Home
ಸುದ್ದಿಜಾಲ

ವಿಶ್ವ ಕ್ರಿಕೆಟ್ ಜಗತ್ತಿನಲ್ಲೇ ವಿಶೇಷ ದಾಖಲೆ ನಿರ್ಮಿಸಿದ 'ವಿರಾಟ್ ಕೊಹ್ಲಿ'!

2019ನೇ ಕ್ರಿಕೆಟ್ ವಿಶ್ವಕಪ್ ಗೆಲ್ಲಲು ಇಂಗ್ಲೇಂಡ್‌ಗೆ ತೆರಳುವ ಮುನ್ನವೇ ಭಾರತ ಕ್ರಿಕೆಟ್ ತಂಡ ನಾಯಕ ವಿರಾಟ್ ಕೊಹ್ಲಿ ಅವರು ಮತ್ತೊಂದು ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ಒಂದೊಂದೇ ದಾಖಲೆಗಳನ್ನು ಸೃಷ್ಟಿಸುತ್ತಿರುವ ವಿರಾಟ್ ಕೊಹ್ಲಿ ಅವರು, ಈ ಮಧ್ಯೆ ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಬರೋಬ್ಬರಿ 10 ಕೋಟಿ ಹಿಂಬಾಲಕರನ್ನು ಹೊಂದುವ ಮೂಲಕ ವಿಶ್ವ ಕ್ರಿಕೆಟ್ ಜಗತ್ತಿನಲ್ಲಿ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಹೌದು, ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಅಭಿಮಾನಿಗಳನ್ನು ಕ್ಲೀನ್ ಬೌಲ್ಡ್ ಮಾಡಿದ್ದು, ವಿಶ್ವದ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಒಟ್ಟಾರೆ 100 ಮಿಲಿಯನ್ (10 ಕೋಟಿ)ಗೂ ಹೆಚ್ಚು ಹಿಂಬಾಲಕರನ್ನು ಪಡೆದಿದ್ದಾರೆ. ಇದು ಕ್ರಿಕೆಟ್ ಜಗತ್ತಿನಲ್ಲೇ ಹೆಚ್ಚು ಎಂದು ಮಾಧ್ಯಮಗಳು ವರದಿ ಮಾಡಿದ್ದು, ಇಂತಹ ದಾಖಲೆ ಮಾಡಿದ ವಿಶ್ವದ ಮೊಟ್ಟ ಮೊದಲ ಕ್ರಿಕೆಟಿಗ ವಿರಾಟ್ ಕೊಹ್ಲಿ ಎಂಬುದನ್ನು ಸಹ ಬಣ್ಣಿಸಿವೆ.

ವಿಶ್ವ ಕ್ರಿಕೆಟ್ ಜಗತ್ತಿನಲ್ಲೇ ವಿಶೇಷ ದಾಖಲೆ ನಿರ್ಮಿಸಿದ 'ವಿರಾಟ್ ಕೊಹ್ಲಿ'!

ಇನ್‍ಸ್ಟಾಗ್ರಾಂನಲ್ಲಿ 33.6 ಮಿಲಿಯನ್ (3.36 ಕೋಟಿ), ಫೇಸ್‌ಬುಕ್ ನಲ್ಲಿ 37 ಮಿಲಿಯನ್ (3.7 ಕೋಟಿ) ಹಾಗೂ ಟ್ಟಿಟ್ಟರ್‌ನಲ್ಲಿ ಒಟ್ಟು 29.5 ಮಿಲಿಯನ್ (2.95 ಕೋಟಿ)ಗೂ ಹೆಚ್ಚು ಫಾಸೋವರ್ಸ್ ಹೊಂದುವ ಮೂಲಕ ವಿರಾಟ್ ಕೊಹ್ಲಿ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ವಿಶ್ವದಾದ್ಯಂತ ಫುಟ್‌ಬಾಲ್ ಮತ್ತು ಟೆನಿಸ್‌ನಂತೆ ಕ್ರಿಕೆಟ್‌ ಅಷ್ಟೇನೂ ಅಭಿಮಾನಿಗಳನ್ನು ಹೊಂದಿಲ್ಲದಿದ್ದರೂ ಸಹ ವಿರಾಟ್ ಕೊಹ್ಲಿ ಅವರ ಈ ಸಾಧನೆ ಇನ್ನಷ್ಟು ವಿಶೇಷವಾಗಿದೆ ಎಂದು ಹೇಳಲಾಗಿದೆ.

