ಇಂದು 'ವಿವೋ T1x' ಸ್ಮಾರ್ಟ್‌ಫೋನ್ ಫಸ್ಟ್ ಸೇಲ್; ಈ ಆಫರ್ ಸಿಗುತ್ತೆ!
ವಿವೋ ಮೊಬೈಲ್ ಸಂಸ್ಥೆಯು ಭಾರತದಲ್ಲಿ ಇತ್ತೀಚಿಗೆ ನೂತನವಾಗಿ ಬಿಡುಗಡೆ ಮಾಡಿರುವ ವಿವೋ T1x ಸ್ಮಾರ್ಟ್‌ಫೋನ್ ಕೆಲವೊಂದು ಆಕರ್ಷಕ ಫೀಚರ್ಸ್‌ಗಳ ಮೂಲಕ ಮೂಲಕ ಗ್ರಾಹಕರನ್ನು ಸೆಳೆದಿದೆ. ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್, 50 ಮೆಗಾ ಪಿಕ್ಸಲ್ ಸೆನ್ಸಾರ್‌ನ ಮುಖ್ಯ ಕ್ಯಾಮೆರಾ ಒಳಗೊಂಡಿರುವ ಈ ಸ್ಮಾರ್ಟ್‌ಫೋನಿನ ಮೊದಲ ಮಾರಾಟ ಇಂದು ನಡೆಯಲಿದೆ.

ಹೌದು, ವಿವೋ T1x ಸ್ಮಾರ್ಟ್‌ಫೋನಿನ ಫಸ್ಟ್ ಸೇಲ್ ಇಂದು (ಜುಲೈ 27) ಮಧ್ಯಾಹ್ನ 12 ಗಂಟೆಯಿಂದ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಹಾಗೂ ವಿವೋ ಆನ್‌ಲೈನ್ ಸ್ಟೋರ್ ಮೂಲಕ ಖರೀದಿಗೆ ಲಭ್ಯ ಆಗಲಿದೆ. ಹೆಚ್‌ಡಿಎಫ್‌ಸಿ ಕಾರ್ಡ್ ಬಳಸಿ ಮೊಬೈಲ್ ಖರೀದಿಸಿದರೆ, ಗ್ರಾಹಕರಿಗೆ 1000ರೂ. ಗಳ ತ್ವರಿತ ರಿಯಾಯಿತಿ ಲಭ್ಯವಾಗಲಿದೆ. ಇನ್ನು ಈ ಫೋನ್ 4GB + 64GB, 4GB + 128GB ಮತ್ತು 6GB + 128GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ.

ಇನ್ನು ಬಜೆಟ್ ದರದಲ್ಲಿ ಕಾಣಿಸಿಕೊಂಡಿರುವ ವಿವೋ T1x ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್ ಗ್ರಾವಿಟಿ ಬ್ಲ್ಯಾಕ್ ಮತ್ತು ಸ್ಪೇಸ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಈ ಫೋನಿನ ಆರಂಭಿಕ ಬೆಲೆಯು 11,999ರೂ. ಆಗಿದೆ. ಇನ್ನುಳಿದಂತೆ ವಿವೋ T1x ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ವಿವೋ T1x ಸ್ಮಾರ್ಟ್‌ಫೋನ್ 6.58 ಇಂಚಿನ ಫುಲ್ ಹೆಚ್‌ಡಿ ಪ್ಲಸ್ LCD ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 1,080 x 2,408 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿದ್ದು, 90.6% ಸ್ಕ್ರೀನ್ ಟು ಬಾಡಿ ಅನುಪಾತವನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ NTSC ಬಣ್ಣದ ಹರವು 96% ಕವರೇಜ್ ಅನ್ನು ಒಳಗೊಂಡಿದೆ.

ಪ್ರೊಸೆಸರ್ ಕಾರ್ಯವೈಖರಿ ಏನು?
ವಿವೋ T1x ಸ್ಮಾರ್ಟ್‌ಫೋನ್ ಆಕ್ಟಾ ಕೋರ್ 6nm ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 12 ಆಧಾರಿತ ಫನ್‌ಟೌಚ್ OS 12 ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಆಡ್ರೆನೋ GPU 610 ಸಪೋರ್ಟ್ ಅನ್ನು ಪಡೆದಿದೆ. ಹಾಗೆಯೇ 6GB RAM ಮತ್ತು 128GB ಇಂಟರ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಇದಲ್ಲದೆ ಹೆಚ್ಚುವರಿ ಅಂತರ್ಗತ ಸಂಗ್ರಹಣೆಯನ್ನು ಬಳಸಿಕೊಂಡು RAM ಅನ್ನು 8GB ವರೆಗೆ ವಿಸ್ತರಿಸಬಹುದು. ಹಾಗೆಯೇ ಮೈಕ್ರೊ SD ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ.

ಡ್ಯುಯಲ್ ಕ್ಯಾಮೆರಾ ಸೆನ್ಸಾರ್ ರಚನೆ
ವಿವೋ T1x ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದ್ದು, f/1.8 ಲೆನ್ಸ್ ಅನ್ನು ಒಳಗೊಂಡಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದ್ದು, f/2.4 ಲೆನ್ಸ್ ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಸೂಪರ್ HDR, ಮಲ್ಟಿಲೇಯರ್ ಪೋರ್ಟ್ರೇಟ್, ಸ್ಲೋ ಮೋಷನ್, ಪನೋರಮಾ, ಲೈವ್ ಫೋಟೋ ಮತ್ತು ಸೂಪರ್ ನೈಟ್ ಮೋಡ್ ಅನ್ನು ಬೆಂಬಲಿಸುತ್ತದೆ.

ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ ಎಷ್ಟು?
ವಿವೋ T1x ಸ್ಮಾರ್ಟ್‌ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್ v5.0, GPS, Glonass, OTG, FM ರೇಡಿಯೋ ಮತ್ತು USB ಟೈಪ್-C ಪೋರ್ಟ್ ಸೇರಿವೆ. ಈ ಫೋನ್‌ನ ಕಾರ್ಯಕ್ಷಮತೆಯನ್ನು ಇನ್ನಷ್ಟು ಹೆಚ್ಚಿಸಲು ಮಲ್ಟಿ-ಟರ್ಬೊ 5.0 ಸಹ ಇದೆ. ಇದಲ್ಲದೆ ಈ ಫೋನ್ ವಿವೋ ಸುಗಮ ಗೇಮಿಂಗ್‌ಗಾಗಿ ಹೊಸ ಸಾಧನದಲ್ಲಿ 4-ಲೇಯರ್ ಕೂಲಿಂಗ್ ವ್ಯವಸ್ಥೆಯನ್ನು ಒದಗಿಸಿದೆ.

ಇತರೆ ಸೌಲಭ್ಯಗಳೆನು?
ಇನ್ನು ಈ ಸ್ಮಾರ್ಟ್‌ಫೋನ್ ವೇಗವರ್ಧಕ, ಆಂಬಿಯೆಂಟ್ ಲೈಟ್ ಸೆನ್ಸಾರ್, ಇ-ಕಂಪಾಸ್, ಗೈರೊಸ್ಕೋಪ್ ಸೆನ್ಸಾರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಅನ್ನು ಒಳಗೊಂಡಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಫೇಸ್ ಅನ್‌ಲಾಕ್ ಫೀಚರ್ಸ್ ಅನ್ನು ಬೆಂಬಲಿಸುತ್ತದೆ. ಜೊತೆಗೆ ಈ ಸ್ಮಾರ್ಟ್‌ಫೋನ್ ಬ್ಯಾಟರಿ ರಿವರ್ಸ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ. ಈ ಫೋನ್ 164.26x76.08x8mm ಅಳತೆ ಮತ್ತು 182 ಗ್ರಾಂ ತೂಕವನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ವಿವೋ T1x ಸ್ಮಾರ್ಟ್‌ಫೋನ್ ಬೇಸ್ ಮಾಡೆಲ್ 4GB RAM + 64GB ಸ್ಟೋರೇಜ್ ಮಾದರಿಗೆ 11,999ರೂ. ಬೆಲೆ ಹೊಂದಿದೆ. ಹಾಗೆಯೇ 4GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 12,999ರೂ.ಆಗಿದೆ. ಆದರೆ ಇದರ ಟಾಪ್-ಆಫ್-ಲೈನ್ 6GB RAM + 128GB ಸ್ಟೋರೇಜ್ ಮಾಡೆಲ್ ಬೆಲೆ 14,999ರೂ. ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಗ್ರಾವಿಟಿ ಬ್ಲ್ಯಾಕ್ ಮತ್ತು ಸ್ಪೇಸ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ದೊರೆಯಲಿದ್ದು, ಜುಲೈ 27 ರಿಂದ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ.

ಲಾಂಚ್ ಆಫರ್ ಏನಿದೆ?
ವಿವೋ T1x ಸ್ಮಾರ್ಟ್‌ಫೋನ್ ಅನ್ನು HDFC ಬ್ಯಾಂಕ್ ಕಾರ್ಡ್ ಮೂಲಕ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸುವ ಗ್ರಾಹಕರಿಗೆ 1,000ರೂ. ತ್ವರಿತ ರಿಯಾಯಿತಿ ದೊರೆಯಲಿದೆ. ಇದಲ್ಲದೆ ಹೆಚ್ಚುವರಿಯಾಗಿ, ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ನಲ್ಲಿ ಕೆಲವು ಕೊಡುಗೆಗಳು ಸಿಗಲಿವೆ.

ಈ ಫೋನಿಗೆ ಪರ್ಯಾಯ ಫೋನ್‌ಗಳು
ವಿವೋ T1x ಸ್ಮಾರ್ಟ್‌ಫೋನ್ ಬಜೆಟ್ ಪ್ರೈಸ್‌ಟ್ಯಾಗ್ ಪಡೆದಿದೆ. ಇನ್ನು ಬಜೆಟ್ ದರದಲ್ಲಿಯೇ ಈ ಫೋನಿಗೆ ಪರ್ಯಾಯ ಫೋನ್ ನೋಡುವುದಾದರೇ, ಸ್ಯಾಮ್‌ಸಂಗ್ ಗ್ಯಾಲಕ್ಸಿ M13, ಪೊಕೊ M4 ಪ್ರೊ, ಇನ್ಫಿನಿಕ್ಸ್ ನೋಟ್ 12, ರಿಯಲ್‌ಮಿ C35 ಹಾಗೂ ಮೊಟೊ G31 ಗಮನ ಸೆಳೆಯುತ್ತವೆ.


Click it and Unblock the Notifications








