Vivo: ವಿವೋ S19 ಮತ್ತು ವಿವೋ S19 ಪ್ರೊ ಬಿಡುಗಡೆ ಸನ್ನಿಹಿತ.. ಫೀಚರ್ಸ್ ಏನಿರಲಿವೆ?
ವಿವೋ ಸ್ಮಾರ್ಟ್‌ಫೋನ್‌ಗಳಿಗೆ (Vivo smartphone) ಜಾಗತಿಕವಾಗಿ ವಿಶೇಷವಾದ ಬೇಡಿಕೆ ಇದೆ. ಈ ನಡುವೆ ವಿವೋ ಹೊಸ ಹೊಸ ಫೋನ್‌ಗಳನ್ನು ಲಾಂಚ್ ಮಾಡಿಕೊಂಡು ಬರುತ್ತಲೇ ಇದ್ದು, ಇದರೊಂದಿಗೆ ಈಗ ವಿವೋ S19 ಸರಣಿ (Vivo S19 series) ಫೋನ್‌ಗಳ ಬಗ್ಗೆ ಕೆಲವು ಮಾಹಿತಿ ಬಹಿರಂಗಪಡಿಸಿದೆ.
ಹೌದು, ವಿವೋ S19 ಮತ್ತು ವಿವೋ S19 ಪ್ರೊ (Vivo S19 and Vivo S19 Pro) MIIT ಪ್ರಮಾಣೀಕರಣವನ್ನು ಪಡೆದಿದ್ದು, ಇದರಿಂದಾಗಿ ಈ ಫೋನ್‌ಗಳು ಬಿಡುಗಡೆ ಸನ್ನಿಹಿತವಾಗಿದೆ ಎಂದು ತಿಳಿದುಬಂದಿದೆ. ಈ ಲಿಸ್ಟ್‌ನಲ್ಲಿ ಕ್ರಮವಾಗಿ V2364A ಮತ್ತು V2362A ಮಾದರಿ ಸಂಖ್ಯೆಗಳನ್ನು ಪಡೆದುಕೊಂಡಿವೆ. ಹಾಗಿದ್ರೆ, ಈ ಫೋನ್‌ಗಳು ಯಾವಾಗ ಲಾಂಚ್ ಆಗಬಹುದು?, ಫೀಚರ್ಸ್ ಏನಿರಬಹುದು ಅನ್ನೋ ಮಾಹಿತಿ ಇಲ್ಲಿದೆ ನಳಡಿ.

ವಿವೋ S18 ಸರಣಿಯ ಉತ್ತರಾಧಿಕಾರಿ ವಿವೋ S19: ವಿವೋ ಎರಡು ಹೊಸ ಮಿಡ್ ರೇಂಜ್ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರಬಹುದು ಎಂದು ತಿಳಿದುಬಂದಿದೆ. ಅದುವೇ ವಿವೋ S19 ಮತ್ತು ವಿವೋ S19 ಪ್ರೊ. ಇದು ವಿವೋ S18 ಸರಣಿಯ ಉತ್ತರಾಧಿಕಾರಿಯಾಗಿ ಎಂಟ್ರಿ ನೀಡಲಿದೆ ಎನ್ನಲಾಗಿದ್ದು, ಫೋನ್‌ಗಳನ್ನು ಈಗ ಚೀನಾದ ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MIIT) ಪ್ರಮಾಣೀಕರಿಸಿದೆ. ವಿವೋ S19 ಟೀಮ್ ಚೀನಾದ 3C ಪ್ಲಾಟ್‌ಫಾರ್ಮ್‌ನಲ್ಲಿ ಕಾಣಿಸಿಕೊಂಡ ನಂತರ ಈ ಫೋನ್ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಮೊದಲೇ ತಿಳಿಸಿದಂತೆ MIIT ಪಟ್ಟಿಯು ವಿವೋ S19 ಮತ್ತು ವಿವೋ S19 ಪ್ರೊಗೆ ಕ್ರಮವಾಗಿ V2364A ಮತ್ತು V2362A ಮಾದರಿ ಸಂಖ್ಯೆಗಳನ್ನು ನೀಡಿದೆ ಎಂಬ ವಿಷಯವನ್ನು ಬಹಿರಂಗಪಡಿಸುತ್ತದೆ. ಆದರೆ, ಈ ಪಟ್ಟಿಯು ಯಾವುದೇ ಹಾರ್ಡ್‌ವೇರ್ ಫೀಚರ್ಸ್ ಅನ್ನು ಬಹಿರಂಗಪಡಿಸಿಲ್ಲ. ಅದಾಗ್ಯೂ 5G ಮತ್ತು 4G ನೆಟ್‌ವರ್ಕ್ ಬೆಂಬಲವಿದೆ ಎಂದು ಉಲ್ಲೇಖಿಸುತ್ತದೆ.

