ಕೆಲವೇ ಸೆಕೆಂಡುಗಳಲ್ಲಿ ನುಜ್ಜು ಗುಜ್ಜಾದ 'ಲ್ಯಾಂಬೋರ್ಗಿನಿ' ಕಾರು!.ವೈರಲ್‌ ಆಯ್ತು ವಿಡಿಯೋ!

|

ಪ್ರಸ್ತುತ ಸಾಮಾಜಿಕ ಜಾಲತಾಣಗಳು ಪ್ರಮುಖ ಸಂವಹನ ಮಾಧ್ಯಮಗಳಾಗಿ ಗುರುತಿಸಿಕೊಂಡಿದ್ದು, ಪ್ರಪಂಚದ ಯಾವುದೇ ಮೂಲೆಯಲ್ಲಿ ನಡೆಯುವ ಎಷ್ಟೋ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹುಬೇಗನೇ ಹರಿದಾಡುತ್ತವೆ. ಇದೀಗ ಅಂತಹದೇ ಆದ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ನೋಡುಗರ ಎದೆ ಝಲ್ ಎನಿಸುವಂತಿದೆ.

 ನುಜ್ಜು ಗುಜ್ಜಾದ 'ಲ್ಯಾಂಬೋರ್ಗಿನಿ' ಕಾರು! ವೈರಲ್‌ ಆಯ್ತು ವಿಡಿಯೋ!

ಹೌದು, ಲ್ಯಾಂಬೋರ್ಗಿನಿ ಹರಾಕನ್ ಪರ್ಫಾರ್ಮೆಂಟ್ ಕಾರು ಅಪಘಾತದವಾದ ವಿಡಿಯೊ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದ್ದು, ಆದರೆ ಈ ಅಪಘಾತದಲ್ಲಿ ಅದೃಷ್ಟವಶಾತ್ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಲಂಡನಿನ ಆಕ್ಟಾನ್ ಪ್ರದೇಶದಲ್ಲಿರುವ ಕಾರು ಶೋರೂಮ್‌ ಹತ್ತಿರ ಭಾನುವಾರ ಈ ಘಟನೆ ನಡೆದಿದೆ.

 ನುಜ್ಜು ಗುಜ್ಜಾದ 'ಲ್ಯಾಂಬೋರ್ಗಿನಿ' ಕಾರು! ವೈರಲ್‌ ಆಯ್ತು ವಿಡಿಯೋ!

ವ್ಯಕ್ತಿಯೊಬ್ಬ ಸುಮಾರು 2.28 ಕೋಟಿ ರೂ. ಬೆಲೆಯ ಹೊಸ ಗ್ರೇ ಬಣ್ಣದ ಲ್ಯಾಂಬೋರ್ಗಿನಿ ಹರಾಕನ್ ಪರ್ಫಾರ್ಮೆಂಟ್ ಸ್ಪೋರ್ಟ್ಸ್‌ ಕಾರುನ್ನು ಖರೀದಿಸಿದ್ದು, ಆ ಹೊಸ ಕಾರನ್ನು ಹೊರ ತಂದ ಕೆಲವೇ ಸೆಕೆಂಡುಗಳಲ್ಲಿ ಅದು ಅಪಘಾತವಾಗಿ ಸಂಪೂರ್ಣ ನುಜ್ಜು ಗುಜ್ಜಾಗಿದೆ. ದುಬಾರಿ ಬೆಲೆಯ ಕಾರ ಅಪಘಾತವಾಗಿರುವುದರಿಂದ ಮಾಲೀಕ ಕಣ್ಣೀರು ಹಾಕಿದ್ದಾನೆ. ಆದರೆ ಕಾರು ಚಾಲನೆ ಮಾಡಿದ ವ್ಯಕ್ತಿ ಪ್ರಾಣಹಾನಿಯಿಂದ ಪಾರಾಗಿದ್ದಾನೆ. ಚಿಕ್ಕ ಪುಟ್ಟ ಗಾಯಗಳಾಗಿವೆ. ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿದ್ದು, ಸಂಪೂರ್ಣ ನುಜ್ಜು ಗುಜ್ಜಾಗಿದೆ.

 ನುಜ್ಜು ಗುಜ್ಜಾದ 'ಲ್ಯಾಂಬೋರ್ಗಿನಿ' ಕಾರು! ವೈರಲ್‌ ಆಯ್ತು ವಿಡಿಯೋ!

ಖರೀದಿಸಿದ ಹೊಸ ಕಾರನ್ನು ಹೊರಗಡೆ ತಂದು ಚಲಿಸುವ ವೇಳೆ ಚಾಲಕ ಸ್ವಲ್ಪ ಮುಂದೆ ಕಾರನ್ನು ಚಲಿಸಿ ವೇಗವಾಗಿ ತಿರುಗಿಸುವ ಸ್ಟಂಟ್ ಮಾಡಲು ಪ್ರಯತ್ನಿಸಿದ್ದು, ಆ ವೇಳೆ ನಿಯಂತ್ರಣ ತಪ್ಪಿ ಕಾರು ಮೊದಲು ಮರಕ್ಕೆ ಡಿಕ್ಕಿ ಹೊಡೆದಿದ್ದು, ನಂತರ ಮುಂದಿದ್ದ ಗೋಡೆಗೆ ಡಿಕ್ಕಿ ಹೊಡೆದಿರುವ ದೃಶ್ಯಗಳು ಇನ್‌ಸ್ಟಾಗ್ರಾಂ ಮತ್ತು ಯುಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಚಾಲಕ ಸ್ಟಂಟ್ ಮಾಡಲು ಹೋಗಿ ನಿಯಂತ್ರಣ ತಪ್ಪಿರುವುದರಿಂದ ಇಂಥಹ ಅನಾಹುತ ನಡೆದಿದ್ದು, ಅಪಘಾತದಲ್ಲಿ ಕಾರು ವೇಗವಾಗಿ ಮರಕ್ಕೆ ಡಿಕ್ಕಿ ಹೊಡೆದಿರುವುದರಿಂದ ಕಾರಿನ ಮುಂಭಾಗದ ಬಾನೆಟ್‌ ಸೇರಿದಂತೆ ಬಹುಭಾಗ ಹಾಳಾಗಿ ಹೋಗಿದೆ.

Best Mobiles in India

English summary
Viral video: Driver wrecks Lamborghini after slamming it into wall.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X