ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ವಿರಾಟ್‌ ಕೊಹ್ಲಿ ಗೇಮ್‌ ಟಾಪ್‌

By Suneel
|

ಭಾರತದ ಅಂತರರಾಷ್ಟ್ರೀಯ ಕ್ರಿಕೆಟಿಗ 'ವಿರಾಟ್‌ ಕೊಹ್ಲಿ' ರವರ ಡಿಜಿಟಲ್‌ ಪಾಪುಲಾರಿಟಿ ಈಗ ಮತ್ತೊಂದು ಹೆಜ್ಜೆ ಅಧಿಕೃತವಾಗಿ ಮುಂದೆ ಸಾಗುತ್ತಿದೆ. ಅದು ಹೇಗೆ ಅಂತಿರಾ ? ವಿರಾಟ್‌ ಕೊಹ್ಲಿ ರವರ ಮೊಬೈಲ್‌ ಗೇಮ್‌ ಒಂದು 'ಗೂಗಲ್‌ ಪ್ಲೇ'ನಲ್ಲಿ ನಿರಂತರವಾಗಿ ಡೌನ್‌ಲೋಡ್ ಆಗುತ್ತಿದೆ. ವಿರಾಟ್‌ ಕೊಹ್ಲಿ ಯವರ ಮೊಬೈಲ್‌ ಗೇಮ್‌ ಹೆಸರು "ವಿರಾಟ್‌ ಕ್ರಿಕೆಟ್ ಚಾಲೆಂಜ್‌" (Virat Cricket Challenge). ಆಶ್ಚರ್ಯಕರ ವಿಷಯ ಅಂದ್ರೆ ಈ ಗೇಮ್‌ ಎಲ್ಲರ ಜನಪ್ರಿಯ ಗೇಮ್‌ "ಕ್ಯಾಂಡಿಕ್ರಶ್ ಮತ್ತು ಟೆಂಪಲ್‌ ರನ್‌" ಆಪ್‌ಗಳಿಗಿಂತಲು ಅಧಿಕವಾಗಿ 'ವಿರಾಟ್‌ ಕ್ರಿಕೆಟ್‌ ಚಾಲೆಂಜ್‌' ಗೇಮ್‌ ಆಪ್‌ ಗೂಗಲ್‌ ಪ್ಲೇನಲ್ಲಿ ಡೌನ್‌ಲೋಡ್‌ ಆಗಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಈ ಲೇಖನದ ಸ್ಲೈಡರ್‌ನಲ್ಲಿ ತಿಳಿಯರಿ.

ಓದಿರಿ: ಆಪ್‌ಗಳ ಆಟೋ ಅಪ್‌ಡೇಟ್‌ ಸ್ಟಾಪ್ : ಫೋನ್‌ ವೇಗ ಹೆಚ್ಚಳ

ವಿರಾಟ್‌ ಕ್ರಿಕೆಟ್‌ ಚಾಲೆಂಜ್‌

ವಿರಾಟ್‌ ಕ್ರಿಕೆಟ್‌ ಚಾಲೆಂಜ್‌

ಭಾರತದ ಅಂತರರಾಷ್ಟ್ರೀಯ ಕ್ರಿಕೆಟಿಗ ಹಾಗೂ ಭಾರತ ಟೆಸ್ಟ್‌ ಕ್ರಿಕೆಟ್‌ ನಾಯಕ ವಿರಾಟ್‌ ಕೊಹ್ಲಿ ಯವರ ಮೊಬೈಲ್‌ ಅಪ್ಲಿಕೇಶನ್‌ "ವಿರಾಟ್‌ ಕ್ರಿಕೆಟ್ ಚಾಲೆಂಜ್‌" ವಿರಾಟ್‌ಗೆ ಈಗ ಇನ್ನಷ್ಟು ಡಿಜಿಟಲ್‌ ಪಾಪುಲಾರಿಟಿ ತರುತ್ತಿದೆ.

