ಭಾರತದಲ್ಲಿ 'ವಿವೋ S1' ಸ್ಮಾರ್ಟ್‌ಫೋನ್ ಬೆಲೆ ಇಳಿಕೆ!
ಚೀನಾ ಮೂಲದ ವಿವೋ ಕಂಪನಿಯು ಹಲವು ಅಗ್ಗದ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದಿದೆ. ಕಳೆದ ವರ್ಷ ಸಂಸ್ಥೆಯು ಬಿಡುಗಡೆ ಮಾಡಿದ್ದ ವಿವೋ ಎಸ್1 ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ, ಅಧಿಕ ಬ್ಯಾಟರಿ, ಪ್ರೊಸೆಸರ್ ಫೀಚರ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿತ್ತು. ಆದರೆ ಸಂಸ್ಥೆಯು ಈಗ ಈ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದ್ದು, ಮತ್ತೆ ಗ್ರಾಹಕರು ಈ ಫೋನ್‌ನತ್ತ ನೋಡುವಂತಾಗಿದೆ.

ಹೌದು, ವಿವೋ ಸಂಸ್ಥೆಯು ತನ್ನ ವಿವೋ ಎಸ್1 ಸ್ಮಾರ್ಟ್‌ಫೋನ್ ಬೆಲೆಯಲ್ಲಿ 1,000ರೂ ಕಡಿತ ಮಾಡಿದೆ. ಹೀಗಾಗಿ ದೇಶಿಯ ಮಾರುಕಟ್ಟೆಯಲ್ಲಿ 4GB RAM + 128GB ಸ್ಟೋರೇಜ್‌ನ ವಿವೋ ಎಸ್1 ವೇರಿಯಂಟ್ ಬೆಲೆಯು 16,990ರೂ.ಆಗಿದೆ. ಆದರೆ 6GB RAM + 64GB ಮತ್ತು 6GB RAM + 128GB ಸ್ಟೋರೇಜ್ ವೇರಿಯಂಟ್‌ಗಳು ಬೆಲೆ ಇಳಿಕೆ ಕಂಡಿಲ್ಲ. ವಿವೋ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬೆಲೆ ಇಳಿಕೆ ಆಗಿರುವುದು ಕಾಣಿಸಿದೆ. ಹಾಗಾದರೆ ವಿವೋ ಎಸ್1 ಫೋನಿನ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡಿರಿ.

ಡಿಸ್‌ಪ್ಲೇ
1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದ 6.53 ಇಂಚಿನ ಫುಲ್ ಹೆಚ್‌ಡಿ IPS ಡಿಸ್‌ಪ್ಲೇಯನ್ನು ಹೊಂದಿದ್ದು, ಈ ಸ್ಮಾರ್ಟ್‌ಫೋನಿನ ಅನುಪಾತವು 19.5:9 ಆಗಿದೆ. ಡಿಸ್‌ಪ್ಲೇ ಮತ್ತು ಬಾಹ್ಯ ರಚನೆಯ ನಡುವಿನ ರೇಶಿಯೋ ಶೇ.90.95 ರಷ್ಟಿದೆ. ವಿಶಾಲ ಡಿಸ್‌ಪ್ಲೇ ವಿಡಿಯೊ ವೀಕ್ಷಣೆಗೆ ಅತ್ಯುತಮ ಎನಿಸಲಿದೆ.

ಪ್ರೊಸೆಸರ್
ವಿವೋ ಎಸ್1 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ P70 SoC ಪ್ರೊಸೆಸರ್ ಅನ್ನು ಹೊಂದಿದ್ದು, ಇದರೊಂದಿಗೆ Mali-G72 GPU ಸಹ ಒದಗಿಸಲಾಗಿದೆ. 6 GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದ್ದು, ಇದರೊಟ್ಟಿಗೆ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯವಾಗಿ 256GB ವರೆಗೂ ವಿಸ್ತರಿಸಲು ಅವಕಾಶ ನೀಡಲಾಗಿದೆ.

ಕ್ಯಾಮೆರಾ
ವಿವೋ ಎಸ್1 ಸ್ಮಾರ್ಟ್‌ಫೋನ್ 12 ಮೆಗಾಪಿಕ್ಸಲ್ f/1.78 ಲೆನ್ಸ್ ಹೊಂದಿದೆ, ಸೆಕೆಂಡರಿ ಕ್ಯಾಮೆರಾವು f/2.2 ವೈಲ್ಡ್ ಆಂಗಲ್ ಲೆನ್ಸ್‌ನೊಂದಿಗೆ 8 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದೆ. ಮತ್ತು ಮೂರನೇ ಕ್ಯಾಮೆರಾವು 5 ಮೆಗಾಪಿಕ್ಸಲ್ ಶಕ್ತಿಯೊಂದಿಗೆ f/2.4 ಲೆನ್ಸ್‌ಒಳಗೊಂಗೊಂಡಿದೆ.

ಸೆಲ್ಫಿ ಕ್ಯಾಮೆರಾ
ವಿವೋ ವಿ15 ಪ್ರೋ ಸ್ಮಾರ್ಟ್‌ಪೋನ್ ಮಾದರಿಯಿಂದ ಸೆಲ್ಫಿಗೆ ಹೊಸ ಪಾಪ್‌ಅಪ್ ಸೆಲ್ಫಿ ಟ್ರೆಂಡ್ ಹುಟ್ಟುಹಾಕಿದೆ. ಹೊಸ ವಿವೋ ಎಸ್1 ಸ್ಮಾರ್ಟ್‌ಫೋನಿನಲ್ಲೂ 25 ಮೆಗಾಪಿಕ್ಸಲ್ ಸಾಮರ್ಥ್ಯದ ಪಾಪ್‌ಅಪ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಈ ಕ್ಯಾಮೆರಾ f/2.0 ಲೆನ್ಸ್ ಅನ್ನು ಹೊಂದಿದೆ.

ಬ್ಯಾಟರಿ
3,940mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಒದಗಿಸಲಾಗಿದ್ದು, ಬ್ಯಾಟರಿ ಪೂರ್ಣ ಚಾರ್ಜ್‌ಆದರೆ ಒಂದು ದಿನ ನಿರಾತಂಕವಾಗಿ ಬಾಳಿಕೆ ಬರಲಿದೆ. ವೇಗದ ಚಾರ್ಜರ್ ಸೌಲಭ್ಯ ಸಹ ಇದ್ದು, ಐಸ್ ಲೆಕ್ ಬ್ಲೂ ಮತ್ತು ಪೆಟ್ ಪೌಡರ್ ಕಲರ್ ಆಯ್ಕೆಗಳನ್ನು ಹೊಂದಿದೆ.


Click it and Unblock the Notifications