ಬಾಹ್ಯಾಕಾಶ ಪ್ರವಾಸದ ಕನಸನ್ನು ನನಸಾಗಿಸಕೊಂಡ ಉದ್ಯಮಿ ರಿಚರ್ಡ್ ಬ್ರಾನ್ಸನ್!

|

ಬ್ರಿಟನ್​ನ ಕೋಟ್ಯಧಿಪತಿ, ವರ್ಜಿನ್ ಗ್ಯಾಲಕ್ಟಿಕ್ ಗ್ರೂಪ್ ಸ್ಥಾಪಕ ರಿಚರ್ಡ್​ ಬ್ರಾನ್ಸನ್ (Richard Branson) ​​​ರ ಬಾಹ್ಯಾಕಾಶ ಪ್ರವಾಸದ ಕನಸು ನನಸಾಗಿದೆ. ಅವರದ್ದೇ ವರ್ಜಿನ್​ ಗ್ಯಾಲಕ್ಟಿಕ್ ಸ್ಪೇಸ್​ಫ್ಲೈಟ್​ ಕಂಪನಿ ತಯಾರಿಸಿದ ವಿಎಸ್​ಎಸ್​ ಯುನಿಟಿ (VSS Unity) ಗಗನ ನೌಕೆಯಲ್ಲಿ ರಿಚರ್ಡ್​ ಬ್ರಾನ್ಸನ್​ ಸೇರಿ ಒಟ್ಟು ಆರು ಮಂದಿ ಬಾಹ್ಯಾಕಾಶಕ್ಕೆ ಹಾರಿದ್ದಾರೆ. ರಾಕೆಟ್ ವಿಎಸ್ಎಸ್ ಯುನಿಟಿ -22 ಉಡಾವಣೆಯಾಗಿ ಬಾಹ್ಯಾಕಾಶ ತಲುಪಿದೆ.

ಬಾಹ್ಯಾಕಾಶ ಪ್ರವಾಸದ ಕನಸನ್ನು ನನಸಾಗಿಸಕೊಂಡ ಉದ್ಯಮಿ ರಿಚರ್ಡ್ ಬ್ರಾನ್ಸನ್!

ವರ್ಜಿನ್ ಗ್ಯಾಲಾಕ್ಟಿಕ್ ಸ್ಪೇಸ್ ರಾಕೆಟ್ ವಿಎಸ್‍ಎಸ್ ಯುನಿಟಿ-22 ಯಶಸ್ವಿಯಾಗಿ ನೆನ್ನೆ ರಾತ್ರಿ 8 ಗಂಟೆಗೆ ಉಡಾವಣೆಯಾಗಿದ್ದು, 9.20ರ ಸುಮಾರಿಗೆ ಬಾಹ್ಯಾಕಾಶ ತಲುಪಿದೆ ಎಂದು ವರ್ಜಿನ್ ಗ್ಯಾಲಾಕ್ಟಿಕ್ ಮಾಹಿತಿ ನೀಡಿದೆ ಎನ್ನಲಾಗಿದೆ. ರಿಚರ್ಡ್ ಬ್ರಾನ್ಸನ್ ಅವರೇ ಸಂಸ್ಥಾಪಿಸಿದ ವರ್ಜಿನ್​ ಗ್ಯಾಲಕ್ಟಿಕ್ (Virgin Galactic) ​ ಸ್ಪೇಸ್​ಫ್ಲೈಟ್​ ಕಂಪನಿಯೇ ತಯಾರಿಸಿದ ವಿಎಸ್​ಎಸ್​ ಯುನಿಟಿ (VSS Unity) ಗಗನ ನೌಕೆಯಲ್ಲಿ ಇಂದು ರಿಚರ್ಡ್​ ಬ್ರಾನ್ಸನ್​ ಸೇರಿ ಒಟ್ಟು ಆರು ಮಂದಿ ಬಾಹ್ಯಾಕಾಶವನ್ನು ತಲುಪಿದ್ದಾರೆ.

ಬಾಹ್ಯಾಕಾಶ ಪ್ರವಾಸದ ಕನಸನ್ನು ನನಸಾಗಿಸಕೊಂಡ ಉದ್ಯಮಿ ರಿಚರ್ಡ್ ಬ್ರಾನ್ಸನ್!

