4,000mAh ಬ್ಯಾಟರಿ ಫುಲ್ ಚಾರ್ಜ್ ಆಗಲು ಕೇವಲ 13 ನಿಮಿಷ ಅಷ್ಟೇ ಸಾಕು!
ಸ್ಮಾರ್ಟ್‌ಫೋನ್‌ಗಳಲ್ಲಿ ಈಗ ಸಾಕಷ್ಟು ಬದಲಾವಣೆಗಳು ಆಗುತ್ತಿದ್ದು, ಮುಖ್ಯವಾಗಿ ಕ್ಯಾಮೆರಾ ಮತ್ತು ಬ್ಯಾಟರಿಗಳತ್ತ ಹೆಚ್ಚಿನ ಗಮನ ನೀಡಲಾಗುತ್ತಿದೆ. ಸ್ಮಾರ್ಟ್‌ಫೋನ್ ಜೀವಾಳ ಎನಿಸಿಕೊಂಡಿರುವ ಬ್ಯಾಟರಿಗಳಿಗೆ ಹೆಚ್ಚಿನ ಸಾಮರ್ಥ್ಯವನ್ನು ಒದಗಿಸುವುದರ ಜೊತೆಗೆ ಫೋನ್‌ಗಳ ಚಾರ್ಜಿಂಗ್ ಸೌಲಭ್ಯದಲ್ಲಿಯೂ ಭಾರಿ ಹೊಸತನದ ಆಯ್ಕೆಗಳು ಸೇರ್ಪಡೆಗೊಳ್ಳುತ್ತಲಿವೆ. ಈ ನಿಟ್ಟಿನಲ್ಲಿ ವಿವೋ ಇದೀಗ ಒಂದು ಹೆಜ್ಜೆ ಮುಂದಿರಿಸಿದೆ.

ಹೌದು, ಈಗಾಗಲೇ ಸ್ಮಾರ್ಟ್‌ಫೋನ್ ವಲಯದಲ್ಲಿ ಹಲವು ಹೊಸತನಗಳನ್ನು ಪರಿಚಯಿಸಿರುವ ವಿವೋ ಸಂಸ್ಥೆಯು ಈಗ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಇದೇ ಜೂನ್ 26 ರಿಂದ ಜೂನ್ 28 ವರೆಗೂ ಶಾಂಘೈನಲ್ಲಿ ನಡೆಯುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2019 ಕಾರ್ಯಕ್ರಮದಲ್ಲಿ ವಿವೋ ತನ್ನ '120w ಸಾಮರ್ಥ್ಯದ ಸೂಪರ್ ಫ್ಲ್ಯಾಶ್‌ಚಾರ್ಜ್' ತಂತ್ರಜ್ಞಾನ ಪರಿಚಯಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ವಿವೋ ಕಂಪನಿ ಮ್ಯಾನೇಜರ್ Weibo ತಾಣದಲ್ಲಿ ಹೊಸ ಚಾರ್ಜಿಂಗ್ ಕುರಿತು ವಿಡಿಯೊಂದನ್ನು ಪೋಸ್ಟ್ ಮಾಡಿದ್ದಾರೆ. ಆ ಡೆಮೊ ವಿಡಿಯೊದಲ್ಲಿ ಸ್ಮಾರ್ಟ್‌ಫೋನ್ ಬ್ಯಾಟರಿಯು 16 ಸೆಕೆಂಡಿಗೆ ಶೇ.10% ರಿಂದ ಶೇ.14% ನಷ್ಟು ಚಾರ್ಜ್ ಒದಗಿಸಲಿದೆ. ಆದರೆ ಹೊಸ ಚಾರ್ಜಿಂಗ್ ಕುರಿತು ಹೆಚ್ಚಿನ ಮಾಹಿತಿಯನ್ನು ಹೊರಹಾಕಿಲ್ಲ. ಹಾಗಾದರೇ ಅತೀ ವೇಗದ ಚಾರ್ಜಿಂಗ್ ತಂತ್ರಜ್ಞಾನದ ವಿಶೇಷತೆಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಶಾಕಿಂಗ್ ತಂತ್ರಜ್ಞಾನ
ವಿವೋ ಕಂಪನಿಯು ಅಭಿವೃದ್ದಿ ಪಡಿಸಿರುವ 120w ಸಾಮರ್ಥ್ಯದ ಚಾರ್ಜಿಂಗ್ ತಂತ್ರಜ್ಞಾನವು ಸ್ಮಾರ್ಟ್‌ಫೋನ್ ವಲಯದಲ್ಲಿ ಹೊಸ ಸಂಚಲನ ಮೂಡಿಸಲಿದೆ. ಏಕೆಂದರೇ ಈ ಹೊಸ ತಂತ್ರಜ್ಞಾನವು 4000mAh ಸಾಮರ್ಥ್ಯದ ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಕೇವಲ 13 ನಿಮಿಷದಲ್ಲಿ ಪೂರ್ಣಗೊಳಿಸಲಿದೆ. ಈ ಮೂಲಕ ಅತೀ ವೇಗದ ಸ್ಮಾರ್ಟ್‌ಫೋನ್ ಚಾರ್ಜರ್ ಎನಿಸಿಕೊಳ್ಳಲಿದೆ.

ಶಿಯೋಮಿಗಿಂತ ವಿವೋ ಮುಂದೆ
ವೇಗದ ಚಾರ್ಜಿಂಗ್ ತಂತ್ರಜ್ಞಾನ ಸದ್ಯ ಟ್ರೆಂಡ್‌ನಲ್ಲಿದ್ದು, ಶಿಯೋಮಿ ಕಂಪನಿಯು ಇತ್ತೀಚಿಗೆ 100w ಸಾಮರ್ಥ್ಯ ವೇಗದ ಚಾರ್ಜಿಂಗ್ ತಂತ್ರಜ್ಞಾನದ ಘೋಷಿಸಿತ್ತು. 4,000mAh ಬ್ಯಾಟರಿಯು ಕೇವಲ 17 ನಿಮಿಷಕ್ಕೆ ಪೂರ್ಣವಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಇದೀಗ ವಿವೋ ಈಗ 120w ಸಾಮರ್ಥ್ಯದ ಚಾರ್ಜಿಂಗ್ ತಂತ್ರಜ್ಞಾನವು ಕೇವಲ 13 ನಿಮಿಷದಲ್ಲಿ 4,000mAh ಬ್ಯಾಟರಿ ಪೂರ್ಣಮಾಡಲಿದೆ.

ವಿವೋ ಗೇಮಿಂಗ್ ಪೋನ್‌ನಲ್ಲಿ 44W!
ವಿವೋ iQOO ಹೆಸರಿನ ವೇಗದ ಗೇಮಿಂಗ್ ಸ್ಮಾರ್ಟ್‌ಫೋನ್ ಇತ್ತೀಚಿಗೆ ಬಿಡುಗಡೆ ಮಾಡಿದ್ದು, ಈ ಗೇಮಿಂಗ್ ಸ್ಮಾರ್ಟ್‌ಪೋನ್ ವಿಶೇಷವೆಂದರೇ ಅದರ ಬ್ಯಾಟರಿ ಮತ್ತು RAM ಆಗಿದೆ. ಹಾಗೆಯೇ ಈ ಫೋನಿನಲ್ಲಿ ವಿವೋ 44W ಸಾಮರ್ಥ್ಯದ ಚಾರ್ಜಿಂಗ್ ತಂತ್ರಜ್ಞಾನ ಒದಗಿಸಲಾಗಿದ್ದು, 45 ನಿಮಿಷದಲ್ಲಿ 4,000mAh ಬ್ಯಾಟರಿ ಪೂರ್ಣ ಚಾರ್ಜ್ ಪಡೆದುಕೊಳ್ಳುವ ಶಕ್ತಿ ಇದೆ.

ಇತರೆ ಕಂಪನಿಗಳ ಚಾರ್ಜಿಂಗ್ ವೇಗ
ಪ್ರಸ್ತುತ ಎಲ್ಲ ಕಂಪನಿಗಳು ವೇಗದ ಚಾರ್ಜರ್ ಒದಗಿಸುತ್ತಿದ್ದು, ಈ ವಿಷಯದಲ್ಲಿ ಯಾವ ಕಂಪನಿಗಳು ಹಿಂದೆ ಬಿದ್ದಿಲ್ಲ. ಒಪ್ಪೊ ಸೂಪರ್ VOOC ತಂತ್ರಜ್ಞಾನ, ಹುವಾವೆ ಮೇಟ್ 20 ಪ್ರೊ ಫೋನ್‌ನಲ್ಲಿ ಹುವಾವೆ ಕಂಪನಿ 40W ಚಾರ್ಜಿಂಗ್ ಸೌಲಭ್ಯ ನೀಡಿದೆ. ಹಾಗೆಯೇ ಒನ್‌ಪ್ಲಸ್ ಸಹ ತನ್ನ ಇತ್ತೀಚಿನ ಫೋನ್‌ಗಳಲ್ಲಿ 30W ಸಾಮರ್ಥ್ಯ ಚಾರ್ಜಿಂಗ್ ತಂತ್ರಜ್ಞಾನವನ್ನು ಪರಿಚಯಿಸಿವೆ.


Click it and Unblock the Notifications








