64ಎಂಪಿ ಕ್ಯಾಮೆರಾದ 'ವಿವೋ ನೆಕ್ಸ್ 3' ರಿಲೀಸ್‌ಗೆ ಸಜ್ಜು!

|

ವಿವೋ ಕಂಪನಿಯ ವಿವೋ ನೆಕ್ಸ್‌ 2 ಸ್ಮಾರ್ಟ್‌ಫೋನ್ ಜನಪ್ರಿಯತೆ ಗಳಿಸಿದ್ದು, ಅದರ ನೆಕ್ಸ್ಟ್‌ ವರ್ಷನ್ ಆಗಿ ಬಿಂಬಿತವಾಗಿರುವ ಬಹುನಿರೀಕ್ಷಿತ 'ವಿವೊ ನೆಕ್ಸ್ 3' ಸ್ಮಾರ್ಟ್‌ಫೋನ್ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಈ ಸ್ಮಾರ್ಟ್‌ಫೋನ್ 8GB RAM ಮತ್ತು 12GB RAM ಆಯ್ಕೆಯ ಜೊತೆಗೆ 'ಸ್ನ್ಯಾಪ್‌ಡ್ರಾಗನ್ 855 ಪ್ಲಸ್‌ SoC' ಪ್ರೊಸೆಸರ್‌ ಮತ್ತು ಪವರ್‌ಫುಲ್ ಬ್ಯಾಟರಿ ಸೇರಿದಂತೆ ಸ್ಮಾರ್ಟ್‌ಫೋನ್ ಪ್ರಿಯರು ಹುಬ್ಬೆರಿಸುವಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.

ವಿವೋ ನೆಕ್ಸ್ 3

ಹೌದು, ವಿವೋ ಸಂಸ್ಥೆಯು ತನ್ನ ವಿವೋ ನೆಕ್ಸ್‌ 3 ಸ್ಮಾರ್ಟ್‌ಫೋನ್‌ ಅನ್ನು ಇದೇ ಸೆಪ್ಟಂಬರ್ 20ರಂದು ಚೀನಾ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಲಾಂಚ್ ಮಾಡಲಿದ್ದು, ಅದೇ ವೇಳೆ ವಿವೋ ನೆಕ್ಸ್‌ 3 5G ವರ್ಷನ್‌ ಸಹ ಅನಾವರಣಗೊಳಿಸಲಿದೆ. ಹಾಗಾದರೇ ವಿವೋ ನೆಕ್ಸ್‌ 3 ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊತ್ತು ಬರಲಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಬೆಂಗಳೂರಿನ ಶಾಲೆಯೊಂದರಲ್ಲಿ ಟೀಚರ್‌ ಆದ 'ರೋಬೋಟ್‌'!ಓದಿರಿ : ಬೆಂಗಳೂರಿನ ಶಾಲೆಯೊಂದರಲ್ಲಿ ಟೀಚರ್‌ ಆದ 'ರೋಬೋಟ್‌'!

ಡಿಸ್‌ಪ್ಲೇ ವಿನ್ಯಾಸ

2256 x 1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.89 ಇಂಚಿನ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಇದರ ಡಿಸ್‌ಪ್ಲೇ ಮತ್ತು ಬಾಹ್ಯಾ ಬಾಡಿಯ ನಡುವಿನ ಅಂತರವು ಶೇ.99.6% ಆಗಿರಲಿದೆ. ಈ ಫೋನ್‌ ಕರ್ವ್ ಡಿಸ್‌ಪ್ಲೇ ಲುಕ್‌ ಹೊಂದಿದ್ದು, ಡಿಸ್‌ಪ್ಲೇಯು ವಾಟರ್‌ಫಾಲ್ ಮಾದರಿಯನ್ನು ಸ್ಕ್ರೀನ್‌ ಒಳಗೊಂಡಿದ್ದು, ಡಿಸ್‌ಪ್ಲೇ ಸುತ್ತಳತೆಯು 167.4 mm x 76.1 mm x 9.4 mm ಆಗಿರಲಿದೆ.

ಪ್ರೊಸೆಸರ್ ಪವರ್

ವಿವೋ ನೆಕ್ಸ್‌ 3 ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ಲಸ್‌ SoC' ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿರಲಿದ್ದು, ಜೊತೆಗೆ ಆಂಡ್ರಾಯ್ಡ್‌ 9 ಪೈ ಓಎಸ್‌ ಬೆಂಬಲವಿರಲಿದೆ. ಇದರೊಂದಿಗೆ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್‌ ಹಾಗೂ 12GB RAM ಮತ್ತು 256GB ಅಥವಾ 512GB ಸ್ಟೋರೇಜ್ ವೇರಿಯಂಟ್‌ ಆಯ್ಕೆಗಳನ್ನು ಹೊಂದಿರಲಿದೆ.

ಕ್ಯಾಮೆರಾ ಸ್ಪೆಷಲ್

ಇತ್ತೀಚಿನ ಫೋನ್‌ಗಳಂತೆ ವಿವೋ ನೆಕ್ಸ್‌ 3 ಸ್ಮಾರ್ಟ್‌ಫೋನ್ ಹಿಂಬದಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಆಯ್ಕೆ ಹೊಂದಿರಲಿದೆ. ಆದರೆ, ಅವುಗಳಲ್ಲಿ ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿರಲಿದ್ದು, ಸೆಕೆಂಡರಿ ಮತ್ತು ತೃತೀಯ ಕ್ಯಾಮೆರಾಗಳು 13ಎಂಪಿ ಸೆನ್ಸಾರ್ನಲ್ಲಿರಲಿವೆ. ಇನ್ನು ಸೆಲ್ಫಿ ಕ್ಯಾಮೆರಾವು 16ಎಂಪಿ ಸೆನ್ಸಾರ್‌ ಶಕ್ತಿಯನ್ನು ಒಳಗೊಂಡಿರಲಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್

ವಿವೋ ನೆಕ್ಸ್‌ 3 ಸ್ಮಾರ್ಟ್‌ಫೋನ್ 4,500mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, ಅದರೊಂದಿಗೆ 44w ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನದ ಸೌಲಭ್ಯವನ್ನು ಪಡೆದುಕೊಂಡಿರಲಿದೆ. ಹಾಗೆಯೇ 3.5m ಆಡಿಯೊ ಜಾಕ್, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌, ಎನ್‌ಎಫ್‌ಸಿ, ಮತ್ತು ಗ್ಲಾಸಿ ಬಾಡಿ ರಚನೆ ಒಳಗೊಂಡಂತೆ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಸೌಲಭ್ಯವನ್ನು ಪಡೆದುಕೊಂಡಿರಲಿದೆ.

ಓದಿರಿ : 'ಆಂಡ್ರಾಯ್ಡ್ 10' ಓಎಸ್‌ ಅಧಿಕೃತವಾಗಿ ಬಿಡುಗಡೆ!..ಸಂಪೂರ್ಣ ಹೊಸ ಫೀಚರ್ಸ್!ಓದಿರಿ : 'ಆಂಡ್ರಾಯ್ಡ್ 10' ಓಎಸ್‌ ಅಧಿಕೃತವಾಗಿ ಬಿಡುಗಡೆ!..ಸಂಪೂರ್ಣ ಹೊಸ ಫೀಚರ್ಸ್!

Best Mobiles in India

English summary
Vivo NEX 3 5G come with a notch-less waterfall display with curved edges. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X