ಆಂಡ್ರಾಯ್ಡ್ ಆವೃತ್ತಿಯ ಮಾಹಿತಿ ಬಹಿರಂಗಪಡಿಸದಿದ್ದರೂ, ಈ ಫೋನ್ ಆಂಡ್ರಾಯ್ಡ್ 14 ಅನ್ನು ಬೂಟ್ ಮಾಡಬಹುದು ಎಂದು ನಂಬಲಾಗಿದೆ. ಇದರ ಜೊತೆಗೆ 80W ವೇಗದ ಚಾರ್ಜಿಂಗ್ ಬೆಂಬಲವನ್ನು ಪಡೆದಿರಲಿದೆ ಎಂದು ತಿಳಿದುಬಂದಿದ್ದು, ಡಿಸೆಂಬರ್‌ನಲ್ಲಿ ಚೀನಾದಲ್ಲಿ ಲಾಂಚ್ ಆದ ವಿವೋ S18 ಮತ್ತು ವಿವೋ S18 ಪ್ರೊ (Vivo S18 and Vivo S18 Pro) ಫೋನ್‌ಗಳ ಕೆಲವು ಫೀಚರ್ಸ್ ಕಡೆ ಕಣ್ಣಯಿಸೋಣ ಬನ್ನಿ.
ವಿವೋ S18 ಮತ್ತು ವಿವೋ S18 ಪ್ರೊ ಫೀಚರ್ಸ್: ಈ ಸ್ಮಾರ್ಟ್‌ಫೋನ್ 6.78 ಇಂಚಿನ FHD+ ಅಮೋಲೆಡ್ ಡಿಸ್‌ಪ್ಲೇ ಜೊತೆಗೆ 2800×1260 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಹಾಗೆಯೇ HDR10+, 120Hz ರಿಫ್ರೆಶ್ ರೇಟ್, 100 ಪ್ರತಿಶತ DCI-P3 ಬಣ್ಣದ ಹರವು, ಮತ್ತು 2800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಈ ಎರಡೂ ಫೋನ್‌ಗಳಲ್ಲಿ ಕಾಣಬಹುದಾಗಿದೆ.
ಪ್ರೊಸೆಸರ್ ವಿಚಾರಕ್ಕೆ ಬಂದರೆ ವಿವೋ S18 ಪ್ರೊನಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 9200+ ಪ್ರೊಸೆಸರ್ ಹಾಗೂ ಇಮ್ಮೋರ್ಟಲಿಟಿಸ್ G715 ಜಿಪಿಯು ಬಲದೊಂದಿಗೆ ಕೆಲಸ ಮಾಡಲಿದೆ. ಹಾಗೆಯೇ ಪ್ರಮಾಣಿತ ವಿವೋ S18 ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 7 ಜನ್ 3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಅಡ್ರಿನೋ 720 ಜಿಪಿಯುವನ್ನು ಕಾಣಬಹುದಾಗಿದೆ. ಹಾಗೆಯೇ 8GB/12GB/ 16GB ಮತ್ತು 256GB/512GB UFS 3.1 ಇಂಟರ್ ಸ್ಟೋರೇಜ್ ಅನ್ನು ಈ ಫೋನ್‌ಗಳಲ್ಲಿ ಕಾಣಬಹುದಾಗಿದ್ದು, ಒರ್ಜಿನ್‌ಓಎಸ್ 4 ಜೊತೆಗೆ ಆಂಡ್ರಾಯ್ಡ್ 14 ಓಎಸ್ ಅನ್ನು ರನ್ ಮಾಡಲಿದೆ.

ಇನ್ನು ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ ವಿವೋ S18 ಪ್ರೊ 50 ಮೆಗಾಪಿಕ್ಸೆಲ್ ಸೋನಿ IMX920 ಸೆನ್ಸರ್, f/2.0 ದ್ಯುತಿರಂಧ್ರದೊಂದಿಗೆ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ JN1 ಅಲ್ಟ್ರಾ-ವೈಡ್ ಸೆನ್ಸರ್ ಮತ್ತು 12 ಮೆಗಾಪಿಕ್ಸೆಲ್ 2x ಟೆಲಿಫೋಟೋ ಪೋರ್ಟ್ರೇಟ್ ಸೆನ್ಸರ್ ಆಯ್ಕೆ ಪಡೆದಿದ್ದು, ವಿವೋ S18 ವೆನಿಲ್ಲಾ ಮಾದರಿಯು 50 ಮೆಗಾಪಿಕ್ಸೆಲ್ ಓಮ್ನಿವಿಷನ್ OV50E ಸೆನ್ಸರ್, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಓಮ್ನಿವಿಷನ್ OV08D10 ಸೆನ್ಸರ್‌ನೊಂದಿಗೆ ಬರಲಿದೆ. ಇದರ ಜೊತೆಗೆ ಡ್ಯುಯಲ್ ಸಾಫ್ಟ್ ಎಲ್ಇಡಿ ಫ್ಲ್ಯಾಷ್ನೊಂದಿಗೆ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಕಾಣಬಹುದಾಗಿದೆ.
ಉಳಿದಂತೆ ಈ ಫೋನ್ ಗಳು 80W ವೇಗದ ಚಾರ್ಜಿಂಗ್‌ನೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಪ್ಯಾಕ್ ಮಾಡಲಿದ್ದು, 5G SA/NSA, ಡ್ಯುಯಲ್ 4G VoLTE, ವೈ ಫೈ 6, ಬ್ಲೂಟೂತ್, ಜಿಪಿಎಸ್, ಯುಎಸ್‌ಬಿ ಟೈಪ್-ಸಿ, ಮತ್ತು ಎನ್‌ಎಫ್‌ಸಿ ಸೇರಿದಂತೆ ಅನೇಕ ಕನೆಕ್ಟಿವಿಟಿ ಸೌಲಭ್ಯವನ್ನು ಈ ಫೋನ್‌ಗಳಲ್ಲಿ ಕಾಣಬಹುದಾಗಿದೆ.


Click it and Unblock the Notifications








