Subscribe to Gizbot

ಈ ಹಳೇಯ ಆಪಲ್ ಶೂಗೆ ಐಪೋನಿಗಿಂತಲೂ ಹೆಚ್ಚು ಬೆಲೆ..!!!

Written By:

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಆಪಲ್ ತಯಾರಿಸುವ ಐಫೋನ್‌ಗಳ ಬೆಲೆಯೂ ಎಂದಿಗೂ ಅಧಿಕಾವಾಗಿಯೇ ಇರಲಿದೆ. ಕಾರಣ ಆಪಲ್ ತನ್ನ ಫೋನ್‌ ಗುಣಮಟ್ಟದಲ್ಲಿ ಯಾವುದೇ ರಾಜಿಯನ್ನು ಮಾಡಿಕೊಳ್ಳುವುದಿಲ್ಲ ಮತ್ತು ತನ್ನ ಬಳಕೆದಾರರಿಗೆ ಬೆಸ್ಟ್ ಫಿಚರ್ ಗಳನ್ನು ನೀಡಲು ಮುಂದಾಗುವ ಕಾರಣದಿಂದ ಬೆಲೆ ಅಧಿಕವಾಗಿರಲಿದೆ.

ಈ ಹಳೇಯ ಆಪಲ್ ಶೂಗೆ ಐಪೋನಿಗಿಂತಲೂ ಹೆಚ್ಚು ಬೆಲೆ..!!!

ಓದಿರಿ: ಸೋನಿ ಏಕ್ಸ್ಪೀರಿಯಾ XZ ಪ್ರೀಮಿಯಮ್ ಫಸ್ಟ್ ಲುಕ್ ವಿಡಿಯೋ..!!

ಸದ್ಯ 20ಕ್ಕೂ ಹೆಚ್ಚು ವರ್ಷಗಳ ಹಿಂದೆ ಬಿಡುಗಡೆಗೊಂಡಿದ್ದ ಆಪಲ್ ಶೂಗಳು ಇಂದು ಮತ್ತೆ ಮಾರುಕಟ್ಟೆಗೆ ಬಂದಿದೆ. ಅಲ್ಲದೇ ಆನ್‌ಲೈನಿನಲ್ಲಿ ಬಿಡ್‌ಗೆ ಬಂದಿದೆ. 1980ರಲ್ಲಿ ಆಪಲ್ ಬ್ರಾಂಡ್‌ನಲ್ಲಿ ಫ್ಯಾಷನ್ ಉಡುಪುಗಳು ಮಾರುಕಟ್ಟೆಗೆ ಬಂದಿದ್ದವು ಆದರೆ ನಂತರ ಮುಂದುವರೆಯಲಿಲ್ಲ. ಈ ಹಿನ್ನಲೆಯಲ್ಲಿ ಈ ಹಳೇಯ ಶೂಗಳು ಲಕ್ಷ ಲಕ್ಷಕ್ಕೇ ಬಿಡ್ ಆಗುತ್ತಿದೆ.

ಐಫೋನ್, ಐಪ್ಯಾಡ್, ಮ್ಯಾಕ್ ಬುಕ್, ಐಪೋಡ್ ಗಳ ಮಾದರಿಯಲ್ಲೇ ಈ ಆಪಲ್ ಶೂ ವನ್ನು ತನ್ನದಾಗಿಸಿಕೊಳ್ಳಲು ಆಪಲ್ ಅಭಿಮಾನಿಗಳು ಮುಂದಾಗಿದ್ದು, ಈ 20 ವರ್ಷಕ್ಕೂ ಹಳೇಯ ಶೂಗೆ 9.6ಲಕ್ಷ ಮೂಲ ಬೆಲೆಯೊಂದಿಗೆ ಬಿಡ್ ಆರಂಭವಾಗಲಿದೆ.

ಈ ಹಳೇಯ ಆಪಲ್ ಶೂಗೆ ಐಪೋನಿಗಿಂತಲೂ ಹೆಚ್ಚು ಬೆಲೆ..!!!

ಓದಿರಿ: ಈ ಸ್ಟೋರಿ ನೋಡಿದ ಮೇಲೆ ನೀವು ಉಬರ್ ಬುಕ್ ಮಾಡೋದು ಡೌಟ್..!!!

ಈ ಶೂ ಅನ್ನು ಆಪಲ್ ತಯಾರಿಸಿದ್ದು, ಬಿಳಿ ಬಣ್ಣದಲ್ಲಿರುವ ಶೂನ ಮೇಲೆ ಕಾಮನಬಿಲ್ಲಿನ ಬಣ್ಣದಲ್ಲಿ ಆಪಲ್ ಲೋಗೊವನ್ನು ಕಾಣಬಹುದಾಗಿದೆ. ಈ ಶೂಗಳು ಎಂದಿಗೂ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿಲ್ಲ. ಕೇವಲ ಕಂಪನಿ ಎಂಪ್ಲಾಯಿಗಳಿಗೆ ಮಾತ್ರವೇ ನೀಡಲಾಗಿತ್ತು. ಸದ್ಯ ಮಾರುಕಟ್ಟೆಯಲ್ಲಿ ಬಿಡ್ ಆಗುತ್ತಿರುವ ಈ ಶೂ 30 ಲಕ್ಷಕ್ಕೂ ಹೆಚ್ಚಿನ ಬೆಲೆಗೆ ಮಾರಾಟವಾಗು ಸಾಧ್ಯತೆಗಳಿದೆ.

Read more about:
English summary
Fashion clearly was the wearables of the 1980s. For the uninitiated, there was a time when Apple dabbled in Fashion and had not one or two but a whole range of clothing and accessories under its brand. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot