ವಿವೋ ನೆಕ್ಸ್ 3 : ಕೇವಲ 13 ನಿಮಿಷದಲ್ಲಿ 4,000mAh ಬ್ಯಾಟರಿ ಫುಲ್!

|

ವಿವೋ ಕಂಪನಿ ಎಂದ ತಕ್ಷಣ ಬಹುತೇಕರಿಗೆ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ 'ವಿವೋ ವಿ 15 ಪ್ರೊ' ಫೋನ್‌ ನೆನೆಪಿಗೆ ಬರುತ್ತದೆ ಅಲ್ಲವೇ. ಇದರಂತೆಯೇ ಕಂಪನಿಯ 'ವಿವೋ ನೆಕ್ಸ್ 2' ಫೋನ್ ಸಹ ಮಾರುಕಟ್ಟೆಯಲ್ಲಿ ಜನಪ್ರಿಯತೆಗಳಿಸಿದ್ದು, ಕಂಪನಿಯು ಅದರ ಮುಂದುವರಿದ ಭಾಗವಾಗಿ 'ವಿವೋ ನೆಕ್ಸ್‌ 3' ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸ್ಮಾರ್ಟ್‌ಫೋನ್‌ ಹಲವು ಅಚ್ಚರಿಗಳನ್ನು ಹೊತ್ತು ಬರಲಿದ್ದು, ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನ ಭಾರೀ ಗಮನಸೆಳೆಯಲಿದೆ.

ವಿವೋ ನೆಕ್ಸ್ 3 : ಕೇವಲ 13 ನಿಮಿಷದಲ್ಲಿ 4,000mAh ಬ್ಯಾಟರಿ ಫುಲ್!

ಹೌದು, ವಿವೋ ಕಂಪನಿಯು ವಿವೋ ನೆಕ್ಸ್‌ 3 ರಿಲೀಸ್‌ ಮಾಡಲು ತಯಾರಿ ನಡೆಸಿದ್ದು, ಅದೇ ಸೆಪ್ಟಂಬರ್‌ನಲ್ಲಿ ಲಾಂಚ್ ಬಹುತೇಕ ಖಚಿತ ಎನ್ನುತ್ತಿವೆ ಆನ್‌ಲೈನ್‌ ಲೀಕ್ ಮಾಹಿತಿಗಳು. ಆದ್ರೆ ಬಿಡುಗಡೆಗೂ ಮೊದಲೇ ಈ ಫೋನ್ ತನ್ನ ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನದ ಮೂಲಕ ಭಾರೀ ಸುದ್ದಿ ಮಾಡಿದೆ. ಈ ಫೋನ್ 4,000mAH ಬ್ಯಾಟರಿ ಹೊಂದಿರುವ ಜೊತೆಗೆ 120W ಸಾಮರ್ಥ್ಯ ಸೂಪರ್‌ ಫ್ಲ್ಯಾಶ್‌ ಚಾರ್ಜ್‌ ತಂತ್ರಜ್ಞಾನದ ಸೌಲಭ್ಯ ಪಡೆದಿರಲಿದೆ.

ವಿವೋ ನೆಕ್ಸ್ 3 : ಕೇವಲ 13 ನಿಮಿಷದಲ್ಲಿ 4,000mAh ಬ್ಯಾಟರಿ ಫುಲ್!

ಈ ವರ್ಷದ ಆರಂಭದಲ್ಲಿ ನಡೆದ ಮೊಬೈಲ್ ವರ್ಲ್ಡ್‌ ಕಾಂಗ್ರೆಸ್‌ನಲ್ಲಿ 120W ಸಾಮರ್ಥ್ಯ ಸೂಪರ್‌ ಫ್ಲ್ಯಾಶ್‌ ಚಾರ್ಜ್‌ ತಂತ್ರಜ್ಞಾನ ಪರಿಚಯಿಸುವುದಾಗಿ ಘೋಷಿಸಿತ್ತು. ಅದರಂತೆ ಈಗ ಬಿಡುಗಡೆಗೆ ರೆಡಿಯಾಗಿರುವ ವಿವೋ ನೆಕ್ಸ್ 3 ಸ್ಮಾರ್ಟ್‌ಫೋನ್‌, 120W ಸಾಮರ್ಥ್ಯ ಸೂಪರ್‌ ಫ್ಲ್ಯಾಶ್‌ ಚಾರ್ಜ್‌ ಟೆಕ್ನಾಲಜಿಯ ನೆರವಿನಿಂದ ಕೇವಲ 13 ನಿಮಿಷಗಳಲ್ಲಿ 4,000mAH ಬ್ಯಾಟರಿ ಸಂಪೂರ್ಣವಾಗಿ ಫುಲ್‌ ಆಗಲಿದೆ.

ವಿವೋ ನೆಕ್ಸ್ 3 : ಕೇವಲ 13 ನಿಮಿಷದಲ್ಲಿ 4,000mAh ಬ್ಯಾಟರಿ ಫುಲ್!

ವಿವೋ ಮೊದಲ ಬಾರಿಗೆ 120W ಸಾಮರ್ಥ್ಯ ಸೂಪರ್‌ ಫ್ಲ್ಯಾಶ್‌ ಚಾರ್ಜ್‌ ತಂತ್ರಜ್ಞಾನವನ್ನು ತನ್ನ ಸ್ಮಾರ್ಟ್‌ಫೋನ್‌ನಲ್ಲಿ ನೀಡುತ್ತಿರುವುದು. ಇದರೊಂದಿಗೆ ವಿವೋ ನೆಕ್ಸ್ 3 ಸ್ಮಾರ್ಟ್‌ಫೋನಿನ ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದ್ದು, ಅತ್ಯುತ್ತಮ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ ಸಹ ಹೊಂದಿರಲಿದೆ. ಈ ಫೋನ್‌ ವಾಟರ್‌ಫಾಲ್ ಡಿಸ್‌ಪ್ಲೇ ಡಿಸೈನ್‌ನಲ್ಲಿದ್ದು, ಅಂಚಿನಲ್ಲಿ ಹೆಚ್ಚಿನ ಕರ್ವ್‌ ರಚನೆಯನ್ನು ಪಡೆದಿರಲಿದೆ.

ಓದಿರಿ : ಅಗ್ಗದ ಬೆಲೆಗೆ ಟೆಕ್ನೋ 'ಸ್ಪಾರ್ಕ್‌ ಗೋ' ಮತ್ತು 'ಸ್ಪಾರ್ಕ್‌ 4 ಏರ್‌' ಲಾಂಚ್!ಓದಿರಿ : ಅಗ್ಗದ ಬೆಲೆಗೆ ಟೆಕ್ನೋ 'ಸ್ಪಾರ್ಕ್‌ ಗೋ' ಮತ್ತು 'ಸ್ಪಾರ್ಕ್‌ 4 ಏರ್‌' ಲಾಂಚ್!

ಹಾಗೆಯೇ ವಿವೋ ನೆಕ್ಸ್‌ 3 ಸ್ಮಾರ್ಟ್‌ಫೋನ್ ಡಿಸ್‌ಪ್ಲೇಯ ಮತ್ತು ಬಾಹ್ಯ ಬಾಡಿಯ ನಡುವಿನ ಅಂತರದ ಅನುಪಾತವು ಶೇ.99.3%ನಷ್ಟು ಆಗಿದ್ದು, ಬಟನ್‌ಲೆಸ್‌ ಡಿಸ್‌ಪ್ಲೇ ಆಗಿರಲಿದೆ. ಜೊತೆಗೆ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 SoC ಪ್ರೊಸೆಸರ್‌ ಶಕ್ತಿಯನ್ನು ಒಳಗೊಂಡಿರಲಿದ್ದು, 6,400mAh ಸಾಮರ್ಥ್ಯದ ಬ್ಯಾಟರಿ ಪವರ್‌ ಅನ್ನು ಹೊಂದಿರಲಿದೆ. ದೀರ್ಘಕಾಲ ಬಾಲಿಕೆ ಬ್ಯಾಕ್‌ಅಪ್‌ ಒದಗಿಸಲಿದೆ.

ಈ ಫೋನ್‌ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದ್ದು, ಹಿಂಬದಿಯಲ್ಲಿ ವೃತ್ತಾಕಾರದ ಡಿಸೈನ್‌ನಲ್ಲಿ ಇರಲಿವೆ. ಈ ಹಿಂದೆ ಶಿಯೋಮಿ ಸಹ ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನ ಪರಿಚಯಿಸುವುದಾಗಿ ವಿಡಿಯೊ ಲೀಕ್ ಮಾಡಿತ್ತು. ಆದ್ರೆ ಅದಕ್ಕೂ ಮೊದಲೆ 120w ಸೂಪರ್ ಫ್ಲ್ಯಾಶ್‌ ಚಾರ್ಜ್‌ ತಂತ್ರಜ್ಞಾನ ಬೆಂಬಲಿತ ವಿವೋ ನೆಕ್ಸ್ 3 ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ಓದಿರಿ : ರಿಲೀಸ್‌ ಆಯ್ತು 'ರೆಡ್ಮಿ'ಯ ಹೊಸ 70 ಇಂಚಿನ ಸ್ಮಾರ್ಟ್‌ಟಿವಿ!ಓದಿರಿ : ರಿಲೀಸ್‌ ಆಯ್ತು 'ರೆಡ್ಮಿ'ಯ ಹೊಸ 70 ಇಂಚಿನ ಸ್ಮಾರ್ಟ್‌ಟಿವಿ!

Best Mobiles in India

English summary
vivo 120W Super FlashCharge technology can fully charge a 4,000mAh battery in just 13 minutes. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X