Home
ಸುದ್ದಿಜಾಲ

vivo: ವಿವೋದಿಂದ ಹೊಸ ಸರಣಿಯ ಫೋನ್‌! ಈ ಚೊಚ್ಚಲ ಫೋನ್ ಫೀಚರ್ಸ್ ಏನು‌, ಬೆಲೆ ಎಷ್ಟು?

ವಿವೋ (vivo) ಈಗಾಗಲೇ ಸಾಕಷ್ಟು ಸ್ಮಾರ್ಟ್‌ಫೋನ್‌ಗಳನ್ನು ವಿವಿಧ ಸರಣಿಯಲ್ಲಿ ಲಾಂಚ್‌ ಮಾಡಿದೆ. ಅದರಲ್ಲೂ ಕಳೆದ ವರ್ಷದ ಅಂತ್ಯದಿಂದ ವಿವೋ X80 ಪ್ರೊ, ವಿವೋ V25 ಪ್ರೊ 5G, ವಿವೋ T1 ಪ್ರೊ 5G, ವಿವೋ Y75 5G, ವಿವೋ Y21G ಸ್ಮಾರ್ಟ್‌ಫೋನ್‌ ಸೇರಿದಂತೆ ಅನೇಕ ಫೋನ್‌ಗಳನ್ನು ಅನಾವರಣ ಮಾಡಿದೆ. ವಿವೋ X100 ಸ್ಮಾರ್ಟ್‌ಫೋನ್‌ ಸುನಾಮಿಯನ್ನೇ ಉಂಟು ಮಾಡಿದೆ.

ಹೌದು, ವಿವೋದ ಯಾವುದೇ ಫೋನ್‌ಗಳು ಸಹ ಭಿನ್ನ ಫೀಚರ್ಸ್‌ ಆಯ್ಕೆ ಮೂಲಕ ಗ್ರಾಹಕರಿಗೆ ಇಷ್ಟ ಆಗಲಿದೆ. ಈ ನಡುವೆ ವಿವೋ ಇದೀಗ ಹೊಸ ಸರಣಿಯನ್ನೇ ಆರಂಭ ಮಾಡಲಿದ್ದು, ಈ ಸರಣಿಯ ಮೊದಲ ಫೋನ್ 90Hz ರಿಫ್ರೆಶ್‌ ರೇಟ್‌ ಆಯ್ಕೆಯ ಡಿಸ್‌ಪ್ಲೇ ಇರುವ ಹಾಗೂ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆಯ ಫೋನ್ ಅನ್ನು ಘೋಷಣೆ ಮಾಡಿದೆ. ಹಾಗಿದ್ರೆ, ಯವುದು ಈ ಸರಣಿ, ಇದರ ಬೆಲೆ ಎಷ್ಟಿರಬಹುದು, ಈ ಫೋನ್‌ ಏನೆಲ್ಲಾ ಫೀಚರ್ಸ್‌ ಪಡೆದಿದೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ವಿವೋದಿಂದ ಹೊಸ ಸರಣಿಯ ಫೋನ್‌! ಈ ಚೊಚ್ಚಲ ಫೋನ್ ಫೀಚರ್ಸ್ ಏನು‌, ಬೆಲೆ ಎಷ್ಟು?

ವಿವೋ G2: ಇದೀಗ ವಿವೋ G2 ಸ್ಮಾರ್ಟ್‌ಫೋನ್‌ (Vivo G2 smartphone) ಮೊದಲ ಸರಣಿ ವಿವೋ ಫೋನ್ ಆಗಿದೆ. ತನ್ನ ಮೊದಲ G ಸರಣಿಯ ಫೋನ್ ಅನ್ನು ಚೀನಾದ ಮಾರುಕಟ್ಟೆಯಲ್ಲಿ ಸೈಲೆಂಟ್‌ ಆಗಿ ಘೋಷಣೆ ಮಾಡಿದೆ. ಅದರಂತೆ ಕಳೆದ ವಾರ ಈ ವಿವೋ G2 ಸ್ಮಾರ್ಟ್‌ಫೋನ್‌ ಅನ್ನು ಗೂಗಲ್ ಪ್ಲೇ ಕನ್ಸೋಲ್‌ನ ಡೇಟಾಬೇಸ್‌ನಲ್ಲಿ ಗುರುತಿಸಲಾಗಿದ್ದು, ಈಗ ಅದನ್ನು ಅಧಿಕೃತವಾಗಿ ವಿವೋ ಚೀನಾ ವೆಬ್‌ಸೈಟ್‌ನಲ್ಲಿ ಲಿಸ್ಟ್‌ ಮಾಡಲಾಗಿದೆ.

ವಿವೋ G2 ಫೀಚರ್ಸ್‌: ಈ ವಿಶೇಷ ಸ್ಮಾರ್ಟ್‌ಫೋನ್ 656 ಇಂಚಿನ HD+ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಟಿಯರ್‌ಡ್ರಾಪ್ ನಾಚ್‌ ಶೈಲಿಯಲ್ಲಿ ಕಾಣಿಸಿಕೊಂಡಿದೆ. ಅಲ್ಲದೆ ಈ ಡಿಸ್‌ಪ್ಲೇ 1612 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 90Hz ರಿಫ್ರೆಶ್ ರೇಟ್‌ ಹೊಂದಿದ್ದು ಈ ಮೂಲಕ ಉತ್ತಮ ವೀಕ್ಷಣೆ ಅನುಭವ ನೀಡಲಿದೆ.

