Just In
Don't Miss
- News
Breaking; ಫೆ. 26ಕ್ಕೆ ದಾವಣಗೆರೆಗೆ ಕೇಜ್ರಿವಾಲ್ ಭೇಟಿ
- Sports
ಮತ್ತೆ ವಿವಾದದ ಸುಳಿಯಲ್ಲಿ ವಿನೋದ್ ಕಾಂಬ್ಳಿ: ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪ
- Movies
"ಒಳ್ಳೆವ್ನಾ ಕೆಟ್ಟವ್ನಾ ಜಡ್ಜ್ಮೆಂಟ್ಗೆ ಸಿಗೊವಲ್ದು": ಡಾಲಿ 'ಹೊಯ್ಸಳ' ಪೊಲೀಸ್ ಗಿರಿ ಝಲಕ್
- Automobiles
ಪ್ರಮುಖ ಮಾದರಿಗಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ರಿಯಾಯಿತಿ ಘೋಷಿಸಿದ ಟಾಟಾ ಮೋಟಾರ್ಸ್
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Lifestyle
ವಾರ ಭವಿಷ್ಯ ಫೆ.4-11: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬರಲಿದೆ 'ವಿವೋ' Z ಸರಣಿಯ ವೇಗದ ಪ್ರೊಸೆಸರ್ ಪೋನ್!.ಬರೆಯಲಿದೆ ಹೊಸ ದಾಖಲೆ!
ಮೊಬೈಲ್ ಮಾರುಕಟ್ಟೆಯಲ್ಲಿ ವಿವೋ ಕಂಪನಿಯು ಈಗಾಗಲೇ ತನ್ನ ವಿಶೇಷ ಫೀಚರ್ಸ್‌ಗಳಿಂದ ಗುರುತಿಸಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಹೊಸತನದ ಫೀಚರ್ಸ್‌ಗಳನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸಿಕೊಳ್ಳುತ್ತಾ ಸಾಗಿದೆ. ವಿಶ್ವದಲ್ಲಿಯೇ ಮೊದಲ ಬಾರಿಗೆ 'ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್', ಮತ್ತು 'ಪಾಪ್‌ಅಪ್ ಸೆಲ್ಫಿ' ಕ್ಯಾಮೆರಾ ಫೀಚರ್ಸ್‌ಗಳನ್ನು ಪರಿಚಯಿಸಿದ್ದು, ಈ ಮೂಲಕ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದೆ.

ಹೌದು, ವಿವೋ ಕಂಪನಿಯು ಇದೀಗ Z ಸರಣಿಯ ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ಧಗೊಳ್ಳುತ್ತಿದ್ದು, ಈ ಹೊಸ ಸ್ಮಾರ್ಟ್‌ಫೋನ್ ನೂತನ ಕ್ವಾಲ್ಕಮ್ ಪ್ರೊಸೆಸರ್ ಅನ್ನು ಒಳಗೊಂಡಿರಲಿದೆ. ಇಪ್ಪತ್ತು ಸಾವಿರ ಪ್ರೈಸ್‌ಟ್ಯಾಗ್‌ನಲ್ಲಿ 'ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 712' ಪ್ರೊಸೆಸರ್ ಅನ್ನು ಪರಿಚಯಿಸಲಿದ್ದು, ಈ ಪ್ರೊಸೆಸರ್ ಕ್ವಾಲ್ಕಮ್ ಕ್ರಿಯೊ 360 ಕೋರ್ ಸಾಮರ್ಥ್ಯವುಳ್ಳ ಆಕ್ಟಾಕೋರ್ CPU ಅನ್ನು ಹೊಂದಿದೆ. ಗರಿಷ್ಠ ವೇಗ 2.3GHz ಸಾಮರ್ಥ್ಯದಲ್ಲಿರಲಿದೆ.

