ಕ್ರೂರ ವಿಡಿಯೋ ಗೇಮ್‌ ಆಡುವ ಮಕ್ಕಳ ಮನಸ್ಸು ಅಪಾಯದಲ್ಲಿದೆ!

|

ಪಬ್‌ಜಿಯಂತಹ ಗೇಮ್‌ಗಳಿಗೆ ಮಕ್ಕಳು ಅಡಿಕ್ಟ್ ಆಗುತ್ತಿರುವ ಈ ಸಮಯದಲ್ಲೇ, ಜಾಮಾ ನೆಟ್ ವರ್ಕ್ ಓಪನ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನವೊಂದು ಮಕ್ಕಳ ಮೇಲೆ ವಿಡಿಯೋ ಗೇಮ್‌ಗಳು ಬೀರುತ್ತಿರುವ ನಕಾರಾತ್ಮಕ ಪರಿಣಾಮಳ ಬಗ್ಗೆ ತಿಳಿಸಿದೆ. ವಿಡಿಯೊ ಗೇಮ್ ದಾಸರಾಗುವುದರಿಂದ ಮಕ್ಕಳ ವರ್ತನೆ ನಕಾರಾತ್ಮಕವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಹೌದು, ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಬಹುಬೇಗನೆ ವಿಡಿಯೊ ಗೇಮ್ ಗಳಿಗೆ ಮನಸೋಲುತ್ತಿದ್ದಾರೆ. ಅದರಲ್ಲೂ ಕೆಲವು ಹಿಂಸಾತ್ಮಕ ವಿಡಿಯೋ ಗೇಮ್‌ಗಳು ಅವರನ್ನು ಹೆಚ್ಚು ಸೆಳೆಯುತ್ತಿವೆ. ಹಾಗಾಗಿ, 8 ರಿಂದ 12 ವರ್ಷದೊಳಗಿನ ಮಕ್ಕಳ ಮೇಲೆ ಸಂಶೋಧಕರು ಅಧ್ಯಯನವನ್ನು ನಡೆಸಿ ಅವರ ಮೇಲಾಗುತ್ತಿರುವ ವರ್ತನೆಗಳು ಯಾವುವು ಎಂಬುದನ್ನು ತಿಳಿಸಿದ್ದಾರೆ.

ಕ್ರೂರ ವಿಡಿಯೋ ಗೇಮ್‌ ಆಡುವ ಮಕ್ಕಳ ಮನಸ್ಸು ಅಪಾಯದಲ್ಲಿದೆ!

ಈ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ 8 ರಿಂದ 12 ವರ್ಷದೊಳಗಿನ 220 ಮಕ್ಕಳ ಮಕ್ಕಳಿಗೆ ಮೈನ್ ಗ್ರಾಫ್ಟ್ ಗೇಮ್‌ನ ಮೂರು ವಿವಿಧ ಆವೃತ್ತಿಗಳನ್ನು ಆಡಲು ಸಂಶೋಧಕ ನೀಡಿದರು. ಗೇಮ್ ಅನ್ನು ಮೂರು ಆವೃತ್ತಿಗಳಾಗಿ ವಿಂಗಡಿಲಾಗಿತ್ತು. ಕ್ರೂರ, ಹೆಚ್ಚು ಕ್ರೂರವಲ್ಲದ ಹಾಗೂ ಸೌಮ್ಯವಾಗಿ ಆಡಬಹುದಾದ ರೀತಿಯಲ್ಲಿ ಮಕ್ಕಳಿಗೆ ಗೇಮ್ ಆಡಲು ಅವಕಾಶ ನೀಡಲಾಗಿತ್ತು.

