ಆಫ್‌ಲೈನ್ ಮಾರುಕಟ್ಟೆಗೆ ಲಗ್ಗೆ ಇಟ್ಟ ಮೊದಲ ನೋಕಿಯಾ ಸ್ಮಾರ್ಟ್‌ಪೋನ್‌: ಆರಂಭಿಕ ಕೊಡಗೆ ಏನು...? ದೊರೆಯುವುದೆಲ್ಲಿ...?

Written By:

ವಾರದ ಹಿಂದೆಯಷ್ಟೆ ಭಾರತದಲ್ಲಿ ನೋಕಿಯಾ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಿತ್ತು. ಅದೇ ಸಂದರ್ಭದಲ್ಲಿ ನೋಕಿಯಾ 6 ಸ್ಮಾರ್ಟ್‌ಪೋನ್‌ ಮಾತ್ರ ಆನ್‌ಲೈನಿನಲ್ಲಿ ದೊರೆಯಲಿದ್ದು, ನೋಕಿಯಾ 3 ಮತ್ತು ನೋಕಿಯಾ 5 ಸ್ಮಾರ್ಟ್‌ಫೋನ್‌ಗಳು ಆಫ್‌ಲೈನ್‌ ಮಾರುಕಟ್ಟೆಯಲ್ಲಿ ದೊರೆಯಲಿದೆ ಎನ್ನಲಾಗಿತ್ತು. ಅದರಂತೆ ನೋಕಿಯಾ 3 ಆಫ್‌ಲೈನ್ ಮಾರುಕಟ್ಟೆಯನ್ನು ಪ್ರವೇಶಿದೆ.

ಆಫ್‌ಲೈನ್ ಮಾರುಕಟ್ಟೆಗೆ ಲಗ್ಗೆ ಇಟ್ಟ ಮೊದಲ ನೋಕಿಯಾ ಸ್ಮಾರ್ಟ್‌ಪೋನ್‌:

ಓದಿರಿ: ಜಿಯೋ ಬಳಸದಿದ್ದರೂ ಎಲ್ಲರೂ ಅಂಬಾನಿಗೆ ಥ್ಯಾಂಕ್ಸ್ ಹೇಳಲೇಬೇಕು: ಯಾಕೆ ಗೊತ್ತಾ..?

ದೇಶದಲ್ಲಿ ಪ್ರಮುಖ ಆಫ್‌ಲೈನ್ ಮಾರಾಟ ಮಳಿಗೆಗಳಲ್ಲಿ ನೋಕಿಯಾ 3 ಸ್ಮಾರ್ಟ್‌ಪೋನ್ ಲಭ್ಯವಿದೆ. ಈ ಹಿಂದೆ ನೋಕಿಯಾ 3310 ಫೀಚರ್ ಫೋನ್‌ ಸಹ ಆಫ್‌ ಲೈನ್ ಮೂಲಕವೇ ಗ್ರಾಹಕರನ್ನು ತಲುಪುವಂತಹ ಪ್ರಯತ್ನವನ್ನು ಮಾಡಿತ್ತು. ಮತ್ತೇ ಅದೇ ತಂತ್ರವನ್ನು ಅನುಸರಿಸುತ್ತಿದೆ. ಈ ಹಿನ್ನಲೆಯಲ್ಲಿ ನೋಕಿಯಾ 3 ಸ್ಮಾರ್ಟ್‌ಫೋನ್ ಕುರಿತ ಸಂಫೂರ್ಣ ಮಾಹಿತಿ ಇಲ್ಲಿದೆ. ನೋಕಿಯಾ 3 ಸ್ಮಾರ್ಟ್‌ಫೋನಿನೊಂದಿಗೆ ವೊಡಾಪೋನ್ ಆಫರ್ ಸಹ ದೊರೆಯುತ್ತಿದೆ. ಇದರ ಕುರಿತ ಮಾಹಿತಿಯೂ ಇಲ್ಲಿದೇ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ 3 ಜೊತೆಗೆ ಲಭ್ಯವಿರುವ ಆಫರ್‌ಗಳೇನು..?

ನೋಕಿಯಾ 3 ಜೊತೆಗೆ ಲಭ್ಯವಿರುವ ಆಫರ್‌ಗಳೇನು..?

ನೋಕಿಯಾ 3 ಸ್ಮಾರ್ಟ್‌ಫೋನು ರೂ. 9,499ಕ್ಕೆ ಲಭ್ಯವಿದ್ದು, ಇದರೊಂದಿಗೆ ವೊಡಾಫೋನ್ ಮೂರು ತಿಂಗಳಿಗೆ ರೂ.149 ಪಾವತಿಸಿದರೆ ಪ್ರತಿ ತಿಂಗಳು 5GB ಡೇಟಾವನ್ನು ನೀಡಲಿದೆ. ಇದರೊಂದಿಗೆ ಮೆಕ್ ಮೈಟ್ರಿಪ್ ನಿಂದ ರೂ.2500 ಕಡಿತವೂ ದೊರೆಯಲಿದೆ.

ಹಿಂದೆ ಮತ್ತು ಮುಂದೆ 8 MP ಕ್ಯಾಮೆರಾ:

ಹಿಂದೆ ಮತ್ತು ಮುಂದೆ 8 MP ಕ್ಯಾಮೆರಾ:

ನೋಕಿಯಾ 3 ಸ್ಮಾರ್ಟ್‌ಪೋನಿನ ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಉತ್ತಮ ಗುಣಮಟ್ಟದ ಪೋಟೋ, ಸೆಲ್ಫಿ ಮತ್ತು ವಿಡಿಯೋ ಸೆರೆಹಿಡಿಯಲು ಉತ್ತಮವಾಗಿದೆ.

2GB RAM, 16 GB ROM:

2GB RAM, 16 GB ROM:

ವೇಗದ ಕಾರ್ಯನಿರ್ವಹಣೆಗಾಗಿ ನೋಕಿಯಾ 3 ಸ್ಮಾರ್ಟ್‌ಪೋನಿನಲ್ಲಿ 2 GB RAM ಅಳವಡಿಸಲಾಗಿದ್ದು, 16 GB ಆಂತರಿಕ ಮೆಮೊರಿಯನ್ನು ಇದರಲ್ಲಿದೆ. 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

ಗುಣಮಟ್ಟದ ಡಿಸ್‌ಪ್ಲೇ:

ಗುಣಮಟ್ಟದ ಡಿಸ್‌ಪ್ಲೇ:

ನೋಕಿಯಾ 3 ಸ್ಮಾರ್ಟ್‌ಪೋನು 5 ಇಂಚಿನ HD ಡಿಸ್‌ಪ್ಲೇ ಹೊಂದಿದ್ದು, 720x1280p ರೆಸಲ್ಯೂಷನ್ ಗುಣಮಟ್ಟದ IPS ಡಿಸ್‌ಪ್ಲೇ ಇದಾಗಿದೆ. ದೀರ್ಘಕಾಲದ ವಿಡಿಯೋ ವೀಕ್ಷಣೆಗೆ ಉತ್ತಮವಾಗಿದೆ ಎನ್ನಲಾಗಿದೆ. ಪರದೆಯ ರಕ್ಷಣೆಗಾಗಿ ಗೋರಿಲ್ಲ ಗ್ಲಾಸ್ ಅಳವಡಿಸಲಾಗಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲಿರುವ ನೋಕಿಯಾ 3 ವೇಗದ ಕಾರ್ಯಚರಣೆಗೆ ಮೀಡಿಯಾ ಟೆಕ್ ಕ್ವಾಡ್‌ಕೋರ್ 1.3GHz ಪ್ರೋಸೆಸರ್ ಹೊಂದಿದ್ದು, ನೂತನ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಸಲಿದೆ.

2650 mAh ಬ್ಯಾಟರಿ:

2650 mAh ಬ್ಯಾಟರಿ:

ನೋಕಿಯಾ 3 ಮಾರ್ಟ್‌ಪೋನಿನಲ್ಲಿ 2650mAh ಬ್ಯಾಟರಿ ಅಳವಡಿಸಲಾಗಿದ್ದು, 4G ಸಪೋರ್ಟ್ ಮಾಡಲಿದೆ. 143.4x71.4x8.4mm ಸುತ್ತಳತೆ ಹೊಂದಿರುವ ಈ ಪೋನು ಹಲವು ಹೊಸತನಗಳು ಈ ಪೋನಿನಲ್ಲಿದೆ.

ಜುಲೈ 7ಕ್ಕೆ ನೋಕಿಯಾ 5 ಮಾರುಕಟ್ಟೆಗೆ:

ಜುಲೈ 7ಕ್ಕೆ ನೋಕಿಯಾ 5 ಮಾರುಕಟ್ಟೆಗೆ:

ನೋಕಿಯಾ 3 ಮಾದರಿಯಲ್ಲಿ ನೋಕಿಯಾ 5 ಜುಲೈ 7 ರಿಂದ ಆಫ್‌ಲೈನ್‌ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ನೋಕಿಯಾ ಸ್ಮಾರ್ಟ್‌ಫೋನ್‌ಗಳು ಸುಮಾರು 80,000 ರೀಟೆಲ್ ಶಾಪ್‌ಗಳಲ್ಲಿ ಮಾರಾಟವಾಗಲಿದೆ ಎನ್ನಲಾಗಿದೆ.

ನೋಕಿಯಾ 3 ಸ್ಮಾರ್ಟ್‌ಫೋನ್ ಫಸ್ಟ್ ಲುಕ್ ವಿಡಿಯೋ ಇಲ್ಲಿದೇ:

ನೋಕಿಯಾ 3 ಸ್ಮಾರ್ಟ್‌ಪೋನು ಕಡಿಮೆ ಬೆಲೆಯಲ್ಲಿ ಮಾರಾಟವಾಗಲಿದ್ದು ಈ ಪೋನಿನ ವಿಶೇಷತೆಗಳ ಕುರಿತ ವಿಡಿಯೋ ಮುಂದಿದೆ ನೀವೆ ನೋಡಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
Earlier this week, Nokia launched its Android-based smartphones in the Indian market — Nokia 3, Nokia 5 and Nokia 6. As the company said earlier, the Nokia 3 smartphone is now available for purchase via offline stores across the nation. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot