Vivo: ವಿವೋದ ಈ ಬಜೆಟ್ ಫೋನ್‌ನ ಬೆಲೆಯಲ್ಲಿ ಭಾರೀ ಇಳಿಕೆ! 1 TB ವರೆಗೆ ಸ್ಟೋರೇಜ್ ಆಯ್ಕೆ
ವಿವೋ (Vivo) ಫೋನ್‌ಗಳು ಭಾರತದಲ್ಲಿ ಹೆಚ್ಚು ಜನಪ್ರಿಯ ಫೋನ್‌ಗಳಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಅದರಲ್ಲೂ ವಿವೋ ಇತ್ತೀಚಿನ ದಿನಗಳಲ್ಲಿ ಕ್ಯಾಮೆರಾ ಹಾಗೂ ಉತ್ತಮ ಪ್ರೊಸೆಸರ್ ಆಧಾರಿತ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡುತ್ತಾ ಬರುತ್ತಿದ್ದು, ಭಾರತದಲ್ಲಿ ಈ ಮೂಲಕ ದೊಡ್ಡ ಗ್ರಾಹಕ ವಲಯವನ್ನೇ ಪಡೆದಿದೆ. ಈ ಎಲ್ಲಾ ಬೆಳವಣಿಗೆ ನಡುವೆ ವಿವೋದ ಬಜೆಟ್ ಬೆಲೆಯ ಈ ಫೋನ್ ಗೆ ಇನ್ನಷ್ಟು ಆಫರ್ ಘೋಷಣೆ ಮಾಡಲಾಗಿದೆ.
ಹೌದು, ವಿವೋ T1 ಸ್ಮಾರ್ಟ್‌ಫೋನ್‌ಗೆ (Vivo T1 smartphone) ಇದೀಗ ಪ್ರಮುಖ ಇ ಕಾಮರ್ಸ್ ಸೈಟ್‌ನಲ್ಲಿ ಆಫರ್ ನೀಡಲಾಗಿದೆ. ಈ ಫೋನ್ 1 TB ವರೆಗೆ ವಿಸ್ತರಣೆ ಮಾಡಬಹುದಾದ ಸ್ಟೋರೇಜ್ ಆಯ್ಕೆ ಪಡೆದಿದ್ದು, ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 680 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಈ ಮೂಲಕ ಬಜೆಟ್ ಬೆಲೆ ವಿಭಾಗದಲ್ಲಿ ಅತ್ಯುತ್ತಮವಾದ ಫೋನ್ ಎಂದು ಹೆಸರು ಪಡೆದಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಆಫರ್ ಬೆಲೆ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಿವೋ T1 ಸ್ಮಾರ್ಟ್‌ಫೋನ್ ಆಫರ್ ವಿವರ: ಈ ಸ್ಮಾರ್ಟ್‌ಫೋನ್ 19,990 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 14,499 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್ ಮೇಲೆ ಪ್ರಮುಖ ಇ ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್ 27% ರಿಯಾಯಿತಿ ಘೋಷಣೆ ಮಾಡಿದೆ. ಈ ಮೂಲಕ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಇದರೊಂದಿಗೆ ಕೆಲವು ಬ್ಯಾಂಕ್ ಆಫರ್ ಅನ್ನೂ ಸಹ ನೀಡಲಾಗಿದೆ.
ಈ ಫೋನ್ ಖರೀದಿ ವೇಳೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಕ್ ಕಾರ್ಡ್ ಬಳಕೆ ಮಾಡಿದರೆ 5% ಕ್ಯಾಶ್‌ಬ್ಯಾಕ್, FreebieSpotify ಪ್ರೀಮಿಯಂ ಹಾಗೂ ಡೆಬಿಟ್ ಕಾರ್ಡ್ ಇಎಮ್‌ಐ ಆಯ್ಕೆ ಮಾಡಿಕೊಂಡು ತಿಂಗಳಿಗೆ 898 ರೂ.ಗಳನ್ನು ಪಾವತಿ ಮಾಡುವ ಮೂಲಕ ಈ ಫೋನ್ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಇತರೆ ಸೌಲಭ್ಯಗಳು ಸಹ ಲಭ್ಯ ಇವೆ.

ವಿವೋ T1 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.44 ಇಂಚಿನ ಫುಲ್ ಹೆಚ್‌ಡಿ + ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ ಈ ಫೋನ್ 20:9 ಆಕಾರ ಅನುಪಾತ ಹಾಗೂ 90.12% ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಅತ್ಯುತ್ತಮ ವೀಕ್ಷಣೆಯ ಅನುಭವ ನೀಡಲಿದೆ.
ವಿವೋ T1 ಸ್ಮಾರ್ಟ್‌ಫೋನ್ ಪ್ರೊಸೆಸರ್ ಮಾಹಿತಿ: ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 680 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 12 ಓಎಸ್ ಅನ್ನು ರನ್ ಮಾಡಲಿದೆ. ಇದರೊಂದಿಗೆ ಅಡ್ರಿನೊ 610 ಗ್ರಾಫಿಕ್ಸ್ ಕಾರ್ಡ್ ಬಲ ಪಡೆದಿದ್ದು, ಗೇಮಿಂಗ್ ಆಡುವಾಗ ಅಥವಾ ವಿಡಿಯೋ ವೀಕ್ಷಣೆಯಲ್ಲಿ ಸುಗಮ ಕಾರ್ಯನಿರ್ವಹಣೆ ಸಾಧ್ಯವಾಗಲಿದೆ. ಜೊತೆಗೆ 128 GB ಇಂಟರ್ ಸ್ಟೋರೇಜ್ ಆಯ್ಕೆ ಹಾಗೂ 4 GB RAM ಆಯ್ಕೆ ಈ ಫೋನ್‌ಗೆ ಇನ್ನಷ್ಟು ಬಲ ನೀಡಲಿದೆ. ಅದಾಗ್ಯೂ ನೀವು ಎಸ್‌ಡಿ ಕಾರ್ಡ್ ಬಳಕೆ ಮಾಡಿಕೊಂಡು 1 TB ವರೆಗೆ ಸ್ಟೋರೇಜ್ ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ.
ವಿವೋ T1 ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ ಇದು ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದೆ. ಅದರಲ್ಲಿ 50MP (f/1.8 ಅಪರ್ಚರ್) + 2MP (f/2.4 ಅಪರ್ಚರ್) + 2MP (f/2.4 ಅಪರ್ಚರ್) ಸೆನ್ಸರ್ ಇವೆ. 16MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದ್ದು, ಇವು ವಿವಿಧ ರೀತಿಯ ನೂತನ ಸುಧಾರಿತ ಫೀಚರ್ಸ್ ಅನ್ನು ಪಡೆದುಕೊಂಡಿವೆ. ಪರಿಣಾಮ ಕ್ಯಾಮೆರಾ ಪ್ರಿಯರು ಈ ಫೋನ್ ಅನ್ನು ಹೆಚ್ಚು ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ.

ವಿವೋ T1 ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಇದರೊಂದಿಗೆ 4G, 3G, 2G ಬೆಂಬಲಿತ ನೆಟ್‌ವರ್ಕ್‌ಗಳು, 4G LTE, WCDMA, GSM, ಬ್ಲೂಟೂತ್ ಆವೃತ್ತಿ v5.1, ವೈ-ಫೈ ಆವೃತ್ತಿ 2.4 GHz, 5 GHz ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್ ಅನ್ನು ಈ ಫೋನ್ ಪಡೆದಿದೆ. ನೀವೇನಾದರೂ 15 ಸಾವಿರದ ಒಳಗೆ ಇರುವ ಅತ್ಯುತ್ತಮ ಕ್ಯಾಮೆರಾ ಫೀಚರ್ಸ್ ಹಾಗೂ ಫಾಸ್ಟ್ ಚಾರ್ಜಿಂಗ್ ಆಯ್ಕೆಯ ಫೋನ್ ಬೇಕು ಎಂದರೆ ಈ ಫೋನ್ ಖರೀದಿ ಮಾಡಬಹುದಾಗಿದೆ.


Click it and Unblock the Notifications








