ವಿವೋ S7t ಸ್ಮಾರ್ಟ್‌ಫೋನ್‌ ಲಾಂಚ್!.ಡ್ಯುಯಲ್‌ ಸೆಲ್ಫಿ ಕ್ಯಾಮೆರಾ ಸ್ಪೆಷಲ್!

|

ವಿವೋ ಮೊಬೈಲ್ ಕಂಪೆನಿಯು ಅಗ್ಗದ ಬೆಲೆಯಿಂದ ಹೈ ಎಂಡ್‌ ದರದ ವರೆಗೂ ಹಲವು ಸ್ಮಾರ್ಟ್‌ಫೋನ್‌ ಮಾಡೆಲ್‌ಗಳನ್ನು ಲಾಂಚ್ ಮಾಡಿದೆ. ವಿವೋ ಸಂಸ್ಥೆಯು S7t 5G ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ 64ಎಂಪಿ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾ ಹೊಂದಿದ್ದು, ಜೊತೆಗೆ ಡ್ಯುಯಲ್ ಸೆಲ್ಫಿ ಕ್ಯಾಮೆರಾ ಸಹ ಪಡೆದಿದೆ. ಹಾಗೆಯೇ ಅಧಿಕ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ.

ವಿವೋ S7t

ಹೌದು, ವಿವೋ ಸಂಸ್ಥೆಯು ವಿವೋ S7t ಸ್ಮಾರ್ಟ್‌ಫೋನ್‌ ಅನ್ನು ಚೀನಾದಲ್ಲಿ ಅನಾವರಣ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ Dimensity 820 SoC ಪ್ರೊಸೆಸರ್‌ ಅನ್ನು ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಓಎಸ್‌ ಅನ್ನು ಒಳಗೊಂಡಿದೆ. ಜೊತೆಗೆ 4,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ವಿನ್ಯಾಸ

ಡಿಸ್‌ಪ್ಲೇ ವಿನ್ಯಾಸ

ವಿವೋ S7t ಸ್ಮಾರ್ಟ್‌ಫೋನ್‌ 1080x2400 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.44-ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ HDR10 ರಿಫ್ರೆಶ್‌ ರೇಟ್‌ ಅನ್ನು ಹೊಂದಿದೆ. ಇದಲ್ಲದೆ ಈ ಡಿಸ್‌ಪ್ಲೇ 91.2% ಸ್ಕ್ರೀನ್‌ ಟು ಬಾಡಿ ನಡುವಿನ ಅನುಪಾತ ಹೊಂದಿದ್ದು, ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 408ppi ಆಗಿದೆ.

ಪ್ರೊಸೆಸರ್‌ ಕಾರ್ಯ

ಪ್ರೊಸೆಸರ್‌ ಕಾರ್ಯ

ವಿವೋ S7t ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ Dimensity 820 SoC ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್‌ 10ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 8GB RAM+ 128GB ಆಂತರಿಕ ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ.

ತ್ರಿವಳಿ ಕ್ಯಾಮೆರಾ

ತ್ರಿವಳಿ ಕ್ಯಾಮೆರಾ

ವಿವೋ S7t ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದ್ದು, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ನಲ್ಲಿದೆ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 44 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್‌ ಮತ್ತು 8 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರ್ ಅನ್ನು ಒಳಗೊಂಡಿರುವ ಡ್ಯುಯಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ, ಫೀಚರ್ಸ್‌ ಮತ್ತು  ಬೆಲೆ?

ಬ್ಯಾಟರಿ, ಫೀಚರ್ಸ್‌ ಮತ್ತು ಬೆಲೆ?

ವಿವೋ S7t ಸ್ಮಾರ್ಟ್‌ಫೋನ್‌ 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ, 5 ಜಿ, ಬ್ಲೂಟೂತ್ 5.1, ಜಿಪಿಎಸ್ ಮತ್ತು ಚಾರ್ಜಿಂಗ್ಗಾಗಿ ಯುಎಸ್ಬಿ ಟೈಪ್-ಸಿ ಪೋರ್ಟ್ ಸೇರಿವೆ. ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸ್ಕ್ಯಾನರ್ ಇದೆ. ಇನ್ನು ಈ ಫೋನಿನ ಬೆಲೆಯು ಚೀನಾದಲ್ಲಿ CNY 2,698 ಆಗಿದೆ (ಭಾರತದಲ್ಲಿ ಅಂದಾಜು 30,500ರೂ. ಎನ್ನಲಾಗಿದೆ).

Best Mobiles in India

English summary
Vivo S7t 5G has launched in China as a new addition to the Vivo S7 series that includes the vanilla Vivo S7 and the Vivo S7e 5G.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X