2024ರ ತ್ರೈಮಾಸಿಕದಲ್ಲಿ Vivo ಸಾಗಣೆ ಮಾಡಿದ ಮೊಬೈಲ್‌ಗಳು ಎಷ್ಟು ಗೊತ್ತಾ?
ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಡಿಮ್ಯಾಂಡ್ ಹೆಚ್ಚಿದೆ. ಈ ನಿಟ್ಟಿನಲ್ಲಿ ಹಲವು ಮೊಬೈಲ್ ಬ್ರ್ಯಾಂಡ್‌ಗಳನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸುತ್ತಾ ಮುನ್ನಡೆದಿವೆ. ಅವುಗಳ ಪೈಕಿ ಶಿಯೋಮಿ, ವಿವೋ, ಒಪ್ಪೋ, ರಿಯಲ್‌ಮಿ, ಪೊಕೊ, ಮೊಟೊ, ಸ್ಯಾಮ್‌ಸಂಗ್, ಟೆಕ್ನೋ ಸೇರಿದಂತೆ ಇತರೆ ಕೆಲವು ಸಂಸ್ಥೆಗಳು ಹೆಚ್ಚು ಗುರುತಿಸಿಕೊಂಡಿದ್ದು, ಈ ಸಂಸ್ಥೆಗಳು ಬಜೆಟ್ ಬೆಲೆಯಲ್ಲಿ ಆಂಡ್ರಾಯ್ಡ್ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಇತ್ತೀಚಿನ Canalys research ವರದಿ ಪ್ರಕಾರ 2024 ರ Q3 ನಲ್ಲಿ ಭಾರತೀಯ ಸ್ಮಾರ್ಟ್‌ಫೋನ್ ಸಾಗಣೆಯಲ್ಲಿ 9% ಏರಿಕೆ ಕಂಡುಬಂದಿದೆ.
ಹೌದು, ದೇಶಿಯ ಮಾರುಕಟ್ಟೆಯಲ್ಲಿ ಪ್ರಸಕ್ತ ಸಾಲಿನ (2024) ತ್ರೈಮಾಸಿಕದಲ್ಲಿ ಮೊಬೈಲ್ ಸಾಗಣೆಯಲ್ಲಿ ಏರಿಕೆ ಕಂಡು ಬಂದಿದೆ ಎಂದು Canalys research ವರದಿ ಮಾಡಿದೆ. ಇನ್ನು ಮೊಬೈಲ್ ಸಾಗಣೆಯಲ್ಲಿ ಒಟ್ಟಾರೇ ಏರಿಕೆಯಾಗಿದ್ದು, ಮೊಬೈಲ್ ಬ್ರ್ಯಾಂಡ್‌ಗಳವಾರು ನೋಡುವುದಾದರೇ, ವಿವೋ ಸಂಸ್ಥೆಯು ಮಾರುಕಟ್ಟೆಯ 19% ಶೇರ್ ಪಡೆದಿದ್ದು, 19.1 ಮಿಲಿಯನ್ ಮೊಬೈಲ್ ಯೂನಿಟ್ ಸಾಗಣೆ ಮಾಡಿದೆ. ಈ ಮೂಲಕ ಹೆಚ್ಚು ಮೊಬೈಲ್ ಯೂನಿಟ್ ಸಾಗಣೆ ಮಾಡಿದ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ.

ಹಾಗೆಯೇ ವಿವೋ ನಂತರದ ಸ್ಥಾನದಲ್ಲಿ ಶಿಯೋಮಿ 7.8 ಮಿಲಿಯನ್ ಮೊಬೈಲ್ ಯೂನಿಟ್ ಸಾಗಣೆ ಮಾಡಿದ್ದು, ದ್ವಿತೀಯ ಸ್ಥಾನದಲ್ಲಿ ಇದೆ. ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಬ್ರ್ಯಾಂಡ್ 7.5 ಮಿಲಿಯನ್ ಮೊಬೈಲ್ ಯೂನಿಟ್ ಸಾಗಣೆ ಮಾಡಿದೆ. ಅದೇ ರೀತಿ 2024 ರ Q3 ನಲ್ಲಿ ಒಪ್ಪೋ ಸಂಸ್ಥೆಯು 6.3 ಮಿಲಿಯನ್ ಮೊಬೈಲ್ ಯೂನಿಟ್ ಸಾಗಣೆ ಕಂಡು ಬಂದಿದೆ.
ಇನ್ನು ರಿಯಲ್‌ಮಿ ಕಂಪನಿಯು 5.3 ಮಿಲಿಯನ್ ಮೊಬೈಲ್ ಯೂನಿಟ್ ಸಾಗಣೆ ಮಾಡಿದೆ. ಇದಲ್ಲದೇ ಇನ್ನುಳಿದ ಇತರೆ ಸ್ಮಾರ್ಟ್‌ಫೋನ್ ಕಂಪನಿಗಳು ಸೇರಿ ಒಟ್ಟು 11.1 ಮಿಲಿಯನ್ ಮೊಬೈಲ್ ಯೂನಿಟ್ ಸಾಗಣೆ ಮಾಡಿವೆ. ಮೊಬೈಲ್ ಸಾಗಣೆಯಲ್ಲಿ 2024 ರ Q2 ಗೆ ಹೋಲಿಸಿದರೆ, ಈ ವರ್ಷದ Q3 ನಲ್ಲಿ 9% ನಷ್ಟು ಏರಿಕೆ ಆಗಿದೆ.