ಆರು ಯಾನಿಗಳ ಪೈಕಿ ಆಂಧ್ರ ಮೂಲದ ಸಿರೀಷಾ ಬಾಂದ್ಲಾ ಸಹ ಒಬ್ಬರಾಗಿದ್ದಾರೆ. ಆಂಧ್ರ ಪ್ರದೇಶದ ಗುಂಟೂರು ಮೂಲದ ಸಿರೀಷಾ ವರ್ಜಿನ್ ಗ್ಯಾಲಾಕ್ಟಿಕ್ ಸ್ಪೇಸ್ ನಲ್ಲಿ ಗವರ್ನ್‍ಮೆಂಟ್ ಅಫೇರ್ಸ್ ಮತ್ತು ರಿಸರ್ಚ್ ಆಪರೇಷನ್ ಉಪಾಧ್ಯಕ್ಷೆ ಆಗಿದ್ದಾರೆ.

90 ನಿಮಿಷಗಳ ಪ್ರಯಾಣ ಮುಗಿಸಿ ಅಮೆರಿಕದ ನ್ಯೂ ಮೆಕ್ಸಿಕೋ ಸ್ಪೇಸ್‍ಪಾರ್ಟ್ ನಲ್ಲಿ ಲ್ಯಾಂಡ್ ಆಗಲಿದೆ. ಇದು ವಿಎಂಎಸ್ ಇವ್ ನಿಂದ ಮೇಲಕ್ಕೆ ಅಂದ್ರೆ ಭೂಮಿಯ ಪರಿಧಿಯಿಂದ 50 ಸಾವಿರ ಅಡಿಗಳಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಲಿದೆ. ತದನಂತರ ಸ್ಪೇಸ್‍ಕ್ರಾಫ್ಟ್ ಸ್ವತಃ ಬಾಹ್ಯಾಕಾಶದತ್ತ ಚಲಿಸುತ್ತದೆ. ಅಂತರಿಕ್ಷದ ಈ ಯಾತ್ರೆ 1 ಗಂಟೆ 5 ನಿಮಿಷ ಇರಲಿದೆ. ನಂತರ ವಿಎಸ್‍ಎಸ್ ಯುನಿಟಿ ವಾಪಸ್ ಸ್ಪೇಸ್‍ಪಾರ್ಟ್ ನಲ್ಲಿ ಲ್ಯಾಂಡ್ ಆಗಲಿದೆ. ಸ್ಪೇಸ್‍ಪಾರ್ಟ್ ಲಾಂಚ್ ನಿಂದ ಲ್ಯಾಂಡಿಂಗ್ ನಡುವಿನ ಸಮಯ ಒಟ್ಟು 90 ನಿಮಿಷ.

ಬಾಹ್ಯಾಕಾಶ ಪ್ರವಾಸದ ಕನಸನ್ನು ನನಸಾಗಿಸಕೊಂಡ ಉದ್ಯಮಿ ರಿಚರ್ಡ್ ಬ್ರಾನ್ಸನ್!

ವಿಎಸ್‍ಎಸ್ ಯುನಿಟಿ ಬರೋಬ್ಬರಿ 4 ನಿಮಿಷ ಅಂತರಿಕ್ಷ ಯಾತ್ರಿಗಳಿಗೆ ಝೀರೋ ಗ್ರೆವಿಟಿಯ ಅನುಭವವಾಗುತ್ತದೆ. ರಿಚರ್ಡ್ ಜೊತೆಯಲ್ಲಿ ಚೀಫ್ ಎಸ್ಟ್ರೋನಾಟ್ ಇನ್‍ಸ್ಟ್ರಕ್ಟರರ್ ಬೆಥ್ ಮೊಸೆಸ್, ಲೀಡ್ ಆಪರೇಷನ್ ಇಂಜಿನೀಯರ್ ಕೋಲಿನ್ ಬೆನ್ನೆಟ್, ಗವರ್ನ್‍ಮೆಂಟ್ ಅಫೇರ್ಸ್ ಮತ್ತು ರಿಸರ್ಚ್ ಆಪರೇಷನ್ ಉಪಾಧ್ಯಕ್ಷೆ ಶಿರೀಷಾ ಬಾಂದ್ಲಾ ಸಹ ಪ್ರಯಾಣಿಸಿದ್ದಾರೆ.

Best Mobiles in India

English summary
Virgin Galactic Founder Richard Branson Successfully Rockets to Outer Space.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X