ಈ ಸ್ನ್ಯಾಪ್‌ಡ್ರಾಗನ್ 712 CPU ಪ್ರೊಸೆಸರ್ ಅಂಡ್ರೆನೊ 616 GPU ಸಾಮರ್ಥ್ಯವನ್ನು ಸಹ ಒಳಗೊಂಡಿರಲಿದ್ದು, ಗೇಮಿಂಗ್‌ಗೆ ಸ್ನ್ಯಾಪ್‌ಡ್ರಾಗನ್ 710 SoC ಪ್ರೊಸೆಸರ್‌ಗಿಂತ ಅತ್ಯುತ್ತಮ ಬೆಂಬಲ ಒದಗಿಸಲಿದೆ. ಈ ಸರಣಿಯ ಡಿಸ್‌ಪ್ಲೇಯು 4K ಮಾದರಿದೊಂದಿಗೆ 3360x1440 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿರಲಿದೆ. ಹಾಗಾದರೇ ವಿವೋದ Z ಸರಣಿ ಮತ್ತು ಸ್ನ್ಯಾಪ್‌ಡ್ರಾಗನ್ 712 ಪ್ರೊಸೆಸರ್ ವಿಶೇಷತೆಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಹೊಸ ಪ್ರೊಸೆಸರ್ ನಿರೀಕ್ಷೆ
ವಿವೋ ಕಂಪನಿಯ ಹೊಸ Z ಸರಣಿಯ ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 712 CPU ಪ್ರೊಸೆಸರ್ ಶಕ್ತಿಯನ್ನು ಹೊಂದಿದ್ದು, ಮಿಡ್‌ರೇಂಜ್ ಸೆಗ್ಮೆಂಟ್ ಬೆಲೆಯಲ್ಲಿ ಹೊಸ ಪರಂಪರೆ ಬರೆಯಲಿದೆ. ಏಕೆದಂರೇ ಈ ಮಿಡ್‌ರೇಂಜ್ ಬೆಲೆಯಲ್ಲಿ ಬಿಡುಗಡೆ ಆಗುವ Z ಸರಣಿಯ ಮೊದಲ ಸ್ಮಾರ್ಟ್‌ಫೋನ್‌ನಲ್ಲಿ ನೂತನ ಫೀಚರ್ಸ್‌ಗಳನ್ನು ಅಳವಡಿಸುವ ನಿರೀಕ್ಷೆಗಳನ್ನು ಕಂಪನಿಯು ಹುಟ್ಟುಹಾಕಿದೆ.

ರಿಚ್ ಕ್ಯಾಮೆರಾ ಸೆಟ್‌ಅಪ್
Z ಸರಣಿಯ ಸ್ಮಾರ್ಟ್‌ಫೋನ್‌ನಲ್ಲಿ ಹಲವು ಹೊಸತನಗಳನ್ನು ಅಳವಡಿಸಲಿರುವ ವಿವೋ ಕಂಪನಿಯು ಕ್ಯಾಮೆರಾ ವಿಷಯದಲ್ಲಿ ಹಿಂದಿನಿಂದಲೂ ಗಮನ ನೀಡುತ್ತಲೆ ಬಂದಿದೆ. ವಿವೋ ವಿ15 ಪ್ರೊ ಮೂಲಕ ಮೊದಲ ಬಾರಿಗೆ 32ಎಂಪಿಯ ಪಾಪ್‌ಅಪ್ ಸೆಲ್ಫಿ ಕ್ಯಾಮೆರಾವನ್ನು ಪರಿಚಯಿಸಿ, ಮೊಬೈಲ್ ಮಾರುಕಟ್ಟೆ ಬೆರಗಾಗುವಂತೆ ಮಾಡಿತ್ತು. ಹಾಗೆಯೇ ಈಗ ಬಿಡುಗಡೆ ಆಗಲಿರುವ ಹೊಸ ಸರಣಿಯು ಅತ್ಯುತ್ತಮ ಕ್ಯಾಮೆರಾ ಫೀಚರ್ಸ್ ಹೊಂದಿರುವ ಸಾಧ್ಯತೆಗಳಿದ್ದು, ಎಚ್‌ಆರ್‌ಡಿ, ಬ್ಯೂಟಿ ಮೋಡ್, ಜೊತೆಗೆ ಇನ್ನಷ್ಟು ವಿಶೇಷತೆಗಳು ಸೇರಲಿವೆ.

