ವಿವೋ S1 ಪ್ರೊ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರಿ ಇಳಿಕೆ!

|

ಚೀನಾ ಮೂಲದ ಜನಪ್ರಿಯ ವಿವೋ ಕಂಪನಿಯು ಅಗ್ಗದ ಬೆಲೆಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಟ್ರೆಂಡ್ ಸೆಟ್ಟರ್ ಆಗಿ ಗುರುತಿಸಿಕೊಂಡಿದೆ. ವಿವೋ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ವಿವೋ S1 ಪ್ರೊ ಸ್ಮಾರ್ಟ್‌ಫೋನ್ ಕ್ಯಾಮೆರಾ ಮತ್ತು ಡಿಸೈನ್‌ನಿಂದ ಗ್ರಾಹಕರನ್ನು ಸೆಳೆದಿದ್ದು, ಈ ಫೋನ್ ಇದೀಗ ಭರ್ಜರಿ ಬೆಲೆ ಇಳಿಕೆಯಿಂದ ಮತ್ತಷ್ಟು ಗ್ರಾಹಕರನ್ನು ಆಕರ್ಷಿಸಲಿದೆ.

ವಿವೋ ಎಸ್‌1 ಪ್ರೊ

ಹೌದು, ವಿವೋ ಸಂಸ್ಥೆಯ ವಿವೋ ಎಸ್‌1 ಪ್ರೊ ಸ್ಮಾರ್ಟ್‌ಫೋನ್ ಇದೀಗ 2000ರೂ. ಬೆಲೆ ಇಳಿಕೆ ಕಂಡಿದೆ. 20,990ರೂ.ಗಳ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದ್ದ ಈ ಫೋನ್ ಈಗ ಬೆಲೆ ಕಡಿತದಿಂದಾಗಿ 18,990ರೂ.ಗಳಿಗೆ ಲಭ್ಯವಾಗಲಿದೆ. ಅಮೆಜಾನ್ ತಾಣದಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಫೋನ್ 48ಎಂಪಿ ಮೇನ್ ಕ್ಯಾಮೆರಾ, 32ಎಂಪಿ ಸೆಲ್ಫಿ ಕ್ಯಾಮೆರಾ, 665 ಪ್ರೊಸೆಸರ್‌, 4,500mAh ಬ್ಯಾಟರಿ ಸೌಲಭ್ಯಗಳಿಂದ ಹೈ ಕ್ಲಾಸ್‌ ಲುಕ್ ಪಡೆದಿದೆ. ವಿವೋ ಎಸ್‌1 ಪ್ರೊ ಫೋನಿನ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ವಿವೋ ಎಸ್‌1 ಪ್ರೊ ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್‌ ರೆಸಲ್ಯೂಶನ್ ಸಾಮರ್ಥ್ಯದ 6.38 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಟಿಯರ್ಡ್ರಾಪ್ ನಾಚ್ ಮಾದರಿಯನ್ನು ಹೊಂದಿದ್ದು, ಡಿಸ್‌ಪ್ಲೇ ಅನುಪಾತವು 19.5:9 ಆಗಿದೆ. ಡಿಸ್‌ಪ್ಲೇ ಮತ್ತು ಬಾಹ್ಯ ರಚನೆಯ ನಡುವಿನ ರೇಶಿಯೋ ಶೇ.83.4% ರಷ್ಟಿದೆ. ವಿಶಾಲ ಡಿಸ್‌ಪ್ಲೇ ವಿಡಿಯೊ ವೀಕ್ಷಣೆಗೆ ಅತ್ಯುತಮ ಎನಿಸಲಿದೆ.

ಪ್ರೊಸೆಸರ್ ಕಾರ್ಯ

ಪ್ರೊಸೆಸರ್ ಕಾರ್ಯ

ವಿವೋ ಎಸ್‌1 ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್‌ ಅನ್ನು ಹೊಂದಿದ್ದು, ಇದರೊಂದಿಗೆ ಆಂಡ್ರಾಯ್ಡ್‌ ಪೈ 9 ಓಎಸ್ ಬೆಂಬಲ ಒದಗಿಸಲಾಗಿದೆ. 8 GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದ್ದು, ಇದರೊಟ್ಟಿಗೆ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಸಂಗ್ರಹ ಮೆಮೊರಿ ವಿಸ್ತರಿಸಲು ಅವಕಾಶ ನೀಡಲಾಗಿದೆ.

ಕ್ಯಾಮೆರಾ ಸ್ಪೆಷಲ್

ಕ್ಯಾಮೆರಾ ಸ್ಪೆಷಲ್

ವಿವೋ ಎಸ್‌1 ಸ್ಮಾರ್ಟ್‌ಫೋನ್‌ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡಿರಿ ಕ್ಯಾಮೆರಾವು 8ಎಂಪಿ ಸೆನ್ಸಾರ್ ಪಡೆದಿದೆ. ಇನ್ನು ಮೂರನೇ ಮತ್ತು ನಾಲ್ಕನೇ ಕ್ಯಾಮೆರಾಗಳು ಕ್ರಮವಾಗಿ 2ಎಂಪಿ ಸೆನ್ಸಾರ್‌ ಸಾಮರ್ಥ್ಯವನ್ನು ಒಳಗೊಂಡಿವೆ. ಇದರೊಂದಿಗೆ 32ಎಂಪಿ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

ವಿವೋ ಎಸ್‌1 ಸ್ಮಾರ್ಟ್‌ಫೋನ್‌ 4,500mAh ಬ್ಯಾಟರಿ ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಒಳಗೊಂಡಿದೆ. ಇದರೊಂದಿಗೆ 18W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ವೈಫೈ, ಬ್ಲೂಟೂತ್, ಜಿಪಿಎಸ್‌, ನಂತಹ ಅಗತ್ಯ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇನ್ನು ಈ ಫೋನ್ ಐಸ್‌ ಲೆಕ್‌ ಬ್ಲೂ ಮತ್ತು ಪೆಟ್‌ ಪೌಡರ್‌ ಕಲರ್‌ ಆಯ್ಕೆಗಳನ್ನು ಹೊಂದಿದೆ.

Best Mobiles in India

English summary
The phone offers specs like 48MP AI quad-camera setup, 32MP selfie shooter and gorgeous design.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X