ಈ ಗೇಮ್ ಅನ್ನು ಮಕ್ಕಳು 20 ನಿಮಿಷ ಆಟವಾಡಿದ ನಂತರ, ಮತ್ತೊಂದು ಕೋಣೆಯಲ್ಲಿ ಬೇರೆ ಆಟದ ಸಾಮಾನುಗಳಲ್ಲಿ ಆಟವಾಡಿದ ಮಕ್ಕಳ ಜೊತೆಗೆ ಹೋಲಿಕೆ ಮಾಡಲಾಯಿತು. ಗನ್ ಗಳನ್ನು ಬಳಸಿ ವಿಡಿಯೊ ಗೇಮ್ ಆಟವಾಡಿದ 76 ಮಕ್ಕಳಲ್ಲಿ ಸುಮಾರು ಶೇಕಡಾ 62ರಷ್ಟು ಮಕ್ಕಳು ಆಟದ ಬಳಿಕ ಸಂಶೋಧಕರು ಪರೀಕ್ಷಿಸಲೆಂದು ಇಟ್ಟಿದ್ದ ಹ್ಯಾಂಡ್ ಗನ್ಗಳನ್ನು ಮುಟ್ಟಿದ್ದರು.

ಇನ್ನು ಹೆಚ್ಚು ಕ್ರೂರವಲ್ಲದ ಗದೆಯಲ್ಲಿ ಗೇಮ್ ಆಟವಾಡಿದ ಸುಮಾರು ಶೇಕಡಾ 57ರಷ್ಟು ಮಕ್ಕಳು ಸಹ ಗನ್‌ಗಳನ್ನು ಮುಟ್ಟಿದ್ದರು. ಆದರೆ, ಯಾವುದೇ ಗನ್, ಗದೆ ಇಲ್ಲದೆ ಅಕ್ರೂರವಾಗಿ ಗೇಮ್ ಆಡಿದ ಸುಮಾರು ಶೇಕಡಾ 44ರಷ್ಟು ಮಕ್ಕಳು ಗನ್‌ಗಳನ್ನು ಮುಟ್ಟಿದ್ದರು. ಅಂದರೆ ಗನ್, ಗದೆಯಲ್ಲಿ ಗೇಮ್ ಆಡಿದ ಮಕ್ಕಳು ಹೆಚ್ಚು ಹ್ಯಾಂಡ್ ಗನ್‌ಗಳ ಬಗ್ಗೆ ಆಕರ್ಷಿತರಾಗಿದ್ದರು.

ಕ್ರೂರ ವಿಡಿಯೋ ಗೇಮ್‌ ಆಡುವ ಮಕ್ಕಳ ಮನಸ್ಸು ಅಪಾಯದಲ್ಲಿದೆ!

ಓದಿರಿ: ತನಗೇ ಗೊತ್ತಿಲ್ಲದೆ ಆತ 11.5 ಲಕ್ಷ ರೂ. ಕಳೆದುಕೊಂಡ!..ಹೇಗೆ ಗೊತ್ತಾ?!

ಈ ಅಧ್ಯಯನದಲ್ಲಿ ಹಿಂಸಾತ್ಮಕ ಗೇಮ್‌ಗಳಿಂದ ಮಕ್ಕಳ ಮೇಲಾಗುವ ವಿಶಿಷ್ಟವಾದ ಆಕ್ರಮಣಶೀಲತೆ, ಬಂದೂಕುಗಳ ಕಡೆಗೆ ಮಕ್ಕಳ ವರ್ತನೆಗಳು, ಮಕ್ಕಳ ಮನೆಯಲ್ಲಿ ಬಂದೂಕುಗಳಿರುವ ಬಗ್ಗೆ ಹಾಗೂಬಂದೂಕುಗಳ ಮೇಲಿನ ಆಸಕ್ತಿ ಮತ್ತು ಮಗು ಬಂದೂಕು ಬಳಸುವಾಗ ತೆಗೆದುಕೊಳ್ಳುತ್ತಿದ್ದ ಕಾಳಜಿಗಳೆಲ್ಲವೂ ಅಧ್ಯಯನಕಾರರಿಗೆ ಕಂಡುಬಂದವು ಎಂದು ಅಧ್ಯಯನವು ತಿಳಿಸಿದೆ.

Best Mobiles in India

English summary
Violent Video Games Dangerous for Children. The study examined the effects of video games with weapons on children's behaviour when they found a gun in real life. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X