ಮಲ್ಟಿಮೀಡಿಯಾದಲ್ಲಿ ಹೊಸತನ
ವಿವೋ ಕಂಪನಿಯು ಈಗಾಗಲೇ ತನ್ನ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಮಲ್ಟಿಮೀಡಿಯಾ ಸೌಲಭ್ಯಗಳನ್ನು ವೃದ್ದಿಸಿದ್ದು, ಅಡ್ವಾನ್ಸಡ್ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರ ಮುಂದುವರೆದ ಭಾಗವಾಗಿ ಕಂಫನಿಯು ತನ್ನ ಹೊಸ Z ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಅಂಚು ರಹಿತ ಫುಲ್‌ಸ್ಕ್ರೀನ್ ಡಿಸ್‌ಪ್ಲೇ ವೀಕ್ಷಣೆ, FHD+ ಪ್ಯಾನಲ್‌ನಲ್ಲಿ ಹೊಸತನದ ಬದಲಾವಣೆಗಳನ್ನು ಗ್ರಾಹಕರಿಗೆ ಪರಿಚಯಿಸಲಿದೆ.

ಇತರೆ ಸೌಲಭ್ಯಗಳು
ವಿವೋ ಕಂಪನಿಯ Z ಸರಣಿಯ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ತ್ರಿವಳಿ ಕ್ಯಾಮೆರಾ ಫೀಚರ್ಸ್ ಅನ್ನು ನೀಡಲಿದ್ದು, ವೈಲ್ಡ್ ಆಂಗಲ್ ಲೆನ್ಸ್‌ಗಳನ್ನು ಅಳವಡಿಸುವ ಸಾಧ್ಯತೆಗಳಿವೆ. ಹಾಗೆಯೇ ನೂತನ ಆಂಡ್ರಾಯ್ಡ್ ಓಎಸ್, ಮತ್ತು ಪವರ್‌ಫುಲ್ ಬ್ಯಾಟರಿ ಶಕ್ತಿಯನ್ನು ನೀಡುವ ಸೂಚನೆಗಳನ್ನು ಹೊರಹಾಕಿದೆ. ಗುಣಮಟ್ಟದ ಸೌಂಡ್‌ಗಾಗಿ ಸ್ಟೀರಿಯೊ ಸ್ಪೀಕರ್ಸ್‌ಗಳನ್ನು ಸಹ ಅವಳಡಿಸುವ ನಿರೀಕ್ಷೆಗಳಿವೆ.

ಆನ್‌ಲೈನ್ ಮಾರುಕಟ್ಟೆಯತ್ತ ಗಮನ
ವಿವೋ ಈಗಾಗಲೇ ಆಫ್‌ಲೈನ್ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೇ ಹೊಂದಿದ್ದು, ಈಗ ಆನ್‌ಲೈನ್‌ನತ್ತ ಮನಸ್ಸು ಮಾಡಿದೆ. ಆನ್‌ಲೈನ್ ಮಾರುಕಟ್ಟೆಯಲ್ಲಿ ಸದ್ಯ ಸ್ಮಾರ್ಟ್‌ಫೋನ್‌ಗಳ ಮಾರಾಟ ಉತ್ತಮವಾಗಿದ್ದು, ವಿವೋ ಸಹ ತನ್ನ ಹೊಸ ಸರಣಿಯನ್ನು ಆನ್‌ಲೈನ್ ಮಾರುಕಟ್ಟೆಗೆ ಮೊದಲು ಪರಿಚಯಿಸುವ ಸಿದ್ಧತೆಗಳಲ್ಲಿದೆ. ಸ್ಯಾಮ್‌ಸಂಗ್, ಶಿಯೋಮಿ, ಹಾನರ್ ಮತ್ತು ಆಸೂಸ್ ಕಂಪನಿಗಳಿಗೆ ಆನ್‌ಲೈನ್ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470