ಇನ್ನು ವಿರಾಟ್ ಕೊಹ್ಲಿ ಅವರು ಇನ್‍ಸ್ಟಾಗ್ರಾಂನ ಒಂದು ಜಾಹಿರಾತು ಪೋಸ್ಟ್ ಗೆ ದುಬಾರಿ ಸಂಭಾವನೆ ಪಡೆಯುತ್ತಿರುವ ಕ್ರಿಕೆಟಿಗ ಎಂಬುದರ ಬಗ್ಗೆ ಕೂಡ ಮಾಧ್ಯಮಗಳು ಮಾಹಿತಿ ನೀಡಿವೆ. ವಿರಾಟ್ ಕೊಹ್ಲಿ ಅವರು ಇನ್‍ಸ್ಟಾಗ್ರಾಂನ ಒಂದು ಜಾಹಿರಾತು ಪೋಸ್ಟ್ ಗೆ ಸುಮಾರು 83 ಲಕ್ಷ ರೂಪಾಯಿ ಪಡೆಯುತ್ತಿರುವ ಬಗ್ಗೆ ಮಾದ್ಯಮಗಳು ವರದಿ ಮಾಡಿವೆ. ಇದು ಕ್ರಿಕೆಟ್ ಲೋಕದ ಸೆಬ್ರಿಟಿ ಓರ್ವರು ಪಡೆಯುತ್ತಿರುವ ದುಬಾರಿ ಮೊತ್ತ ಎಂಬುದನ್ನು ಸಹ ವರದಿಗಳು ಹೇಳಿವೆ.

ವಿಶ್ವ ಕ್ರಿಕೆಟ್ ಜಗತ್ತಿನಲ್ಲೇ ವಿಶೇಷ ದಾಖಲೆ ನಿರ್ಮಿಸಿದ 'ವಿರಾಟ್ ಕೊಹ್ಲಿ'!

ಕೊಹ್ಲಿಯ ಈ ಅಭೂತಪೂರ್ವ ಅಭಿಮಾನಿಗಳ ಫಾಲೋಯಿಂಗ್ ನಿಂದಾಗಿಯೇ ಅವರು ಜಾಹಿರಾತು ಸಂಸ್ಥೆಗಳ ಕಣ್ಣುಕುಕ್ಕುತ್ತಿದ್ದು, ಇದೇ ಕಾರಣಕ್ಕೆ ಅವರಿಗೆ ಕೋಟಿ ಕೋಟಿ ಹಣ ನೀಡಿ ಜಾಹಿರಾತು ಸಂಸ್ಥೆಗಳು ಜಾಹಿರಾತುಗಳಲ್ಲಿ ಬಳಸಿಕೊಳ್ಳುತ್ತಿವೆ.ಪ್ರಮುಖವಾಗಿ ಟೀಂ ಇಂಡಿಯಾ ನಾಯಕತ್ವ ವಹಿಸಿಕೊಂಡ ಬಳಿಕ ಕೊಹ್ಲಿ ಫಾಲೋವರ್ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇದರೊಂದಿಗೆ ಸತತ ಸರಣಿ ಜಯಗಳೂ ಕೂಡ ಅವರ ಫಾಲೋಯಿಂಗ್ ಹೆಚ್ಚಾಗಲು ಕಾರಣವಿರಬಹುದು.

ಓದಿರಿ: ಮಕ್ಕಳಿಗೆ ಮೊಬೈಲ್ ಕೊಡುವ ಪೋಷಕರನ್ನೇ ಬೆಚ್ಚಿಬೀಳಿಸಿದ ಆ ಒಂದು ಪತ್ರ!

Best Mobiles in India

English summary
Virat Kohli accomplishes yet another milestone; becomes first ever cricketer with 100 million social media followers. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+