 #ViratCriketChallenge

#ViratCriketChallenge

ಗೂಗಲ್‌ ಬಿಡುಗಡೆ ಮಾಡಿದ 2015ರ ಟಾಪ್‌ ಗೂಗಲ್‌ ಸರ್ಚ್‌ ಕ್ರಿಡಾಪಟು ಹೆಸರುಗಳ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ವಿರಾಟ್‌ ಮೊಬೈಲ್‌ ಗೇಮ್‌

ವಿರಾಟ್‌ ಮೊಬೈಲ್‌ ಗೇಮ್‌

ಡಿಜಿಟಲ್‌ ಪಾಪುಲಾರಿಟಿ ಧೋನಿಗಿಂತ ಹೆಚ್ಚಾಗಿದ್ದು, ಇವರ ಕುರಿತ ಮೊಬೈಲ್‌ ಗೇಮ್‌ ಆಪ್‌ ಗೂಗಲ್‌ ಪ್ಲೇ ಚಾರ್ಟ್‌ನಲ್ಲಿ ಇತರೆ ಎಲ್ಲಾ ಗೇಮ್‌ ಆಪ್‌ಗಳನ್ನು ಹಿಂದಿಕ್ಕಿ ಟಾಪ್‌ನಲ್ಲಿದೆ.

ವಿರಾಟ್‌ ಕ್ರಿಕೆಟ್‌ ಚಾಲೆಂಜ್‌

ವಿರಾಟ್‌ ಕ್ರಿಕೆಟ್‌ ಚಾಲೆಂಜ್‌

ವಿರಾಟ್‌ ಕುರಿತ ಈ ಮೊಬೈಲ್‌ ಗೇಮ್‌ ಆಪ್‌ ಅನ್ನು Nazara Games ಅಭಿವೃದ್ದಿ ಪಡಿಸಿ ಡಿಸೆಂಬರ್‌ 14 ರಂದು ಪ್ರಕಟಗೊಳಿಸಿದ್ದಾರೆ.

 ವಿರಾಟ್‌ ಕ್ರಿಕೆಟ್‌ ಚಾಲೆಂಜ್‌

ವಿರಾಟ್‌ ಕ್ರಿಕೆಟ್‌ ಚಾಲೆಂಜ್‌

ಅಪ್ಲಿಕೇಶನ್‌ ಲಾಂಚ್‌ ಆದ ನಂತರದಲ್ಲಿ ಇದು ಗೂಗಲ್‌ ಪ್ಲೇ ನಲ್ಲಿ ಬಹುಬೇಗ ಅಧಿಕವಾಗಿ ಡೌನ್‌ಲೋಡ್‌ ಆದ ಗೇಮ್‌ ಆಗಿದೆ. ಅಲ್ಲದೇ ತನ್ನ ಅಭಿಮಾನಿಗಳಿಗೆ ವಿರಾಟ್‌ ಕೊಹ್ಲಿ ಜನಪ್ರಿಯತೆಯನ್ನು ತೋರಿಸಲು ಇದು ವೇದಿಕೆಯು ಆಗಿದೆ.

ವಿರಾಟ್‌ ಕ್ರಿಕೆಟ್‌ ಚಾಲೆಂಜ್‌

ವಿರಾಟ್‌ ಕ್ರಿಕೆಟ್‌ ಚಾಲೆಂಜ್‌

ಭಾರತದ ಗೇಮ್‌ಗಳಲ್ಲಿ ಹೆಚ್ಚು ಜನಪ್ರಿಯ ಗೇಮ್‌ ಮೊಟ್ಟಮೊದಲ ಬಾರಿಗೆ ವಿರಾಟ್‌ರ ಗೇಮ್‌ ಎನ್ನಲಾಗಿದೆ. ವಿರಾಟ್‌ ಕ್ರಿಕೆಟ್ ಚಾಲೆಂಜ್‌ ಗೇಮ್‌, ಇತರೆ ಗೇಮ್‌ಗಳಾದ ಕ್ಯಾಂಡಿ ಕ್ರಶ್‌, ಟೆಂಪಲ್ ರನ್‌, ಕ್ಲಾಶ್‌ ಆಫ್‌ ಕ್ಲಾನ್ಸ್‌, ಸಬ್‌ವೇಸರ್ಫರ್ಸ್‌ಗಳನ್ನು ಗೂಗಲ್‌ ಪ್ಲೇ ಚಾರ್ಟ್‌ನಲ್ಲಿ ಹಿಂದಿಕ್ಕಿದೆ.

Best Mobiles in India

English summary
Virat Kohli’s digital popularity continues to rise rapidly with his mobile game ‘Virat Cricket Challenge’ topping the charts on Google Play.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X