Home
ಸುದ್ದಿಜಾಲ

ಎಂಟ್ರಿ ಕೊಡಲಿದೆ 'ವಿವೋ ಎಸ್‌5' ಫೋನ್!.ಇರಲಿದೆ ಡೈಮಂಡ್ ಮಾದರಿಯ ಕ್ಯಾಮೆರಾ!

ಚೀನಾ ಮೂಲದ ವಿವೋ ಸಂಸ್ಥೆಯು ಈಗಾಗಲೇ ವಿವಿಧ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದ್ದು, ಇತ್ತೀಚಿಗೆ ಬಿಡುಗಡೆ ಆಗಿರುವ ವಿವೋ ಎಸ್‌1(S1) ಉತ್ತಮ ಪ್ರತಿಕ್ರಿಯೆ ಪಡೆದಿದೆ. ಅದರ ಮುಂದುವರಿದ ಭಾಗವಾಗಿ ಕಂಪನಿಯು ಇದೀಗ ಎಸ್‌ ಸರಣಿಯಲ್ಲಿ ಮತ್ತೊಂದು ಅಚ್ಚರಿಯ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಪೂರ್ವ ತಯಾರಿ ಮಾಡಿಕೊಂಡಿದೆ. ಈ ಸ್ಮಾರ್ಟ್‌ಫೋನ್ ಕ್ಯಾಮೆರಾ ಡಿಸೈನ್ ಡೈಮಂಡ್‌ ಶೇಪ್‌ನಲ್ಲಿರಲಿದೆ.

ವಿವೋ ಎಸ್‌5

ಹೌದು, ವಿವೋ ಕಂಪನಿಯು 'ಎಸ್‌' ಸರಣಿಯಲ್ಲಿ ಹೊಸದಾಗಿ 'ವಿವೋ ಎಸ್‌5' ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ವಿಡಿಯೊ ಟೀಸರ್‌ ರೀಲೀಸ್‌ ಮಾಡಿದೆ. ಈ ಸ್ಮಾರ್ಟ್‌ಫೋನ್ ಈಗಾಗಲೇ ಸ್ಮಾರ್ಟ್‌ಫೋನ್ ಪ್ರಿಯರಲ್ಲಿ ಕುತೂಹಲ ಮೂಡಿಸಿದ್ದು, ಫೋನ್ ಹಿಂಬದಿಯಲ್ಲಿ ಡೈಮಂಡ್‌ ಶೇಪ್‌ ಮಾದರಿಯ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿರಲಿದೆ ಎಂದು ತಿಳಿದು ಬಂದಿದೆ.

ವಿವೋ ಎಸ್‌1

ವಿವೋ ಎಸ್‌5 ಸ್ಮಾರ್ಟ್‌ಫೋನ್ ವಿವೋ ಎಸ್‌1 ಗಿಂತ ಸಾಕಷ್ಟು ಅಪ್‌ಗ್ರೇಡ್‌ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎನ್ನುವ ಅಂಶಗಳನ್ನು ಟೀಸರ್‌ ಸೂಚಿಸುತ್ತದೆ. ಫ್ಲ್ಯಾಗ್‌ಶಿಪ್ ಮಾದರಿಯ ಫೀಚರ್ಸ್‌ಗಳನ್ನು ವಿವೋ ಎಸ್‌5 ಒಳಗೊಂಡಿರುವ ಸಾಧ್ಯತೆಗಳಿವೆ. ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಮೂರು ಕ್ಯಾಮೆರಾ ರಚನೆ ಹೊಂದಿರಲಿದ್ದು, ಪ್ರಮುಖ ಕ್ಯಾಮೆರಾ ಅಧಿಕ ಮೆಗಾಪಿಕ್ಸಲ್ ರೆಸಲ್ಯೂಶನ್‌ನಲ್ಲಿ ಇರಲಿದೆ ಎನ್ನಲಾಗಿದೆ.

ಗ್ರೇಡಿಯಂಟ್ ಫಿನಿಶ್

ವಿವೋ ಎಸ್‌5 ಗ್ರೇಡಿಯಂಟ್ ಫಿನಿಶ್ ಡಿಸೈನ್‌ ರಚನೆಯನ್ನು ಪಡೆದಿರುವ ಸುಳಿವು ನೀಡಿದ್ದು, ಸೂಪರ್ AMOLED ಡಿಸ್‌ಪ್ಲೇ ಮಾದರಿ ಇರಲಿದೆ. ಕ್ಯಾಮೆರಾ ಜೊತೆಗೆ ಎಲ್‌ಇಡಿ ಸೆಟ್‌ಅಪ್‌ ಸಹ ಹೊಂದಿರಲಿದೆ. ಆದರೆ ಈ ಸ್ಮಾರ್ಟ್‌ಫೋನ್ ಬ್ಯಾಟರಿ ಸಾಮರ್ಥ್ಯವೆಷ್ಟು, ಪ್ರೊಸೆಸರ್ ಯಾವುದು ಮತ್ತು ಓಎಸ್‌ ಯಾವುದು ಎನ್ನುವ ಬಗ್ಗೆ ಇನ್ನು ಕಂಪನಿಯು ಯಾವುದೇ ಅಧಿಕೃತ ಮಾಹಿತಿಯನ್ನು ಹೊರಹಾಕಿಲ್ಲ. ಹಾಗೆಯೇ ಬಿಡುಗಡೆ ದಿನಾಂಕದ ಬಗ್ಗೆಯು ಯಾವುದೆ ಸುಳಿವು ನೀಡಿಲ್ಲ.

ತ್ರಿವಳಿ ಕ್ಯಾಮೆರಾ

ಈಗಾಗಲೇ ಗಮನ ಸೆಳೆದಿರುವ ವಿವೋ ಎಸ್‌1 ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಗ್ರೇಡಿಯಂಟ್ ಲುಕ್‌ ಅಂದ ಹೆಚ್ಚಿಸಿದೆ. 6.38 ಇಂಚಿನ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿರುವ ಈ ಫೋನ್ ಮೀಡಿಯಾ ಟೆಕ್ ಹಿಲಿಯೊ P65 ಆಕ್ಟಾಕೋರ್ ಪ್ರೊಸೆಸರ್‌ ಸಾಮರ್ಥ್ಯ ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 9 ಪೈ ಓಎಸ್‌ನ ಬೆಂಬಲ ಸಹ ಹೊಂದಿದೆ. 4GB RAM + 128GB ಮತ್ತು 6GB RAM + 128GB ವೇರಿಯಂಟ್‌ ಆಯ್ಕೆಗಳನ್ನು ಪಡೆದಿದೆ.

Best Mobiles in India

English summary
Vivo S5 leak suggested that the smartphone will come with three cameras on the back panel. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+