್ಡ ದೊಡ್ಡ ಟೆಲಿಕಾಂ ಕಂಪೆನಿಗಳಿಗೆ ಸೆಡ್ಡು ಹೊಡೆದು ನಿಂತಿರುವ ಜಿಯೋ ಇದೀಗ ಈ ಟೆಲಿಕಾಂ ಕಂಪೆನಿಗಳಿಗೆ ಜ್ವರ ಬರುವಂತಹ ಭರ್ಜರಿ ಆಫರ್ ನೀಡಿದೆ.

ಜಿಯೋಗೆ ಸರಿಸಮನಾಗಿ ಇತರೆ ಟೆಲಿಕಾಂ ಕಂಪೆನಿಗಳು ಬಿಡುಗಡೆ ಮಾಡುತ್ತಿದ್ದ ಆಫರ್‌ಗಳಿಂದಾಗಿ ಜಿಯೋ ತನ್ನ ಬಹುತೇಕ ಗ್ರಾಹಕರನ್ನು ಕಳೆದುಕೊಂಡಿದೆ ಎನ್ನಲಾಗಿದೆ. ಹಾಗಾಗಿ, ಏರ್‌ಟೆಲ್, ವೊಡಾಫೋನ್, ಹಾಗೂ ಐಡಿಯಾ ಕಂಪೆನಿಗಳಿಗೆ ಶಾಕ್ ನೀಡಲು ತನ್ನ ಆಯ್ದ ರೀಚಾರ್ಜ್ ಆಫರ್‌ಗಳ ಮೇಲೆ ಎರಡು ಪಟ್ಟು ಡೇಟಾ ನೀಡಿ ಘೋಷಣೆ ಮಾಡಿ ಗಮನ ಸೆಳೆದಿದೆ.

ಜಿಯೋ ಹೊಸ ಆಫರ್‌ಗೆ ಟೆಲಿಕಾಂ ಅಲ್ಲೋಲ ಕಲ್ಲೋಲ!!

ಜಿಯೋ ಪ್ರಕಟಿಸಿರುವ ಈ ನೂತನ ಆಫರ್ ಸೀಮಿತ ದಿನಗಳಲ್ಲಿ ಮಾತ್ರ ಲಭ್ಯವಿದ್ದು, ಈ ದಿನಗಳಲ್ಲಿ ಜಿಯೋ ರೀಚಾರ್ಜ್ ಮಾಡಿಸಿದವರಿಗೆ ಭರ್ಜರಿ ಲಾಭವಾಗಲಿದೆ. ಹಾಗಾದರೆ, ಜಿಯೋ ನೀತನ ಘೋಷಣೆಯಿಂದ ಜಿಯೋ ಆಫರ್‌ಗಳಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ? ಜಿಯೋವಿನ ಹೊಸ ಆಫರ್ ಎಷ್ಟು ದಿನ ಲಭ್ಯ? ಗ್ರಾಹಕರಿಗೆ ಏನೆಲ್ಲಾ ಲಾಭ ಎಂದು ಮುಂದೆ ತಿಳಿಯಿರಿ.!

ಮುಂದುವರೆದ ದರ ಸಮರ

ಮುಂದುವರೆದ ದರ ಸಮರ

ಇತ್ತೀಚೆಗೆ ತಾನೇ ಬಿಎಸ್ಎನ್ಎಲ್ ಜಿಯೋದ ಫೈಬರ್ ನೆಟ್ ಗೆ ಸೆಡ್ಡು ಹೊಡೆಯಲು ಹೋಗಿ ಹೊಸ FTTH ಪ್ಲಾನ್ ಅನ್ನು ಅತಿ ಕಡಿಮೆ ದರದಲ್ಲಿ ಪರಿಚಯಿಸಿತ್ತು. ನಂತರ ಏರ್ ಟೇಲ್ ಸಹ ಡೇಟಾ ಆಫರ್ ಗಳನ್ನು ಪರಿಷ್ಕರಿಸಿ ಜಿಯೋಗಿಂತ ಉತ್ತಮ ಡೇಟಾ ಆಫರ್ ಗ್ರಾಹಕರಿಗೆ ನೀಡಿತ್ತು. ಹಾಗಾಗಿ, ಈಗ ಜಿಯೋ ಸಹ ಹೆಚ್ಚುವರಿಯಾಗಿ 1.5 GB ಡೇಟಾ ಘೋಷಿಸಿದೆ.!

