Home
ಸುದ್ದಿಜಾಲ

Vivo: ವಿವೋದಿಂದ ಲಾಂಚ್‌ ಆಗಲಿದೆ ಮತ್ತೊಂದು ವಿಶೇಷ ಫೋನ್‌! ಫೀಚರ್ಸ್‌ ಏನೇನಿದೆ?

ವಿವೋ ಸ್ಮಾರ್ಟ್‌ಫೋನ್‌ಗಳು (Vivo smartphone) ಹೆಚ್ಚಿನ ಬೇಡಿಕೆ ಪಡೆಯುವ ಮೂಲಕ ಇತರೆ ಫೋನ್‌ಗಳಿಗೆ ತೀವ್ರ ಪೈಪೋಟಿ ನೀಡುತ್ತಿವೆ. ಈ ಕಾರಣಕ್ಕೆ ವಿವೋ ಕಡಿಮೆ ಅಂತರದಲ್ಲಿಯೇ ಹೊಸ ಹೊಸ ಫೋನ್‌ಗಳನ್ನು ಘೋಷಣೆ ಮಾಡಿಕೊಂಡು ಬರುತ್ತಿದ್ದು, ಈ ವಿಭಾಗದಲ್ಲಿ ವಿವೋ X100s (Vivo X100s) ಸ್ಮಾರ್ಟ್‌ಫೋನ್‌ ಬಗ್ಗೆ ಕೆಲವು ಮಾಹಿತಿ ಲೀಕ್‌ ಆಗಿವೆ.

ಹೌದು, ವಿವೋ ಇದೀಗ ವಿವೋ X100s ಸ್ಮಾರ್ಟ್‌ಫೋನ್ ಅನ್ನು ಲಾಂಚ್‌ ಮಾಡಲು ಮುಂದಾಗಿದೆ. ಈ ಸ್ಮಾರ್ಟ್‌ಫೋನ್‌ ಲಾಂಚ್‌ ಆಗುವ ಮುನ್ನವೇ ಇದರ ಕೆಲವು ಫೀಚರ್ಸ್‌ ವಿಷಯಗಳು ಟೆಕ್‌ ವಲಯದಲ್ಲಿ ಭಾರೀ ಚರ್ಚೆ ಆಗುತ್ತಿವೆ. ಹಾಗಿದ್ರೆ, ಬನ್ನಿ ಈ ಸ್ಮಾರ್ಟ್‌ಫೋನ್‌ ಯಾವ ರೇಂಜ್‌ ವಿಭಾಗದಲ್ಲಿ ಕಾಣಿಸಿಕೊಳ್ಳಲಿದೆ?, ಇದರ ಪ್ರಮುಖ ಫೀಚರ್ಸ್‌ ಏನು? ಅನ್ನೋ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ವಿವೋದಿಂದ ಲಾಂಚ್‌ ಆಗಲಿದೆ ಮತ್ತೊಂದು ವಿಶೇಷ ಫೋನ್‌! ಫೀಚರ್ಸ್‌ ಏನೇನಿದೆ?

ವಿವೋ X100s ಸ್ಮಾರ್ಟ್‌ಫೋನ್: ಉನ್ನತ ಮಟ್ಟದ ವಿಭಾಗದಲ್ಲಿ ವಿವೋ X100s ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಲು ವಿವೋ ಸಜ್ಜಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ಫೋನ್‌ ಬಗ್ಗೆ ವಿವೋ ಯಾವುದೇ ಅಧಿಕೃತ ಪ್ರಕಟಣೆಯನ್ನು ನೀಡಿಲ್ಲ. ಅದಾಗ್ಯೂ ಹೊಸ ಲೀಕ್‌ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್ ಕೆಲವು ಪ್ರಮುಖ ಫೀಚರ್ಸ್‌ ಅನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ.

ವಿವೋ X100s ಫೋನ್‌ನ ಲೀಕ್‌ ಮಾಹಿತಿ: ಚೀನೀ ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್ ಆಗಿರುವ ವೀಬೋ ನಲ್ಲಿ ಈ ಫೋನ್‌ ಬಗ್ಗೆ ಕೆಲವು ಮಾಹಿತಿಯನ್ನು ಉಲ್ಲೇಖ ಮಾಡಲಾಗಿದೆ. ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್‌ನಿಂದ ಈ ಸುದ್ದಿ ಬಂದಿದ್ದು, ವಿವೋ X100 (Vivo X100) ಲೈನ್‌ಅಪ್ ಬ್ರ್ಯಾಂಡ್‌ನ ಪ್ರೀಮಿಯಂ ದರ್ಜೆಯ ಹ್ಯಾಂಡ್‌ಸೆಟ್‌ಗಳಾಗಿದ್ದು, ವಿವೋ X100s ಸ್ಮಾರ್ಟ್‌ಫೋನ್‌ ಪ್ರವೇಶ ಮಟ್ಟದ ಫೋನ್‌ ಆಗಿರಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್‌ನ ಅತ್ಯಂತ ಶಕ್ತಿಶಾಲಿ ಡೈಮೆನ್ಸಿಟಿ ಚಿಪ್‌ಸೆಟ್ ಅನ್ನು ಹೊಂದಿರುತ್ತದೆ ಎಂದು ಟಿಪ್‌ಸ್ಟರ್ ಹೇಳಿಕೊಂಡಿದೆ.

