Home
ಸುದ್ದಿಜಾಲ

ಬಿಡುಗಡೆಗೆ ಸಜ್ಜಾದ 'ವಿವೋ S18'!..ಇದರ ಫೀಚರ್ಸ್‌ಗೆ ಗ್ರಾಹಕರು ಹುಬ್ಬೇರಿಸುವುದು ಪಕ್ಕಾ!

ಜನಪ್ರಿಯ ವಿವೋ ಮೊಬೈಲ್‌ ಸಂಸ್ಥೆಯು ಇದೀಗ ತನ್ನ ಬಹುನಿರೀಕ್ಷಿತ ವಿವೋ S18 (Vivo S18) ಸ್ಮಾರ್ಟ್‌ಫೋನ್‌ ಸರಣಿಯನ್ನು ಬಿಡುಗಡೆ ಮಾಡಲು ಅಧಿಕೃತ ದಿನಾಂಕ ತಿಳಿಸಿದೆ. ಅಂದಹಾಗೆ ವಿವೋ ಬಿಡುಗಡೆ ಮಾಡಲಿರುವ ಈ ನೂತನ ಸರಣಿಯು ಈ ಹಿಂದಿನ ವಿವೋ S17 ಸರಣಿಯ ಉತ್ತರಾಧಿಕಾರಿ ಎಂದು ಬಿಂಬಿತವಾಗಿದೆ.

ಹೌದು, ವಿವೋ ಕಂಪನಿಯು ವಿವೋ S18 ಸ್ಮಾರ್ಟ್‌ಫೋನ್‌ ಅನ್ನು ಇದೇ ಡಿಸೆಂಬರ್ 14 ರಂದು ಅಧಿಕೃತವಾಗಿ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ. ಇನ್ನು ಈ ನೂತನ ಸ್ಮಾರ್ಟ್‌ಫೋನ್‌ ಸರಣಿಯು ವಿವೋ S18, ವಿವೋ S18e ಮತ್ತು ವಿವೋ S18 ಪ್ರೊ ಹೆಸರಿನ ವೇರಿಯಂಟ್‌ಗಳಲ್ಲಿ ಮಾರುಕಟ್ಟೆ ಪ್ರವೇಶ ಮಾಡಲಿವೆ.

ಬಿಡುಗಡೆಗೆ ವಿವೋ S18 ರೆಡಿ!.ಇದರ ಫೀಚರ್ಸ್‌ಗೆ ಗ್ರಾಹಕರು ಹುಬ್ಬೇರಿಸುವುದು ಪಕ್ಕಾ

ಈ ಬಗ್ಗೆ Weibo ನಲ್ಲಿ ಕೆಲವು ಟೀಸರ್‌ಗಳ ಸದ್ದು ಮಾಡುತ್ತಿವೆ. ಇನ್ನು ಈ ವಿವೋ S18, ವಿವೋ S18e ಮತ್ತು ವಿವೋ S18 ಪ್ರೊ ಸ್ಮಾರ್ಟ್‌ಫೋನ್‌ಗಳು 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಒಳಗೊಂಡಿರಲಿವೆ. ಹಾಗಾದರೇ ಇನ್ನುಳಿಂದ ವಿವೋ ಸಂಸ್ಥೆಯ ಈ ನೂತನ ಮೂರು ಫೋನ್‌ಗಳ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿವೋ S18 ನಿರೀಕ್ಷಿತ ಫೀಚರ್ಸ್‌

ವಿವೋ S18 ಮೊಬೈಲ್‌ 6.82 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಪಡೆದಿರುಲಿದ್ದು, OLED ಸ್ಕ್ರೀನ್ ಒಳಗೊಂಡಿರಲಿದೆ. ಹಾಗೆಯೇ 1800 x 3440 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿರುಲಿದ್ದು, ಜೊತೆಗೆ ಡಿಸ್‌ಪ್ಲೇ 569 ಪಿಪಿಐ ಪಿಕ್ಸೆಲ್‌ ಸಾಂದ್ರತೆಯನ್ನು ಪಡೆದಿರಲಿದೆ. ಇದರೊಂದಿಗೆ 2800 ನಿಟ್ಸ್‌ ಬ್ರೈಟ್‌ನೆಸ್‌, 144 Hz ರಿಫ್ರೆಶ್ ರೇಟ್‌ ಮತ್ತು 480 Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಬೆಂಬಲಿಸಲಿದೆ.

ಬಿಡುಗಡೆಗೆ ವಿವೋ S18 ರೆಡಿ!.ಇದರ ಫೀಚರ್ಸ್‌ಗೆ ಗ್ರಾಹಕರು ಹುಬ್ಬೇರಿಸುವುದು ಪಕ್ಕಾ

ಹಾಗೆಯೇ ಈ ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 7 Gen 3SoC ಪ್ರೊಸೆಸರ್‌ ಜೊತೆಗೆ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ನೊಂದಿಗೆ ಕೆಲಸ ನಿರ್ವಹಿಸಲಿದೆ ಎಂದು ಲೀಕ್ ಮಾಹಿತಿಗಳಿಂದ ತಿಳಿದು ಬಂದಿದೆ. ಅಲ್ಲದೇ 8GB RAM ಮತ್ತು 128 GB ಸ್ಟೋರೇಜ್‌ ಆಯ್ಕೆ ಪಡೆದಿರಲಿದೆ. ಹಿಂಭಾಗದಲ್ಲಿ ಈ ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಪಡೆದಿರುವುದು ಖಚಿತ ಎನ್ನಲಾಗಿದೆ.

ಇದರ ಪ್ರಾಥಮಿಕ ಕ್ಯಾಮೆರಾ 64 ಮೆಗಾ ಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹಾಗೂ ಮೂರನೇ ಕ್ಯಾಮೆರಾ 2ಮೆಗಾಪಿಕ್ಸೆಲ್‌ ಸೆನ್ಸಾರ್‌ ಆಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದರ ಜೊತೆಗೆ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ತಿಳಿದು ಬಂದಿದೆ.

ಬಿಡುಗಡೆಗೆ ವಿವೋ S18 ರೆಡಿ!.ಇದರ ಫೀಚರ್ಸ್‌ಗೆ ಗ್ರಾಹಕರು ಹುಬ್ಬೇರಿಸುವುದು ಪಕ್ಕಾ

ಹಾಗೆಯೇ ಈ ಫೋನ್‌ 5000 mAh ಸಾಮರ್ಥ್ಯದ ಬ್ಯಾಟರಿ ಅನ್ನು ಪಡೆದಿರಲಿದ್ದು, ಜೊತೆಗೆ 67W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 4G, 5G, VoLTE, ಬ್ಲೂಟೂತ್ v5.3, ವೈಫೈ, NFC, USB-C v2.0ಅನ್ನು ಬೆಂಬಲಿಸಲಿದೆ.

ವಿವೋ S18 ಪ್ರೊ ನಿರೀಕ್ಷಿತ ಫೀಚರ್ಸ್‌

ವಿವೋ S18 ಪ್ರೊ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 9200+ ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಈ ಫೋನ್‌ 5000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 80W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಕೂಡಾ ಪಡೆದಿರಲಿದೆ. ಹಾಗೆಯೇ ಈ ಫೋನ್‌ 50 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಸಪೋರ್ಟ್‌ ಜೊತೆಗೆ ಡ್ಯುಯಲ್ ಸಾಫ್ಟ್ ಲೈಟ್‌ ಸೌಲಭ್ಯ ಪಡೆದಿರುವ ನಿರೀಕ್ಷೆಗಳು ಇವೆ.

ಅಂದಹಾಗೆ ಈ ವಿವೋ S18 ಫೋನ್‌ ಸರಣಿಯು 16GB RAM ಸೌಲಭ್ಯದ ಆಯ್ಕೆಯನ್ನು ಪಡೆದಿರಲಿದ್ದು, ವರ್ಚುವಲ್‌ RAM ಮೂಲಕ ಇನ್ನೂ 16GB RAM ವರೆಗೂ ವಿಸ್ತರಿಸುವ ಆಯ್ಕೆ ಕೂಡಾ ಒಳಗೊಂಡಿರಲಿದೆ ಎಂದು ಹೇಳಲಾಗ್ತಿದೆ.

Best Mobiles in India

English summary
Vivo S18 Series smartphones Launch Date Confirmed. This series will come with vivo S18, vivo S18e and vivo S18 Pro smartphones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+