ಟೆಲಿಕಾಂ ಮಾರುಕಟ್ಟೆ ಅಲ್ಲೋಲ-ಕಲ್ಲೋಲ

ಟೆಲಿಕಾಂ ಮಾರುಕಟ್ಟೆ ಅಲ್ಲೋಲ-ಕಲ್ಲೋಲ

ರಿಲಾಯನ್ಸ್ ಜಿಯೋ ಘೋಷಿಸಿರುವ ಡಬಲ್ ಧಮಾಕಾ ಆಫರ್ ಭಾರತೀಯ ಟೆಲಿಕಾಂ ಮಾರುಕಟ್ಟೆಯನ್ನು ಅಲುಗಾಡಿಸಿದೆ. ತನ್ನ ಆಯ್ದ ರಿಚಾರ್ಜ್ ಪ್ಯಾಕ್ ಗಳ ಮೇಲೆ ದಿನಕ್ಕೆ 1.5 GB ಡೇಟಾವನ್ನು ಹೆಚ್ಚುವರಿಯಾಗಿ ನೀಡುತ್ತೇವೆ ಎಂದಿರುವುದು ಇತರೆ ಟೆಲಿಕಾಂ ಆಪರೇಟರ್ ಗಳಿಗೆ ನುಂಗಲಾರದ ತುತ್ತಾಗಿದರೆ, ಡೇಟಾ ಬಳಕೆದಾರರಿಗಂತೂ ಹಬ್ಬವೋ ಹಬ್ಬವಾಗಿದೆ.

ಧಮಾಕಾದಿಂದ ದಿನಕ್ಕೆ 3GB ಡೇಟಾ

ಧಮಾಕಾದಿಂದ ದಿನಕ್ಕೆ 3GB ಡೇಟಾ

ಜಿಯೋ ಘೋಷಿಸಿರುವ ಹೊಸ ಪ್ಲಾನ್‌ಗಳಲ್ಲಿ ದಿನಕ್ಕೆ ಹೆಚ್ಚುವರಿಯಾಗಿ 1.5GB ಡೇಟಾವನ್ನು ಗ್ರಾಹಕರು ಉಚಿತವಾಗಿ ಪಡೆಯಲಿದ್ದಾರೆ. ಜಿಯೋ ಘೋಷಿಸಿರುವ ಡಬಲ್ ಧಮಾಕಾ ಆಫರ್ ಎಲ್ಲ ಟೆಲಿಕಾಂ ವಲಯಗಳಿಗೂ ಲಭ್ಯವಿದ್ದು, ಎಲ್ಲಾ ಗ್ರಾಹಕರು ಬಳಸಬಹುದಾಗಿದೆ. ಆದರೆ, ಈ ಡಬಲ್ ಆಫರ್ ಮೇಲೆ ತಿಳಿಸಿದ ಆಯ್ದ ರೀಚಾರ್ಜ್ ಪ್ಯಾಕ್ ಗಳಿಗೆ ಮಾತ್ರ ಅನ್ವಯಿಸುತ್ತದೆ.

ಸೀಮಿತ ಅವಧಿಗೆ ಮಾತ್ರ!

ಸೀಮಿತ ಅವಧಿಗೆ ಮಾತ್ರ!

ಜಿಯೋ ಘೋಷಿಸಿರುವ ಡಬಲ್ ಧಮಾಕಾ ಆಫರ್ ಜಿಯೋವಿನ ಕೆಲ ಆಯ್ದ ರೀಚಾರ್ಜ್ ಪ್ಯಾಕ್ ಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ಆಫರ್‌ಗಳಿಗೆ ಜೂನ್ 12 ರಿಂದ ಜೂನ್ 30ರವರೆಗೆ ಮಾತ್ರ ರೀಚಾರ್ಜ್ ಮಾಡಿಸಿಬಹುದಾಗಿದ್ದು, ಈ ದಿನಾಂಕದ ಒಳಗೆ ಈ ಕೆಳಗಿನ ಜಿಯೋ ಡೇಟಾ ಪ್ಲಾನ್‌ಗಳಿಗೆ ರೀಚಾರ್ಜ್ ಮಾಡಿಸಿದವರಿಗೆ ಡಬಲ್ ಧಮಾಕಾ ಸಿಗಲಿದೆ.

499 ರೂ. ಹೊಸ ಆಫರ್

499 ರೂ. ಹೊಸ ಆಫರ್

ಜಿಯೋ ಡಬಲ್ ಧಮಾಕಾ ಆಫರ್ ನೊಂದಿಗೆ ಹೊಸ 499 ರೂ. ರಿಚಾರ್ಜ್ ಪ್ಲಾನ್ ಘೋಷಣೆಯಾಗಿದೆ. 91 ದಿನಗಳ ವ್ಯಾಲಿಡಿಟಿ ಹೊಂದಿರಲಿರುವ ಈ ಆಫರ್ ದಿನಕ್ಕೆ 3.5GB ಡೇಟಾದಂತೆ 318GB ಡೇಟಾವನ್ನು ಗ್ರಾಹಕರಿಗೆ ನೀಡಲಿದೆ. ಕಳೆದ ವರ್ಷದ ಕೊನೆಯಲ್ಲಿ ಈ 499 ರೂ. ಪ್ಲಾನ್ ಅನ್ನು ಜಿಯೋ 449 ರೂಪಾಯಿಗಳಿಗೆ ಇಳಿಸಿತ್ತು .

ಜಿಯೋ 149 ರೂ. ಆಫರ್

ಜಿಯೋ 149 ರೂ. ಆಫರ್

ಜಿಯೋ ಡಬಲ್ ಧಮಾಕಾ ಆಫರ್ ನೊಂದಿಗೆ ಹೊಸ ಜಿಯೋ 198 ರೂ. ರೀಚಾರ್ಜ್ ಪ್ಲಾನ್ ಈಗ ಡಬಲ್ ಡೇಟಾವನ್ನು ಹೊಂದಿದೆ. ಅಂದರೆ, 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್ ದಿನಕ್ಕೆ 3.5GB ಡೇಟಾದಂತೆ ಒಟ್ಟು 98GB ಡೇಟಾವನ್ನು ಗ್ರಾಹಕರಿಗೆ ನೀಡಲಿದೆ.

ಜಿಯೋ 349 ರೂ. ಆಫರ್

ಜಿಯೋ 349 ರೂ. ಆಫರ್

ಜಿಯೋ ಡಬಲ್ ಧಮಾಕಾ ಆಫರ್ ನೊಂದಿಗೆ ಹೊಸ 349 ರೂ. ರೀಚಾರ್ಜ್ ಪ್ಲಾನ್ ಈಗ ಡಬಲ್ ಡೇಟಾವನ್ನು ಹೊಂದಿದೆ. ಅಂದರೆ, 70 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್ ದಿನಕ್ಕೆ 3.5GB ಡೇಟಾದಂತೆ ಒಟ್ಟು 245GB ಡೇಟಾವನ್ನು ಗ್ರಾಹಕರಿಗೆ ನೀಡಲಿದೆ.

ಜಿಯೋ 399ರೂ. ಆಫರ್

ಜಿಯೋ 399ರೂ. ಆಫರ್

ಜಿಯೋ ಡಬಲ್ ಧಮಾಕಾ ಆಫರ್ ನೊಂದಿಗೆ ಹೊಸ 399 ರೂ. ರೀಚಾರ್ಜ್ ಪ್ಲಾನ್ ಈಗ ಡಬಲ್ ಡೇಟಾವನ್ನು ಹೊಂದಿದೆ. ಅಂದರೆ, 84 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್ ದಿನಕ್ಕೆ 3.5GB ಡೇಟಾದಂತೆ ಒಟ್ಟು 294GB ಡೇಟಾವನ್ನು ಗ್ರಾಹಕರಿಗೆ ನೀಡಲಿದೆ.

ಜಿಯೋ 299 ರೂ. ಆಫರ್

ಜಿಯೋ 299 ರೂ. ಆಫರ್

ಜಿಯೋ ಡಬಲ್ ಧಮಾಕಾ ಆಫರ್ ನೊಂದಿಗೆ ಹೊಸ 299 ರೂ. ರೀಚಾರ್ಜ್ ಪ್ಲಾನ್ ಈಗ ಡಬಲ್ ಡೇಟಾವನ್ನು ಹೊಂದಿದೆ. ಅಂದರೆ, 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್ ದಿನಕ್ಕೆ 4.5GB ಡೇಟಾದಂತೆ ಒಟ್ಟು 126GB ಡೇಟಾವನ್ನು ಗ್ರಾಹಕರಿಗೆ ನೀಡಲಿದೆ.

ಜಿಯೋ 509 ರೂ. ಆಫರ್

ಜಿಯೋ 509 ರೂ. ಆಫರ್

ಜಿಯೋ ಡಬಲ್ ಧಮಾಕಾ ಆಫರ್ ನೊಂದಿಗೆ ಹೊಸ 509ರೂ. ರೀಚಾರ್ಜ್ ಪ್ಲಾನ್ ಈಗ ಡಬಲ್ ಡೇಟಾವನ್ನು ಹೊಂದಿದೆ. ಅಂದರೆ, 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್ ದಿನಕ್ಕೆ 5.5GB ಡೇಟಾದಂತೆ ಒಟ್ಟು 154GB ಡೇಟಾವನ್ನು ಗ್ರಾಹಕರಿಗೆ ನೀಡಲಿದೆ.

Jio Free Caller Tune ! ಜಿಯೋ ಉಚಿತ ಕಾಲರ್‌ಟೂನ್ ಬಳಕೆ ಹೇಗೆ..?
ಜಿಯೋ 799 ರೂ. ಆಫರ್

ಜಿಯೋ 799 ರೂ. ಆಫರ್

ಜಿಯೋ ಡಬಲ್ ಧಮಾಕಾ ಆಫರ್ ನೊಂದಿಗೆ ಹೊಸ 799ರೂ. ರೀಚಾರ್ಜ್ ಪ್ಲಾನ್ ಈಗ ಡಬಲ್ ಡೇಟಾವನ್ನು ಹೊಂದಿದೆ. ಅಂದರೆ, 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್ ದಿನಕ್ಕೆ 6.5GB ಡೇಟಾದಂತೆ ಒಟ್ಟು 182GB ಡೇಟಾವನ್ನು ಗ್ರಾಹಕರಿಗೆ ನೀಡಲಿದೆ.

300 ರೂ.ಗೆ 100 ರೂ. ಡಿಸ್ಕೌಂಟ್.!

300 ರೂ.ಗೆ 100 ರೂ. ಡಿಸ್ಕೌಂಟ್.!

ಜಿಯೋ ಡಬಲ್ ಧಮಾಕಾ ಆಫರ್ ನಲ್ಲಿ ಅನಿಯಮಿತ ಕರೆ, ದಿನಕ್ಕೆ 100 ಉಚಿತ SMS ಮತ್ತು ಡೇಟಾ ಇರಲಿದ್ದು, ಡೇಟಾ ಬ್ಯಾಲೆನ್ಸ್ ಮುಗಿದ ನಂತರ 64KBps ವೇಗದಲ್ಲಿ ಡೇಟಾ ಸಿಗಲಿದೆ.100 ರೂ. ರಿಯಾಯಿತಿ ಜಿಯೋ ಘೋಷಿಸಿರುವ ಡಬಲ್ ಧಮಾಕಾ ಆಫರ್ ನಲ್ಲಿ 300 ರೂ. ಮತ್ತು ಅದಕ್ಕಿಂತ ಹೆಚ್ಚು ರಿಚಾರ್ಜ್ ಮಾಡಿಕೊಂಡರೆ 100 ರೂ. ಡಿಸ್ಕೌಂಟ್ ಸಿಗಲಿದೆ.

ಏರ್‌ಟೆಲ್‌ಗೆ ಗುದ್ದು!

ಏರ್‌ಟೆಲ್‌ಗೆ ಗುದ್ದು!

ಏರ್ ಟೇಲ್ ತನ್ನ 149 ರೂ. ಮತ್ತು 399 ರೂ. ಪ್ಯಾಕ್ ಗಳನ್ನು ಪರಿಷಷ್ಕರಿಸಿ ತನ್ನ ಗ್ರಾಹಕರಿಗೆ ಉಚಿತ ಡೇಟಾವನ್ನು ಹೆಚ್ಚಿಸಿತ್ತು. ಈ ಆಫರ್ ಜಿಯೋ ನೀಡಿದ್ದ 149 ರೂ. ಮತ್ತು 399 ರೂ.ಗಳ ಆಫರ್ ಗಿಂತ ಉತ್ತಮವಾಗಿದ್ದು, ಹಾಗಾಗಿ, ಏರ್‌ಟೆಲ್‌ಗೆ ಗುದ್ದು ನೀಡುವ ಸಲುವಾಗಿ ಜಿಯೋ ತನ್ನ ಆಫರ್‌ಗಳನ್ನು ಬದಲಾಯಿಸಿದೆ.

ಆಪ್ ಮೂಲಕ ರಿಚಾರ್ಜ್!

ಆಪ್ ಮೂಲಕ ರಿಚಾರ್ಜ್!

ಮೈ ಜಿಯೋ ಆಫ್ ಅಥವಾ ಪೋನ್ ಪೇ ಆಪ್ ಮೂಲಕ ಜಿಯೋ ಆಫರ್‌ಗಳನ್ನು ರಿಚಾರ್ಜ್ ಮಾಡಿಕೊಂಡರೆ ಎಕ್ಟ್ರಾ 100 ರೂ. ಡಿಸ್ಕೌಂಟ್ ಸಿಗಲಿದೆ. 300 ರೂ. ಒಳಗಿನ ಪ್ಲಾನ್ ಗೆ ಶೇ.20ರಷ್ಟು ರಿಯಾಯಿತಿ ಇದ್ದು, ಗ್ರಾಹಕರಿಗಂತೂ ಭರಪೂರ ಕೊಡುಗೆಯನ್ನು ಜಿಯೋ ನೀಡಿರುವುದು ಇತರೆ ಟೆಲಿಕಾಂ ಕಂಪೆನಿಗಳ ಶವ ಪೆಟ್ಟಿಗೆಗೆ ಕೊನೆ ಮೊಳೆ ಎನ್ನಬಹುದು.

ವಿಶ್ವದಲ್ಲೇ ಅತಿ ವೇಗದ ಸೂಪರ್ ಕಂಪ್ಯೂಟರ್ `ಸಮಿತ್’ ಬಗ್ಗೆ ತಿಳಿದರೆ ನಿಮ್ಮ ತಲೆತಿರುಗುತ್ತದೆ!!

ವಿಶ್ವದಲ್ಲೇ ಅತಿ ವೇಗದ ಸೂಪರ್ ಕಂಪ್ಯೂಟರ್ `ಸಮಿತ್’ ಬಗ್ಗೆ ತಿಳಿದರೆ ನಿಮ್ಮ ತಲೆತಿರುಗುತ್ತದೆ!!

