ವಿವೋ S17 ಸ್ಮಾರ್ಟ್‌ಫೋನ್ ಸರಣಿ ಲಾಂಚ್!..ಫೀಚರ್ಸ್ ತಿಳಿದ್ರೆ ಅಚ್ಚರಿ ಪಡ್ತೀರಾ?
ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಬ್ರ್ಯಾಂಡ್‌ಗಳಲ್ಲಿ ಚೀನಾ ಮೂಲದ ವಿವೋ ಕಂಪೆನಿ ಕೂಡ ಒಂದಾಗಿದೆ. ವಿವೋ ಸಂಸ್ಥೆಯು ಇದೀಗ ನೂತನವಾಗಿ ತನ್ನ S ಸರಣಿಯಲ್ಲಿ ಮೂರು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿವೆ. ಅವುಗಳು ಕ್ರಮವಾಗಿ ವಿವೋ S17, ವಿವೋ S17 ಪ್ರೊ ಮತ್ತು ವಿವೋ S17t ಆಗಿವೆ.
ಹೌದು, ವಿವೋ ನೂತನವಾಗಿ ವಿವೋ S17, ವಿವೋ S17 ಪ್ರೊ ಮತ್ತು ವಿವೋ S17t ಸ್ಮಾರ್ಟ್‌ಫೋನ್‌ಗಳನ್ನು ಚೀನಾ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಈ ಫೋನ್‌ಗಳು ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಪಡೆದಿವೆ. ಜೊತೆಗೆ 80W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿರುವುದು ಪ್ಲಸ್ ಪಾಯಿಂಟ್ ಆಗಿ ಕಾಣಿಸಿಕೊಂಡಿದೆ.

ಇದರೊಂದಿಗೆ ವಿವೋ ಸಂಸ್ಥೆಯು ಮುಂಭಾಗದಲ್ಲಿ 50 ಮೆಗಾ ಪಿಕ್ಸಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಅನ್ನು ಒಳಗೊಂಡಿವೆ. ಹಾಗೆಯೇ ಡ್ಯುಯಲ್ ಸಾಫ್ಟ್ ಎಲ್‌ಇಡಿ ಫ್ಲ್ಯಾಶ್ ಸೌಲಭ್ಯವನ್ನು ಪಡೆದಿವೆ. ಇನ್ನುಳಿದಂತೆ ವಿವೋ S17, ವಿವೋ S17 ಪ್ರೊ ಮತ್ತು ವಿವೋ S17t ಸ್ಮಾರ್ಟ್‌ಫೋನ್‌ಗಳು ಯಾವೆಲ್ಲಾ ಫೀಚರ್ಸ್ ಪಡೆದಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ವಿವೋ S17 ಫೀಚರ್ಸ್ : ವಿವೋ S17 ಫೋನ್ 6.78 ಇಂಚಿನ ಅಮೊಲೆಡ್ ಡಿಸ್‌ಪ್ಲೇ ಅನ್ನು ಹೊಂದಿದೆ. ಹಾಗೆಯೇ ಇದರ ಡಿಸ್‌ಪ್ಲೇಯು 2800 × 1260 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಹಾಗೆಯೇ ಈ ಫೋನ್ ಸ್ನಾಪ್‌ಡ್ರಾಗನ್ 778G+ ಪ್ರೊಸೆಸರ್ ಹೊಂದಿದ್ದು, 8GB/12GB RAM ಮತ್ತು 256/512GB ಸ್ಟೋರೇಜ್ ಆಯ್ಕೆ ಪಡೆದಿದೆ. ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದೆ. ಇದರೊಂದಿಗೆ 4,600mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಅದಕ್ಕೆ ಪೂರಕವಾಗಿ 80W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಪಡೆದಿದೆ.

ವಿವೋ S17 ಪ್ರೊ ಫೀಚರ್ಸ್ : ವಿವೋ S17 ಪ್ರೊ ಫೋನ್ 6.78 ಇಂಚಿನ ಅಮೊಲೆಡ್ ಡಿಸ್‌ಪ್ಲೇ ಅನ್ನು ಹೊಂದಿದೆ. ಹಾಗೆಯೇ ಇದರ ಡಿಸ್‌ಪ್ಲೇಯು 2800 × 1260 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಹಾಗೆಯೇ ಈ ಫೋನ್ ಮೀಡಿಯಾ ಟೆಕ್ನ ಆಕ್ಟಾ-ಕೋರ್ ಡೈಮೆನ್ಸಿಟಿ 8020 ಪ್ರೊಸೆಸರ್ ಹೊಂದಿದ್ದು, 8GB/12GB RAM ಮತ್ತು 256/512GB ಸ್ಟೋರೇಜ್ ಆಯ್ಕೆ ಪಡೆದಿದೆ. ಜೊತೆಗೆ ಇತ್ತೀಚಿನ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಸಹ ಪಡೆದಿದೆ.
ಇನ್ನು ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದ್ದು, ಸೆಲ್ಫಿ ಕ್ಯಾಮೆರಾ ಸಹ 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇದರೊಂದಿಗೆ 4,600mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಅದಕ್ಕೆ ಪೂರಕವಾಗಿ 80W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಪಡೆದಿದೆ. ಇನ್ ಡಿಸ್‌ಪ್ಲೇ ಫಿಂಗರ್‌ಫ್ರಿಂಟ್ ಸೆನ್ಸಾರ್ ಆಯ್ಕೆ, ಸ್ಟೀರಿಯೋ ಸ್ಪೀಕರ್ ಆಯ್ಕೆಗಳು ಇವೆ.
ವಿವೋ S17t ಫೀಚರ್ಸ್ : ವಿವೋ S17t ಫೋನ್ 6.78 ಇಂಚಿನ ಅಮೊಲೆಡ್ ಡಿಸ್‌ಪ್ಲೇ ಅನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿದೆ. ಹಾಗೆಯೇ ಇದರ ಡಿಸ್‌ಪ್ಲೇಯು 2800 × 1260 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಇದಲ್ಲದೇ ಈ ಫೋನ್ ಸ್ನಾಪ್‌ಡ್ರಾಗನ್ 778G+ ಪ್ರೊಸೆಸರ್ ಹೊಂದಿದ್ದು, 8GB/12GB RAM ಮತ್ತು 256/512GB ಸ್ಟೋರೇಜ್ ಆಯ್ಕೆ ಪಡೆದಿದೆ. ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದೆ. ಇದರೊಂದಿಗೆ 4,600mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಅದಕ್ಕೆ ಪೂರಕವಾಗಿ 80W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಪಡೆದಿದೆ.


Click it and Unblock the Notifications








