Home
ಸುದ್ದಿಜಾಲ

Vivo: ವಿವೋದ ಈ ಫೋನ್‌ಗೆ ಭರ್ಜರಿ ಆಫರ್! 128 GB ಸ್ಟೋರೇಜ್‌.. 50MP ಕ್ಯಾಮೆರಾ

ವಿವೋ ಫೋನ್‌ಗಳೆಂದರೆ (Vivo phone) ಭಾರತೀಯರಿಗೆ ವಿಶೇಷವಾದ ಪ್ರೀತಿ ಹಾಗೂ ಆಕರ್ಷಣೆ. ಈ ಕಾರಣಕ್ಕೆ ಭಾರತದಲ್ಲಿ ಯಾವುದೇ ಹೊಸ ವಿವೋ ಫೋನ್‌ ಲಾಂಚ್‌ ಮಾಡಿದರೂ ಸಹ ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುತ್ತದೆ. ಅದರಂತೆ ವಿವೋ ಫೋನ್ ಖರೀದಿ ಮಾಡಲು ಮುಂದಾಗಿರುವವರಿಗೆ ಸಂತಸ ನೀಡಲು ವಿವೋದ ಈ ಫೋನ್‌ಗೆ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಆಫರ್ ನೀಡಲಾಗಿದೆ.

ಹೌದು, ವಿವೋ T1X ಸ್ಮಾರ್ಟ್‌ಫೋನ್‌ಗೆ (Vivo T1X smartphone) ಇದೀಗ ಆಫರ್ ಘೋಷಣೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ 128 GB ಸ್ಟೋರೇಜ್‌ ಆಯ್ಕೆ ಪಡೆದಿದ್ದು, 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾದೊಂದಿಗೆ ಡ್ಯುಯಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಅದರಂತೆ ಗ್ರಾಹಕರು ಈ ಫೋನ್‌ ಖರೀದಿ ಮೇಲೆ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಆಫರ್ ವಿವರ ಹಾಗೂ ಪ್ರಮುಖ ಫೀಚರ್ಸ್‌ ಏನಿವೆ ಅನ್ನೋದನ್ನು ತಿಳಿಸಿಕೊಡಲಾಗಿದೆ ಈ ಲೇಖನ ಓದಿರಿ.

 ವಿವೋದ ಈ ಫೋನ್‌ಗೆ ಭರ್ಜರಿ ಆಫರ್!128 GB ಸ್ಟೋರೇಜ್‌.. 50MP ಕ್ಯಾಮೆರಾ

ವಿವೋ T1X ಸ್ಮಾರ್ಟ್‌ಫೋನ್‌ ಆಫರ್ ಮಾಹಿತಿ: ಈ ಸ್ಮಾರ್ಟ್‌ಫೋನ್ 18,990ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 14,155ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಈ ಫೋನ್‌ಗೆ 25% ರಿಯಾಯಿತಿ ಘೋಷಣೆ ಮಾಡಲಾಗಿದೆ. ಅಲ್ಲದೆ ಈ ಫೋನ್ ಈವರೆಗೆ 4.46,010 ರೇಟಿಂಗ್‌ಗಳನ್ನು ಪಡೆದಿದೆ.

ಇನ್ನು ಈ ಫೋನ್‌ ಖರೀದಿ ವೇಳೆ 844 ರೂ.ಗಳ ಹೆಚ್ಚುವರಿ ರಿಯಾಯಿತಿ ಸಿಗಲಿದ್ದು, ಇದರೊಂದಿಗೆ ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್ (Flipkart Axis Bank Card) ಬಳಕೆ ಮಾಡಿ ಖರೀದಿ ಮಾಡಿದರೆ 5 % ಕ್ಯಾಶ್‌ಬ್ಯಾಕ್ ಸಿಗಲಿದೆ. ಹಾಗೆಯೇ 877 ರೂ.ಗಳ ತಿಂಗಳ ಇಎಮ್‌ಐ ಆಯ್ಕೆ ಮೂಲಕವೂ ಈ ಫೋನ್‌ ಅನ್ನು ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಈ ಬೆಲೆಗೆ ಈ ಫೋನ್‌ ಯೋಗ್ಯವೇ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

 ವಿವೋದ ಈ ಫೋನ್‌ಗೆ ಭರ್ಜರಿ ಆಫರ್!128 GB ಸ್ಟೋರೇಜ್‌.. 50MP ಕ್ಯಾಮೆರಾ

ವಿವೋ T1X ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.58 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೆಶ್‌ ರೇಟ್‌ ಆಯ್ಕೆಯೊಂದಿಗೆ 83.4% ಸ್ಕ್ರೀನ್-ಟು-ಬಾಡಿ ಅನುಪಾತ ಪಡೆದಿದೆ. ಇದರೊಂದಿಗೆ 1080 x 2408 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹಾಗೂ 401 ppi ಸಾಂದ್ರತೆಯೊಂದಿಗೆ ಉತ್ತಮ ವೀಕ್ಷಣೆ ಅನುಭವ ಸಿಗಲಿದೆ.

ವಿವೋ T1X ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ಮಾಹಿತಿ: ಈ ಫೋನ್ ಕ್ವಾಲ್ಕಾಮ್ SM6225 ಸ್ನಾಪ್‌ಡ್ರಾಗನ್ 680 4G ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್, ಫನ್‌ಟಚ್ 12 ಓಎಸ್‌ ಅನ್ನು ಇದು ರನ್‌ ಮಾಡಲಿದೆ. ಇದರೊಂದಿಗೆ ಅಡ್ರಿನೊ 610 ಗ್ರಾಫಿಕ್‌ ಕಾರ್ಡ್‌ ಬೆಂಬಲ ಪಡೆದಿದ್ದು, ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 128GB ಇಂಟರ್‌ ಸ್ಟೋರೇಜ್‌ ಆಯ್ಕೆ ಹಾಗೂ 6GB RAM ಸಾಮರ್ಥ್ಯ ಪಡೆದಿದೆ. ಅದಾಗ್ಯೂ ನೀವು ಎಸ್‌ಡಿ ಕಾರ್ಡ್ ಬಳಕೆ ಮಾಡಿಕೊಳ್ಳುವ ಮೂಲಕ ಇಂಟರ್‌ ಸ್ಟೋರೇಜ್‌ ಅನ್ನು ವಿಸ್ತರಣೆ ಮಾಡಿಕೊಳ್ಳಬಹುದು.

 ವಿವೋದ ಈ ಫೋನ್‌ಗೆ ಭರ್ಜರಿ ಆಫರ್!128 GB ಸ್ಟೋರೇಜ್‌.. 50MP ಕ್ಯಾಮೆರಾ

ವಿವೋ T1X ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದೆ. ಅದರಲ್ಲಿ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್‌ ಸೆಕೆಂಡರಿ ಕ್ಯಾಮರಾ ಆಯ್ಕೆ ಪಡೆದಿದೆ. ಹಾಗೆಯೇ ವಿಡಿಯೋ ಹಾಗೂ ಸೆಲ್ಫಿ ಉದ್ದೇಶಕ್ಕೆ ಈ ಫೋನ್‌ನಲ್ಲಿ 8 ಮೆಗಾಪಿಕ್ಸೆಲ್‌ ಕ್ಯಾಮೆರಾ ನೀಡಲಾಗಿದೆ. ಈ ಸೆನ್ಸರ್‌ಗಳು ಎಲ್ಇಡಿ ಫ್ಲ್ಯಾಶ್, ಎಚ್‌ಡಿಆರ್ ಫೀಚರ್ಸ್ ಅನ್ನು ಹೊಂದಿದೆ. ಜೊತೆಗೆ 1080p@30fps ನಲ್ಲಿ ವಿಡಿಯೋ ರೆಕಾರ್ಡಿಂಗ್‌ ಮಾಡಬಹುದಾಗಿದೆ.

ವಿವೋ T1X ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ : ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಇದು 18W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಇದರೊಂದಿಗೆ ವೈ-ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ವೈ-ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.0, A2DP, LE, ಜಿಪಿಎಸ್‌, ಗ್ಲೋನಾಸ್, ಗೆಲಿಲಿಯೋ, ಎಫ್‌ಎಮ್‌ ರೇಡಿಯೋ ಯುಎಸ್‌ಬಿ ಟೈಪ್-ಸಿ, ಓಟಿಜಿ ಸೇರಿದಂತೆ ಅನೇಕ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದು 4G ಬೆಂಬಲಿತ ಫೋನ್ ಅನ್ನೋದು ನಿಮ್ಮ ಗಮನಕ್ಕೆ ಇರಲಿ.

Best Mobiles in India

English summary
Vivo phones are in huge demand in India. Accordingly, Vivo T1X smartphone is offered on Flipkart, and this phone has got good storage and best camera features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+