Home
ಸುದ್ದಿಜಾಲ

Vivo: ಮೇ 30 ಕ್ಕೆ ವಿವೋ S19, S19 ಪ್ರೊ ಹಾಗೂ ವಿವೋ ವಾಚ್‌ GT ಲಾಂಚ್‌! ಫೀಚರ್ಸ್‌ ಏನಿರಲಿವೆ?

ವಿವೋ ಸ್ಮಾರ್ಟ್‌ಫೋನ್‌ಗಳಿಗೆ (Vivo smartphone) ವಿಶೇಷ ಬೇಡಿಕೆ ಇದ್ದು, ಈ ನಡುವೆ ಮತ್ತೆ ಹೊಸ ಸರಣಿಯ ಫೋನ್‌ಗಳು ಲಾಂಚ್‌ ಮಾಡಲು ದಿನಾಂಕ ನಿಗದಿ ಮಾಡಲಾಗಿದೆ. ಈ ಮೂಲಕ ಸ್ಮಾರ್ಟ್‌ಫೋನ್‌ ವಲಯದಲ್ಲಿ ವಿವೋ ಸಂಚಲನ ಉಂಟು ಮಾಡಲು ಸಜ್ಜಾಗಿದೆ.

ಹೌದು, ಮೇ 30 ರಂದು ಚೀನಾದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ S19 ಸರಣಿಯ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಈ ವಿಭಾಗದಲ್ಲಿ ಎರಡು ಫೋನ್‌ಗಳನ್ನು ಕಾಣಬಹುದಾಗಿದೆ. ಇದರ ಜೊತೆಗೆ ಸ್ಮಾರ್ಟ್‌ವಾಚ್‌ ಸಹ ಲಾಂಚ್‌ ಆಗಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಏನಿವೆ ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಮೇ 30 ಕ್ಕೆ ವಿವೋ S19, S19 ಪ್ರೊ ಹಾಗೂ ವಿವೋ ವಾಚ್‌ GT ಲಾಂಚ್‌!

ವಿವೋ S19, S19 ಪ್ರೊ ಹಾಗೂ ವಿವೋ ವಾಚ್‌ ಜಿಟಿ : ವಿವೋ ಇದೀಗ ವಿವೋ S19 ಮತ್ತು ವಿವೋ S19 ಪ್ರೊ ಹಾಗೂ ವಿವೋ ವಾಚ್ GT (Vivo S19 and Vivo S19 Pro and Vivo Watch GT ) ಬಿಡುಗಡೆಯನ್ನು ದೃಢಪಡಿಸಿದೆ. ಈ ಮೂರು ಡಿವೈಸ್‌ಗಳು ಒಂದೇ ಬಾರಿಗೆ ಲಾಂಚ್‌ ಆಗಲಿದ್ದು, ಸ್ಮಾರ್ಟ್‌ ಗ್ಯಾಜೆಟ್ ಪ್ರಿಯರಿಗೆ ಸಂತಸ ನೀಡಲಿದೆ. ಕೆಲವು ಲೀಕ್‌ ಮಾಹಿತಿ ಪ್ರಕಾರ ಈ ಎರಡೂ ಫೋನ್‌ಗಳು ಹೆಚ್‌ಡಿಆರ್‌10+ ಜೊತೆಗೆ 6.78 ಇಂಚಿನ (2800×1260 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌) 1.5K ಅಮೋಲೆಡ್‌ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಜೊತೆಗೆ 20:9 ಆಕಾರ ಅನುಪಾತ, 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿರಲಿದೆ ಎಂದು ಉಲ್ಲೇಖಿಸಲಾಗಿದೆ.

ಇದರ ಜೊತೆಗೆ ಈ ವಿವೋ S19 ಪ್ರೊ ಸ್ಮಾರ್ಟ್‌ಫೋನ್ 3.35GHz ಆಕ್ಟಾ ಕೋರ್ ಡೈಮೆನ್ಸಿಟಿ 9200+ 4nm ಪ್ರೊಸೆಸರ್ ಜೊತೆಗೆ ಇಮ್ಮಾರ್ಟಲಿಸ್-G715 ಜಿಪಿಯು ಬಲ ಪಡೆದುಕೊಂಡಿರಲಿದ್ದು, ವಿವೋ S19 ಸ್ಮಾರ್ಟ್‌ಫೋನ್‌ ಅಡ್ರಿನೋ 720 ಜಿಪಿಯು ಬಲದೊಂದಿಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜನ್ 3 (4nm) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಒರ್ಜಿನ್‌ಓಎಸ್‌ 4 ಜೊತೆಗೆ ಆಂಡ್ರಾಯ್ಡ್‌ 14 ಓಎಸ್‌ ಅನ್ನು ರನ್‌ ಮಾಡಲಿವೆ ಎಂದು ತಿಳಿದುಬಂದಿದೆ.

ಮೇ 30 ಕ್ಕೆ ವಿವೋ S19, S19 ಪ್ರೊ ಹಾಗೂ ವಿವೋ ವಾಚ್‌ GT ಲಾಂಚ್‌!