ವಿವೋ G2 ಸ್ಮಾರ್ಟ್‌ಫೋನ್ ಪ್ರೊಸೆಸರ್‌ ವಿವರ: ಈ ಫೋನ್ ಡೈಮೆನ್ಸಿಟಿ 6020 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 8 GB ವರೆಗೆ LPDDR4x RAM ಆಯ್ಕೆ ಪಡೆದಿದೆ. ಜೊತೆಗೆ ಇಂಟರ್‌ ಸ್ಟೋರೇಜ್‌ ವಿಚಾರಕ್ಕೆ ಬಂದರೆ ಈ ಫೋನ್‌ 256 GB ವರೆಗೆ UFS 2.2 ಸ್ಟೋರೇಜ್‌ ಆಯ್ಕೆ ಪಡೆದಿದೆ. ಅಲ್ಲದೆ ಹೆಚ್ಚುವರಿ ಸ್ಟೋರೇಜ್‌ ಉದ್ದೇಶಕ್ಕೆ ಮೈಕ್ರೊ ಎಸ್‌ಡಿ ಕಾರ್ಡ್‌ ಬೆಂಬಲ ಸಹ ಇದೆ. ಇನ್ನು ಈ ಡಿವೈಸ್‌ ಒರಿಜಿನ್ OS 3 ಆಧಾರಿತ ಆಂಡ್ರಾಯ್ಡ್‌ 13 ನೊಂದಿಗೆ ಕಾಣಿಸಿಕೊಂಡಿದೆ.

ವಿವೋದಿಂದ ಹೊಸ ಸರಣಿಯ ಫೋನ್‌! ಈ ಚೊಚ್ಚಲ ಫೋನ್ ಫೀಚರ್ಸ್ ಏನು‌, ಬೆಲೆ ಎಷ್ಟು?

ಈ ಸ್ಮಾರ್ಟ್‌ಫೋನ್ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದ್ದು, 13 ಮೆಗಾಪಿಕ್ಸೆಲ್ ಸಿಂಗಲ್ ಸೆನ್ಸರ್‌ ಆಯ್ಕೆಯೊಂದಿಗೆ ಎಲ್‌ಇಡಿ ಫ್ಲ್ಯಾಶ್‌ ಲೈಟ್‌ ಆಯ್ಕೆ ಹಾಗೂ ಇನ್ನಿತರೆ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಯುಎಸ್‌ಬಿ-ಸಿ ಪೋರ್ಟ್ ಹೊಂದಿದ್ದು, 15W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ.

ಇನ್ನು ಈ ಫೋನ್ ಡ್ಯುಯಲ್ ಸಿಮ್ ಬೆಂಬಲ ಪಡೆದಿದ್ದು, 5G, 5GHz Wi-Fi, ಬ್ಲೂಟೂತ್ ಆವೃತ್ತಿ 5.1, ಜಿಪಿಎಸ್‌, 3.5mm ಆಡಿಯೊ ಜ್ಯಾಕ್ ಮತ್ತು ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನಂತಹ ಇತರ ಅಗತ್ಯ ಫೀಚರ್ಸ್‌ ಆಯ್ಕೆಯನ್ನು ಈ ಫೋನ್‌ ಹೊಂದಿದೆ. ಗಮನಿಸಬೇಕಾದ ವಿಚಾರ ಏನೆಂದರೆ ಈ ಫೋನ್ ವಿವೋ Y36i ನ ಮರುಬ್ರ್ಯಾಂಡೆಡ್‌ ಆವೃತ್ತಿಯಾಗಿದೆ ಎಂದು ತೋರಿಸುತ್ತದೆ. ಈ ಫೋನ್ ಅನ್ನು ಡಿಸೆಂಬರ್ 2023 ರಲ್ಲಿ ಚೀನಾದಲ್ಲಿ ಅನಾವರಣ ಮಾಡಲಾಗಿತ್ತು.

ವಿವೋದಿಂದ ಹೊಸ ಸರಣಿಯ ಫೋನ್‌! ಈ ಚೊಚ್ಚಲ ಫೋನ್ ಫೀಚರ್ಸ್ ಏನು‌, ಬೆಲೆ ಎಷ್ಟು?

ವಿವೋ G2 ಸ್ಮಾರ್ಟ್‌ಫೋನ್ ಬೆಲೆ ಹಾಗೂ ಲಭ್ಯತೆ: ವಿವೋ G2 ನಾಲ್ಕು ವೇರಿಯಂಟ್‌ನಲ್ಲಿ ಕಾಣಿಸಿಕೊಳ್ಳಲಿದೆ. ಅಂದರೆ 4GB + 128GB, 6GB + 128GB, 8GB + 128GB, ಮತ್ತು 8GB + 256GB. ವೇರಿಯಂಟ್‌ ಫೋನ್‌ಗಳಿದ್ದು, ಇವು ಕ್ರಮವಾಗಿ 1,199 ಯುವಾನ್, 1,499 ಯುವಾನ್, 1,599 ಯುವಾನ್ ಮತ್ತು 1,899 ಯುವಾನ್ ಹೊಂದಿದ್ದು, ಡೀಪ್ ಸೀ ಬ್ಲ್ಯಾಕ್‌ ಬಣ್ಣದಲ್ಲಿ ಮಾತ್ರ ಲಭ್ಯ ಇರಲಿದೆ.

Best Mobiles in India

English summary
Vivo phones will be liked by customers through different features. Meanwhile, Vivo has just announced the Vivo G2 smartphone. This phone is powered by a 5,000mAh battery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+