5 ವರ್ಷ ಹಿಂದೆ ಚೀನಾ ನಿರ್ಮಿಸಿದ್ದ ವಿಶ್ವದ ವೇಗದ ಸೂಪರ್ ಕಂಪ್ಯೂಟರ್ ದಾಖಲೆಯನ್ನು ಅಮೆರಿಕಾದ ಅತಿ ವೇಗದ ಸೂಪರ್ ಕಂಪ್ಯೂಟರ್ `ಸಮಿತ್' ಮುರಿದಿದೆ. ಅಮೆರಿಕ ಇಂಧನ ಇಲಾಖೆಯ ಓಕ್ ರಿಡ್ಜ್ ನ್ಯಾಷನಲ್ ಲ್ಯಾಬೊರೇಟರಿ ವಿಶ್ವದಲ್ಲೇ ಅತಿ ವೇಗದ ಸೂಪರ್ ಕಂಪ್ಯೂಟರ್ `ಸಮಿತ್' ಅನ್ನು ಅಮೆರಿಕಾ ಅಭಿವೃದ್ಧಿಪಡಿಸಿದೆ.

ಇದೀಗ ಅಭಿವೃದ್ದಿಯಾಗಿರುವ ವಿಶ್ವದಲ್ಲಿಯೇ ಅತಿ ವೇಗದ ಸೂಪರ್ ಕಂಪ್ಯೂಟರ್ 'ಸಮಿತ್' ಮೂಲಕ ಹಿಂದಿನ ಸೂಪರ್ ಕಂಪ್ಯೂಟರ್‌ಗಳಿಗಿಂತಲೂ ತೀಕ್ಷಣವಾಗಿ ಕ್ಷಣಮಾತ್ರದಲ್ಲಿ ಲಕ್ಷಾಂತರ ಜಿನೋಮ್ ಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಹಾಗಾಗಿ, ವಿಶ್ವದಲ್ಲೇ ಅತಿ ವೇಗದ ಸೂಪರ್ ಕಂಪ್ಯೂಟರ್ `ಸಮಿತ್' ಈಗ ಸುದ್ದಿಯಲ್ಲಿದೆ.

ವಿಜ್ಞಾನದಲ್ಲಿನ ಆವಿಷ್ಕಾರಗಳಿಗೆ ಅಭೂತಪೂರ್ವ ಸಾಮಥ್ರ್ಯ ಇರುವ ಸೂಪರ್ ಕಂಪ್ಯೂಟರ್‌ಗಳ ಅವಶ್ಯಕತೆ ಇರುವುದರಿಂದ ಸೂಪರ್ ಕಂಪ್ಯೂಟರ್ `ಸಮಿತ್' ಅನ್ನು ಬಿಡುಗಡೆ ಮಾಡಿಡುವುದಾಗಿ ಓಕ್ ರಿಡ್ಜ್ ನ್ಯಾಷನಲ್ ಲ್ಯಾಬೊರೇಟರಿ ಹೇಳಿದೆ. ಹಾಗಾದರೆ, ವಿಶ್ವದಲ್ಲೇ ಅತಿ ವೇಗದ ಸೂಪರ್ ಕಂಪ್ಯೂಟರ್ `ಸಮಿತ್' ಸಾಮರ್ಥ್ಯವೇನು ಎಂಬುದನ್ನು ಮುಂದೆ ತಿಳಿಯಿರಿ.

ಅಸಾಮಾನ್ಯ ಸೂಪರ್ ಕಂಪ್ಯೂಟರ್

ಅಸಾಮಾನ್ಯ ಸೂಪರ್ ಕಂಪ್ಯೂಟರ್

ಆರೋಗ್ಯ, ಕೃತಕ ಬುದ್ಧಿಮತ್ತೆ, ಶಕ್ತಿ, ಹವಾಮಾನ, ಭೌತಶಾಸ್ತ್ರ ಹಾಗೂ ಇತರ ಸಂಶೋಧನ ಕ್ಷೇತ್ರಗಳಲ್ಲಿ ಬೇಕಾಗಿದ್ದ ನಂಬಲು ಅಸಾಮಾನ್ಯ ಸೂಪರ್ ಕಂಪ್ಯೂಟರ್ ಸಮಿತ್ ಆಗಿದೆ. ಈ ಸಂಶೋಧನೆಗಳಿಂದ ಬ್ರಹ್ಮಾಂಡವನ್ನು ಇನ್ನೂ ಸರಿಯಾಗಿ ಅರ್ಥೈಸಬಹುದಾಗಿದೆ ಎಂದು ಗಿ ಓಕ್ ರಿಡ್ಜ್ ನ್ಯಾಷನಲ್ ಲ್ಯಾಬೊರೇಟರಿ ಹೇಳಿದೆ.

2 ಟೆನ್ನಿಸ್ ಕೋರ್ಟ್‌ನಷ್ಟು ದೊಡ್ಡದು!

2 ಟೆನ್ನಿಸ್ ಕೋರ್ಟ್‌ನಷ್ಟು ದೊಡ್ಡದು!

ವಿಶ್ವದಲ್ಲೇ ಅತಿ ವೇಗದ ಸೂಪರ್ ಕಂಪ್ಯೂಟರ್ `ಸಮಿತ್' 4,608 ಸರ್ವರ್‌ಗಳನ್ನು ಹೊಂದಿದೆ. 2 ಟೆನ್ನಿಸ್ ಕೋರ್ಟ್‌ಗಳ ಜಾಗವನ್ನು ತೆಗೆದುಕೊಂಡಿರುವ ಸಮಿತ್ 9 ಸಾವಿರ 22-ಕೋರ್ ಐಬಿಎಂ ಪವರ್ 9 ಪ್ರೊಸೆಸರ್ ಗಳನ್ನು ಒಳಗೊಂಡಿದೆ. ಮತ್ತು 27 ಸಾವಿರಕ್ಕೂ ಹೆಚ್ಚು ಎನ್ವಿಡಿಯಾ ಟೆಸ್ಲಾ ವಿ100 ಗ್ರಾಫಿಕ್ ಪ್ರೊಸೆಸರ್‌ಗಳನ್ನು ಹೊಂದಿದೆ.

200 ಪೆಟಾ ಫ್ಲಾಪ್ಸ್ ಸಾಮರ್ಥ್ಯ!!

200 ಪೆಟಾ ಫ್ಲಾಪ್ಸ್ ಸಾಮರ್ಥ್ಯ!!

ವಿಶ್ವದಲ್ಲೇ ಅತಿ ವೇಗದ ಸೂಪರ್ ಕಂಪ್ಯೂಟರ್ `ಸಮಿತ್' ಈ ಹಿಂದಿನ ಟೈಟಾನ್ ಸೂಪರ್ ಕಂಪ್ಯೂಟರ್ ಗಿಂತ 8 ಪಟ್ಟು ವೇಗವಾಗಿ ಸಮಿತ್ ಕೆಲಸ ನಿರ್ವಹಿಸುತ್ತದೆ. ಸಮಿತ್ ನ ಕಾರ್ಯನಿರ್ವಹಣಾ ಸಾಮರ್ಥ್ಯ 200 ಪೆಟಾ ಫ್ಲಾಪ್ಸ್ ಆಗಿದ್ದು, ಚೀನಾದ 93 ಪೆಟಾ ಫ್ಲಾಪ್ಸ್ ಸಾಮಥ್ರ್ಯದ ತೈಹುಲೈಟ್ ಸೂಪರ್ ಕಂಪ್ಯೂಟರ್ ಅನ್ನು ಹಿಂದಿಕ್ಕಿದೆ.

ಏನಿದು ಫ್ಲಾಪ್ಸ್?

