ಇನ್ಫೋಸಿಸ್‌ ಎಂಡಿ ವಿಶಾಲ್‌ ಸಿಕ್ಕಾ ರಾಜೀನಾಮೆ!!..ನೂತನ ಸಾರಥಿ ಇವರು?

Written By:

ಇನ್ಫೋಸಿಸ್‌ನಲ್ಲಿ ನಡೆಯುತ್ತಿದ್ದ ಹಲವು ಬೆಳವಣಿಗೆಗಳ ನಂತರ ಇನ್ಫೋಸಿಸ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗಳಿಗೆ ವಿಶಾಲ್‌ ಸಿಕ್ಕಾ ರಾಜೀನಾಮೆ ನೀಡಿದ್ದಾರೆ.!! ಈ ಬಗ್ಗೆ ಇನ್ಫೋಸಿಸ್‌ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಇನ್ಫೋಸಿಸ್‌ನ ಪ್ರಮುಖ ವಿಕೆಟ್‌ ಒಂದು ಬಿದ್ದಿದೆ.!!

ವಿಶಾಲ್‌ ಸಿಕ್ಕಾ ಅವರ ಮುಂದಾಳತ್ವದಲ್ಲಿ ಇನ್ಫೋಸಿಸ್‌ ಕಂಪನಿಯ ಕಾರ್ಪೊರೇಟ್ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಜಾಗತಿಕ ಆರ್ಥಿಕತೆಯಲ್ಲಿ ಇನ್ಫೋಸಿಸ್‌ ಗಂಭೀರ ಸ್ವರೂಪದ ಆಂತರಿಕ ಹಾಗೂ ಬಾಹ್ಯ ಸವಾಲುಗಳನ್ನು ಎದುರಿಸುತ್ತಿದೆ ಎಂದು ಇನ್ಫೋಸಿಸ್‌ ಸಂಸ್ಥಾಪಕ ಎನ್‌.ಆರ್‌. ನಾರಾಯಣ ಮೂರ್ತಿ ಇತ್ತೀಚಿಗಷ್ಟೆ ಕಳವಳ ವ್ಯಕ್ತಪಡಿಸಿದ್ದರು.!!

ಇನ್ಫೋಸಿಸ್‌ ಎಂಡಿ ವಿಶಾಲ್‌ ಸಿಕ್ಕಾ ರಾಜೀನಾಮೆ!!..ನೂತನ ಸಾರಥಿ ಇವರು?

ಇನ್ನು ಇನ್ಫೋಸಿಸ್‌ ನೂತನ ಸಾರಥಿಯಾಗಿ ಯು.ಬಿ. ಪ್ರವೀಣ್ ರಾವ್‌ ಹಂಗಾಮಿ ಅಧಿಕಾರವನ್ನು ಪಡೆದಿದ್ದಾರೆ. ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎರಡೂ ಹುದ್ದೆಗಳನ್ನು ಪ್ರವೀಣ್ ರಾವ್‌ ಅವರು ನಿರ್ವಹಿಸಲಿದ್ದಾರೆ ಎಂದು ಇನ್ಫೋಸಿಸ್‌ ತನ್ನ ಪ್ರಕಟಣೆ ಹೊರಡಿಸಿದೆ.

ಇನ್ಫೋಸಿಸ್‌ ಎಂಡಿ ವಿಶಾಲ್‌ ಸಿಕ್ಕಾ ರಾಜೀನಾಮೆ!!..ನೂತನ ಸಾರಥಿ ಇವರು?

ಇನ್ಫೋಸಿಸ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗಳಿಗೆ ರಾಜಿನಾಮೆ ನೀಡಿರುವ ಸಿಕ್ಕಾ ಅವರನ್ನು ಇನ್ಫೋಸಿಸ್‌ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ನೇಮಿಸಲಾಗಿದೆ ಎಂದು ಇನ್ಫೋಸಿಸ್‌ ಪ್ರಕಟಣೆಯಲ್ಲಿ ತಿಳಿಸಿದೆ.!

ಓದಿರಿ: ಹೊಸ ಜಿಯೋ ಸಿಮ್​ ಖರೀದಿಸಿದರೆ ಭಾರಿ ಆಫರ್...ಮತ್ತೆ ಕ್ಯಾಶ್‌ಬ್ಯಾಕ್!!

English summary
Infosys has appointed chief operating officer UB Pravin Rao as interim managing director and CEO.to know more visit to kannada.gixbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot