Just In
- 7 hrs ago
ಜಪಾನ್ನಲ್ಲಿ ಸಿದ್ದವಾಗ್ತಿದೆ 60 ಅಡಿ ಎತ್ತರದ ಗುಂಡಮ್ ರೋಬೋಟ್!..ಹೇಗಿದೆ ಗೊತ್ತಾ?
- 7 hrs ago
ವಾಟ್ಸಾಪ್ ಡೌನ್ಲೋಡ್ ಕಡ್ಡಾಯವಲ್ಲ!..ದೆಹಲಿ ಹೈಕೋರ್ಟ್ ಸ್ಪಷ್ಟನೆ!
- 9 hrs ago
ಭಾರತದಲ್ಲಿ ಒನ್ಪ್ಲಸ್ ಸಂಸ್ಥೆಯಿಂದ ಹೊಸ ಇಯರ್ಬಡ್ಸ್ ಲಾಂಚ್! ವಿಶೇಷತೆ ಏನು?
- 12 hrs ago
ವಾಟ್ಸಾಪ್ನಲ್ಲಿ ವಾಯ್ಸ್ ಕಾಲ್ಗಳನ್ನು ರೆಕಾರ್ಡ್ ಮಾಡುವುದು ಹೇಗೆ ಗೊತ್ತಾ?
Don't Miss
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- News
Republic Day 2021 Live Updates : ರಾಜಪಥದಲ್ಲಿ 72ನೇ ಗಣತಂತ್ರದಿನ ಸಂಭ್ರಮ
- Automobiles
ಗಣರಾಜ್ಯೋತ್ಸವದ ಸಂಭ್ರಮಕ್ಕಾಗಿ ಮ್ಯಾಗ್ನೈಟ್ ಕಾರಿನೊಂದಿಗೆ ನಿಸ್ಸಾನ್ ಹೊಸ ಅಭಿಯಾನ ಘೋಷಣೆ
- Lifestyle
ಗಣರಾಜ್ಯೋತ್ಸವ ಪರೇಡ್ನಲ್ಲಿ ಇತಿಹಾಸ ಸೃಷ್ಟಿಸಲಿದ್ದಾರೆ ಸ್ವಾತಿ ರಾಥೋಡ್
- Movies
ದಿಗ್ಗಜ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂಗೆ ಪದ್ಮವಿಭೂಷಣ ಪ್ರಶಸ್ತಿ
- Sports
ಐಎಸ್ಎಲ್: ಬಾಗನ್ ಸೋಲಿಸುವ ಆತ್ಮವಿಶ್ವಾಸದಲ್ಲಿ ನಾರ್ಥ್ ಈಸ್ಟ್
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ವಿವೋ V15 ಪ್ರೊ' ಮತ್ತು 'ವಿವೋ S1' ಫೋನ್‌ಗಳ ಬೆಲೆ ಮತ್ತೆ ಅಗ್ಗ!
ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್, ಶಿಯೋಮಿ ಸಂಸ್ಥೆಗಳಿಗೆ ಪೈಪೋಟಿ ನೀಡುವ ಭರದಲ್ಲಿರುವ 'ವಿವೋ' ಕಂಪನಿಯು, ಇತ್ತೀಚಿಗೆ ಕೆಲ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಅವುಗಳಲ್ಲಿ 'ವಿವೋ ವಿ15 ಪ್ರೊ' ಮತ್ತು 'ವಿವೋ ಎಸ್1' ಸ್ಮಾರ್ಟ್‌ಫೋನಗಳು ಸೇರಿವೆ. ಆದ್ರೆ ಈಗ ಗ್ರಾಹಕರಿಗೆ ಖುಷಿ ವಿಷಯ ಏನೆಂದರೇ ಕಂಪನಿಯು ಈ ಎರಡು ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಅಧಿಕ ಇಳಿಕೆ ಮಾಡಿದೆ.

ಹೌದು, ವಿವೋ ಕಂಪನಿಯು ಜನಪ್ರಿಯ 'ವಿವೋ ವಿ15 ಪ್ರೊ' ಮತ್ತು 'ವಿವೋ ಎಸ್1' ಸ್ಮಾರ್ಟ್‌ಫೋನಗಳ ಪ್ರೈಸ್‌ನಲ್ಲಿ ಕಡಿತ ಮಾಡಿದೆ. 'ವಿವೋ ವಿ15 ಪ್ರೊ ಫೋನ್ ಶೇ.39% ಬೆಲೆ ಇಳಿಕೆಯಾಗಿದ್ದು, ಹಾಗೆಯೇ ವಿವೋ ಎಸ್1 ಸ್ಮಾರ್ಟ್‌ಫೋನ್ 4,000ರೂ.ವರೆಗೂ ಬೆಲೆ ಕಡಿತವಾಗಿದೆ. ಸದ್ಯ 6GB RAM ಮತ್ತು 128GB ವೇರಿಯಂಟ್‌ನ 'ವಿವೋ ವಿ15 ಪ್ರೊ' ಫೋನ್ 19,990ರೂ.ಗಳಿಗೆ ಸಿಗಲಿದೆ. ಹಾಗೂ ವಿವೋ ಎಸ್1 4GB RAM+128GB ವೇರಿಯಂಟ್ ಬೆಲೆಯು 15,990ರೂ.ಗಳಾಗಿದೆ. ಹಾಗಾದರೇ ವಿವೋ ವಿ15 ಪ್ರೊ' ಮತ್ತು 'ವಿವೋ ಎಸ್1' ಸ್ಮಾರ್ಟ್‌ಫೋನಗಳ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ವಿವೋ ವಿ 15 ಪ್ರೊ-ಡಿಸ್‌ಪ್ಲೇ
ವಿವೋ ವಿ 15 ಪ್ರೊ ಸ್ಮಾರ್ಟ್‌ಫೋನ್ 2340×1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಸೂಪರ್ AMOLEDನ 6.4 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಕ್ವಾಲಿಟಿಯ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರೊಂದಿಗೆ ಡಿಸ್‌ಪ್ಲೇಯಲ್ಲಿಯೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯವನ್ನು ಹೊಂದಿದೆ. ವಿ 15 ಪ್ರೋ ಸ್ಮಾರ್ಟ್‌ಫೋನ್‌ನಿನ ಬಾಹ್ಯರಚನೆ ಸುಂದರವಾಗಿದ್ದು, ಗ್ಲಾಸಿ ಲುಕ್ ನಲ್ಲಿ ಕಂಗೊಳಿಸುತ್ತದೆ.

ವಿವೋ ವಿ 15 ಪ್ರೊ-ಪ್ರೊಸೆಸರ್
ವಿವೋ ವಿ 15 ಪ್ರೊ ಸ್ಮಾರ್ಟ್‌ಫೋನ್ ಕ್ವಾಲ್ಕಂ ಸ್ನಾಪ್‌ಡ್ರಾಗನ್ 675 ಉತ್ತಮ ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ಇದರೊಂದಿಗೆ 6GB RAM ಸಾಮರ್ಥ್ಯ ಮತ್ತು 128 GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಸಹ ಹೊಂದಿದೆ. ಹೆಚ್ಚು RAM ಬೇಡುವ ಕೆಲಸಗಳು ಮತ್ತು ಹೈ ಎಂಡ್ ಗೇಮ್ಸ್‌ಗಳನ್ನು ಸುಲಭವಾಗಿ ಯಾವುದೇ ಅಡೆ ತಡೆ ಇಲ್ಲದೇ ಆಡಲು ಸಹಕರಿಸುತ್ತದೆ.

ವಿವೋ ವಿ 15 -48ಎಂಪಿ ಕ್ಯಾಮೆರಾ
ವಿವೋ ತನ್ನ ಹೊಸ ವಿವೋ ವಿ 15 ಪ್ರೊ ಸ್ಮಾರ್ಟ್‌ಫೋನ್ ಮೂಲಕ ಮೊದಲ ಬಾರಿಗೆ 48 ಮೆಗಾಪಿಕ್ಸಲ್ ಸಾಮರ್ಥ್ಯ ಇರುವ ಕ್ಯಾಮೆರಾವನ್ನು ಪರಿಚಯಿಸಿದೆ. ಹಿಂಭಾಗದಲ್ಲಿ ಒಟ್ಟು ಮೂರು ಕ್ಯಾಮೆರಾಗಳಿದ್ದು, ಮುಖ್ಯ ಕ್ಯಾಮೆರಾ f/1.8 ಅಪರ್ಚರ್ ನೊಂದಿಗೆ ಕ್ವಾಡ್ ಪಿಕ್ಸಲ್ ಸೆನ್ಸಾರ್‌ನ 48ಮೆಗಾಪಿಕ್ಸಲ್, ಸೆಂಕೆಂಡರಿ ಕ್ಯಾಮೆರಾ 8ಮೆಗಾಪಿಕ್ಸಲ್ ಮತ್ತು ಮೂರನೆ ಕ್ಯಾಮೆರಾ 5 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದೆ. 32 ಮೆಗಾಪಿಕ್ಸಲ್ ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾವನ್ನು ಹೊಂದಿದೆ.

ವಿವೋ ವಿ 15 ಪ್ರೊ-ಬ್ಯಾಟರಿ
ವಿವೋ ವಿ 15 ಪ್ರೊ ಸ್ಮಾರ್ಟ್‌ಫೋನ್ 3700mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಹೊಂದಿದ್ದು, ಒಂದು ಭಾರಿ ಫುಲ್ ಚಾರ್ಜ್ ಮಾಡಿದರೇ ನಿರಂತರ ಹತ್ತು ಗಂಟೆ ಬಾಳಿಕೆ ಬರುವ ಶಕ್ತಿಯನ್ನು ಹೊಂದಿದೆ. ಇದರೊಂದಿಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಅತ್ಯುತ್ತಮ ಬ್ಯಾಕ್‌ಅಪ್ ಅನಿಸಲಿದೆ.

ವಿವೋ ಎಸ್1-ಡಿಸ್‌ಪ್ಲೇ
1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದ 6.53 ಇಂಚಿನ ಫುಲ್ ಹೆಚ್‌ಡಿ IPS ಡಿಸ್‌ಪ್ಲೇಯನ್ನು ಹೊಂದಿದ್ದು, ಈ ಸ್ಮಾರ್ಟ್‌ಫೋನಿನ ಅನುಪಾತವು 19.5:9 ಆಗಿದೆ. ಡಿಸ್‌ಪ್ಲೇ ಮತ್ತು ಬಾಹ್ಯ ರಚನೆಯ ನಡುವಿನ ರೇಶಿಯೋ ಶೇ.90.95 ರಷ್ಟಿದೆ. ವಿಶಾಲ ಡಿಸ್‌ಪ್ಲೇ ವಿಡಿಯೊ ವೀಕ್ಷಣೆಗೆ ಅತ್ಯುತಮ ಎನಿಸಲಿದೆ.

ವಿವೋ ಎಸ್1-ಪ್ರೊಸೆಸರ್
ವಿವೋ ಎಸ್1 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ P70 SoC ಪ್ರೊಸೆಸರ್ ಅನ್ನು ಹೊಂದಿದ್ದು, ಇದರೊಂದಿಗೆ Mali-G72 GPU ಸಹ ಒದಗಿಸಲಾಗಿದೆ. 6 GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದ್ದು, ಇದರೊಟ್ಟಿಗೆ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯವಾಗಿ 256GB ವರೆಗೂ ವಿಸ್ತರಿಸಲು ಅವಕಾಶ ನೀಡಲಾಗಿದೆ.

ವಿವೋ ಎಸ್1-ಕ್ಯಾಮೆರಾ
ವಿವೋ ಎಸ್1 ಸ್ಮಾರ್ಟ್‌ಫೋನ್ 12 ಮೆಗಾಪಿಕ್ಸಲ್ f/1.78 ಲೆನ್ಸ್ ಹೊಂದಿದೆ, ಸೆಕೆಂಡರಿ ಕ್ಯಾಮೆರಾವು f/2.2 ವೈಲ್ಡ್ ಆಂಗಲ್ ಲೆನ್ಸ್‌ನೊಂದಿಗೆ 8 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದೆ. ಮತ್ತು ಮೂರನೇ ಕ್ಯಾಮೆರಾವು 5 ಮೆಗಾಪಿಕ್ಸಲ್ ಶಕ್ತಿಯೊಂದಿಗೆ f/2.4 ಲೆನ್ಸ್‌ಒಳಗೊಂಗೊಂಡಿದೆ.

ವಿವೋ ಎಸ್1-ಸೆಲ್ಫಿ ಕ್ಯಾಮೆರಾ
ವಿವೋ ವಿ15 ಪ್ರೋ ಸ್ಮಾರ್ಟ್‌ಪೋನ್ ಮಾದರಿಯಿಂದ ಸೆಲ್ಫಿಗೆ ಹೊಸ ಪಾಪ್‌ಅಪ್ ಸೆಲ್ಫಿ ಟ್ರೆಂಡ್ ಹುಟ್ಟುಹಾಕಿದೆ. ಹೊಸ ವಿವೋ ಎಸ್1 ಸ್ಮಾರ್ಟ್‌ಫೋನಿನಲ್ಲೂ 25 ಮೆಗಾಪಿಕ್ಸಲ್ ಸಾಮರ್ಥ್ಯದ ಪಾಪ್‌ಅಪ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಈ ಕ್ಯಾಮೆರಾ f/2.0 ಲೆನ್ಸ್ ಅನ್ನು ಹೊಂದಿದೆ.

ವಿವೋ ಎಸ್1-ಬ್ಯಾಟರಿ
3,940mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಒದಗಿಸಲಾಗಿದ್ದು, ಬ್ಯಾಟರಿ ಪೂರ್ಣ ಚಾರ್ಜ್‌ಆದರೆ ಒಂದು ದಿನ ನಿರಾತಂಕವಾಗಿ ಬಾಳಿಕೆ ಬರಲಿದೆ. ವೇಗದ ಚಾರ್ಜರ್ ಸೌಲಭ್ಯ ಸಹ ಇದ್ದು, ಐಸ್ ಲೆಕ್ ಬ್ಲೂ ಮತ್ತು ಪೆಟ್ ಪೌಡರ್ ಕಲರ್ ಆಯ್ಕೆಗಳನ್ನು ಹೊಂದಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190