ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಲು ವಿವೋ ಸಜ್ಜಾಗುತ್ತಿದೆ!

|

ದೇಶದಲ್ಲಿ ಸದ್ಯ ಎಲೆಕ್ಟ್ರಿಕ್ ವಾಹನಗಳು (EV) ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ. ಈ ನಿಟ್ಟಿನಲ್ಲಿ ಪ್ರಮುಖ ಬೈಕ್ ಮತ್ತು ಕಾರ ತಯಾರಿಕಾ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತ ಸಾಗಿವೆ. ಮುಖ್ಯವಾಗಿ ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚಿನ ಡಿಮ್ಯಾಂಡ್ ಪಡೆದಿದ್ದು, ಸ್ಟಾರ್ಟ್‌ಅಪ್‌ ಸಂಸ್ಥೆಗಳು ನೂತನ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡುತ್ತಿವೆ. ಅವುಗಳ ಜೊತೆಗೆ ಮೊಬೈಲ್ ತಯಾರಿಕೆ ಕಂಪನಿಗಳು ಸಹ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕೆಯತ್ತ ಹೆಜ್ಜೆ ಇಟ್ಟಿವೆ. ಆ ಪೈಕಿ ಶಿಯೋಮಿ, ಒಪ್ಪೋ ಸಂಸ್ಥೆಗಳು ಈಗಾಗಲೇ ಇವಿ ವಾಹನ ಪರಿಚಯಿಸುವ ಸುಳಿವು ಬಿಟ್ಟುಕೊಟ್ಟಿವೆ. ಇವುಗಳ ಸಾಲಿಗೆ ಈಗ ವಿವೋ ಕಂಪನಿಯು ಸೇರಲು ಸಜ್ಜುಗೊಳ್ಳುತ್ತಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಲು ವಿವೋ ಸಜ್ಜಾಗುತ್ತಿದೆ!

ಹೌದು, ಪ್ರಮುಖ ಮೊಬೈಲ್ ಸಂಸ್ಥೆಗಳಲ್ಲಿ ಒಂದಾದ ವಿವೋ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಗೆ ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗುತ್ತಿದೆ ಎಂದು ವರದಿಯಾಗಿದೆ. ಭಾರತದಲ್ಲಿ ಇವಿ ವಿಭಾಗಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿ ಮೊಬೈಲ್ ಕಂಪನಿಗಳು ಇವಿ ವಲಯಕ್ಕೆ ಲಗ್ಗೆ ಇಡುತ್ತಿವೆ. ವಿವೋ ಇವಿ (EV) ಗಾಗಿ ಟ್ರೇಡ್‌ಮಾರ್ಕ್‌ಗಾಗಿ ಅರ್ಜಿ ಸಲ್ಲಿಸಿದೆ ಮತ್ತು ಫೈಲಿಂಗ್ ಕುರಿತು ವಿವರಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ರಶ್‌ಲೇನ್ ಹೊಸ ಟ್ರೇಡ್‌ಮಾರ್ಕ್ ಫೈಲಿಂಗ್‌ನ ವಿವರಗಳನ್ನು ವರದಿ ಮಾಡಿದೆ.

ವಿವೋ ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಇತರ ಇವಿ ಮಾದರಿಯ ವಾಹನ ಪ್ರಾರಂಭಿಸಲು ಬಯಸುತ್ತಿದೆಯೇ ಎಂಬುದನ್ನು ಪಟ್ಟಿಯು ಖಚಿತಪಡಿಸುವುದಿಲ್ಲ. ಟ್ರೇಡ್‌ಮಾರ್ಕ್ ಫೈಲಿಂಗ್ ಅನ್ನು ಸೆಕ್ಷನ್ 12 ರ ಅಡಿಯಲ್ಲಿ ನೋಂದಾಯಿಸಲಾಗಿದೆ. ಇದು ಎಲೆಕ್ಟ್ರಿಕ್ ಕಾರುಗಳು, ಮೋಟಾರ್‌ಸೈಕಲ್‌ಗಳು, ಡ್ರೈವರ್‌ಲೆಸ್ ಕಾರುಗಳು (ಸ್ವಾಯತ್ತ ಕಾರುಗಳು), ಬೈಸಿಕಲ್‌ಗಳು, ಮೊಪೆಡ್‌ಗಳು, ಎಲೆಕ್ಟ್ರಿಕ್ ಯುನಿಸೈಕಲ್, ಯುನಿಸೈಕಲ್, ಸೆಲ್ಫ್ ಬ್ಯಾಲೆನ್ಸಿಂಗ್ ಯುನಿಸೈಕಲ್‌ಗಳು, ರಿಮೋಟ್ ಕಂಟ್ರೋಲ್ ವಾಹನಗಳನ್ನು ಹೊಂದಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಲು ವಿವೋ ಸಜ್ಜಾಗುತ್ತಿದೆ!

ಪ್ರಸ್ತುತ, ಹೀರೋ ಎಲೆಕ್ಟ್ರಿಕ್ ಭಾರತೀಯ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಅತ್ಯಂತ ಪ್ರಬಲವಾದ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಹೀರೋ ಎಲೆಕ್ಟ್ರಿಕ್ ಅನ್ನು ಓಕಿನಾವಾ ಆಟೋಟೆಕ್, ಅಥೆರ್ ಎನರ್ಜಿ, ಪ್ಯೂರ್ಇವಿ ಮತ್ತು ರಿವೋಲ್ಟ್ ಅನುಸರಿಸುತ್ತವೆ. ಇನ್ನು ಓಲಾ ಎಲೆಕ್ಟ್ರಿಕ್ ಓಲಾ ಎಸ್ 1 ಮತ್ತು ಓಲಾ ಎಸ್ 1 ಪ್ರೊ ನೊಂದಿಗೆ ಇ-ಸ್ಕೂಟರ್ ವಿಭಾಗಕ್ಕೆ ಪ್ರವೇಶಿಸಲು ಸಜ್ಜಾಗಿದೆ. ಹಾಗೆಯೇ ಬೌನ್ಸ್ ಸಂಸ್ಥೆಯು ಹೊಸ ಎಲೆಕ್ಟ್ರಿಕ್ ವಾಹನವನ್ನು ದೇಶದಲ್ಲಿ ಘೋಷಿಸಿದ್ದು, ಮುಂಗಡ ಬುಕಿಂಗ್ ಸಹ ಪ್ರಾರಂಭಿಸಿದೆ.

ಇನ್ನು ಒಪ್ಪೋ ಸಹ ಎಲೆಕ್ಟ್ರಿಕ್ ವಾಹನ ತಯಾರಿಕಾ ವಲಯಕ್ಕೆ ಕಾಲಿಡಲು ಸಜ್ಜಾಗಿದೆ. 2024ರಲ್ಲಿ ಒಪ್ಪೋ ಭಾರತದಲ್ಲಿ ಒಪ್ಪೋ EV ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಅನ್ನು ಲಾಂಚ್ ಮಾಡಲು ತಯಾರಿ ನಡೆಸಿದೆ ಎಂದು ವರದಿಯಾಗಿದೆ. ಒಪ್ಪೋ EV ಕುರಿತ ಕೆಲವು ವಿವರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಸದ್ಯ ಈ ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದೆ ಎನ್ನಲಾಗಿದೆ. ಈಗಾಗಲೇ ಒಪ್ಪೋ ಕಂಪನಿಯು ಬ್ಯಾಟರಿ ಮತ್ತು ಇತರ ಬಿಡಿ ಭಾಗಗಳ ತಯಾರಕರೊಂದಿಗೆ ಮಾತುಕತೆ ಪ್ರಾರಂಭಿಸಿದೆ ಎನ್ನಲಾಗಿದೆ. ಅಧಿಕೃತವಾಗಿ ಒಪ್ಪೋ ಎಲೆಕ್ಟ್ರಿಕ್ ಸ್ಕೂಟರ್ ಯಾವಾಗ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಲು ವಿವೋ ಸಜ್ಜಾಗುತ್ತಿದೆ!

ಹಾಗೆಯೇ ಒಪ್ಪೊ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕೆಯಲ್ಲಿ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ಅದರೊಂದಿಗೆ ಒಪ್ಪೋ EV ಕಾಂಪ್ಯಾಕ್ಟ್ ಕಾರ್ ಅನ್ನು ಸಹ ಪರಿಚಯಿಸಬಹುದು ಎಂದು ಹೇಳಲಾಗುತ್ತಿದೆ. ಒಪ್ಪೋ EV ಕಾಂಪ್ಯಾಕ್ಟ್ ಕಾರ್ ಟಾಟಾ ನ್ಯಾನೋ ಕಾರಿಗೆ ಹೋಲುತ್ತದೆ ಎನ್ನಲಾಗಿದೆ. ಒಪ್ಪೋ EV ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ. ಬರಲಿರುವ ಒಪ್ಪೋ ಎಲೆಕ್ಟ್ರಿಕ್ ಸ್ಕೂಟರ್‌ ಸುಮಾರು 60,000 ರೂ.ಗಳ ಆಸುಪಾಸಿನಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. ಒಪ್ಪೊ ಕಂಪನಿಯು ಗ್ರಾಹಕ ಸ್ನೇಹಿ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಲು ಮುಂದಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.

Best Mobiles in India

Read more about:
English summary
Vivo Planning To Launch An Electric Scooter in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X