ಲೀಡಿಂಗ್ ಸ್ಥಾನದಲ್ಲಿ ವಿವೋ
ಇತ್ತೀಚಿನ ದಿನಗಳಲ್ಲಿ ವಿವೋ ಸಂಸ್ಥೆಯು ಬಿಡುಗಡೆ ಮಾಡಿರುವ T2 ಹಾಗೂ T3 ಸರಣಿಯ ಸ್ಮಾರ್ಟ್‌ಫೋನ್‌ಗಳು ಅಗ್ಗದ ಹಾಗೂ ಬಜೆಟ್ ವಿಭಾಗದಲ್ಲಿ ಹೆಚ್ಚಿನ ಡಿಮ್ಯಾಂಡ್‌ನಲ್ಲಿ ಕಾಣಿಸಿಕೊಂಡಿವೆ. ಅಲ್ಲದೇ ವಿವೋ ಸಂಸ್ಥೆಯ ವಿವೋ V30e, ವಿವೋ V30 ಸರಣಿ ಹಾಗೂ ವಿವೋ V40 ಸರಣಿಯ ಫೋನ್‌ಗಳು ಮೀಡ್‌ರೇಂಜ್ ವಿಭಾಗದಲ್ಲಿ ಹೆಚ್ಚಿನ ಗಮನ ಸೆಳದಿವೆ.
ವಿವೋ ಸಂಸ್ಥೆಯ ವಿವೋ T2, ವಿವೋ T2x, ವಿವೋ T2 ಪ್ರೊ, ವಿವೋ T3, ವಿವೋ T3x, ವಿವೋ T3 ಪ್ರೊ ಹಾಗೂ ವಿವೋ T3 ಅಲ್ಟ್ರಾ 5G ಮೊಬೈಲ್‌ಗಳು ಬಜೆಟ್ ದರದಲ್ಲಿ ಖರೀದಿಗೆ ಲಭ್ಯ ಇವೆ. ಈ ಫೋನ್‌ಗಳು ಉತ್ತಮ ಕ್ಯಾಮೆರಾ, ಮಲ್ಟಿಟಾಸ್ಕಿಂಗ್ ಸಪೋರ್ಟ್ ಇರುವ ಪ್ರೊಸೆಸರ್, ಆಕರ್ಷಕ ಡಿಸೈನ್ ಸೇರಿದಂತೆ ಇತ್ತೀಚಿನ ಅಗತ್ಯ ಫೀಚರ್ಸ್ ಹಾಗೂ ಆಯ್ಕೆಗಳನ್ನು ಒಳಗೊಂಡಿವೆ. ವಿವೋ ಮೊಬೈಲ್ ಸಾಗಣೆ ಹೆಚ್ಚಾಗಲು ಕಾರಣವಾದ ಅಂಶಗಳಲ್ಲಿ ಇವು ಸೇರಿರಬಹುದು.
Canalys ಸಂಸ್ಥೆಯು ವಿಶ್ವಾದ್ಯಂತ ಸ್ಮಾರ್ಟ್‌ಫೋನ್ ವಿಶ್ಲೇಷಣೆ ಸೇವೆಯನ್ನು ಇತರೆ ಸಂಸ್ಥೆಗಳು ನೀಡುವ ಮುಂಚಿತವಾಗಿಯೇ ಸಾಗಣೆ ಅಂದಾಜುಗಳ ಸಮಗ್ರ ದೇಶ-ಮಟ್ಟದ ವೀಕ್ಷಣೆಯನ್ನು ಒದಗಿಸುತ್ತದೆ. ಅಲ್ಲದೇ ಇದು ತ್ರೈಮಾಸಿಕ ಮಾರುಕಟ್ಟೆ ಷೇರು ಡೇಟಾ, ಸಮಯೋಚಿತ ಹಿಸ್ಟರಿ ಡೇಟಾ ಟ್ರ್ಯಾಕಿಂಗ್ ಮತ್ತು ಸ್ಟೋರೇಜ್, ಪ್ರೊಸೆಸರ್‌ಗಳು, ಮೆಮೊರಿ, ಕ್ಯಾಮೆರಾಗಳು ಮತ್ತು ಇತರ ಹಲವು ವಿಶೇಷತೆಗಳ ವಿವರವಾದ ವಿಶ್ಲೇಷಣೆಯನ್ನು ನೀಡುತ್ತದೆ.


Click it and Unblock the Notifications