ಏನಿದು ಫ್ಲಾಪ್ಸ್?

ಫ್ಲಾಪ್ಸ್ (FLOPS) ಎಂದರೆ ಕಂಪ್ಯೂಟರ್ ನ ಸಾಮರ್ಥ್ಯ ಅಳೆಯಲು ಬಳಸುವ ಮಾನದಂಡ. ಫ್ಲೋಟಿಂಗ್ ಪಾಯಿಂಟ್ ಆಪರೇಷನ್ಸ್ ಪರ್ ಸೆಕೆಂಡ್ (Floating Point Operations per Second) ಎಂಬುದು ಇದರ ವಿಸ್ತೃತ ರೂಪ. ಅಂದರೆ, ಒಂದು ಸೆಕೆಂಡ್ ಅವಧಿಯಲ್ಲಿ ಲೆಕ್ಕ ಮಾಡುವ ಕಂಪ್ಯೂಟರ್ ಸಾಮರ್ಥ್ಯ ಇದಾಗಿರುತ್ತದೆ.

ಸಮಿತ್ 200 ಪೆಟಾ ಫ್ಲಾಪ್ಸ್!

ಸಮಿತ್ 200 ಪೆಟಾ ಫ್ಲಾಪ್ಸ್!

ಒಂದು ಸೂಪರ್ ಕಂಪ್ಯೂಟರ್‌ನ ಕಾರ್ಯನಿರ್ವಹಣಾ ಸಾಮರ್ಥ್ಯ ಒಂದು ಪೆಟಾ ಫ್ಲಾಪ್ಸ್ ಇದ್ದರೆ ಆ ಕಂಪ್ಯೂಟರ್ ಒಂದು ಸೆಕೆಂಡ್‍ನಲ್ಲಿ ಸಾವಿರ ಲಕ್ಷಕೋಟಿಗಳಷ್ಟು ಲೆಕ್ಕಾಚಾರ ಮಾಡುವ ಸಾಮರ್ಥ್ಯ ಹೊಂದಿದೆ ಎಂದರ್ಥ. ಇನ್ನು 200 ಪೆಟಾ ಫ್ಲಾಪ್ಸ್ ಸಾಮರ್ಥ್ಯ ಹೊಂದಿರುವ ಸಮಿತ್ ವೇಗ ಎಷ್ಟು ಎಂಬುದನ್ನು ನೀವೆ ಲೆಕ್ಕಹಾಕಿ.!

ನಿರ್ವಹಣೆಯೇ ಕಷ್ಟ!!

ನಿರ್ವಹಣೆಯೇ ಕಷ್ಟ!!

2 ಟೆನ್ನಿಸ್ ಕೋರ್ಟ್‌ಗಳಷ್ಟು ದೊಡ್ಡದಾಗಿರುವ ವಿಶ್ವದಲ್ಲೇ ಅತಿ ವೇಗದ ಸೂಪರ್ ಕಂಪ್ಯೂಟರ್ `ಸಮಿತ್' ವ್ಯವಸ್ಥೆಯನ್ನು ತಂಪಾಗಿಡಲು ಒಂದು ನಿಮಿಷಕ್ಕೆ 15 ಸಾವಿರ ಲೀಟರ್ ನಷ್ಟು ನೀರು ಬೇಕಾಗುತ್ತದೆ. 8100 ಮನೆಗಳು ಬಳಸುವಷ್ಟು ವಿದ್ಯುತ್ ಅನ್ನು ಸಮಿತ್ ಬಳಸುತ್ತದೆ ಎಂದರೆ ಇದರ ನಿರ್ವಹಣೆ ಎಷ್ಟು ಕಷ್ಟ ಎಂಬುದು ನಿಮಗೆ ಅರ್ಥವಾಗಿರಬಹುದು.

Best Mobiles in India

English summary
The telecom ministry in a presentation today shared mobile data tariff in the country has reduced by 93 percent in last four years. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X