ವಿವೋದಿಂದ ಲಾಂಚ್‌ ಆಗಲಿದೆ ಮತ್ತೊಂದು ವಿಶೇಷ ಫೋನ್‌! ಫೀಚರ್ಸ್‌ ಏನೇನಿದೆ?

ಈ ವಿವೋ X100s ಸ್ಮಾರ್ಟ್‌ಫೋನ್ 100W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎನ್ನಲಾಗಿದ್ದು, ಸುಮಾರು 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿರಲಿದೆ ಎಂದು ಹೇಳಲಾಗಿದೆ. ಇನ್ನೂ ಕೆಲವು ಲೀಕ್‌ ಮಾಹಿತಿಯನ್ನು ಗಮನಿಸುವುದಾದರೆ ಈ ಫೋನ್ ಶಾರ್ಟ್ ಫೋಕಸ್ ಆಪ್ಟಿಕಲ್ ಇನ್ ಸ್ಕ್ರೀನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಮೆಟಲ್‌ ಪ್ರೇಮ್‌ ಮತ್ತು ಗ್ಲಾಸ್‌ ರಿಯರ್‌ ಪ್ಯಾನಲ್‌ ಪಡೆದಿರಬಹುದು ಎಂದು ಉಲ್ಲೇಖಿಸಲಾಗಿದೆ.

ಲೀಕ್‌ ಮಾಹಿತಿ ಪ್ರಕಾರ ಈ ಫೋನ್ ಯಾವುದೇ ಲೆದರ್ ಬ್ಯಾಕ್ ವೇರಿಯಂಟ್ ಆಯ್ಕೆ ಪಡೆದಿಲ್ಲ ಎಂದು ತೋರುತ್ತದೆ. ಜೊತೆಗೆ ಈ ಫೋನ್‌ ಬಿಳಿ ಸೇರಿದಂತೆ ನಾಲ್ಕು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಉಳಿದಂತೆ ಇತರೆ ಎಲ್ಲಾ ಫೀಚರ್ಸ್‌ ವಿವೋ X100 ನಂತೆಯೇ ಇರಬಹುದು ಎಂದು ವರದಿಗಳಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಈ ವಿವೋ X100s ಚೀನಾದಲ್ಲಿ ಮಾರ್ಚ್ ಅಂತ್ಯದ ವೇಳೆಗೆ ವಿವೋ ಎಕ್ಸ್‌ ಫೋಲ್ಡ್ 3 ಸರಣಿ ಮತ್ತು ವಿವೋ ಪ್ಯಾಡ್‌ 3 ಸರಣಿಯೊಂದಿಗೆ ಲಾಂಚ್‌ ಆಗುವ ನಿರೀಕ್ಷೆ ಇದೆ.

ವಿವೋ Y200e 5G ಭಾರತದಲ್ಲಿ ಇಂದಿನಿಂದ ಖರೀದಿಗೆ ಲಭ್ಯ: ಫೆಬ್ರವರಿ 22 ರಂದು ಭಾರತದಲ್ಲಿ ಲಾಂಚ್‌ ಆಗಿರುವ ವಿವೋ Y200e 5G ಸ್ಮಾರ್ಟ್‌ಫೋನ್‌ (Vivo Y200e 5G smartphone) ಅನ್ನು ಇಂದಿನಿಂದ ಖರೀದಿ ಮಾಡಬಹುದಾಗಿದೆ. ಈ ಫೋನ್‌ ಫ್ಲಿಪ್‌ಕಾರ್ಟ್, ಅಮೆಜಾನ್, ವಿವೋ ಇಂಡಿಯಾದ ಆನ್‌ಲೈನ್ ಸ್ಟೋರ್ ಮತ್ತು ಆಫ್‌ಲೈನ್ ರಿಟೇಲರ್‌ ಸ್ಟೋರ್ ಮೂಲಕ ಖರೀದಿ ಮಾಡಬಹುದು ಎಂದು ವಿವೋ ಮಾಹಿತಿ ನೀಡಿದೆ.

ವಿವೋದಿಂದ ಲಾಂಚ್‌ ಆಗಲಿದೆ ಮತ್ತೊಂದು ವಿಶೇಷ ಫೋನ್‌! ಫೀಚರ್ಸ್‌ ಏನೇನಿದೆ?

ವಿವೋ Y200e 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಎರಡು ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ. ಅಂದರೆ ಒಂದು 6 GB RAM + 128 GB ಇಂಟರ್‌ ಸ್ಟೋರೇಜ್‌ ಮತ್ತೊಂದು 8 GB RAM + 128 GB ಇಂಟರ್‌ ಸ್ಟೋರೇಜ್‌ ವೇರಿಯಂಟ್‌. ಎರಡೂ ಮಾದರಿಗಳ ಬೆಲೆ ಕ್ರಮವಾಗಿ 19,999 ರೂ.ಗಳು ಹಾಗೂ 20,999 ರೂ.ಗಳಾಗಿದೆ. ಎಸ್‌ಬಿಐ, ಐಎಫ್‌ಡಿಸಿ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಇಂಡಸ್‌ಇಂಡ್, ಫೆಡರಲ್ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ ಮೂಲಕ 1,500 ರೂ.ಗಳ ಕ್ಯಾಶ್‌ಬ್ಯಾಕ್ ಪ್ರಯೋಜನ ಪಡೆಯಬಹುದು.

Best Mobiles in India

English summary
Vivo is all set to launch the Vivo X100s smartphone. Even before the launch of this smartphone, some of its features are being heavily discussed in the tech sector.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+