Subscribe to Gizbot

ಆಪಲ್ ಬಿಟ್ ಮಾಡಿದ ಚೀನಾ ಕಂಪನಿ: ಆನ್‌ಸ್ಕ್ರಿನ್ ನಲ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್..!!!

Written By:

ಸ್ಮಾರ್ಟ್‌ಫೋನ್ ಲೋಕದಲ್ಲಿ ಈಗಾಗಲೇ ಚೀನಾ ಕಂಪನಿಗಳು ಸಾಕಷ್ಟು ಸದ್ದು ಮಾಡುತ್ತಿದ್ದು, ಚೀನಾ ಮೂಲದ ಮೊಬೈಲ್ ತಯಾರಿಕ ಕಂಪನಿಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ವಿವೋ ಹೊಸದಾಗಿ ಆವಿಷ್ಕರಿಸಿರುವ ತಂತ್ರಜ್ಞಾನವೊಂದು ಆಪಲ್ ಕಂಪನಿಯನ್ನು ತಿರುಗಿ ನೋಡುವಂತೆ ಮಾಡಿದೆ.

ಆಪಲ್ ಬಿಟ್ ಮಾಡಿದ ಚೀನಾ ಕಂಪನಿ: ಆನ್‌ಸ್ಕ್ರಿನ್ ನಲ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ

ಓದಿರಿ: ಆಫ್ಲೈನ್ ಮಾರುಕಟ್ಟೆಗೆ ಲಗ್ಗೆ ಇಟ್ಟ ಮೊದಲ ನೋಕಿಯಾ ಸ್ಮಾರ್ಟ್ಪೋನ್: ಆರಂಭಿಕ ಕೊಡಗೆ ಏನು...? ದೊರೆಯುವುದೆಲ್ಲಿ...?

ಸದ್ಯ ಲೀಕ್ ಆಗಿರುವ ಸಣ್ಣ ವಿಡಿಯೋವೊಂದರಲ್ಲಿ ವಿವೋ ತನ್ನ ನೂತನ ಸ್ಮಾರ್ಟ್‌ಫೋನ್‌ವೊಂದಕ್ಕೆ ಆನ್‌ಸ್ಕ್ರಿನ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅಳವಡಿಸಿದ್ದು, ಫಿಜಿಕಲ್ ಹೋಮ್ ಬಟನ್ ಅನ್ನು ತೆಗೆದು ಹಾಕಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅಳವಡಿಸಿದ್ದು, ಯೂನಿ ಬಾಡಿ ಮೆಟಲ್ ವಿನ್ಯಾಸವನ್ನು ಇದು ಹೊಂದಿದೆ. ಸ್ಪೋಟ್ಸ್ ಲುಕ್ ಅನ್ನ ಕಾಣಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಡಿಯೋ ಲೀಕ್:

ವಿಡಿಯೋ ಲೀಕ್:

ವಿಬೋ ಅಫಿಷಿಯಲ್ ಟ್ವಿಟರ್ ನಲ್ಲಿ ಈ ವಿಡಿಯೋ ಲೀಕ್ ಆಗಿದ್ದು, ಆಪಲ್ ಈಗಾಗಲೇ ಉತ್ತಮ ತಂತ್ರಜ್ಞಾನಗಳನ್ನು ಜಗತ್ತಿಗೆ ಪರಿಚಯಿಸಿದರ ಬಹುದು ಆದರೆ ಈ ಹೊಸ ಸಂಶೋಧನೆಯೂ ಆಪಲ್ ಅನ್ನು ಬೆರಗುಗೊಳಿಸಲಿದೆ ಎನ್ನಲಾಗಿದೆ.

ಸ್ಯಾಮ್‌ ಸಂಗ್ ಮತ್ತು LG ಯಲ್ಲೂ ಈ ತಂತ್ರಜ್ಞಾನ ಇಲ್ಲ:

ಸ್ಯಾಮ್‌ ಸಂಗ್ ಮತ್ತು LG ಯಲ್ಲೂ ಈ ತಂತ್ರಜ್ಞಾನ ಇಲ್ಲ:

ಆಪಲ್ ತನ್ನ ಮುಂದಿನ ಐಫೋನಿನಲ್ಲಿ ಟಚ್ ಐಡಿಯನ್ನು ಅಳವಡಿಸಲು ಮುಂದಾಗಿದೆ ಆದರೆ ವಿವೋ ಅದಕ್ಕಿಂತ ಸುಧಾರಿಯ ತಂತ್ರಜ್ಞಾನವನ್ನು ಅಳವಿಡಿಸಿದ್ದು, ಸ್ಯಾಮ್‌ ಸಂಗ್ ಮತ್ತು LG ಕಂಪನಿಗಳು ಇದುವರೆಗೂ ಈ ತಂತ್ರಜ್ಞಾನದಲ್ಲಿ ಹಿಡಿತವನ್ನು ಸಾಧಿಸಿಲ್ಲ ಎನ್ನಲಾಗಿದೆ.

ಮುಂದಿನ ತಿಂಗಳು ಅನಾವರಣ

ಮುಂದಿನ ತಿಂಗಳು ಅನಾವರಣ

ವಿವೋ ಈ ಹೊಸ ತಂತ್ರಜ್ಞಾನವನ್ನು ಮುಂದಿನ ತಿಂಗಳು ನಡೆಯಲಿರುವ ಶಾಂಗೈ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಪ್ರದರ್ಶಿಸಲಿದೆ ಎಂದು ತಿಳಿದುಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
A new Vivo smartphone has been leaked in a video purportedly showing an on-screen fingerprint sensor. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot