ಮಾರುಕಟ್ಟೆಯಲ್ಲಿ ಮತ್ತೆ ಧೂಳೆಬ್ಬಿಸಲು ಸಜ್ಜಾದ ವಿವೋ!..ಸದ್ಯದಲ್ಲೇ ಈ ಫೋನ್ ಲಾಂಚ್!
ಚೀನಾ ಮೂಲಕ ವಿವೋ ಮೊಬೈಲ್ ಸಂಸ್ಥೆಯು ಈಗಾಗಲೇ X ಸರಣಿಯಲ್ಲಿ ಹಲವು ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಇದೀಗ ಈ ಸರಣಿಯಲ್ಲಿ ಮತ್ತೆ ಹೊಸದೊಂದು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ರೆಡಿಯಾಗಿದೆ. ಬಿಡುಗಡೆಗೆ ಸಜ್ಜಾಗುತ್ತಿರುವ ವಿವೋದ ನೂತನ ಫೋನ್ ಹೈ ಎಂಡ್ ಕ್ಯಾಮೆರಾ ಆಯ್ಕೆ ಒಳಗೊಂಡಿರಲಿದ್ದು, ಹಿಂಭಾಗದಲ್ಲಿ ZEISS ಬ್ರ್ಯಾಂಡಿಂಗ್ ಪಡೆದಿರಲಿದೆ.
ಹೌದು, ವಿವೋ ಕಂಪನಿಯು ಹೊಸದಾಗಿ ವಿವೋ X90S (Vivo X90S) ಹೆಸರಿನ ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಲು ಸಜ್ಜಾಗುತ್ತಿದ್ದು, ಈ ಫೋನ್ ಇದೇ ಜೂನ್ 26 ರಂದು ಲಾಂಚ್ ಆಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಆರಂಭದಲ್ಲಿ ಚೀನಾ ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ ಈ ಮೊಬೈಲ್ ಮೂರು ಆಂತರೀಕ ಸ್ಟೋರೇಜ್ ವೇರಿಯಂಟ್ ಮಾದರಿಗಳನ್ನು ಒಳಗೊಂಡಿರಲಿದೆ.

ಈ ನೂತನ ಫೋನ್ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇದು 8GB RAM ಮತ್ತು 256 GB ವೇರಿಯಂಟ್, 12GB RAM ಮತ್ತು 256 GB ವೇರಿಯಂಟ್ ಹಾಗೂ 12GB RAM ಮತ್ತು 512 GB ಆಂತರಿಕ ಸ್ಟೋರೇಜ್‌ನ ವೇರಿಯಂಟ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಹಾಗೆಯೇ ಈ ಫೋನ್ ರೆಡ್, ವೈಟ್ ಕನ್ಫೆಷನ್, ಕ್ವಿಂಗ್ಯಾಂಗ್ (ಸಿಯಾನ್) ಮತ್ತು ಕಪ್ಪು ಬಣ್ಣಗಳ ಆಯ್ಕೆ ಪಡೆದಿರಲಿದೆ. ಇನ್ನುಳಿದಂತೆ ಈ ಫೋನಿನ ಇತರೆ ನಿರೀಕ್ಷಿತ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ವಿವೋ X90S ಡಿಸ್‌ಪ್ಲೇ ಯಾವ ಮಾದರಿಯಲ್ಲಿ ಇರಲಿದೆ : ವಿವೋ X90S ಸ್ಮಾರ್ಟ್‌ಫೋನ್ 6.78 ಇಂಚಿನ ಡಿಸ್‌ಪ್ಲೇ ಪಡೆದಿರಲಿದ್ದು, ಈ ಡಿಸ್‌ಪ್ಲೇಯು AMOLED ಮಾದರಿಯಲ್ಲಿ ಇರಲಿದೆ. ಹಾಗೆಯೇ ಇದು 1260 x 2800 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇರಲಿದ್ದು, ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 453 ppi ಆಗಿರಲಿದೆ.
ವಿವೋ X90S ಯಾವ ಪ್ರೊಸೆಸರ್ ಬಲ : ವಿವೋ X90S ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಪ್ಲಸ್ MT6985 ಪ್ರೊಸೆಸರ್ ಒಳಗೊಂಡಿರುವುದು ಬಹುತೇಕ ಖಚಿತವಾಗಿದೆ. ಇದರೊಂದಿಗೆ ಮೂರು ಆಯ್ಕೆಗಳು ಇರಲಿದ್ದು, ಅವುಗಳು ಕ್ರಮವಾಗಿ 8GB RAM ಮತ್ತು 256 GB ವೇರಿಯಂಟ್, 12GB RAM ಮತ್ತು 256 GB ವೇರಿಯಂಟ್ ಹಾಗೂ 12GB RAM ಮತ್ತು 512 GB ವೇರಿಯಂಟ್ ಆಗಿರಲಿವೆ.
ವಿವೋ X90S ಕ್ಯಾಮೆರಾ ಸೆನ್ಸಾರ್ ಸಾಮರ್ಥ್ಯ ಏನು : ವಿವೋ X90S ಮೊಬೈಲ್ ಫೋನ್ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ರಚನೆಯನ್ನು ಒಳಗೊಂಡಿರಲಿದ್ದು, ಮುಖ್ಯ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಬಲ ಪಡೆದಿರಲಿದೆ. ಇನ್ನುಳಿದಂತೆ ಸೆಕೆಂಡರಿ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸಲ್ ಸಾಮರ್ಥ್ಯದಲ್ಲಿ ಇರಲಿವೆ ಎನ್ನಲಾಗಿದೆ.
ವಿವೋ X90S ಬ್ಯಾಟರಿ ಬ್ಯಾಕ್‌ಅಪ್ ಪವರ್ ಎಷ್ಟು : ವಿವೋ X90S ಫೋನ್ 4700 mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 100W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿರುವ ನಿರೀಕ್ಷೆಗಳಿವೆ. ಇದರೊಂದಿಗೆ ಫಿಂಗರ್‌ಪ್ರಿಂಟ್ ಸೆನ್ಸಾರ್, ಯುಎಸ್‌ಬಿ ಟೈಪ್-ಸಿ, ವೈ ಫೈ, ಡ್ಯುಯಲ್ ಸಿಮ್ ಸೌಲಭ್ಯ ಸೇರಿದಂತೆ ಇತ್ತೀಚಿಗಿನ ಅಗತ್ಯ ಕನೆಕ್ಟಿವಿಟಿ ಸೌಲಭ್ಯಗಳು ಸಹ ಈ ಫೋನ್ ಒಳಗೊಂಡಿರಲಿದೆ ಎನ್ನಲಾಗಿದೆ.
ವಿವೋ X90S ಲಾಂಚ್ ದಿನಾಂಕ : ವಿವೋ X90S ಮೊಬೈಲ್ ಇದೇ ಜೂನ್ 26 ರಂದು ಚೀನಾ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಲಾಂಚ್ ಆಗುವುದು ಬಹುತೇಕ ಖಚಿತ ಆಗಿದೆ. ಇನ್ನು ಈ ಫೋನ್ ರೆಡ್, ವೈಟ್ ಕನ್ಫೆಷನ್, ಕ್ವಿಂಗ್ಯಾಂಗ್ (ಸಿಯಾನ್) ಮತ್ತು ಬ್ಲ್ಯಾಕ್ ಕಲರ್ ಆಯ್ಕೆಗಳನ್ನು ಪಡೆದುಕೊಂಡಿದೆ.


Click it and Unblock the Notifications