ಅಲ್ಲದೆ ಈ ವಿವೊ S19 ಪ್ರೊ ಸ್ಮಾರ್ಟ್‌ಫೋನ್ 1/1.56 ಇಂಚಿನ ಸೋನಿ IMX921 ಸೆನ್ಸರ್‌ನೊಂದಿಗೆ 50 ಮೆಗಾಪಿಕ್ಸೆಲ್‌ ಕ್ಯಾಮೆರಾ, ಓಐಎಸ್‌, ಎಲ್‌ಇಡಿ ಫ್ಲ್ಯಾಶ್, 8 ಮೆಗಾಪಿಕ್ಸೆಲ್‌ ಜೊತೆಗೆ ಅಲ್ಟ್ರಾ ವೈಡ್ ಸೆನ್ಸರ್‌, 50 ಮೆಗಾಪಿಕ್ಸೆಲ್‌ ಟೆಲಿಫೋಟೋ ಪೋರ್ಟ್ರೇಟ್ ಕ್ಯಾಮೆರಾ ಜೊತೆಗೆ ಸೋನಿ IMX816 ಸೆನ್ಸರ್‌, 50x ಡಿಜಿಟಲ್ ಜೂಮ್, ಔರಾ ಲೈಟ್ ಸೌಲಭ್ಯ ಪಡೆದಿರಲಿದೆ ಎನ್ನಲಾಗಿದೆ. ಇದರ ಜೊತೆಗೆ ವಿವೋ S19 ಸ್ಮಾರ್ಟ್‌ಫೋನ್ 1/1.56 ಇಂಚಿನ ಸ್ಯಾಮ್‌ಸಂಗ್‌ GNJ ಸೆನ್ಸರ್‌ನೊಂದಿಗೆ 50 ಮೆಗಾಪಿಕ್ಸೆಲ್‌ ಕ್ಯಾಮೆರಾ, OIS, LED ಫ್ಲ್ಯಾಶ್‌, 8 ಮೆಗಾಪಿಕ್ಸೆಲ್‌ ಜೊತೆಗೆ ಅಲ್ಟ್ರಾ-ವೈಡ್ ಸೆನ್ಸರ್‌ ಆಯ್ಕೆ ಹೊಂದಿರಲಿದೆ ಎಂದು ಲೀಕ್‌ ಮಾಹಿತಿ ಮೂಲಕ ತಿಳಿದುಬಂದಿದೆ.

ಹಾಗೆಯೇ ಎರಡೂ ಫೋನ್‌ಗಳು ಸಹ 50 ಮೆಗಾಪಿಕ್ಸೆಲ್‌ ಆಟೋಫೋಕಸ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿರಲಿವೆ ಎಂದು ಹೇಳಲಾಗಿದೆ ಮತ್ತು ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್‌ ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು, ಹೈ-ರೆಸ್ ಆಡಿಯೊ, 5G SA/NSA, ಡ್ಯುಯಲ್ 4G VoLTE, ವೈ ಫೈ 6 802.11 ac (2.4GHz + 5GHz), ಬ್ಲೂಟೂತ್ ಆವೃತ್ತಿ 5.4 (S19) / 5.3 (S18 ಪ್ರೊ), ಜಿಪಿಎಸ್‌ (L1 + L5), ಯುಎಸ್‌ಬಿ ಟೈಪ್- ಸಿ, ಎನ್‌ಎಫ್‌ಸಿ ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್‌ ಪಡೆದಿರಲಿದ್ದು, 6000mAh (S19) / 5500mAh (S19 Pro) ಬ್ಯಾಟರಿ ಜೊತೆಗೆ 80W ವೇಗದ ಚಾರ್ಜಿಂಗ್ ಬೆಂಬಲವನ್ನು ಕಾಣಬಹುದಾಗಿದೆ.

ಮೇ 30 ಕ್ಕೆ ವಿವೋ S19, S19 ಪ್ರೊ ಹಾಗೂ ವಿವೋ ವಾಚ್‌ GT ಲಾಂಚ್‌!

ಇನ್ನು ವಿವೋ ವಾಚ್ GT ವಿಚಾರಕ್ಕೆ ಬಂದರೆ ಇದು ಚದರ ಡಯಲ್ ಅನ್ನು ಹೊಂದಿರಲಿದೆ ಎನ್ನಲಾಗಿದ್ದು, ನಾಲ್ಕು ಬಣ್ಣಗಳಲ್ಲಿ ಬರುತ್ತದೆ. ಅಂದರೆ ನೀಲಿ, ಗುಲಾಬಿ, ಬಿಳಿ ಮತ್ತು ಕಪ್ಪು ಹೊಂದಾಣಿಕೆಯ ಸಿಲಿಕೋನ್ ಪಟ್ಟಿಯೊಂದಿಗೆ ಕಾಣಿಸಿಕೊಳ್ಳಲಿದೆ. ಈ ವಾಚ್‌ನ ಬಲಭಾಗದಲ್ಲಿ ಕ್ರೌನ್‌ಬಟನ್‌ ಆಯ್ಕೆ ಮತ್ತ ಕರೆ ಮಾಡಲು eSIM ಆಯ್ಕೆ ಕಾಣಬಹುದಾಗಿದ್ದು, ಬ್ಲೂಟೂತ್ ಮೋಡ್‌ನಲ್ಲಿ 21 ದಿನಗಳ ಬ್ಯಾಟರಿ ಬ್ಯಾಕಪ್‌ ಅನ್ನು ಈ ವಾಚ್‌ ನೀಡಲಿದೆ ಎಂದು ಲೀಕ್‌ ಮಾಹಿತಿಗಳನ್ನು ಉಲ್ಲೇಖ ಮಾಡಲಾಗಿದೆ.

Best Mobiles in India

English summary
Vivo has now confirmed the launch of Vivo S19 and Vivo S19 Pro and Vivo Watch GT. These three devices will be launched at the same time, which is a joy for smart gadget lovers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+